Site icon Vistara News

Viral Video: ಇಬ್ಬರು ಮಕ್ಕಳಿಗೆ ಮೂತ್ರ ಕುಡಿಸಿ, ಅವರ ಗುದದ್ವಾರಕ್ಕೆ ಹಸಿ ಮೆಣಸಿನಕಾಯಿ ತುರುಕಿದರು!

boy forced to drink urine

ಸಿದ್ಧಾರ್ಥನಗರ, ಉತ್ತರ ಪ್ರದೇಶ: ಉತ್ತರ ಭಾರತದಲ್ಲಿ (North India) ಮಹಿಳೆಯರು ಮತ್ತು ಮಕ್ಕಳ ಮೇಲೆ ಅಮಾನವೀಯ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕಳ್ಳತನದ ಶಂಕೆಯ ಮೇಲೆ 10 ಮತ್ತು 15 ವರ್ಷದ ಹುಡುಗರಿಬ್ಬರಿಗೆ ಮೂತ್ರ ಕುಡಿಸಿ(Drink Urine), ಅವರ ಗುದದ್ವಾರದಲ್ಲಿ ಹಸಿ ಮೆಣಸಿನಕಾಯಿ ತುರುಕಿದ್ದಾರೆ(Chillies Rubbed On Private Parts). ಅಷ್ಟೇ ಅಲ್ಲದೇ, ಯಾವಯಾವುದೋ ಇಂಜೆಕ್ಷನ್ ಅವರಿಗೆ ಚುಚ್ಚಿ ಚಿತ್ರ ಹಿಂಸೆ ನೀಡಿ ಪೈಶಾಚಿಕ ಕೃತ್ಯ ಎಸಗಲಾಗಿದೆ. ಈ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮೂತ್ರ ತುಂಬಿದ ಬಾಟಲಿಯಲ್ಲಿ ಹಸಿ ಮೆಣಸಿನಕಾಯಿ ಅದ್ದಿ, ಮಕ್ಕಳಿಗೆ ಬಲವಂತಾಗಿ ತಿನ್ನಿಸಲಾಗಿದೆ. ಒಂದು ವೇಳೆ, ಮಕ್ಕಳು ತಿನ್ನಲು ಒಪ್ಪದಿದ್ದರೆ ಅವರನ್ನು ಹಿಗ್ಗಾಮುಗ್ಗಾ ತಳಿಸುತ್ತಿರುವುದನ್ನು ವೈರಲ್ ಆಗಿರುವ ಭಯಾನಕ ವಿಡಿಯೋದಲ್ಲಿ ಕಾಣಬಹುದಾಗಿದೆ. ಹಣ ಕದ್ದಿದ್ದಾರೆಂದು ಆರೋಪದ ಮೇರೆ ಗೂಂಡಾಗಳು ಮಕ್ಕಳನ್ನು ಕಟ್ಟಿ, ಅವರನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಭಯಾನಕವಾಗಿದೆ.

ಇದೇ ರೀತಿಯ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದೆ. ಹುಡುಗರಿಬ್ಬರ ಕೈಗಳನ್ನು ಹಿಂದಕ್ಕೆ ಕಟ್ಟಿ ಅವರನ್ನು ನೆಲಕ್ಕೆ ಬೀಳಿಸಲಾಗಿದೆ. ಅವರ ಪ್ಯಾಂಟ್ ಬಿಚ್ಚಲಾಗಿದೆ ಮತ್ತು ಅವರ ಗುದದ್ವಾರದಲ್ಲಿ ಹಸಿರು ಮೆಣಸಿನಕಾಯಿಯನ್ನು ಉಜ್ಜುವುದು ಮತ್ತು ಅದರೊಳಗೆ ನುಗ್ಗಿಸುವುದನ್ನು ಕಾಣಬಹುದು. ಮಕ್ಕಳು ನೋವಿನಿಂದ ಚೀರಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ ಹಳದಿ ಬಣ್ಣದ ದ್ರವವನ್ನು ಇಂಜೆಕ್ಟ್ ಮಾಡುವುದನ್ನೂ ಕಾಣಬಹುದು.

ಈ ಸುದ್ದಿಯನ್ನೂ ಓದಿ: West Bengal Horror: ಮಣಿಪುರ ಬೆನ್ನಲ್ಲೇ ಬಂಗಾಳದಲ್ಲಿ ಇಬ್ಬರು ಆದಿವಾಸಿ ಮಹಿಳೆಯರ ಬೆತ್ತಲೆ ಮೆರವಣಿಗೆ

ಈ ವಿಡಿಯೋವನ್ನು ಆಗಸ್ಟ್ 4ರಂದು ಶೂಟ್ ಮಾಡಲಾಗಿದೆ. ಸಿದ್ಧಾರ್ಥ ನಗರ ಜಿಲ್ಲೆಯ ಪಾಥ್ರಾ ಬಜಾರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಕೊಂಕಟಿ ಚೌಹುರಾ ಸಮೀಪದ ಅರ್ಶನ್ ಚಿಕನ್ ಶಾಪ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋಗಳ ವೈರಲ್ ಆಗುತ್ತಿದ್ದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಬ್ಬರು ಮಕ್ಕಳ ಆಕ್ಷೇಪಾರ್ಹ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡುವುದರ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಗುರುತಿಸಲಾಗಿದ್ದು, ಈ ಪೈರಿ ಆರು ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಅವರು ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version