ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಸೇರಿದಂತೆ ಇಂಧನಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ಆದರೆ ಈ ಯುವಕನಿಗೆ ಬೆಲೆ ಏರಿಕೆಯ ಚಿಂತೆ ಇಲ್ಲ. ಪ್ರಯಾಣಕ್ಕಾಗಿ ಆತ ಉತ್ತಮ ಮಾರ್ಗ ಕಂಡುಕೊಂಡಿದ್ದಾನೆ. ಸದ್ಯ ಆತನ ಐಡಿಯ ಜನರ ಗಮನ ಸೆಳೆದಿದೆ. ಆತನ ರಸ್ತೆಯಲ್ಲಿ ಸಂಚರಿಸುತ್ತಿರುವ ವಿಡಿಯೊ ವೈರಲ್ ಆಗಿದೆ (Viral Video). ಅಷ್ಟಕ್ಕೂ ಆ ವಿಡಿಯೊದಲ್ಲಿ ಏನಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಯುವಕನೊಬ್ಬ ಹೊಸದಿಲ್ಲಿಯ ರಸ್ತೆಯಲ್ಲಿ ಕೋಣದ ಮೇಲೆ ಕುಳಿತುಕೊಂಡು ಹೋಗುವ ದೃಶ್ಯ ಸೆರೆಯಾಗಿದೆ. ವಿಶೇಷ ಎಂದರೆ ಆತ ಹೆಲ್ಮೆಟ್ ಕೂಡ ಧರಿಸಿದ್ದಾನೆ. ಆತ ಧರಿಸಿರುವ ಮೊಲದ ಥೀಮ್‌ನ ಹೆಲ್ಮೆಟ್ ಕೂಡ ಗಮನ ಸೆಳೆಯುತ್ತಿದೆ. ʼಬುಲ್ ರೈಡರ್ʼ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಬ್ಯಾಲೆನ್ಸ್‌ಗಾಗಿ ಆತ ಕೋಣದ ಮೇಲೆ ಹಗ್ಗವನ್ನೂ ಕಟ್ಟಿದ್ದು, ಅದನ್ನು ಹಿಡಿದುಕೊಂಡು ಸವಾರಿ ಮಾಡಿದ್ದಾನೆ. ಇದು ನೆಟ್ಟಿಗರ ಗಮನ ಸೆಳೆದಿದೆ.
ನೆಟ್ಟಿಗರು ಏನಂದ್ರು?
ಈ ವಿಡಿಯೊವನ್ನು ಕಳೆದ ತಿಂಗಳ ಕೊನೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಅಂದಿನಿಂದ ಈ ವಿಡಿಯೊಗೆ 1,93,000ಕ್ಕೂ ಹೆಚ್ಚು ಲೈಕ್ಸ್ ಲಭಿಸಿದೆ. 3.8 ಮಿಲಿಯನ್ ವೀಕ್ಷಣೆ ಗಳಿಸಿದೆ. ಹಲವರು ವಿವಿಧ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಾಣಿ ಹಿಂಸೆ ತಪ್ಪು ಎಂದು ಹಲವರು ಬೋಧಿಸಿದ್ದಾರೆ. ʼಕೋಣದ ವೇಳೆ ಕುಳಿತಿರುವುದು ತಪ್ಪು. ಪ್ರಾಣಿ ಹಿಂಸೆ ನಿಲ್ಲಿಸಿʼ ಎಂದು ಒಬ್ಬರು ಹೇಳಿದ್ದಾರೆ. ʼಕೆಲಸ ಇಲ್ಲದವರ, ಕೆಲಸಕ್ಕೆ ಬಾರದ ನಡೆʼ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ʼಎಲ್ಲ ಪ್ರಾಣಿಗಳಿಗೆ ಗೌರವ ನೀಡಿʼ ಎಂದು ಮಗದೊಬ್ಬರು ಸಲಹೆ ನೀಡಿದ್ದಾರೆ. ʼಸಾರ್ವಜನಿಕ ಪ್ರದೇಶದಲ್ಲಿ ಇದೆಂತ ಕಿರಿಕಿರಿʼ ಎಂದು ಇನ್ನೊಬ್ಬರು ಇದನ್ನು ವ್ಯಾಖ್ಯಾನಿಸಿದ್ದಾರೆ.
ಇನ್ನು ಕೆಲವರು ಈ ವಿಡಿಯೊಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ʼಯಮರಾಜನ ರೀತಿ ಬಂದಿದ್ದಾನೆʼ ಎಂದು ಒಬ್ಬರು ಹೇಳಿದ್ದಾರೆ. ʼಇದು ನಾಲ್ಕು ಚಕ್ರದ ವಾಹನ. ಇದಕ್ಕೆ ಹೆಲ್ಮೆಟ್ ಅಗತ್ಯವಿಲ್ಲʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ಹಲವರು ʼಮೊಯೆ ಮೊಯೆʼ ಎಂದು ಕಮೆಂಟ್ ಮಾಡುವ ಮೂಲಕ ಟ್ರಂಡ್ ಅನ್ನು ಫಾಲೋ ಮಾಡಿದ್ದಾರೆ. ʼಪ್ರೋ ರೈಡರ್ʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
Khargosh ho ? 😹😹 pic.twitter.com/Bplhz7GHkG
— Desi Bhayo (@desi_bhayo88) November 20, 2023
ಇದೇ ರೀತಿಯ ಘಟನೆ
ಇತ್ತೀಚೆಗೆ ಇಂತಹದ್ದೊಂದು ವಿಡಿಯೊ ವೈರಲ್ ಆಗಿತ್ತು. ಯುವಕನೊಬ್ಬ ಪಿಕಾಚು ಥೀಮ್ ಇರುವ ಹೆಲ್ಮೆಟ್ ಧರಿಸಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆತನ ಬಳಿಗೆ ಆಗಮಿಸಿದ ಪೊಲೀಸ್, ಹೆಲ್ಮೆಟ್‌ನ ಕೊಂಬನ್ನು ಹಿಡಿದು, ʼʼನೀನು ಮೊಲವಾ?ʼʼ ಎಂದು ತಮಾಷೆಗೆ ಮಾಡಿದ್ದರು. ʼʼಕೆಲವರು ಹೆಲ್ಮೆಟ್ ಧರಿಸುವುದೇ ಇಲ್ಲ; ಇನ್ನು ಕೆಲವರು ಇಂತಹ ವಿಶೇಷ ಹೆಲ್ಮೆಟ್ ಧರಿಸುತ್ತಾರೆ. ಇದು ಚೆನ್ನಾಗಿದೆʼʼ ಎಂದು ಪೊಲೀಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಬೆಂಗಳೂರಿನಲ್ಲಿ ಬೈಕ್ ಹಿಂಭಾಗ ಕುಳಿತಿದ್ದ ವ್ಯಕ್ತಿಯೊಬ್ಬ ಹೆಲ್ಮೆಟ್‌ನಂತೆ ಪೇಪರ್ ಬ್ಯಾಗ್ ಧರಿಸಿದ್ದ ಫೋಟೊ ವೈರಲ್ ಆಗಿತ್ತು. ಹೀಗೆ ಕೆಲವು ದಿನಗಳಿಂದ ಹೆಲ್ಮೆಟ್ ಪ್ರಸಂಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
Helmet, what's that? 🤣🤣🤣 pic.twitter.com/8WwA8ICVfz
— ThirdEye (@3rdEyeDude) November 12, 2023
ಇದನ್ನೂ ಓದಿ: Viral Video: ಶಿವರಾಜ್ ಸಿಂಗ್ ಚೌಹಾಣ್‌ಗೆ ಸಿಗದ ಸಿಎಂ ಹುದ್ದೆ; ಬಿಕ್ಕಿ ಬಿಕ್ಕಿ ಅತ್ತ ಮಹಿಳೆಯರು!