ನವದೆಹಲಿ: 12ನೇ ತರಗತಿಯ ವಿದಾಯದ ಆಚರಣೆಗೆ (school farewells) ಮಕ್ಕಳು ತಮ್ಮ ಪೋಷಕರ ಐಷಾರಾಮಿ ಕಾರುಗಳ ರ‍್ಯಾಲಿ (Car Rally by Students) ನಡೆಸಿ ಗಮನ ಸೆಳೆದಿದ್ದಾರೆ. ಈ ಫೇರ್‌ವೆಲ್ ಪಾರ್ಟಿಗಾಗಿ ವಿದ್ಯಾರ್ಥಿಗಳು ತಮ್ಮ ಹೈ ಎಂಡ್, ಅಲ್ಟ್ರಾ ಐಷಾರಾಮಿ ಕಾರುಗಳನ್ನು ಹೆದ್ದಾರಿಯಲ್ಲಿ ಓಡಿಸಿದರು. ಕೆಲವರು ಕಿಟಕಿಯಿಂದ ಹೊರಗೆ ಮುಖ ಹಾಕಿದರೆ, ಇನ್ನೂ ಹಲವರು ತಮ್ಮ ಕಾರಿನ ಸನ್‌ರೂಫ್ ತೆರೆದು ಅಲ್ಲಿಂದಲೇ ನೃತ್ಯ ಮಾಡುತ್ತಿದ್ದರು, ಇನ್ನೂ ಅನೇಕರು ಸೆಲ್ಫಿ ತೆಗೆದುಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಕೆಲವರು ಚಲಿಸುವ ಕಾರಿನಿಂದಲೇ ಪಟಾಕಿ ಸಿಡಿಸುತ್ತಿದ್ದ ಅಪಯಾಕಾರಿ ಸ್ಟಂಟ್ ಕೂಡ ಮಾಡಿದ್ದಾರೆ(Viral Video).
ಈ ಅಪಾಯಕಾರಿ ಕಾರ್ ರ್ಯಾಲಿಯ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ಗಳಂಥ ಸಾಮಾಜಿಕ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಶಸ್ತ್ರಾಸ್ತ್ರಗಳನ್ನು ವೈಭವೀಕರಿಸುವ, ಪೊಲೀಸರಿಗೆ ಸವಾಲು ಹಾಕುವ ಹಾಡುಗಳನ್ನು ಮಿಕ್ಸ್ ಮಾಡಲಾಗಿದೆ. ಇತರ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವುದಕ್ಕಾಗಿ ತಮ್ಮಲ್ಲಿ ಇರುವ ಐಷಾರಾಮಿ ಕಾರುಗಳನ್ನು ಪಟ್ಟಿ ಕೂಡ ಮಾಡಿದ್ದಾರೆ.
ಇತ್ತೀಚೆಗೆ, ಗುರುನಾನಕ್ ಪಬ್ಲಿಕ್ ಸ್ಕೂಲ್ (ಜಿಎನ್‌ಪಿಎಸ್), ಕುಂದನ್ ವಿದ್ಯಾ ಮಂದಿರ (ಕೆವಿಎಂ), ಗ್ರೀನ್‌ಲ್ಯಾಂಡ್ ಪಬ್ಲಿಕ್ ಸ್ಕೂಲ್ ಮತ್ತು ಇತರ ವಿದ್ಯಾರ್ಥಿಗಳ ಕಾರ್ ರ್ಯಾಲಿಗಳ ವೀಡಿಯೊಗಳು ವೈರಲ್ ಆಗಿದ್ದವು. ಅಜಾಗರೂಕ ಪ್ರವೃತ್ತಿಯ ಹೊರತಾಗಿಯೂ, ಲುಧಿಯಾನ ಪೊಲೀಸರು ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ. ಈ ಅಪಾಯಕಾರಿ ಕಾರ್ ರ್ಯಾಲಿಗಳನ್ನು ತಡೆಯುವುದಕ್ಕಾಗಿ ಪೊಲೀಸರು ವಿದ್ಯಾರ್ಥಿಗಳ ಪೋಷಕರನ್ನು ಕರೆದು ಮಾತನಾಡಿಸಿಲ್ಲ ಎನ್ನಲಾಗುತ್ತಿದೆ. ಇದರ ಮಧ್ಯೆಯೂ, ಪೊಲೀಸರು ಎಲ್ಲ ಶಾಲೆ ಕಾಲೇಜುಗಳಿಗೆ ಸೂಚನೆ ನೀಡಿದ್ದಾರೆ ಮತ್ತು ಇಂಥ ರ್ಯಾಲಿಗಳಿಗೆ ಅವಕಾಶ ನೀಡದಂತೆ ತಿಳಿಸಿದ್ದಾರೆ. ಇದರ ಹೊರತಾಗಿಯೂ ಇಂಥ ಘಟನೆಗಳು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇನ್ನೆಂದೂ ಕಳವು ಮಾಡದಂತೆ ರೈಲು ಪ್ರಯಾಣಿಕರು ಖದೀಮನಿಗೆ ಪಾಠ ಕಲಿಸಿದ್ದು ಹೀಗೆ
ಪಾಟ್ನಾ: ʼಮಾಡಿದ್ದುಣ್ಣೋ ಮಹಾರಾಯʼ ಎನ್ನುವ ಮಾತಿದೆ. ನಾವು ಏನನ್ನು ಮಾಡುತ್ತೇವೆಯೋ ಅದಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತದೆ ಎನ್ನುವುದು ಈ ಮಾತಿನ ಅರ್ಥ. ಈ ಮಾತು ಮೊಬೈಲ್ ಕಳ್ಳನೊಬ್ಬನಿಗೆ ಸರಿಯಾಗಿ ಅರ್ಥವಾದಂತಿದೆ. ಅಷ್ಟಕ್ಕೂ ರೈಲು ಪ್ರಯಾಣಿಕರು ಕಳ್ಳನಿಗೆ ಹೇಗೆ ಪಾಠ ಕಲಿಸಿದ್ದಾರೆ ಎನ್ನುವುದನ್ನು ತಿಳಿಯಲು ಈ ವೈರಲ್ ವಿಡಿಯೊ (Viral Video) ನೋಡಿ.
ಬಿಹಾರದ ನಡೆದ ಘಟನೆ ಇದು ಎನ್ನಲಾಗಿದೆ. ಮೊಬೈಲ್ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ಹೇಗೆ ಅದರ ಪರಿಣಾಮ ಎದುರಿಸಿದ ಎನ್ನುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ. ರೈಲಿನೊಳಗಿದ್ದ ಪ್ರಯಾಣಿಕರೊಬ್ಬರು ಮೊಬೈಲಿನಲ್ಲಿ ಮಾತನಾಡುತ್ತಾ ಕುಳಿತಿದ್ದರು. ಇದು ಕಣ್ಣಿಗೆ ಬಿದ್ದಿದ್ದೇ ತಡ ಕಳ್ಳನೊಬ್ಬ ಇವತ್ತಿನ ಭರ್ಜರಿ ಬೇಟೆ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತ ನಿಧಾನವಾಗಿ ಆ ಪ್ರಯಾಣಿಕನ ಬಳಿ ಬಂದ. ಬೊಬೈಲ್ ಕಸಿದು ಇನ್ನೇನು ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಆತನ ಅದೃಷ್ಟ ಕೈ ಕೊಟ್ಟಿದೆ. ಸಹ ಪ್ರಯಾಣಿಕರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಕೆಲವರು ಕಿಟಕಿಯ ಮೂಲಕ ಆತನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಹೀಗೆ ಆತ ಬರೋಬ್ಬರಿ ಒಂದು ಕಿಲೋ ಮೀಟರ್ ದೂರದವರೆಗೆ ರೈಲಿನ ಕಿಟಕಿಯ ಹೊರಗಿನಿಂದ ನೇತಾಡಿಕೊಂಡೇ ಪ್ರಾಣಿಸಿದ್ದಾನೆ. ಇದರ ಜತೆಗೆ ಧರ್ಮದೇಟನ್ನೂ ತಿಂದಿದ್ದಾನೆ. ಬಹುಶಃ ಆತ ಇನ್ನೆಂದೂ ಕಳ್ಳತನಕ್ಕೆ ಇಳಿಯಲಾರ. ಅ ಮಟ್ಟಿಗೆ ಆತನಿಗೆ ಇದು ಮರೆಯಲಾರದ ಅನುಭವ ನೀಡಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ‘ಬಿಹಾರದ ಭಾಗಲ್‌ಪುರದ ಬಳಿ ಕಳ್ಳನೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ. ಆ ವೇಳೆಯಲ್ಲಿ ಸಿಕ್ಕಿಹಾಕಿಕೊಂಡ ಆತನನ್ನು ಪ್ರಯಾಣಿಕರೆಲ್ಲರೂ ಸೇರಿ ಒಂದು ಕಿಲೋ ಮೀಟರ್ವರೆಗೂ ರೈಲಿನ ಹೊರಗಿನಿಂದ ನೇತಾಡಿಸಿಕೊಂಡು ಹೋಗಿದ್ದಾರೆʼ ಎಂಬ ವಿವರಣೆಯನ್ನು ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ರಣರಂಗವಾದ ಆರತಕ್ಷತೆ; ವಧು-ವರರ ಕಡೆಯವರ ಹೊಡೆದಾಟದ ಕತೆ!