Site icon Vistara News

Viral Video: ಆರಾಮಾಗಿ ಆಟವಾಡ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ಡೆಡ್ಲಿ ಅಟ್ಯಾಕ್‌!

ಉತ್ತರಪ್ರದೇಶ: ಕೆಲವು ದಿನಗಳ ಹಿಂದೆ ಪಿಟ್‌ಬುಲ್‌ ನಾಯಿ ದಾಳಿ(Viral Video)ಯಿಂದ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಬೆನ್ನಲ್ಲೇ ಉತ್ತರಪ್ರದೇಶ(Uttar Pradesh)ದ ಗಾಜಿಯಾಬಾದ್‌ನಲ್ಲಿ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌(Apartment)ವೊಂದರ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌(German Shepherd) ನಾಯಿಯೊಂದು ಡೆಡ್ಲಿ ಅಟ್ಯಾಕ್‌(Dog attack) ಮಾಡಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್‌ ಆಗಿದೆ

ಏನಿದು ಘಟನೆ?

ಅಂಜರಾ ಇಂಟಿಗ್ರಿಟಿ ಸೊಸೈಟಿ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಸೈಕಲ್‌ನಲ್ಲಿ ಆಟ ಆಡುತ್ತಿದ್ದ ಆರು ವರ್ಷದ ಬಾಲಕಿ ಮೇಲೆ ಅಲ್ಲೇ ಇದ್ದ ಜರ್ಮನ್‌ ಶಫರ್ಡ್‌ ನಾಯಿ ಏಕಾಏಕಿ ದಾಳಿ ನಡೆಸಿ, ಆಕೆ ತೋಳನ್ನು ಕಚ್ಚಿದೆ. ತಕ್ಷಣ ಅಲ್ಲೇ ಇದ್ದ ಬಾಲಕಿಯ ತಾಯಿ ಓದಿ ಬಂದು ನಾಯಿಯನ್ನು ಓಡಿಸಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ ಆಕೆಯ ಸಹಾಯಕ್ಕೆ ಬರುತ್ತಾರೆ. ಘಟನೆಯಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇನ್ನು ಸ್ಥಳದಲ್ಲಿ ಅನೇಕ ಮಕ್ಕಳು ಆಟವಾಡುತ್ತಿರುರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಘಟನೆ ಬೆನ್ನಲ್ಲೇ ಬಾಲಕಿ ತಾಯಿ ನಮಿತಾ ಚೌಹಾಣ್‌ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನಾಯಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಯಿಯನ್ನು ಹೊರ ಕರೆತರುವ ವೇಳೆ ಅದರ ಬಾಯಿಗೆ ಯಾವುದೇ ಕವಚ ಹಾಕಿರಲಿಲ್ಲ. ಮುಂದಿನ ದಿನಗಳಲ್ಲಿ ಇಂಥಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಜರುಗಿಸಬೇಕು. ಅಲ್ಲದೇ ಅಪಾರ್ಟ್‌ಮೆಂಟ್‌ನಲ್ಲಿ ಆ ನಾಯಿಯನ್ನು ಸಾಕದಂತೆ ನಿಯಮ ಜಾರಿಗೊಳಿಸಬೇಕು ಎಂದು ನಮಿತಾ ಆಗ್ರಹಿಸಿದ್ದಾರೆ.

ಗಾಜಿಯಾಬಾದ್‌ನಲ್ಲಿ ಎರಡು ವಾಗಳ ಹಿಂದೆ ಬಾಲಕನೊಬ್ಬನ ಮೇಲೆ ಪಿಟ್‌ಬುಲ್‌ ತಳಿಯ ನಾಯಿಯೊಂದು ದಾಳಿ ನಡೆಸಿದ್ದ ವಿಡಿಯೋ ವೈರಲ್‌ ಆಗಿತ್ತು. 15 ವರ್ಷದ ಅಲ್ತಾಫ್‌ ಎಂಬ ಬಾಲಕ ನಡೆದುಕೊಂಡು ಹೋಗುತ್ತಿದ್ದಾಗ ಪಿಟ್‌ಬುಲ್ ದಾಳಿ ನಡೆಸುತ್ತದೆ. ಇನ್ನೇನು ತನ್ನ ಮನೆಯ ಗೇಟ್‌ ತೆರೆಯಬೇಕು ಎನ್ನುವಷ್ಟರಲ್ಲಿ ಆತನ ಮೇಲೆ ಈ ಆಕ್ರಮಣ ನಡೆದಿತ್ತು. ಅನಿರೀಕ್ಷಿತ ಆಘಾತದಿಂದ ಆತ ನಿಯಂತ್ರಣ ತಪ್ಪಿ ನೆಲದ ಮೇಲೆ ಬೀಳುತ್ತಾನೆ. ಜನರು ನೋಡುತ್ತಿದ್ದರೂ ಭಯದಿಂದಾಗಿ ಯಾರೂ ಆತನನ್ನು ರಕ್ಷಿಸಲು ಮುಂದೆ ಬರಲಿಲ್ಲ. ಮೇಲಿನ ಮನೆಯವರು ನಾಯಿ ಮೇಲೆ ನೀರು ಸುರಿದರೂ ಅದು ಶಾಂತವಾಗಲಿಲ್ಲ

ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದ ಅಲ್ತಾಫ್‌ ಕೊನೆಗೂ ಅದರಿಂದ ತಪ್ಪಿಸಿಕೊಂಡು ಗೇಟ್‌ ಬಳಿಗೆ ಓಡುತ್ತಾನೆ. ಅವನನ್ನು ಹಿಂಬಾಲಿಸಿಕೊಂಡು ಪಿಟ್‌ಬುಲ್‌ ಕೂಡ ಬರುತ್ತದೆ. ನಾಯಿ ಮತ್ತೆ ದಾಳಿ ಮಾಡುತ್ತದೆ. ಆಗಲೇ ಅಲ್ಲಿದ್ದ ಬೀದಿ ನಾಯಿಗಳು ತಕ್ಷಣ ಧಾವಿಸಿ ಬಂದು ಪಿಟ್​ಬುಲ್‌ ಅನ್ನು ಕಚ್ಚಿ ಎಳೆದು ಹೊರ ಹಾಕುತ್ತವೆ. ಇದರಿಂದ ಬಾಲಕ ಸುಲಭವಾಗಿ ತಪ್ಪಿಸಿಕೊಂಡು ಮನೆಯ ಒಳಗೆ ತೆರಳಿತ್ತಾನೆ. ಈ ಮಧ್ಯೆ ಪಿಟ್‌ಬುಲ್‌ನನ್ನು ಓಡಿಸಲು ನೆರೆ ಮನೆಯ ಯುವಕನೊಬ್ಬ ಕೋಲು ಹಿಡಿದು ಮುಂದೆ ಬರುತ್ತಾನೆ. ಬಾಲಕ ತಪ್ಪಿಸಿಕೊಂಡ ರೋಷದಲ್ಲಿ ಅದು ಆತನ ಮೇಲೆ ಎರಗಲು ಮುಂದಾಗುತ್ತದೆ. ಅದೃಷ್ಟವಶಾತ್‌ ಆತ ತಪ್ಪಿಸಿಕೊಂಡು ಮನೆಯೊಳಗೆ ಸೇರಿ ಬಾಗಿಲು ಹಾಕಿಕೊಂಡು ಬಚಾವಾಗುತ್ತಾನೆ.

ಇದನ್ನೂ ಓದಿ:Viral Video: ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿ; ಮಹಿಳಾ ಪೇದೆಯಿಂದ ರಕ್ಷಣೆ-ರೋಚಕ ವಿಡಿಯೋ ವೈರಲ್‌

ಕೆಲವು ದಿನಗಳ ಹಿಂದೆಯಷ್ಟೇ ಪಿಟ್‌ಬುಲ್‌ ಹೊಂದಿದ್ದ ಕುಟುಂಬ ಗಾಜಿಯಾಬಾದ್‌ಗೆ ಆಗಮಿಸಿತ್ತು. ಸದ್ಯ ಈ ನಾಯಿಯನ್ನು ಮುನ್ಸಿಪಲ್ ಕಾರ್ಪೊರೇಷನ್ ವಶಪಡಿಸಿಕೊಂಡಿದೆ. ಈ ರೀತಿಯ ನಾಯಿಯನ್ನು ಸಾಕುವುದಕ್ಕೆ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೂ ಮನೆಯವರು ನಮ್ಮ ಮಾತನ್ನು ಕೇಳಿರಲಿಲ್ಲ ಎಂದು ನೆರೆಮನೆಯವರು ತಿಳಿಸಿದ್ದಾರೆ.

Exit mobile version