Site icon Vistara News

Viral Video: ‌ಹೌ ಡೇರ್‌ ಯೂ… ವಿಮಾನದಲ್ಲಿ ಮಗಳನ್ನು ಮುಟ್ಟಿದ ಪುಂಡನ ಚಳಿ ಬಿಡಿಸಿದ ತಂದೆ; ವಿಡಿಯೊ ವೈರಲ್

Father gets angry after man touches his daughter on flight

Viral Video: 'How dare you', Father gets angry after man touches his daughter on flight

ನವದೆಹಲಿ: ವಿಮಾನಗಳಲ್ಲಿ ಪ್ರಯಾಣಿಸುವವರು ಶ್ರೀಮಂತರು, ಸುಶಿಕ್ಷಿತರು, ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿದವರು ಎಂಬ ಮನೋಭಾವ ಇದೆ. ಬಹುತೇಕ ವಿಮಾನ ಪ್ರಯಾಣಿಕರು ಉತ್ತಮ ಸೌಜನ್ಯ, ಸಂಸ್ಕಾರ ಇರುವವರೇ ಆಗಿರುತ್ತಾರೆ. ಆದರೆ, ಇತ್ತೀಚಿನ ಕೆಲ ತಿಂಗಳುಗಳಿಂದ ವಿಮಾನಗಳಲ್ಲಿ ಮದ್ಯಪಾನ ಮಾಡಿ ಗಗನಸಖಿಯರ ಜತೆ ಜಗಳ ಆಡುವುದು, ಗಲಾಟೆ ಮಾಡುವುದು, ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವುದು ಸೇರಿ ಹತ್ತಾರು ಪ್ರಕರಣಗಳು ಸುದ್ದಿಯಾಗಿವೆ. ಇದರ ಬೆನ್ನಲ್ಲೇ, ವಿಮಾನವೊಂದರಲ್ಲಿ ಪುಂಡನೊಬ್ಬ ಯುವತಿಯ ಮೈ ಮುಟ್ಟಿದ್ದಾನೆ. ಇದರಿಂದ ಕೆರಳಿದ ಯುವತಿಯ ತಂದೆಯು How Dare You ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ವಿಮಾನವು ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು, ಯುವತಿಯ ಮೈ ಮುಟ್ಟಿದವ ಯಾರು ಎಂಬುದು ಗೊತ್ತಾಗಿಲ್ಲ. ಆದರೆ, ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಪುಂಡನೊಬ್ಬ ಯುವತಿಯ ಮೈಯನ್ನು ಅಸಭ್ಯ ರೀತಿಯಲ್ಲಿ ಮುಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿಯು ‘ಹೌ ಡೇರ್‌ ಯೂ’ ಎಂದು ಕೂಗಿದ್ದಾಳೆ. ಕೂಡಲೇ ಯುವತಿಯ ತಂದೆ ಕೂಡ ಕೆಂಡಾಮಂಡಲರಾಗಿದ್ದಾರೆ. “ನನ್ನ ಮಗಳನ್ನು ಮುಟ್ಟಲು ನಿನಗೆಷ್ಟು ಧೈರ್ಯ” ಎಂದು ಜೋರಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್‌ ಆದ ವಿಡಿಯೊ ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್‌ ಆಗಿದ್ದು, ಪುಂಡಿನಿಗೆ ಜನ ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ. ಯುವತಿಯ ತಂದೆಯು ಜೋರಾಗಿ ಕೂಗತ್ತಲೇ ಗಗನಸಖಿಯರು ಬಂದು ಅವರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ, ಮಗಳ ಜತೆ ಅನುಚಿತವಾಗಿ ವರ್ತಿಸಿದವನ ವಿರುದ್ಧ ಕೆಂಡಾಮಂಡಲರಾದ ಅವರು ಸಿಟ್ಟು ಹೊರಹಾಕಿದ್ದಾರೆ.

ಇದನ್ನೂ ಓದಿ: Viral Video: ಪ್ರಾಣಕ್ಕಿಂತ ಪ್ರಯಾಣವೇ ಮುಖ್ಯ, ಚಲಿಸುವ ರೈಲಿಗೆ ನೇತಾಡಿದ ಯುವಕನ ವಿಡಿಯೊ ವೈರಲ್

ಕೆಲ ತಿಂಗಳ ಹಿಂದಷ್ಟೇ, ಅಮೆರಿಕದ ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರ ಮೇಲೆ ಶಂಕರ್‌ ಮಿಶ್ರಾ ಎಂಬ ವ್ಯಕ್ತಿಯು ಮೂತ್ರ ವಿಸರ್ಜನೆ ಮಾಡಿದ್ದ. ಈ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಆರೋಪಿ ಶಂಕರ್‌ ಮಿಶ್ರಾನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಪ್ರಕರಣದಲ್ಲಿ ಏರ್‌ ಇಂಡಿಯಾಗೆ 30 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿತ್ತು.

Exit mobile version