Site icon Vistara News

Viral Video: ರೈಲಿನಲ್ಲಿ ಊಟ ಸೇವಿಸುವ ಮುನ್ನ ಎಚ್ಚರ…ಎಚ್ಚರ..! ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ

Viral Video

ನವದೆಹಲಿ: ರೈಲು ಪ್ರಯಾಣಿಕರೇ ಎಚ್ಚರ…ಎಚ್ಚರ.. ರೈಲಿನಲ್ಲಿ ಪೂರೈಸುವ ಆಹಾರಗಳನ್ನು ಸೇವಿಸುವ ಮುನ್ನ ಈ ಸುದ್ದಿಯನ್ನೊಮ್ಮೆ ಓದಿ. ರೈಲಿನಲ್ಲಿ ಶುಚಿ-ರುಚಿಯಾದ ಆಹಾರ ಸಿಗೋದು ಕೊನೇಯ ಕ್ಷಣದಲ್ಲಿ ಟಿಕೆಟ್‌ ಸಿಗುವಷ್ಟೇ ಕಷ್ಟಸಾಧ್ಯ. ಅಂತಹದ್ದೇ ಒಂದು ಘಟನೆ ವರದಿಯಾಗಿದ್ದು, ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗಿದ್ದ ಊಟದಲ್ಲಿ ಜೀವಂತ ಜಿರಳೆ ಪತ್ತೆಯಾಗಿದೆ. ಈ ವಿಡಿಯೋ(Viral Video)ವನ್ನು ಪ್ರಯಾಣಿಕ ಸಾಮಾಜಿಕ ಜಾಲತಾಣ(Social Media)ದಲ್ಲಿ ಹಂಚಿಕೊಂಡಿದ್ದು, ಬಹಳ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ರೈಲು ಪ್ರಯಾಣಿಕರೊಬ್ಬರು ರೈಲಿನಲ್ಲಿ ಊಟ ಆರ್ಡರ್‌ ಮಾಡಿದ್ದರು. ಅನ್ನ, ಸಾಂಬಾರ್‌, ದಾಲ್‌ ಹಾಗೂ ಎರಡು ವಿಧದ ಪಲ್ಯವನ್ನು ಊಟದಲ್ಲಿ ಬಯಸಿದ್ದರು. ಊಟ ಬರುತ್ತಿದ್ದಂತೆ ಬಹಳ ಉತ್ಸಾಹದಿಂದ ಊಟದ ಬಾಕ್ಸ್‌ ತೆರೆಯುತ್ತಿದ್ದಂತೆ ಅದರಲ್ಲಿದ್ದ ಗುಲಾಬ್‌ ಜಾಮೂನಿನಲ್ಲಿ ಜೀವಂತ ಜಿರಳೆ ಇರುವುದನ್ನು ಕಂಡು ಪ್ರಯಾಣಿಕರು ಹೌಹಾರಿದ್ದಾರೆ.

ತಕ್ಷಣ ಕೋಪಗೊಂಡ ಪ್ರಯಾನಿಕ ಆ ಊಟದ ವಿಡಿಯೋ ಮಾಡಿ ರೆಡ್ಡಿಟ್‌ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ವಿಡಿಯೋ ಶೇರ್‌ ಆಗುತ್ತಿದ್ದಂತೆ ರೈಲ್ವೆ ಸಿಬ್ಬಂದಿಯ ಭಾರೀ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಅಕ್ರೋಸ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕ ಆರೋಗ್ಯದ ಜೊತೆ ಆಟವಾಡುತ್ತಿದ್ದೀರಾ ಎಂದು ಕಿಡಿ ಕಾರಿದ್ದಾರೆ. ಇನ್ನು ಕೆಲವರು ಇದೊಂದು ದುಬಾರಿ ಮಾಂಸಾಹಾರಿ ಊಟ ಎಂದು ವ್ಯಂಗ್ಯವಾಡಿದ್ದಾರೆ.

Cockroach in food
byu/Aggravating-Wrap-266 inindianrailways

ರೈಲಿನಲ್ಲಿ ಇಂತಹ ಅನುಭವ ಮೊದಲೇನಲ್ಲ. ಕಾಶಿ ಎಕ್ಸ್‌ಪ್ರೆಸ್‌ನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಇತ್ತೀಚೆಗೆ ಇದೇ ರೀತಿಯ ಅನುಭವವನ್ನು ಹಂಚಿಕೊಂಡಿದ್ದರು. ಪರ್ವೇಜ್ ಹಶ್ಮಿ ಅವರು ತಮ್ಮ ಊಟದಲ್ಲಿ ಕೀಟ ಕಂಡುಬಂದ ನಂತರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ದಾಲ್ ಮತ್ತು ಸಬ್ಜಿಯಲ್ಲಿ ಹುಳ ಪತ್ತೆಯಾಗಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ್ದರು.

ಇನ್ನು ಕೆಲವು ದಿನಗಳ ಹಿಂದೆ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲೂ ಇಂತಹ ಒಂದು ಘಟನೆ ವರದಿಯಾಗಿತ್ತು. ಪ್ರಯಾಣಿಕರೊಬ್ಬರ ಊಟದಲ್ಲಿ ಸತ್ತ ಜಿರಳೆ ಪತ್ತೆ ಆಗಿದ್ದು. ಆ ಪ್ರಯಾಣಿಕರು ಊಟ, ಸತ್ತ ಜಿರಳೆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆಗಿತ್ತು. ಡಾ. ಶುಭೇಂದು ಕೇಶಾರಿ ಅವರು, ‘ಫೆಬ್ರವರಿ 1ರಂದು ರೈಲು ನಂ. 20173 RKMP ನಲ್ಲಿ ಐಆರ್‌ಸಿಸಿ ಅವರು ನೀಡಿದ ಆಹಾರದ ಪ್ಯಾಕೆಟ್‌ನಲ್ಲಿ ಸತ್ತ ಜಿರಳೆಯನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ, ರಾಣಿ ಕಮಲಾಪತಿಯಿಂದ ಜಬಲ್‌ಪುರ ಜಂಕ್ಷನ್‌ಗೆ ಪ್ರಯಾಣಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಬಳಿಕವೇ ಘಟನೆ ಮುನ್ನೆಲೆಗೆ ಬಂದಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಐಷಾರಾಮಿ ಸೇವೆಗಳು, ಉತ್ತಮ ಗುಣಮಟ್ಟದ ಸುರಕ್ಷತೆ ಮತ್ತು ವೇಗಕ್ಕೆ ಹೆಸರುವಾಸಿ ಆಗಿದೆ. ಇನ್ನೂ ಈ ಘಟನೆ ಗಮನಿಸಿರುವ IRCTC ತನ್ನ X ಹ್ಯಾಂಡಲ್ ಮೂಲಕ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದೆ. ಆದ ಪ್ರಮಾದಕ್ಕೆ, ಅನಾನುಕೂಲತೆಗೆ ಪ್ರಯಾಣಿಕರಿಗೆ ಕ್ಷಮೆ ಕೇಳಿದೆ.

ಇದನ್ನೂ ಓದಿ: Narendra Modi: ‌ಮೋದಿ ಪ್ರಮಾಣವಚನ ಸಂಭ್ರಮಕ್ಕೆ ಗಣ್ಯರ ದಂಡೇ ಸಾಕ್ಷಿ; ದೇಶ-ವಿದೇಶಗಳ ಗಣ್ಯರ ಪಟ್ಟಿ ಹೀಗಿದೆ

Exit mobile version