Site icon Vistara News

Viral video: ಅತಿ ದೊಡ್ಡ ʼಇಸ್ಪೀಟೆಲೆಯ ಕಟ್ಟಡʼ; ಭಾರತೀಯ ವಿದ್ಯಾರ್ಥಿಯ ವಿಶ್ವದಾಖಲೆ!

cards building Guinness World Records

ಹೊಸದಿಲ್ಲಿ: ಭಾರತದ 15 ವರ್ಷದ ಬಾಲಕನೊಬ್ಬ ʼವಿಶ್ವದ ಅತಿ ದೊಡ್ಡ ಪ್ಲೇಯಿಂಗ್ ಕಾರ್ಡ್ ರಚನೆ’ಗಾಗಿ (playing card building) ಗಿನ್ನೆಸ್ ವಿಶ್ವ ದಾಖಲೆ (Guinness World Records)‌ ಮಾಡಿದ್ದಾನೆ. ಕೋಲ್ಕತ್ತಾದ ಅರ್ನವ್ ಡಾಗಾ ಇದನ್ನು ಸಾಧಿಸಿದ ವಿದ್ಯಾರ್ಥಿ.

ಈತನ ಇಸ್ಪೀಟೆಲೆ ರಚನೆಯು 12.21 ಮೀ ಉದ್ದ, 3.47 ಮೀ ಎತ್ತರ ಮತ್ತು 5.08 ಮೀ ಅಗಲವನ್ನು ಹೊಂದಿದೆ. ಇದಕ್ಕಾಗಿ ಆತ 1,43,000 ಇಸ್ಪೀಟೆಲೆಗಳನ್ನು ಬಳಸಿದ್ದಾನೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ಪ್ರಕಾರ, ಈ ರಚನೆಯನ್ನು ನಿರ್ಮಿಸಲು ಡಾಗಾ 41 ದಿನಗಳನ್ನು ತೆಗೆದುಕೊಂಡಿದ್ದಾನೆ. ಇದರಲ್ಲಿ ಆತ ರೈಟರ್ಸ್ ಬಿಲ್ಡಿಂಗ್, ಶಹೀದ್ ಮಿನಾರ್, ಸಾಲ್ಟ್ ಲೇಕ್ ಸ್ಟೇಡಿಯಂ ಮತ್ತು ಸೇಂಟ್ ಪಾಲ್ಸ್ ಕ್ಯಾಥೆಡ್ರಲ್‌ ಕಟ್ಟಡಗಳನ್ನು ಜೋಡಿಸಿದ್ದಾನೆ.

ಅದಕ್ಕೂ ಮುನ್ನ ಈ ಕಟ್ಟಡಗಳ ವಾಸ್ತುಶಿಲ್ಪವನ್ನು ನಿಕಟವಾಗಿ ಅಧ್ಯಯನ ಮಾಡಿದ್ದಾನೆ. ನಾನು 2020ರಲ್ಲಿ ಕಂಡ ಕನಸನ್ನು ನನಸು ಮಾಡಿದ್ದೇನೆ ಎಂದಿದ್ದಾನೆ ಡಾಗಾ. ಇದಕ್ಕೂ ಮುನ್ನ ಈ ದಾಖಲೆಯನ್ನು ಅಮೆರಿಕದ ಬ್ರಯಾನ್ ಬರ್ಗ್ ಎಂಬಾತ ಹೊಂದಿದ್ದ. ಆತ 10.39 ಮೀ ಉದ್ದ, 2.88 ಮೀ ಎತ್ತರ ಮತ್ತು 3.54 ಮೀ ಅಗಲದ ಮೂರು ಮಕಾವೊ ಹೋಟೆಲ್‌ಗಳ ಪ್ರತಿಕೃತಿಯನ್ನು ನಿರ್ಮಿಸಿದ್ದ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, ಡಾಗಾ ಈ ರಚನೆಯನ್ನು ನಿರ್ಮಿಸುವ ಟೈಮ್‌ಲ್ಯಾಪ್ಸ್ ವೀಡಿಯೊವನ್ನು ಸಹ ಹಂಚಿಕೊಂಡಿದೆ. “ಅತಿದೊಡ್ಡ ಪ್ಲೇಯಿಂಗ್ ಕಾರ್ಡ್ ರಚನೆ” ಎಂದು ಗಿನ್ನೆಸ್‌ ಸಂಸ್ಥೆಯು YouTubeನಲ್ಲಿ ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋವನ್ನು ಮೂರು ದಿನಗಳ ಹಿಂದೆ ಯೂಟ್ಯೂಬ್‌ನಲ್ಲಿ ಶೇರ್ ಮಾಡಲಾಗಿತ್ತು. ಅಂದಿನಿಂದ 60,000ಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.

ಇದನ್ನೂ ಓದಿ: Guinness World Record: ಗಿನ್ನೆಸ್‌ ರೆಕಾರ್ಡ್ ಬುಕ್‌ ಸೇರಿದ 9 ಜನರ ಪಾಕಿಸ್ತಾನ ಕುಟುಂಬ, ಏನಿದರ ವಿಶೇಷ!?

Exit mobile version