Site icon Vistara News

Viral Video: ಕಾರಲ್ಲ ಗುರು ಬೈಕ್ ಇದು;‌ 7 ಮಕ್ಕಳನ್ನು ಕೂರಿಸಿಕೊಂಡು ಸ್ಕೂಟಿ ಚಲಾಯಿಸಿದ ವ್ಯಕ್ತಿ

man riding scooty with 7 kids

Viral Video: Man riding scooty with 7 kids, Mumbai Police take action

ಮುಂಬೈ: ಟೊಯೋಟಾ ಇನೋವಾ, ಮಹೀಂದ್ರಾ ಮರಾಜೋ ಕಾರ್‌ ಆದರೆ 8 ಜನ ಕುಳಿತು ಪ್ರಯಾಣಿಸಬಹುದು. ಕ್ರೂಸರ್‌ ಅಥವಾ ಟಂ ಟಂ ಆದರೂ ಏಳೆಂಟು ಜನ ಕುಳಿತುಕೊಂಡು ಹೋಗಬಹುದು. ಆದರೆ, ಮಹಾರಾಷ್ಟ್ರದಲ್ಲೊಬ್ಬ ಭೂಪ ಸ್ಕೂಟಿಯಲ್ಲಿ ಏಳು ಮಕ್ಕಳನ್ನು ಕೂರಿಸಿಕೊಂಡು ವಾಹನ ಚಲಾಯಿಸಿದ್ದಾರೆ. ಈ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

ಹೌದು, ಮುಂಬೈನಲ್ಲಿ ವ್ಯಕ್ತಿಯು ಏಳು ಮಕ್ಕಳನ್ನು ಕೂರಿಸಿಕೊಂಡು ಸ್ಕೂಟಿ ಚಲಾಯಿಸಿದ್ದಾರೆ. ಏಳು ಮಕ್ಕಳ ಜೀವವನ್ನೇ ಪಣಕ್ಕೆ ಇಟ್ಟು ಹೀಗೆ ಸಾಹಸ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತವಾಗಿದೆ. ಇನ್ನು ವಿಡಿಯೊ ವೈರಲ್‌ ಆಗುತ್ತಲೇ ಮುಂಬೈ ಟ್ರಾಫಿಕ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಲ್ಲಿದೆ ನೋಡಿ ಭಯ ಹುಟ್ಟಿಸುವ ವಿಡಿಯೊ

“ಇಂತಹ ಬೈಕ್‌ ಸವಾರಿಯನ್ನು ನಾವು ಸಹಿಸುವುದಿಲ್ಲ. ವಾಹನ ಸವಾರನು ಬೇರೆಯವರ ಪ್ರಾಣವನ್ನೂ ಅಪಾಯಕ್ಕೆ ಸಿಲುಕಿಸುವ ರೈಡಿಂಗ್‌ ಇದು. ಭಾರತೀಯ ದಂಡ ಸಂಹಿತೆ (IPC)ಯ ಸೆಕ್ಷನ್‌ 308ರ ಪ್ರಕಾರ ಪ್ರಕರಣ ದಾಖಲಾಗಿದೆ. ಇದು ನರಹತ್ಯೆಗೆ ಸಮನಾದ ಅಪರಾಧ” ಎಂದು ಮುಂಬೈ ಟ್ರಾಫಿಕ್‌ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ಕೇಸ್‌ ದಾಖಲಿಸಿದ ಪೊಲೀಸರು

ಇದನ್ನೂ ಓದಿ: Isha Koppikar: 46ನೇ ವಯಸ್ಸಿಗೆ ತಾಯಿಯಾದ ʻಸೂರ್ಯವಂಶʼ ನಟಿ; ಕೊನೆಯಲ್ಲಿ ಆಗಿದ್ದೇ ಬೇರೆ, ವಿಡಿಯೊ ವೈರಲ್‌!

ವಿಡಿಯೊ ವೈರಲ್‌ ಆಗುತ್ತಲೇ ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಈತನ ಹೆಂಡತಿಯರು ಎಲ್ಲಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಈತ ಮಕ್ಕಳ ಜೀವವನ್ನು ಅಪಾಯಕ್ಕೆ ತಳ್ಳಿದ್ದಾನೆ. ಇವನನ್ನು ಬಂಧಿಸಬೇಕು” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version