Isha Koppikar: 46ನೇ ವಯಸ್ಸಿಗೆ ತಾಯಿಯಾದ ʻಸೂರ್ಯವಂಶʼ ನಟಿ; ಕೊನೆಯಲ್ಲಿ ಆಗಿದ್ದೇ ಬೇರೆ, ವಿಡಿಯೊ ವೈರಲ್‌! Vistara News
Connect with us

South Cinema

Isha Koppikar: 46ನೇ ವಯಸ್ಸಿಗೆ ತಾಯಿಯಾದ ʻಸೂರ್ಯವಂಶʼ ನಟಿ; ಕೊನೆಯಲ್ಲಿ ಆಗಿದ್ದೇ ಬೇರೆ, ವಿಡಿಯೊ ವೈರಲ್‌!

Isha Koppikar: ಜೂನ್‌ 23ರಂದು ನಟಿ ವಿಡಿಯೊವೊಂದನ್ನು ಶೇರ್‌ ಮಾಡಿಕೊಂಡಿದ್ದರು. ತನ್ನ ಮಗುವಿನ ಅಲ್ಟ್ರಾಸಾನೋಗ್ರಾಫಿಕ್ ಫೋಟೊವನ್ನು ತೋರಿಸಿದ್ದರು. ಈ ವಿಡಿಯೊವನ್ನು ನೋಡಿದವರಿಗೆ ನಟಿ 46ನೇ ವಯಸ್ಸಿಗೆ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂದು ವಿಶ್ ಮಾಡಿದ್ದಾರೆ.

VISTARANEWS.COM


on

Isha Koppikar Becomes A Mommy
Koo

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಜತೆ ʻಸೂರ್ಯವಂಶʼ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಮುಂಬೈ ನಟಿ ಇಶಾ ಕೊಪ್ಪಿಕರ್ (Isha Koppikar) ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಬ್ಬರು. ನಟಿ ಹಿಂದಿ ಚಿತ್ರರಂಗದಲ್ಲೂ ಹೆಸರು ಗಳಿಸಿದ್ದಾರೆ. ಜೂನ್‌ 23ರಂದು ನಟಿ ವಿಡಿಯೊವೊಂದನ್ನು ಶೇರ್‌ ಮಾಡಿಕೊಂಡಿದ್ದರು. ತನ್ನ ಮಗುವಿನ ಅಲ್ಟ್ರಾಸಾನೋಗ್ರಾಫಿಕ್ ಫೋಟೊವನ್ನು ತೋರಿಸಿದ್ದರು. ಈ ವಿಡಿಯೊವನ್ನು ನೋಡಿದವರಿಗೆ ನಟಿ 46ನೇ ವಯಸ್ಸಿಗೆ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂದು ವಿಶ್ ಮಾಡಿದ್ದಾರೆ. ಆದರೆ, ವಿಡಿಯೊ ಕೊನೆಯಲ್ಲಿ ಚಿಕ್ಕದೊಂದು ಟ್ವಿಸ್ಟ್ ಕೊಟ್ಟಿದ್ದಾರೆ.

2009ರ ನವೆಂಬರ್ 29ರಂದು, ನಟಿ ಟಿಮ್ಮಿ ನಾರಂಗ್ ಅವರನ್ನು ಮದುವೆಯಾದರು ನಟಿ. ನಟಿಗೆ ರಿಯಾನ್ನಾ ಮಗಳು ಇದ್ದಾಳೆ. ಆದರೆ ವಿಡಿಯೊ ವೈರಲ್‌ ಆಗುತ್ತಿದ್ದಂತೆ 46 ನೇ ವಯಸ್ಸಿಗೆ ಮತ್ತೆ ತಾಯಿಯಾದ್ರಾ ಎಂದು ಫ್ಯಾನ್ಸ್‌ ಅಚ್ಚರಿಗೊಂಡಿದ್ದಾರೆ. ಆದರೆ ಆದದ್ದೇ ಬೇರೆ. ಇಶಾ ಕೊಪ್ಪಿಕರ್ ಈಗ ತನ್ನ ಮುದ್ದಿನ ನಾಯಿ ತಾಯಿಯಾಗಿದ್ದಾಳೆ ಎಂದು ಪರಿಚಯಿಸಿದ ರೀತಿ ಹೃದಯಸ್ಪರ್ಶಿಯಾಗಿತ್ತು. ಶ್ವಾನ ಪ್ರಿಯರು ಈ ವಿಡಿಯೊಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ʻʻನಾಯಿ ಮರಿ ತುಂಬಾ ಮುದ್ದಾಗಿದೆ” ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Kannada New Movie: ‘ಕೆಂಡದ ಸೆರಗು’ ಸಿನಿಮಾದ ಡಬ್ಬಿಂಗ್ ಮುಗಿಸಿದ ಆ್ಯಕ್ಷನ್ ಕ್ವಿನ್ ಮಾಲಾಶ್ರೀ!

ಇಶಾ ಕೊಪ್ಪಿಕರ್ ಹಿಂದಿ ಜತೆ ಕನ್ನಡ, ತಮಿಳು, ತೆಲುಗು ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಬಾಲಿವುಡ್‌ನ ‘ಕಂಪನಿ’, ‘ಕಾಂಠೆ’, ‘ಡಾನ್’ ಅಂತಹ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಕನ್ನಡದಲ್ಲೂ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಸೂರ್ಯವಂಶ’,’ಹೂ ಅಂತಿಯಾ ಹೂಂ ಅಂತಿಯಾ’, ‘ಓ ನನ್ನ ನಲ್ಲೆ’, ‘ಲೂಟಿ’ ಹಾಗೂ ನಾಲ್ಕು ವರ್ಷಗಳ ಹಿಂದಷ್ಟೇ ತೆರೆಕಂಡಿರೋ ‘ಕವಚ’ ಸಿನಿಮಾದಲ್ಲಿ ನಟಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

South Cinema

Vijay Sethupathi: ಮಗಳ ವಯಸ್ಸಿನ ನಟಿಯ ಜತೆ ರೊಮ್ಯಾನ್ಸ್ ಮಾಡಲಾರೆ ಎಂದ ವಿಜಯ್ ಸೇತುಪತಿ!

2021ರಲ್ಲಿ ಬಿಡುಗಡೆಯಾದ ʻಉಪ್ಪೆನ’ ತೆಲುಗು ಸಿನಿಮಾದಲ್ಲಿ ಕೃತಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಜತೆಯಾಗಿ ನಟಿಸಿದ್ದರು. ‘ಉಪ್ಪೆನ’ದಲ್ಲಿ ಕೃತಿ ಶೆಟ್ಟಿಯ ತಂದೆಯ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು.

VISTARANEWS.COM


on

Edited by

Vijay Sethupathi Krithi Shetty
Koo

ಬೆಂಗಳೂರು: ವಿಜಯ್ ಸೇತುಪತಿ (Vijay Sethupathi) ಸದ್ಯ ʻಜವಾನ್‌ʼ ಸಿನಿಮಾದ ಸಕ್ಸಸ್​​ ಮೂಡ್‌ನಲ್ಲಿ ಇದ್ದಾರೆ. ಬಹುಭಾಷಾ ನಟ ತಮಿಳು ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಅವರು ಬ್ಯುಸಿಯಾಗಿದ್ದಾರೆ. ಇಷ್ಟೊಂದು ಜನಪ್ರಿಯತೆ ಪಡೆದಿರುವ ವಿಜಯ್‌ ಸೇತುಪತಿ ಅವರು ನಟಿ ಕೃತಿ ಶೆಟ್ಟಿ (Krithi Shetty) ಜತೆ ನಾಯಕನಾಗಿ ನಟಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಮಗಳ ಪಾತ್ರ ಮಾಡಿದ ನಟಿ ಜತೆ ರೊಮ್ಯಾನ್ಸ್ ಮಾಡಲಾರೆʼ ಎಂದು ನಟ ಹೇಳಿದ್ದಾರಂತೆ.

2021ರಲ್ಲಿ ಬಿಡುಗಡೆಯಾದ ʻಉಪ್ಪೆನ’ ತೆಲುಗು ಸಿನಿಮಾದಲ್ಲಿ ಕೃತಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಜತೆಯಾಗಿ ನಟಿಸಿದ್ದರು. ‘ಉಪ್ಪೆನ’ದಲ್ಲಿ ಕೃತಿ ಶೆಟ್ಟಿಯ ತಂದೆಯ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು. ಹೀಗಾಗಿ ಒಂದು ಸಿನಿಮಾದಲ್ಲಿ ಮಗಳಂತೆ ನೋಡಿದ ನಟಿಯ ಜತೆ ಮತ್ತೊಂದು ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡುವುದಿಲ್ಲ ಎಂಬುದಾಗಿ ಸೇತುಪತಿ ಹೇಳಿದ್ದಾರೆ. ತಮ್ಮಿಬ್ಬರನ್ನು ನಾಯಕ-ನಾಯಕಿಯನ್ನಾಗಿಸಿ ತಮಿಳು ಸಿನಿಮಾವೊಂದನ್ನು ಮಾಡುವುದಕ್ಕೆ ಆಫರ್‌ ಬಂದರೂ ವಿಜಯ್‌ ನಿರಾಕರಿಸಿದ್ದಾರೆ.

ಈ ಬಗ್ಗೆ ವಿಜಯ್​ ಸೇತುಪತಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ʻಒಮ್ಮೆ ಮಗಳೆಂದು ಕಲ್ಪಿಸಿಕೊಂಡ ನಟಿಯ ಜತೆಗೆ ನಾನು ಹೇಗೆ ರೊಮ್ಯಾನ್ಸ್ ಮಾಡಲಿ? ಉಪ್ಪೆನ ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟಿಂಗ್ ಮಾಡುವಾಗ, ನನ್ನನ್ನು ನಿನ್ನ ತಂದೆ ಎಂದು ಕಲ್ಪಿಸಿಕೋ ಎಂದು ಕೃತಿಗೆ ಹೇಳಿದ್ದೆ. ಆ ಸಿನಿಮಾ ಮಾಡುವಾಗ ನನ್ನ ಮಗನಷ್ಟೇ ಕೃತಿಗೂ ವಯಸ್ಸು. ನಾನು ಕೂಡ ಕೃತಿಯನ್ನು ಮಗಳಂತೆ ಭಾವಿಸಿದ್ದೇನೆ. ಹೀಗಿರುವಾಗ ಕೃತಿ ಜತೆಗೆ ರೊಮ್ಯಾನ್ಸ್ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Vijay Sethupathi: ‘ಮಹಾರಾಜʼಫಸ್ಟ್‌ ಲುಕ್‌ ಔಟ್‌; 50ನೇ ಸಿನಿಮಾದಲ್ಲಿ ರಗಡ್‌ ಲುಕ್‌ನಲ್ಲಿ ಮಿಂಚಿದ ವಿಜಯ್‌ ಸೇತುಪತಿ!

50ನೇ ಸಿನಿಮಾದಲ್ಲಿ ರಗಡ್‌ ಲುಕ್‌ನಲ್ಲಿ ಮಿಂಚಿದ ವಿಜಯ್‌ ಸೇತುಪತಿ

ಸದ್ಯ ವಿಜಯ್‌ ಸೇತುಪತಿ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ವಿಜಯ್‌ ಸೇತುಪತಿ ಅವರ ‘ಮಹಾರಾಜ’ ಸಿನಿಮಾದ (Maharaja first Look Out) ಫಸ್ಟ್-ಲುಕ್ ಪೋಸ್ಟರ್ ಅನಾವರಣಗೊಂಡಿದೆ. ವಿಜಯ್‌ ಸೇತುಪತಿ 50ನೇ ಚಿತ್ರಕ್ಕಾಗಿ,(50th film ‘Maharaja) ನಿರ್ದೇಶಕ ನಿಥಿಲನ್ ಸ್ವಾಮಿನಾಥನ್ ಜತೆ ಕೈ ಜೋಡಿಸಿದ್ದಾರೆ.

ಮಹಾರಾಜ’ ಸಿನಿಮಾದ ಫಸ್ಟ್-ಲುಕ್‌ನಲ್ಲಿ ವಿಜಯ್‌ ರಗಡ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಚೇರ್‌ನಲ್ಲಿ ಚಾಕು ಹಿಡಿದು ರಕ್ತಸಿಕ್ತರಾಗಿ ಗಂಭೀರದಿಂದ ಕೂತಿದ್ದಾರೆ ವಿಜಯ್‌. ಸುತ್ತಲೂ ಪೊಲೀಸ್ ಅಧಿಕಾರಿಗಳು ನಿಂತಿದ್ದಾರೆ. ನಟ ವಿಜಯ್ ಅವರ ಎಡ ಭಾಗದ ಕಿವಿಗೆ ಬ್ಯಾಂಡೆಜ್ ಹಾಕಲಾಗಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜತೆಗೆ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್ ಮತ್ತು ನಟ್ಟಿ ನಟರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ದಿನೇಶ್ ಪುರುಷೋತ್ತಮನ್ ಅವರ ಛಾಯಾಗ್ರಹಣವಿದೆ.


Continue Reading

South Cinema

Silk Smitha: ಸಿಲ್ಕ್​ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!

Silk Smitha:  ಸಿಲ್ಕ್​ ಸ್ಮಿತಾ ಅವರು ಮೃತಪಟ್ಟ ಬಳಿಕ ಅವರ ಶವದ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎಂಬ ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರ ಹೇಳಿಕೆ ಮತ್ತೆ ವೈರಲ್‌ ಆಗುತ್ತಿದೆ.

VISTARANEWS.COM


on

Edited by

Silk Smitha
Koo

ಬೆಂಗಳೂರು: ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ ಸಿಲ್ಕ್‌ ಸ್ಮಿತಾ (Silk Smitha) ಮೂಲ ಹೆಸರು ವಿಜಯಲಕ್ಷ್ಮಿ. 1960ರ ಡಿಸೆಂಬರ್ 2ರಂದು ಜನಿಸಿದರು. ಆ ನಂತರದ ದಿನಗಳಲ್ಲಿ ಸಿಲ್ಕ್ ಸ್ಮಿತಾ ಎಂದೇ ಫೇಮಸ್ ಆದರು.  ಸೆಪ್ಟೆಂಬರ್​ 23 ನಟಿ ಸಿಲ್ಕ್​ ಸ್ಮಿತಾ ಅವರ 27ನೇ ಪುಣ್ಯತಿಥಿ. ಇದೀಗ ಕಾಲಿವುಡ್​ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರ ಹಳೆಯ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಸಿಲ್ಕ್​ ಸ್ಮಿತಾ ಅವರು ಮೃತಪಟ್ಟ ಬಳಿಕ ಅವರ ಶವದ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಅವರ ಹೇಳಿಕೆ ಮತ್ತೆ ವೈರಲ್‌ ಆಗುತ್ತಿದೆ.

ಸಿಲ್ಕ್ ಸ್ಮಿತಾ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ ಮತ್ತು ಅದಕ್ಕಾಗಿಯೇ ಸಿಲ್ಕ್ ಬಾಲ್ಯದಲ್ಲಿ ತಮ್ಮ ಓದನ್ನು ಬಿಡಬೇಕಾಯಿತು. ವರದಿಗಳ ಪ್ರಕಾರ, ಸಿಲ್ಕ್ ಸ್ಮಿತಾ ಅವರು ಕೇವಲ 14 ವರ್ಷದವರಾಗಿದ್ದಾಗ ಮದುವೆಯಾಗಿದ್ದರು ಮತ್ತು ಅವರು ಸಾಕಷ್ಟು ಕೌಟುಂಬಿಕ ಹಿಂಸೆಯನ್ನು ಎದುರಿಸಿದರು. ಸಿಲ್ಕ್ ಸ್ಮಿತಾ ತಮ್ಮ ಗಂಡನ ಮನೆಯಿಂದ ಓಡಿಹೋದ ನಂತರ ಮೇಕಪ್ ಕಲಾವಿದನಾಗಿದ್ದ ತಮ್ಮ ಸ್ನೇಹಿತನ ಮನೆ ಸೇರಿಕೊಂಡಿದ್ದರು. ಮೇಕಪ್ ಕಲಾವಿದರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ತಮಿಳು ನಿರ್ದೇಶಕ ವಿನು ಚಕ್ರವರ್ತಿ ಅವರು ಸಿಲ್ಕ್ ಸ್ಮಿತಾಗೆ ದೊಡ್ಡ ಬ್ರೇಕ್ ನೀಡಿದರು. 1979ರಲ್ಲಿ ತಮಿಳು ಚಲನಚಿತ್ರ ‘ವಂದಿಚಕ್ಕರಂ’ನಲ್ಲಿನ ಅವರ ಅದ್ಭುತ ಅಭಿನಯಕ್ಕಾಗಿ ಮೊದಲ ಬಾರಿಗೆ ಗಮನ ಸೆಳೆದರು. ಸಿಲ್ಕ್ ಸ್ಮಿತಾ ಅವರು 17 ವರ್ಷಗಳ ಕಾಲ ನಟಿಯಾಗಿ, ನೃತ್ಯಗಾತಿಯಾಗಿ ಮಿಂಚಿದರು. 450ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಸೆಪ್ಟೆಂಬರ್ 23, 1996ರಂದು ತಮ್ಮ 35ನೇ ವಯಸ್ಸಿನಲ್ಲಿ ನಿಗೂಢವಾಗಿ ಮೃತಪಟ್ಟರು. ಪೊಲೀಸರಿಗೆ ಸೂಸೈಡ್ ನೋಟ್ ಸಿಕ್ಕಿದೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: Silk Smitha: ಜ್ಯೂನಿಯರ್‌ ಸಿಲ್ಕ್‌ ಸ್ಮಿತಾ ಕಂಡು ಸಿನಿ ಪ್ರೇಮಿಗಳು ಥ್ರಿಲ್‌; ʻಹಳ್ಳಿ ಮೇಷ್ಟ್ರೇʼ ಬೇಗ ಬನ್ನಿ ಅಂದ್ರು ನೆಟ್ಟಿಗರು!

Bayilvan Ranganathan

ನಟಿ ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸಿ ಫೇಮಸ್ಸಾದ ಕಾರಣ ಅಭಿಮಾನಿಗಳ ಸಂಖ್ಯೆ ಹೆಚ್ಚಿನ ರೀತಿಯಲ್ಲಿ ಇತ್ತು. ಒಮ್ಮೆಯಾದರೂ ಈ ನಟಿಯನ್ನು ನೇರವಾಗಿ ನೋಡಿ ಕಣ್ತುಂಬಿಸಿಕೊಳ್ಳಬೇಕು ಎಂದುಕೊಂಡವರೇ ಹೆಚ್ಚು. ಇದ್ದಕ್ಕಿದ್ದಂತೆ ನಟಿ ಬಾರದ ಲೋಕಕ್ಕೆ ಹೋಗುತ್ತಾರೆ. ʻʻಶವದೊಂದಿಗೆ ಅತ್ಯಾಚಾರ ಮಾಡಲಾಗಿತ್ತು. ಶವಾಗಾರದಲ್ಲಿ ನಟಿಯ ನೌಕರರು ಕುಡಿದ ಅಮಲಿನಲ್ಲಿ ಇರುತ್ತಾರೆ. ಅಲ್ಲಿನ ಹೆಚ್ಚು ನೌಕರರು ಬೆಳಗ್ಗೆ ಕೆಲಸ ಆರಂಭಿಸಿದಾಗಿನಿಂದ ಕುಡಿದಿರುತ್ತಾರೆ. ಇದೇ ಅಮಲಿನಲ್ಲಿ ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹಲವು ಬಾರಿ ಸಿಲ್ಕ್ ಸ್ಮಿತಾ ಅವರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆʼʼ ಎಂದಿದ್ದಾರೆ ಬೈಲ್ವಾನ್ ರಂಗನಾಥನ್. ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾಗ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ಖುದ್ದು ನೋಡಿದ್ದೆ ಎನ್ನುವ ಅವರ ಮಾತು ಇದೀಗ ಮತ್ತೆ ವೈರಲ್‌ ಆಗಿದೆ.

Continue Reading

South Cinema

Kamal Haasan: ಕಮಲ್ ಹಾಸನ್ ಜನುಮದಿನಕ್ಕೆ ಮತ್ತೊಂದು ಸೂಪರ್‌ ಹಿಟ್‌ ಸಿನಿಮಾ ಮರು ಬಿಡುಗಡೆ!

Kamal Haasan: ಬಾಂಬೆ ಮೂಲದ ಭೂಗತ ಜಗತ್ತಿನ ಡಾನ್ ವರದರಾಜನ್ ಮುದಲೀರ್ ಅವರ ಜೀವನವನ್ನು ಆಧರಿಸಿದೆ .’ನಾಯಕನ್’ ಬಿಡುಗಡೆಯಾಗಿ 36 ವರ್ಷಗಳ ನಂತರ 4ಕೆ ರೂಪದಲ್ಲಿ ಮರು ಬಿಡುಗಡೆಗೆ ಸಿದ್ಧವಾಗಿದೆ ಎಂದು ಘೋಷಿಸಲಾಗಿದೆ.

VISTARANEWS.COM


on

Edited by

Kamal Haasan Nayakan
Koo

ಬೆಂಗಳೂರು: ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್ (Kamal Haasan starrer Nayakan) ಅಭಿನಯದ `ನಾಯಕನ್’ ನವೆಂಬರ್ 3ರಂದು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ. ಕಮಲ್ ಹಾಸನ್ ಜನುಮದಿನದ ಪ್ರಯುಕ್ತ ಈ ಸಿನಿಮಾ ರಿ ರಿಲೀಸ್‌ ಆಗುತ್ತಿದೆ. ಈ ಸಿನಿಮಾದಲ್ಲಿ ಶರಣ್ಯ ಮತ್ತು ಕಾರ್ತಿಕಾ ಕೂಡ ಕಾಣಿಸಿಕೊಂಡಿದ್ದರು. ಜನಗರಾಜ್, ವಿಜಯನ್, ಎಂ.ವಿ. ವಾಸುದೇವ ರಾವ್, ದೆಹಲಿ ಗಣೇಶ್, ನಿಜಲ್ಗಲ್ ರವಿ, ನಾಸರ್ ಮತ್ತು ತಾರಾ ಪೋಷಕ ಪಾತ್ರಗಳಲ್ಲಿದ್ದಾರೆ. ʻನಾಯಕನ್ʼ ಸಿನಿಮಾವು ಹಾಲಿವುಡ್ ಕ್ಲಾಸಿಕ್ ‘ದಿ ಗಾಡ್‌ಫಾದರ್’ ನಿಂದ ಪ್ರೇರಿತವಾಗಿದ್ದು, ಬಾಂಬೆ ಮೂಲದ ಭೂಗತ ಜಗತ್ತಿನ ಡಾನ್ ವರದರಾಜನ್ ಮುದಲೀರ್ ಅವರ ಜೀವನವನ್ನು ಆಧರಿಸಿದೆ. ‘ನಾಯಕನ್’ ಬಿಡುಗಡೆಯಾಗಿ 36 ವರ್ಷಗಳ ನಂತರ 4ಕೆ ರೂಪದಲ್ಲಿ ಮರು ಬಿಡುಗಡೆಗೆ ಸಿದ್ಧವಾಗಿದೆ ಎಂದು ಘೋಷಿಸಲಾಗಿದೆ.

ಚಲನಚಿತ್ರ ಮಂದಿರಗಳಲ್ಲಿ ಇತ್ತೀಚೆಗೆ ಹೀರೊಗಳ ಹಳೆಯ ಸೂಪರ್‌ ಹಿಟ್‌ ಸಿನಿಮಾಗಳನ್ನು ಮರು-ಬಿಡುಗಡೆ ಮಾಡುವುದು ಕಾಮನ್‌ ಆಗಿದೆ. ಹೊಸ ಚಲನಚಿತ್ರಗಳು ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುತ್ತಿರುವ ಕಾರಣ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತರಲು ಹಿಂದಿನ ಜನಪ್ರಿಯ ತಾರೆಯರ ಜನ್ಮ ವಾರ್ಷಿಕೋತ್ಸವದಂದು ವಿಶೇಷ ಪ್ರದರ್ಶನಗಳನ್ನು ನಡೆಸುತ್ತಿವೆ.

‘ನಾಯಕನ್’ ಸಿನಿಮಾ ವಿತರಕರು ಇತ್ತೀಚೆಗೆ ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ. ಸಿನಿಮಾವನ್ನು ತಮಿಳುನಾಡು, ಕರ್ನಾಟಕ ಮತ್ತು ಕೇರಳದಾದ್ಯಂತ ಎಲ್ಲ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಸೂಪರ್ ಹಿಟ್ ಚಿತ್ರ ‘ನಾಯಕನ್’ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. 1988ರಲ್ಲಿ ಆಸ್ಕರ್ ಪ್ರಶಸ್ತಿಗಳಿಗಾಗಿ ನಾಮೀನೇಟ್ ಆಗಿತ್ತು.

“ನಾವು ಈ ಹಿಂದೆ ಹಳೆಯ ಹಿಟ್ ಚಿತ್ರಗಳ ಪ್ರದರ್ಶನವನ್ನು ಆಯೋಜಿಸಿದ್ದೇವೆ. ಆದರೆ ಅದು ಸೀಮಿತ ಪ್ರಮಾಣದಲ್ಲಿ ಇತ್ತು. ಆದ್ದರಿಂದ ಕಾರ್ಯಸಾಧ್ಯವಾಗಿರಲಿಲ್ಲ. ಅಮಿತಾಭ್‌ ಬಚ್ಚನ್ ಅವರ ಸಿನಿಮಾಗಳೂ ಮತ್ತೆ ಮರು ಬಿಡುಗಡೆಯಾದಾಗ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ದರಿಂದ ನಾವು ಸ್ಕ್ರೀನ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆವುʼʼ ಎಂದು INOX ಲೀಸರ್‌ನ ಮುಖ್ಯ ಪ್ರೋಗ್ರಾಮಿಂಗ್ ಅಧಿಕಾರಿ ರಾಜೇಂದ್ರ ಸಿಂಗ್ ಜ್ಯಾಲಾ ಹಿಂದಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್‌ ಹಾಸನ್

ಕಮಲ್‌ ಕೈಯಲ್ಲಿ ಸಾಲು ಸಾಲು ಸಿನಿಮಾಗಳು

ಸದ್ಯ ಕಮಲ್‌ ಅವರ ಕೈಯಲ್ಲಿ ನಾಲ್ಕು ಪ್ರಾಜೆಕ್ಟ್‌ಗಳಿವೆ. ಅವುಗಳಲ್ಲಿ ಯಾವುದೂ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ನಾಗ್ ಅಶ್ವಿನ್ ಅವರ ಮುಂದಿನ ಚಿತ್ರ ಕಲ್ಕಿಯಲ್ಲಿ (Kalki cinema) ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅಮಿತಾಭ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ ಇತರ ಪ್ರಮುಖ ತಾರೆಗಳು ಇದ್ದಾರೆ. ಎಸ್ ಶಂಕರ್ ಅವರ 1996ರ ಚಲನಚಿತ್ರದ ಮುಂದುವರಿದ ಭಾಗವಾದ ಇಂಡಿಯನ್-2 ಸಿನಿಮಾದಲ್ಲಿಯೂ ಕಮಲ್‌ ಇದ್ದಾರೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಸಹ ನಡೆಯುತ್ತಿದೆ. ಇವುಗಳ ಹೊರತಾಗಿ H. ವಿನೋದ್ ಅವರೊಂದಿಗೆ ಒಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ, ಇದು ತಾತ್ಕಾಲಿಕವಾಗಿ ʻKH233- ರೈಸ್ ಟು ರೂಲ್ʼ ಎಂದು ಹೆಸರಿಸಲಾಗಿದೆ. ಕಮಲ್ ಹಾಸನ್ ಅವರು KH234ಗಾಗಿ 37 ವರ್ಷಗಳ ನಂತರ ಮಣಿರತ್ನಂ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಇದರಲ್ಲಿ ದುಲ್ಕರ್ ಸಲ್ಮಾನ್, ತ್ರಿಷಾ ಮತ್ತು ಜಯಂ ರವಿ ಕೂಡ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

Continue Reading

South Cinema

Parineeti Chopra: ಮದುವೆಯಲ್ಲಿ ಫೋನ್‌, ಕ್ಯಾಮೆರಾಗಳಿಗೆ ಟೇಪ್‌, 100 ಭದ್ರತಾ ಸಿಬ್ಬಂದಿ!

Parineeti Chopra: ವರದಿಗಳ ಪ್ರಕಾರ, ಮದುವೆಯಲ್ಲಿ ಭಾಗವಹಿಸುವವರಿಗೆ ಮೊಬೈಲ್‌ ಕೂಡ ಬಳಸುವಂತಿಲ್ಲ. ಮೂರು ದಿನಗಳ ಕಾಲ ಯಾವುದೇ ಸಿಬ್ಬಂದಿಗೆ ಆವರಣದಿಂದ ಹೊರಬರಲು ಅವಕಾಶವಿಲ್ಲ ಎಂದು ವರದಿಯಾಗಿದೆ.

VISTARANEWS.COM


on

Edited by

Parineeti Chopra Wedding
Koo

ಬೆಂಗಳೂರು: ಸೆಪ್ಟೆಂಬರ್ 24ರಂದು ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ (Parineeti Chopra) ಹಾಗೂ ಆಮ್‌ ಆದ್ಮಿ ಪಕ್ಷದ ಸಂಸದ ರಾಘವ್‌ ಚಡ್ಡಾ (Raghav Chadha) ಅವರ ವಿವಾಹ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಈಗಾಗಲೇ ಜೋಡಿ ಉದಯಪುರಕ್ಕೆ (Parineeti Chopra wedding) ತಲುಪಿದೆ. ಸದ್ಯ ಜೋಡಿಯ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿವೆ. ವಿವಾಹದಲ್ಲಿ 100 ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಮದುವೆಯಲ್ಲೂ ಕಟ್ಟುನಿಟ್ಟಿನ ಭದ್ರತಾ ನಿಯಮಗಳಿವೆ. ವರದಿಗಳ ಪ್ರಕಾರ, ಮದುವೆಯಲ್ಲಿ ಭಾಗವಹಿಸುವವರಿಗೆ ಮೊಬೈಲ್‌ ಕೂಡ ಬಳಸುವಂತಿಲ್ಲ. ಮೂರು ದಿನಗಳ ಕಾಲ ಯಾವುದೇ ಸಿಬ್ಬಂದಿಗೆ ಆವರಣದಿಂದ ಹೊರಬರಲು ಅವಕಾಶವಿಲ್ಲ ಎಂದು ವರದಿಯಾಗಿದೆ.

ಹೋಟೆಲ್ ಮೂಲಗಳ ಪ್ರಕಾರ, ಮದುವೆಯ ಸಿದ್ಧತೆಗಳ ಜತೆಗೆ ಕಾರ್ಯಕ್ರಮದ ಫೋಟೊಗಳು ಮತ್ತು ವಿಡಿಯೊಗಳು ಲೀಕ್‌ ಆಗದ್ದಂತೆ ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ. ಹೋಟೆಲ್‌ಗೆ ಪ್ರವೇಶಿಸುವವರ ಮೊಬೈಲ್ ಕ್ಯಾಮೆರಾಗಳಿಗೆ ನೀಲಿ ಬಣ್ಣದ ಟೇಪ್ ಅನ್ನು ಅಂಟಿಸಲಾಗುತ್ತದೆ. ಇದರಿಂದ ಅವರು ಮದುವೆ ಸಮಾರಂಭದಲ್ಲಿ ಯಾವುದೇ ವೀಡಿಯೊ-ಫೋಟೋಗ್ರಾಫ್ ತೆಗೆದುಕೊಳ್ಳುವಂತಿಲ್ಲ. ಈ ನೀಲಿ ಟೇಪ್‌ನ ವಿಶೇಷತೆ ಏನೆಂದರೆ, ಇದನ್ನು ಮೊಬೈಲ್ ಕ್ಯಾಮೆರಾದಲ್ಲಿ ಅಳವಡಿಸಿದ ನಂತರ ಯಾರಾದರೂ ಅದನ್ನು ತೆಗೆದರೆ, ಟೇಪ್‌ನಲ್ಲಿ ಬಾಣದ ಚಿಹ್ನೆ ಗೋಚರಿಸುತ್ತದೆ. ಸೆಕ್ಯೂರಿಟಿ ಅವರು ಪರಿಶೀಲಿಸಿದಾಗ ಕ್ಯಾಮೆರಾ ಬಳಸಲು ಟೇಪ್ ತೆಗೆದಿರುವುದು ಗೊತ್ತಾಗಿ ಬಿಡುತ್ತದೆ. ಈ ನಿರ್ಬಂಧವು ವಿಶೇಷವಾಗಿ ಹೋಟೆಲ್ ಸಿಬ್ಬಂದಿಗೆ, ಬಾಣಸಿಗರಿಗೆ ಅನ್ವಯಿಸುತ್ತದೆ. ಕರಣ್ ಜೋಹರ್, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಡಿಸೈನರ್ ಮನೀಶ್ ಮಲ್ಹೋತ್ರಾ ಅವರಂತಹ ಸೆಲೆಬ್ರಿಟಿಗಳು ಇಂದೇ (ಸೆ. 23) ಉದಯಪುರಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Parineeti Chopra; ನಾಳೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಅದ್ಧೂರಿ ಮದುವೆ; ಭರ್ಜರಿ ಸಿದ್ಧತೆ!

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ವರ್ಷ ಮೇ 13 ರಂದು ನವದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಗೆ 20 ಕ್ಕೂ ಹೆಚ್ಚು ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. 50ಕ್ಕೂ ಹೆಚ್ಚು ವಿವಿಐಪಿಗಳು ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ. ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಹಲವರು ಇರಲಿದ್ದಾರೆ. ಮದುವೆಯ ನಂತರ, ಹರಿಯಾಣದ ಗುರುಗ್ರಾಮದಲ್ಲಿ ಆರತಕ್ಷತೆ ನಡೆಯಲಿದೆ.

ಈ ಜೋಡಿ ಕಳೆದ ವರ್ಷದಿಂದಲೂ ಪ್ರೀತಿಯಲ್ಲಿದೆ. ಪರಿಣಿತಿ ಅವರು ಚಮ್ಕೀಲಾ ಸಿನಿಮಾಕ್ಕಾಗಿ ಪಂಜಾಬ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಆ ವೇಳೆ ರಾಘವ್‌ ಅವರು ಅಲ್ಲಿಗೆ ತೆರಳಿ ನಟಿಯೊಂದಿಗೆ ಮಾತನಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎಂದೂ ಹೇಳಲಾಗುತ್ತಿದೆ.

Continue Reading
Advertisement
Hasan Mahmud running out Ish Sodhi at the non-striker's end
ಕ್ರಿಕೆಟ್13 mins ago

NZ vs BAN: ಮಂಕಡ್​ ನಿರಾಕರಿಸಿ ಕ್ರೀಡಾ ಸ್ಫೂರ್ತಿ ಮೆರೆದ ಲಿಟನ್‌ ದಾಸ್‌‌ಗೆ ನೆಟ್ಟಿಗರ ಮೆಚ್ಚುಗೆ

Narendra modi image
ಕಲೆ/ಸಾಹಿತ್ಯ16 mins ago

Narendra Modi : ಕಲಾವಿದನ ಕುಂಚ, ಕೃತಕ ಬುದ್ಧಿಮತ್ತೆ ಸೇರಿಕೊಂಡರೆ ಪ್ರಕೃತಿಯಲ್ಲೇ ಕಾಣುತ್ತದೆ ಮೋದಿ ಮುಖ

Vistara Top 10 News 2309
ಕರ್ನಾಟಕ25 mins ago

VISTARA TOP 10 NEWS : ಸೆ. 26ಕ್ಕೆ ಬೆಂಗಳೂರು ಬಂದ್‌ಗೆ ಕರೆ, ಚೈತ್ರಾ ಕುಂದಾಪುರ ಟೀಮ್‌ ಪರಪ್ಪನ ಅಗ್ರಹಾರದಲ್ಲಿ ಸೆರೆ

Anegondi Vrindavana
ಕರ್ನಾಟಕ28 mins ago

Gangavathi News: ಆನೆಗೊಂದಿ ಜಯತೀರ್ಥ-ರಘುವರ್ಯರ ವೃಂದಾವನ ವಿವಾದ; ರಾಯರ ಮಠದ ಪರ ಹೈಕೋರ್ಟ್ ತೀರ್ಪು

Modi Reservation
ದೇಶ38 mins ago

Women’s Reservation Bill : ಮಹಿಳಾ ಮೀಸಲಾತಿ ವಿರೋಧಿಸಿದವರಿಗೆ ಭೀತಿ ಶುರುವಾಗಿದೆ; ಮೋದಿ ಲೇವಡಿ

Mohammed Shami finished with 5 for 51
ಕ್ರಿಕೆಟ್59 mins ago

Mohammed Shami: 16 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಮೊಹಮ್ಮದ್​ ಶಮಿ

MK Stalin
ದೇಶ1 hour ago

Organ Donation : ಅಂಗಾಂಗ ದಾನ ಮಾಡಿದವರ ಅಂತ್ಯ ಸಂಸ್ಕಾರಕ್ಕೆ ಸಕಲ ಸರ್ಕಾರಿ ಗೌರವ

Chaitra Kundapura
ಉಡುಪಿ1 hour ago

Chaitra Kundapura : ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ತಾತ್ಕಾಲಿಕ ನಿರ್ಬಂಧ ವಿಧಿಸಿದ ಕೋರ್ಟ್‌

women arrested
ದೇಶ2 hours ago

Illicit Affair : ಅಕ್ರಮ ಸಂಬಂಧ ನೋಡಿದ ಮಗನನ್ನೇ ಕೊಂದ ಹೆತ್ತಮ್ಮ; 2 ವರ್ಷದ ಬಳಿಕ ಪ್ರಿಯಕರನ ಜತೆ ಅರೆಸ್ಟ್​​

Kumaraswamys three suggestions to Government
ಕರ್ನಾಟಕ2 hours ago

HD Kumaraswamy : ನಾನು ಹೇಳಿದ ಹಾಗೆ ಮಾಡ್ತೀರಾ?; ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ಕುಮಾರಸ್ವಾಮಿ ನೀಡಿದ 3 ಸಲಹೆಗಳು

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina bhavishya
ಪ್ರಮುಖ ಸುದ್ದಿ18 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ6 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ7 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ1 week ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ1 week ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

ಟ್ರೆಂಡಿಂಗ್‌