ನವದೆಹಲಿ: ಕಳ್ಳತನದ ಅನುಮಾನದ ಮೇಲೆ ಮ್ಯಾನೇಜರ್ ಒಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿ, ಆತನನ್ನು ಸರ್ಕಾರಿ ಆಸ್ಪತ್ರೆ ಮುಂದೆ ಎಸೆದು ಹೋದ ಘಟನೆ ಉತ್ತರ ಪ್ರದೇಶದ ಷಹಜಹಾನ್‌ಪುರದಲ್ಲಿ ನಡೆದಿದೆ. ತೀವ್ರ ಥಳಿತಕ್ಕೆ ಒಳಗಾದ ವ್ಯಕ್ತಿಯು ಮೃತಪಟ್ಟಿದ್ದು, ಆತನಿಗೆ ವಿದ್ಯುತ್ ಶಾಕ್ ನೀಡಿ ಕೊಲ್ಲಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದು, ಮ್ಯಾನೇಜರ್ ಕೆಲಸ ಮಾಡುತ್ತಿದ್ದ ಮಾಲೀಕ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಕೊಲೆ ಆರೋಪ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ(Viral Video).
ಮೃತರಾದ ವ್ಯಕ್ತಿಯನ್ನು ಶಿವಂ ಜೋಹ್ರಿಯನ್ನು ಎಂದು ಗುರುತಿಸಲಾಗಿದೆ. ಈತ ಟ್ರಾನ್ಸ್‌ಪೋರ್ಟ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕಂಪನಿಯ ಮಾಲೀಕನ ಆದೇಶದ ಮೇರೆಗೆ ಶಿವಮ್‌ನನ್ನು ಕಂಬಕ್ಕೆ ಕಟ್ಟಿ ಹಾಕಿ, ಆತನಿಗೆ ರಾಡ್‌ನಿಂದ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ರತಿ ಏಟು ಬಿದ್ದಾಗಲೂ ಶಿವಂ ಜೋರಾಗಿ ನೋವಿನಿಂದ ಕಿರುಚಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಶಿವಮ್ ಮಾತ್ರವಲ್ಲದೇ ಇನ್ನೂ ಮೂರ್ನಾಲ್ಕು ನೌಕರರನ್ನು ಕೂಡಿ ಹಾಕಿ, ಚಿತ್ರಹಿಂಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Viral Video: ನೌಕರನನ್ನು ಕಂಬಕ್ಕೆ ಕಟ್ಟಿ ಹಾಕಿ ಹೊಡೆಯುತ್ತಿರುವ ವಿಡಿಯೋ
ಮಂಗಳವಾರ ರಾತ್ರಿ ಶಿವಂ ಅವರ ದೇಹವನ್ನು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆವರಣದಲ್ಲಿ ಎಸೆಯಲಾಗಿದೆ. ಶವವನ್ನು ಗುರುತಿಸಿದ ಕುಟುಂಬದ ಸದಸ್ಯರು, ಶಿವಂನಿಗೆ ವಿದ್ಯುತ್ ಶಾಕ್ ನೀಡಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಶಿವಮ್ ದೇಹದ ಮೇಲೆ ಗಾಯಗಳಾಗಿವೆ. ಅವು ವಿದ್ಯುತ್ ಶಾಕ್‌ನಿಂದಾದ ರೀತಿಯಲ್ಲಿ ಇಲ್ಲ.
ಇದನ್ನೂ ಓದಿ: Viral video | ಪ್ರಯಾಣಿಕ ಮತ್ತು ಟಿಸಿ ನಡುವೆ ಫುಲ್ ಫೈಟ್! ವೈರಲ್ ಆಯ್ತು ವಿಡಿಯೋ
ಟ್ರಾನ್ಸ್‌ಪೋರ್ಟ್ ಬಿಸಿನೆಸ್‌ಮನ್ ಬಂಕಿಮ್ ಸೂರಿ ಅವರಲ್ಲಿ ಶಿವಂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಏಳು ವರ್ಷಗಳಿಂದಲೂ ಇಲ್ಲೇ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ, ಪ್ರಮುಖ ವ್ಯಾಪಾರಿ ಕನ್ಹಿಯಾ ಹೊಸೈರಿ ಅವರ ಪ್ಯಾಕೇಜ್ ಕಾಣೆಯಾಗಿತ್ತು. ಕಳ್ಳತನದ ಶಂಕೆಯ ಮೇಲೆ ಹಲವಾರು ಸಾರಿಗೆ ನೌಕರರ ಮೇಲೆ ಹಲ್ಲೆ ನಡೆಸಲಾಗಿದೆ. ಶಿವಂ ಕೊಲೆ ಪ್ರಕರಣದಲ್ಲಿ ವ್ಯಾಪಾರಿ ಕನ್ಹಿಯಾ ಹೊಸೈರಿ ಅವರ ಮೇಲೂ ಪ್ರಕರಣವನ್ನು ದಾಖಲಿಸಲಾಗಿದೆ. ಕನ್ಹಿಯಾ ಹೊಸೈರಿಯ ಆವರಣದಿಂದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಇದು ಅಪರಾಧಕ್ಕೆ ಬಳಸಲಾಗಿತ್ತು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯು ಅಪರಾಧದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.