Site icon Vistara News

Viral Video: ಠಾಣೆಯಲ್ಲೇ ಮಹಿಳೆಗೆ ಗುಂಡು ಹಾರಿಸಿದ ಪೊಲೀಸ್!

Viral Video, Police cop shoots woman in inside police station

ಅಲಿಗಢ: ಸಾವು ಹೇಗೆ ಬರುತ್ತೆ ಎಂದು ಹೇಳಲಾಗುವುದಿಲ್ಲ. ಆಕೆ, ಪಾಸ್‌ಪೋರ್ಟ್ ದೃಢೀಕರಣಕ್ಕಾಗಿ (Passport Verification) ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಳು(Police Station). ತನ್ನ ಸರದಿಗಾಗಿ ಕಾಯುತ್ತಾ ನಿಂತಿದ್ದಳು. ಆದರೆ, ವಿಧಿ ಬೇರೆಯದ್ದೇ ಆಟ ಹೂಡಿತ್ತು. ಈ ವೇಳೆ, ಪೊಲೀಸ್ ಒಬ್ಬರು ಕೈಯಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿ(Cop Shoots), ಆಕೆ ದೇಹವನ್ನು ಹೊಕ್ಕಿದೆ. ಕೂಡಲೇ ಕುಸಿದು ಬಿದ್ದಿದ್ದಾಳೆ(cop shoots woman). ಈ ಎಲ್ಲ ಕ್ಷಣಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕಸ್ಮಿಕವಾಗಿ ಗುಂಡೇಟು ತಿಂದ ಮಹಿಳೆಯನ್ನು ಇಶ್ರತ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಕೆಯ ಪರಿಸ್ಥಿತಿಯು ಚಿಂತಾಜನಕವಾಗಿದೆ. ಈ ಘಟನೆ ಉತ್ತರ ಪ್ರದೇಶದ ಅಲಿಗಢನಲ್ಲಿ ನಡೆದಿದೆ. ಗುಂಡು ಹಾರಿಸಿದ ಪೊಲೀಸ್ ಪರಾರಿಯಾಗಿದ್ದಾರೆ(Viral Video).

ಮಹಿಳೆಯ ಕುಟುಂಬದವರು ಮಾತ್ರ ಬೇರೆಯದ್ದೇ ಆರೋಪ ಮಾಡುತ್ತಿದ್ದಾರೆ. ಠಾಣಾಧಿಕಾರಿ, ಪಾಸ್‌ಪೋರ್ಟ್ ದೃಢೀಕರಣ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೇ ಕಾರಣಕ್ಕಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಬಳಿಕ ಅಧಿಕಾರಿ ಆಕೆಗೆ ಗುಂಡು ಹೊಡೆದಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಪಾಸ್‌ಪೋರ್ಟ್ ವಿಚಾರಣೆಗಾಗಿ ಆಕೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಳು. ಆಕೆಗೆ ಹಣಕ್ಕಾಗಿ ಕರೆಗಳು ಬರುತ್ತಿದ್ದವು. ಆಕೆಗೆ ಗುಂಡು ಹಾರಿಸಿದವರು ಯಾರು ಎಂದು ತಿಳಿದಿಲ್ಲ. ಹಣದ ಬೇಡಿಕೆಯ ಬಗ್ಗೆ ತಿಳಿದಿಲ್ಲ. ಅವರ ನಡುವೆ ಜಗಳವಾಗಿತ್ತು ಎಂದು ಇಶ್ರತ್ ಸಂಬಂಧಿ ಜೀಶನ್ ಹೇಳಿದ್ದಾರೆ. ಗುಂಡೇಟು ತಿಂದ ಮಹಿಳೆಯು ತನ್ನ ಸರದಿಗಾಗಿ ನಿಂತಿರುತ್ತಾರೆ. ಆಗ ಪೊಲೀಸ್ ಒಬ್ಬ ಬಂದು ಮತ್ತೊಬ್ಬ ಪೊಲೀಸನಿಗೆ ಬಂದೂಕು ನೀಡುತ್ತಾನೆ. ಆಗ ಆ ಪೊಲೀಸ್ ಗನ್ ಪರೀಕ್ಷಿಸುತ್ತಾನೆ, ಈ ವೇಳೆ ಗುಂಡ ಹಾರಿ ನೇರವಾಗಿ ಮಹಿಳೆಗೆ ತಾಗುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.

ನಿರ್ಲಕ್ಷ್ಯದ ಕಾರಣ ಇನ್‌ಸ್ಪೆಕ್ಟರ್ ಮನೋಜ್ ಶರ್ಮಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಗಾಯಾಳು ಮಹಿಳೆಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ, ಘಟನೆಯ ದೃಶ್ಯಾವಳಿಗಳನ್ನು ಇಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಲಿಗಢ ಎಸ್‌ಎಸ್‌ಪಿ ಕಲಾನಿಧಿ ನೈತಾನಿ ಅವರು ಹೇಳಿದ್ದಾರೆ.

ಪೊಲೀಸ್‌ ಬಂದೂಕನಿಂದ ಹಾರಿದ ಗುಂಡು ಮಹಿಳೆಯ ಬೆನ್ನಿಗೆ ಬಿದ್ದಿದೆ. ತಲೆಮರೆಸಿಕೊಂಡಿರುವ ಆರೋಪಿ ಪೊಲೀಸನನ್ನು ಹಿಡಿಯಲು ತಂಡವನ್ನು ರಚಿಸಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯು ಹೇಳಿದ್ದಾರೆ. ಗುಂಡೇಟು ತಿಂದ ಮಹಿಳೆಯು, ಉಮ್ರಾಕ್ಕಾಗಿ ಸೌದಿ ಅರೆಬಿಯಾಗೆ ಭೇಟಿ ನೀಡಲು ಯೋಜಿಸಿದ್ದರು.

ಈ ಸುದ್ದಿಯನ್ನೂ ಓದಿ: Viral Video: ಎಕ್ಸ್​ಪ್ರೆಸ್​ ರೈಲಿಗಿಂತಲೂ ವೇಗವಾಗಿ ಸಾಗಿದ ಆಟೋ! ವಿಡಿಯೊ ವೈರಲ್​

Exit mobile version