Site icon Vistara News

Viral Video: ರೈಲು ನಿಲ್ದಾಣದಲ್ಲಿ ಬಾಲಕನಿಗೆ ಒದ್ದು, ತುಳಿದ ಪೊಲೀಸ್‌ ಪೇದೆ; ನಿಮಗೆ ಮಕ್ಕಳಿಲ್ಲವೇ ಎಂದ ಜನ

RPF Constable Kicks Minor At Railway Station

Viral Video: RPF Constable Kicks Minor at Railway Station in Uttar Pradesh, Suspended Now

ಲಖನೌ: ಪೊಲೀಸ್‌ ಅಧಿಕಾರಿಗಳು, ರೈಲು ನಿಲ್ದಾಣಗಳಲ್ಲಿ ರೈಲ್ವೆ ಪ್ರೊಟೆಕ್ಷನ್‌ ಪಡೆಯ (RPF) ಅಧಿಕಾರಿಗಳು ಜನರನ್ನು ರಕ್ಷಿಸಿದ, ಜನರಿಗೆ ಸಹಾಯ ಮಾಡಿದ ಸುದ್ದಿ ಓದಿದಾಗ, ವಿಡಿಯೊ ನೋಡಿದಾಗ ಮನಸ್ಸಿನಲ್ಲೇ ನಾವು ಅವರಿಗೊಂದು ಸೆಲ್ಯೂಟ್‌ ಹೊಡೆಯುತ್ತೇವೆ. ಅವರನ್ನು ಮನಸಾರೆ ಗುಣಗಾನ ಮಾಡುತ್ತೇವೆ. ಆದರೆ, ಕೆಲವು ಪೊಲೀಸ್‌ ಅಧಿಕಾರಿಗಳು ಮಾತ್ರ ಕ್ರೂರಿಯಂತೆ ವರ್ತಿಸಿದಾಗ, ಇವರೇಕೆ ಹೀಗೆ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ರೈಲು ನಿಲ್ದಾಣದಲ್ಲಿ ಆರ್‌ಪಿಎಫ್‌ ಕಾನ್‌ಸ್ಟೇಬಲ್‌ ಒಬ್ಬರು ಬಾಲಕನಿಗೆ ಒದ್ದು, ಆತನನ್ನು ತುಳಿಯುವ ಮೂಲಕ ಅಮಾನವೀಯತೆ ಪ್ರದರ್ಶಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Viral Video) ಭಾರಿ ವೈರಲ್‌ ಆಗಿದೆ.

ಹೌದು, ಬೆಲ್ತಾರ ರೋಡ್‌ ರೈಲು ನಿಲ್ದಾಣದಲ್ಲಿ ಆರ್‌ಪಿಎಫ್‌ ಕಾನ್‌ಸ್ಟೇಬಲ್ ಆಗಿರುವ ಬಲಿಂದರ್‌ ಸಿಂಗ್‌ ಎಂಬುವರು ಬಾಲಕನಿಗೆ ಒದ್ದು, ತುಳಿದಿದ್ದಾರೆ ಎಂದು ಆರ್‌ಪಿಎಫ್ ವಾರಾಣಸಿ ರೈಲ್ವೆ‌ ವಿಭಾಗ ತಿಳಿಸಿದೆ. ಅಷ್ಟೇ ಅಲ್ಲ, ಬಲಿಂದರ್‌ ಸಿಂಗ್‌ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆಗೂ ಆದೇಶಿಸಲಾಗಿದೆ.

ರೈಲು ನಿಲ್ದಾಣದ ಆವರಣದಲ್ಲಿ ಕೆಳಗೆ ಬಿದ್ದ ಬಾಲಕನಿಗೆ ಕಾನ್‌ಸ್ಟೇಬಲ್‌ ಒದ್ದಿದ್ದಾರೆ. ಅಷ್ಟೇ ಅಲ್ಲ, ಆ ಬಾಲಕನನ್ನು ತುಳಿದಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಲೇ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. “ನಿಮ್ಮ ಮನೆಯಲ್ಲಿ ಮಕ್ಕಳಿಲ್ಲವೇ?”, “ನಿಮ್ಮ ಮಕ್ಕಳಿಗೂ ಹೀಗೆಯೇ ಮಾಡುತ್ತೀರಾ” ಎಂದು ಕೇಳುವ ಮೂಲಕ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ನಾಚ್‌ ಬಸಂತಿ; ಬಿಹಾರ ಸರ್ಕಾರಿ ಅಧಿಕಾರಿ ಬೀಳ್ಕೊಡುಗೆ ವೇಳೆ ಸೊಂಟ ಬಳುಕಿಸಿದ ಬಾರ್‌ ಡಾನ್ಸರ್

ಮಾನವೀಯತೆ ಮೆರೆದಿದ್ದ ASI

ಕೆಲ ದಿನಗಳ ಹಿಂದಷ್ಟೇ, ಮಹಾರಾಷ್ಟ್ರದ ಮುಂಬೈನಲ್ಲಿರುವ ಬೋರಿವಲಿ ರೈಲು ನಿಲ್ದಾಣದಲ್ಲಿ ವೃದ್ಧೆಯೊಬ್ಬರನ್ನು ಬೋಗಿಯವರೆಗೆ ಅಧಿಕಾರಿಯು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಬಿಟ್ಟಿದ್ದರು. ಆ ಮೂಲಕ ಅವರು ಮಾನವೀಯತೆ ಮೆರೆದಿದ್ದರು.

ಆರ್‌ಪಿಎಫ್‌ ಅಸಿಸ್ಟಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಆಗಿರುವ ಮಾನ್‌ ಸಿಂಗ್‌ ಅವರು ನಡೆಯಲು ಆಗದ ಮಹಿಳೆಯೊಬ್ಬರನ್ನು ಅವರು ಸೀಟ್‌ ರಿಸರ್ವ್‌ ಮಾಡಿದ ಬೋಗಿಯವರೆಗೆ ಹೊತ್ತುಕೊಂಡು ಹೋಗಿ ಬಿಟ್ಟಿದ್ದರು. ರೈಲು ನಿಲ್ದಾಣದಲ್ಲಿ ವ್ಹೀಲ್‌ ಚೇರ್‌ ಇರದ ಕಾರಣ ಮಹಿಳೆಯನ್ನು ಮಾನ್‌ ಸಿಂಗ್‌ ಅವರು ಹೊತ್ತುಕೊಂಡು ಹೋಗಿದ್ದರು. ಇವರು ಮಾನವೀಯತೆ ಪ್ರದರ್ಶಿಸಿರುವ ವಿಡಿಯೊ ವೈರಲ್‌ ಆಗಿ, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Exit mobile version