ನವದೆಹಲಿ: ಭಾರತೀಯ ಜನತಾ ಪಾರ್ಟಿಯು (BJP Party) ಮಧ್ಯ ಪ್ರದೇಶದ (CM of Madhya Pradesh) ಮುಖ್ಯಮಂತ್ರಿಯಾಗಿ ಹೊಸ ಮುಖ ಮೋಹನ್ ಯಾದವ್ (Mohan Yadav) ಅವರನ್ನು ಆಯ್ಕೆ ಮಾಡಿದ ನಂತರ, ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್(Shivraj Singh Chouhan) ಅವರು ರಾಜ್ಯಪಾಲ ಮುಂಗುಭಾಯ್ ಪಟೇಲ್ ಅವರಿಗೆ ಮಂಗಳವಾರ ರಾಜೀನಾಮೆ ಸಲ್ಲಿಸಿದರು. ಬಳಿಕ ಚೌಹಾಣ್ ಮನೆಯಲ್ಲಿ ಅನಿರೀಕ್ಷಿತವಾಗಿ ಲಾಡ್ಲಿ ಬೆಹನಾಸ್(ಮಹಿಳಾ ಫಲಾನುಭವಿಗಳು) ಗುಂಪು ಭೇಟಿ ನೀಡಿ, ತಮ್ಮ ದುಃಖ ವ್ಯಕ್ತಪಡಿಸಿತು. ಅದೊಂದು ಭಾವನಾತ್ಮಕ ವಿದಾಯವಾಗಿತ್ತು. ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಪ್ಪಿಕೊಂಡ ಮಹಿಳಾ ಫಲಾನುಭವಿಗಳು ಬಿಕ್ಕಿ ಬಿಕ್ಕಿ ಅತ್ತಿರುವ (Ladli behnas weeping) ವಿಡಿಯೋ ವೈರಲ್ ಆಗಿದೆ(Viral Video).
#WATCH | Bhopal: Former Madhya Pradesh Chief Minister and senior BJP leader Shivraj Singh Chouhan meets women supporters.
— ANI (@ANI) December 12, 2023
(Source: Shivraj Singh Chouhan's office) pic.twitter.com/oWlHYUYlpJ
ಮಹಿಳಾ ಫಲಾನುಭವಿಗಳು ಚೌಹಾಣ್ ಅವರ ನಿವಾಸಕ್ಕೆ ಅನಿರೀಕ್ಷಿತ ಭೇಟಿ ನೀಡುತ್ತಿದ್ದಂತೆ ಭಾವನೆಗಳು ಉಮ್ಮಳಿಸಿದವು. ಚೌಹಾಣ್ ಹಠಾತ್ ರಾಜೀನಾಮೆಯಿಂದ ನಿರಾಶೆಯಿಂದ ಹೊರಬಂದ ‘ಲಾಡ್ಲಿ ಬೆಹನಾ’ ಯೋಜನೆಯ ಮಹಿಳಾ ಫಲಾನುಭವಿಗಳ ಗುಂಪು ತಮ್ಮ ಕೃತಜ್ಞತೆ ಮತ್ತು ಕಾಳಜಿಯನ್ನು ವ್ಯಕ್ತಪಡಿಸಿತು. ಮತ್ತೊಂದೆಡೆ, ಮಂಗಳವಾರ ಅವರ ನಿವಾಸದಲ್ಲಿ ಬೆಂಬಲಿಗರು ಅವರನ್ನು ಭೇಟಿ ಮಾಡಿ, ರಾಜೀನಾಮೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಹಿಳಾ ಫಲಾನುಭವಿಗಳು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಪ್ಪಿಕೊಂಡು ಮುಖ್ಯಮಂತ್ರಿ ಸ್ಥಾನವನ್ನು ತೊರೆಯಬೇಡಿ ಎಂದು ಅಳುತ್ತಿರುವ ವಿಡಿಯೋ ವೈರಲ್ ಆಗಿದೆ.
ನೀವು ಎಲ್ಲರಿಗೂ ಇಷ್ಟ. ನಾವು ನಿಮಗೆ ಮತ ಹಾಕಿದ್ದೇವೆ ಎಂದು ಮಹಿಳೆಯೊಬ್ಬಳು ಹೇಳುವುದನ್ನು ವೈರಲ್ ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದು.
ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವು ‘ಲಾಡ್ಲಿ ಬೆಹನಾ’ ಕಲ್ಯಾಣ ಯೋಜನೆಗೆ ಸಲ್ಲುತ್ತದೆ. ಮಹಿಳಾ ಮತದಾರರನ್ನು ನೇರವಾಗಿ ಗುರಿಯಾಗಿಸುವ ಈ ಯೋಜನೆಯು ಬಿಜೆಪಿಗೆ ಚುನಾವಣೆಯನ್ನು ತನ್ನ ಪರವಾಗಿ ತಿರುಗಿಸಲು ಸಹಾಯ ಮಾಡಿದ ಮಾಸ್ಟರ್‌ಸ್ಟ್ರೋಕ್ ಎಂದು ಪರಿಗಣಿಸಲಾಗುತ್ತಿದೆ.
ಏನಾದರೂ ಕೇಳುವುದಕ್ಕಿಂತ ಸಾಯುವುದೇ ಮೇಲು!
ಈ ಮಧ್ಯ ವಿದಾಯದ ಸುದ್ದಿಗೋಷ್ಠಿ ನಡೆಸಿದ ಶಿವರಾಜ್ ಸಿಂಗ್ ಚೌಹಾಣ್ ಅವರು, ತಮ್ಮ ಬದಲಿಗೆ ಮೋಹನ್ ಯಾದವ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡುತ್ತಿರುವುದು ತಮ್ಮ ಸಹಮತವಿದೆ ಎಂದು ಹೇಳಿದರು.
ಸಿಎಂ ಮೋಹನ್ ಯಾದವ್ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ನಡೆಯುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಪ್ರಗತಿ ಮತ್ತು ಅಭಿವೃದ್ಧಿಯ ವಿಷಯದಲ್ಲಿ, ಮಧ್ಯಪ್ರದೇಶವು ಹೊಸ ಎತ್ತರವನ್ನು ಸಾಧಿಸುತ್ತದೆ ಎಂದು ಹೇಳಿದರು. ನನಗಾಗಿ ಏನಾದರೂ ಕೇಳುವುದಕ್ಕಿಂತಲೂ ಸಾಯುವುದೇ ಮೇಲು ಎಂದು ಅವರು ವಿಷಾದದಿಂದ ಹೇಳಿದರು.
ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯ ಪ್ರದೇಶದ ಅತಿ ದೀರ್ಘ ಅವಧಿಗೆ ಸಿಎಂ ಎಂದು ಗುರುತಿಸಿಕೊಂಡಿದ್ದಾರೆ. ಅವರು 2005ರಿಂದ 2018, 2020ರಿಂದ 2023ರವರೆಗೆ ಮಧ್ಯ ಪ್ರದೇಶದ ಮುಖ್ಯಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Mohan Yadav: ಯಾರಿವರು ಮಧ್ಯ ಪ್ರದೇಶದ ನೂತನ ಸಿಎಂ ಡಾ. ಮೋಹನ್ ಯಾದವ್?