Site icon Vistara News

Viral Video; ಫೋಟೋಕ್ಕಾಗಿ ಮೊಬೈಲ್‌ ತೆಗೆದ ಹುಡುಗಿ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ

Elephant Video

ಜಾಂಬಿಯಾ: ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುವ ಅದೆಷ್ಟೋ ವಿಡಿಯೋ (Viral Video)ಗಳನ್ನು ನಾವು ಮೆಚ್ಚಿಕೊಳ್ಳುತ್ತೇವೆ. ಅದರಲ್ಲೂ ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೋಗಳೆಂತೂ ಮನಸಿಗೆ ಸಿಕ್ಕಾಪಟೆ ಖುಷಿಕೊಡುತ್ತವೆ. ಇದೀಗ ಆನೆಯೊಂದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇದರಲ್ಲಿ ಆನೆ ಯಾಕೋ ಸಿಟ್ಟು ಮಾಡಿಕೊಂಡಂತಿದ್ದು, ಹುಡುಗಿಯೊಬ್ಬಳಿಗೆ ರಪ್‌ ಅಂತ ಹೊಡೆದಿದ್ದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಅಂದಹಾಗೇ, ವಿಡಿಯೋ ಹಳೆಯದಾಗಿದ್ದು, ಮತ್ತೊಮ್ಮೆ ವೈರಲ್‌ ಆಗುತ್ತಿದೆ.

ವಿಡಿಯೋವನ್ನು ಶೂಟ್‌ ಮಾಡಿದ್ದು ದಕ್ಷಿಣ ಆಫ್ರಿಕಾದ ಜಾಂಬಿಯಾದಲ್ಲಿರುವ ಆನೆ ಸಂರಕ್ಷಿತ ಪ್ರದೇಶವೊಂದರಲ್ಲಿ. ಒಂದು ಕಡಿಮೆ ಆಳದ ಬಾವಿಯಲ್ಲಿ ಸಲಗವೊಂದಿಗೆ. ಆ ಬಾವಿಗೆ ಸುತ್ತಲೂ ಕಟ್ಟೆ ಕಟ್ಟಲಾಗಿದ್ದರಿಂದ ಆನೆ ಹೊರಗೆ ಬರುವಂತಿಲ್ಲ. ಆ ಬೇಲಿಯ ಆಚೆ ನಿಂತ ಮೂರ್ನಾಲ್ಕು ಜನರ ಕಡೆಗೆ ಆನೆ ತನ್ನ ಸೊಂಡಿಲನ್ನು ಚಾಚುತ್ತದೆ. ಒಂದಿಬ್ಬರು ಆ ಸೊಂಡಿಲನ್ನು ಮುಟ್ಟಿ ನಗುತ್ತಿರುವಾಗ ಅಲ್ಲೇ ಪಕ್ಕದಲ್ಲಿದ್ದ ಹುಡುಗಿಯೊಬ್ಬಳು ಫೋಟೋ ತೆಗೆಯಲೆಂದು ಮೊಬೈಲ್‌ ಹಿಡಿಯುತ್ತಾಳೆ. ಅಷ್ಟರಲ್ಲಿ ಆನೆಗೆ ಏನಾಯಿತೋ, ಸೊಂಡಿಲಿನಲ್ಲಿ ರಪ್ಪನೆ ಆ ಹುಡುಗಿಯ ಕೈಯಿ ಮತ್ತು ಮುಖಕ್ಕೆ ಹೊಡೆಯುತ್ತದೆ. ಹುಡುಗಿ ಕೈಯಲ್ಲಿದ್ದ ಮೊಬೈಲ್‌ ಕೆಳಗೆ ಬೀಳುತ್ತದೆ ಮತ್ತು ಕೆಳಗೆ ಬೀಳಲಾದ ಹುಡುಗಿಯನ್ನು ಉಳಿದವರು ಹಿಡಿದುಕೊಳ್ಳುತ್ತಾರೆ. ಆನೆ ಕೆಳಗೆ ಬಿದ್ದ ಮೊಬೈಲ್‌ನ್ನು ಸೊಂಡಿಲಿನಿಂದ ಎತ್ತಿಕೊಳ್ಳಲೂ ಪ್ರಯತ್ನಿಸುತ್ತದೆ. ಆದರೆ ಆನೆಗೇಕೆ ಸಿಟ್ಟುಬಂತು ಎಂಬುದು ಯಾರಿಗೂ ಅರ್ಥವಾಗಲಿಲ್ಲ. ಅಷ್ಟೊತ್ತು ನಗುತ್ತಿದ್ದವರೆಲ್ಲ ಒಮ್ಮೆಲೇ ಕೂಗಾಡಲು ಶುರು ಮಾಡಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಆನೆಯ ಸೊಂಡಿಲಿನಿಂದ ಹೊಡೆತ ತಿಂದ ಹುಡುಗಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಳು. ನಾವೆಲ್ಲ ಗ್ರೇಸ್‌ ಪ್ರೆಪ್‌ ಹೈಸ್ಕೂಲ್‌ನ ವಿದ್ಯಾರ್ಥಿಗಳು. ನಮ್ಮ ಡೀನ್‌ ಜತೆ 12 ದಿನಗಳ ಪ್ರವಾಸಕ್ಕೆ ತೆರಳಿದ್ದವು. ಈ ಅಭಯಾರಣ್ಯದಲ್ಲಿ ಪ್ರಾಣಿಗಳನ್ನೆಲ್ಲ ನೋಡುತ್ತ, ಅವುಗಳ ಜತೆಗೆಲ್ಲ ಆಟವಾಡುತ್ತಿದ್ದೆವು. ನನಗೆ ಆನೆಯೆಂದರೆ ತುಂಬ ಪ್ರೀತಿ. ಹೀಗಾಗಿ ಆನೆಗೆ ತುಂಬ ಹತ್ತಿರದಲ್ಲಿ ನಿಂತು, ಅದರ ಫೋಟೋ ತೆಗೆಯುತ್ತಿದ್ದೆ. ಆದರೆ ಆನೆಗೆ ಏನಾಯಿತೋ ಒಂದೇ ಸಲ ನನ್ನ ಕೈಯಿಗೆ ಏಟು ಕೊಟ್ಟಿತು ಎಂದು ಹೇಳಿಕೊಂಡಿದ್ದಳು.

ಇದನ್ನೂ ಓದಿ: ನಾಗರಹೊಳೆಯಲ್ಲಿ ಆನೆ ದಾಳಿ: ಸಲ್ಪದ್ರಲ್ಲೇ ವ್ಯಕ್ತಿ ಪಾರು

Exit mobile version