ನವದೆಹಲಿ: ಬಾಂಗ್ಲಾದೇಶದ ಗಡಿ ಕಾಯುವ ಯೋಧರು ಭಾರತದ ಮೇಘಾಲಯದ ಹಳ್ಳಿಯೊಂದಕ್ಕೆ ಬಂದಿರುವ ಘಟನೆ ಬುಧವಾರ ನಡೆದಿದೆ. ಯೋಧರು ಬಂದಿರುವುದನ್ನು ಕಂಡಿರುವ ಗ್ರಾಮಸ್ಥರು ಭಯಪಟ್ಟು ಅವರನ್ನು ಓಡಿಸಿಕೊಂಡು ಹೋಗಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಬಾಂಗ್ಲಾದೇಶದ ಗಡಿ ರಕ್ಷಕ ದಳದ ಇಬ್ಬರು ಯೋಧರು ಮೇಘಾಲಯದ ದಕ್ಷಿಣ ಗಾರೋ ಹಿಲ್ಸ್‌ನಲ್ಲಿ ರೊಂಗಾರಾ ಪ್ರದೇಶಕ್ಕೆ ಬುಧವಾರ ಸಂಜೆ 4 ಗಂಟೆ ಹೊತ್ತಿಗೆ ಬಂದಿದ್ದಾರೆ. ಎಕೆ ಸರಣಿಯ ರೈಫಲ್‌ಗಳೊಂದಿಗೆ ಶಸ್ತ್ರಸಜ್ಜಿತವಾಗಿ ಲಾಠಿ ಹಿಡಿದುಕೊಂಡು ಗ್ರಾಮವನ್ನು ಪ್ರವೇಶಿಸಿದ ಅವರನ್ನು ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ ಅವರನ್ನು ಓಡಿಸಿದ್ದಾರೆ.
ಇದನ್ನೂ ಓದಿ: Viral News : ಮೆರವಣಿಗೆಯಲ್ಲಿ ಕಾಣಿಸಿತು ಇಂದಿರಾಗಾಂಧಿ ಹತ್ಯೆಯ ಸ್ತಬ್ಧಚಿತ್ರ!
ಈ ವಿಚಾರದಲ್ಲಿ ಭಾರತದ ಗಡಿ ರಕ್ಷಣಾ ಪಡೆಯು ಬಾಂಗ್ಲಾದೇಶದ ಸಹವರ್ತಿಗಳೊಂದಿಗೆ ಮಾತುಕತೆ ನಡೆಸಿದೆ. ಬಾಂಗ್ಲಾದೇಶವು ತಮ್ಮ ಯೋಧರು ಅಪರಾಧಿಗಳನ್ನು ಹಿಡಿಯುವುದಕ್ಕೆಂದು ಅವರ ಬೆನ್ನತ್ತಿದ್ದು, ತಮಗೆ ಅರಿವಿಲ್ಲದಂತೆ ಭಾರತದ ಗಡಿ ದಾಟಿ ಹಳ್ಳಿಯೊಳಗೆ ಹೋಗಿದ್ದಾರೆ ಎಂದು ಹೇಳಿಕೊಂಡಿದೆ.
ಗ್ರಾಮವು ಗಡಿ ಬೇಲಿಯ ಮುಂಭಾಗದಲ್ಲಿಯೇ ಇದೆ. ಅಲ್ಲಿ ಕಳ್ಳಸಾಗಾಣಿಕೆ ಮಾಡಿಕೊಂಡು ಅಪರಾಧಿಯೊಬ್ಬ ಬಂದಿದ್ದರಿಂದ ಯೋಧರು ಆತನನ್ನು ಅಟ್ಟಿಸಿಕೊಂಡು ಬಂದಿದ್ದಾರೆ. ಆ ಸಂದರ್ಭದಲ್ಲಿ ಗಡಿ ದಾಟಲಾಗಿದೆ ಎಂದು ಉಭಯ ದೇಶಗಳ ಅಧಿಕಾರಿಗಳು ನಡೆಸಿರುವ ಸಭೆಯಲ್ಲಿ ಹೇಳಲಾಗಿದೆ. ಯೋಧರು ಭಾರತದೊಳಗೆ ಬಂದಿದ್ದರಾದರೂ ಯಾರೊಬ್ಬರಿಗೂ ಹಾನಿಯುಂಟುಮಾಡಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.
Viral Video: ಬಾಂಗ್ಲಾ ಯೋಧರನ್ನು ಅಟ್ಟಾಟಿಸಿಕೊಂಡು ಓಡಿಸುತ್ತಿರುವ ಹಳ್ಳಿಗರು
Meghalaya Villagers Chase Out 2 Bangladesh Border Guards
— Aviral Pratap Singh Chawda 🇮🇳 (@AviralChawda) June 9, 2023
Border Guards Bangladesh BGB were engaged in a chase to catch border criminals (alleged smugglers) when they "unknowingly" entered the Indian village.
BSF took up the matter with BGB & filed a protest pic.twitter.com/WKSSs094yG