ಹೈದ್ರಾಬಾದ್: ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ (Smallest Washing Machine) ತಯಾರಿಸುವ ಮೂಲಕ ಆಂಧ್ರ ಪ್ರದೇಶದ (Andhra Pradesh) ವ್ಯಕ್ತಿಯೊಬ್ಬರು ಜಗತ್ತಿನ ಗಮನ ಸೆಳೆದಿದ್ದಾರೆ. ಆಂಧ್ರಪ್ರದೇಶದ ಸಾಯಿ ತಿರುಮಲನೀದಿ (Sai Tirumalaneedi) ಅವರು ಇದುವರೆಗೆ ದಾಖಲಾದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ಸಿದ್ಧಪಡಿಸಿದ್ದಾರೆ. ಈ ಅಸಾಮಾನ್ಯ ಸಾಧನೆಯನ್ನು ಇತ್ತೀಚೆಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ (Guinness World Records) ಇನ್‌ಸ್ಟಾಗ್ರಾಮ್ ಪುಟದಲ್ಲಿ ಪ್ರದರ್ಶಿಸಲಾಯಿತು ಮತ್ತು ವ್ಯಾಪಕ ಮೆಚ್ಚುಗೆ ಕೂಡ ವ್ಯಕ್ತವಾಗಿದೆ(Viral News).
ಫೆಬ್ರವರಿ 21 ರಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹಂಚಿಕೊಂಡ ವೀಡಿಯೊ ಭಾರೀ ಗಮನ ಸೆಳೆಯುತ್ತಿದೆ. ತಿರುಮಲನೀದಿ ಅವರ ಸಣ್ಣ ಬಟ್ಟೆ ತೊಳೆಯುವ ಯಂತ್ರವನ್ನು ನಿರ್ಮಿಸುವ ಪ್ರಕ್ರಿಯೆಯನ್ನು ಈ ವಿಡಿಯೋದಲ್ಲಿ ಕಾಣಬಹುದು. ನಿಖರವಾದ ಜಾಗರೂಕತೆಯಿಂದ ಸ್ವಿಚ್ ಮತ್ತು ಸಣ್ಣ ಪೈಪ್ ಸೇರಿದಂತೆ ಸಣ್ಣ ಭಾಗಗಳ ಒಂದು ಶ್ರೇಣಿಯನ್ನು ಬಳಸಿಕೊಂಡು ಅವರು ಚಿಕ್ಕ ಸಾಧನವನ್ನು ಒಟ್ಟುಗೂಡಿಸುತ್ತಾರೆ, ಇದು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ತೊಳೆಯುವ ಯಂತ್ರವಾಗಿ ಕೊನೆಗೊಳ್ಳುತ್ತದೆ.
ವಿಡಿಯೋದ ಪ್ರಮುಖ ಅಂಶ ಎಂದರೆ ತಿರುಮಲನೀದಿ ಅವರು ಬಟ್ಟೆ ತೊಳೆಯುವ ಯಂತ್ರವನ್ನು ಪರೀಕ್ಷೆಗೊಳಪಡಿಸುವುದಾಗಿದೆ. ಅವರು ಯಂತ್ರದೊಳಗೆ ನೀರು ಮತ್ತು ಮಾರ್ಜಕದೊಂದಿಗೆ ಬಟ್ಟೆಯ ತುಂಡನ್ನು ಹಾಕುತ್ತಾರೆ. ತೊಳೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. ಅದರ ಕಾಂಪ್ಯಾಕ್ಟ್ ಗಾತ್ರದ ಹೊರತಾಗಿಯೂ, ಅದು ಬಟ್ಟೆಯನ್ನು ಸ್ವಚ್ಛಗೊಳಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಗಾತ್ರದಲ್ಲಿ ಚಿಕ್ಕದಾದರೂ ಅದರ ಪ್ರದರ್ಶನ ದಕ್ಷತೆಯಲ್ಲಿ ಯಾವುದೇ ಕಮ್ಮಿ ಇರುವುದಿಲ್ಲ.
ಸಾಯಿ ತಿರುಮಲನೀದಿ ಅವರ ಅತಿ ಚಿಕ್ಕ ವಾಷಿಂಗ್ ಮೆಷಿನ್ 37mm x 41mm x 43mm (1.45in x 1.61in x 1.69in)” ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಹೇಳಿದೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನಂತರ ವ್ಯಾಪಕ ಮೆಚ್ಚುಗೆ ಹರಿದುಬಂದಿದೆ. ಈ ವೀಡಿಯೊ ಇದುವರೆಗೆ 7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ಬಳಕೆದಾರರು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದ್ದಾರೆ. ತಿರುಮಲನೀದಿ ಅವರ ಪ್ರಯತ್ನವನ್ನು ಎಲ್ಲರೂ ಶ್ಲಾಘಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಮಾಜಿ ಬಾಯ್‌ಫ್ರೆಂಡ್‌ಗೆ 2 ಕೋಟಿ ರೂ. ಮೌಲ್ಯದ ಕಾರ್ ಗಿಫ್ಟ್ ನೀಡಿದ ಗರ್ಲ್‌ಫ್ರೆಂಡ್!