Site icon Vistara News

ವಿಸ್ತಾರ TOP 10 NEWS | ಕಾರ್ಗಿಲ್‌ ಸ್ಮರಣೆಯಿಂದ ಕಾಂಗ್ರೆಸ್‌ ಪ್ರತಿಭಟನೆವರೆಗಿನ ಪ್ರಮುಖ ಸುದ್ದಿಗಳಿವು

vistara top 10

ಬೆಂಗಳೂರು: ಬಾಂಗ್ಲಾ ವಿಮೋಚನೆ, ಚೀನಾ ಯುದ್ಧಗಳ ರೋಚಕ ಕತೆಗಳನ್ನು ಮಾತ್ರವೇ ಕೇಳಿದ್ದ ಒಂದಿಡೀ ಪೀಳಿಗೆಗೆ ಸೈನಿಕರ ನಿಜ ಹೋರಾಟವನ್ನು ಪರಿಚಯಿಸಿದ್ದು ಕಾರ್ಗಿಲ್‌ ಕದನ. ಈ ವಿಜಯದ ಅವಿಸ್ಮರಣೀಯ ದಿನದ ಪ್ರಯುಕ್ತ ʻವಿಸ್ತಾರ ನ್ಯೂಸ್‌ʼನ ವಿಶೇಷ ಬರಹಗಳಿವೆ. ಸೋನಿಯಾ ಗಾಂಧಿಯವರ ಇ.ಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ, 5G ಹರಾಜು ಆರಂಭ, ಬೇಬಿ ಬೆಟ್ಟದ ಕುರಿತು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಪ್ರತಿಕ್ರಿಯೆ ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Kargil Vijay Diwas 2022 | ಕಾರ್ಗಿಲ್‌ ಯುದ್ಧ ಗೆದ್ದ ಹೆಮ್ಮೆಯ ದಿನ; ಯೋಧರ ತ್ಯಾಗ, ಶೌರ್ಯಕ್ಕೆ ಗೌರವ
ಜುಲೈ 26 ಭಾರತೀಯರ ಪಾಲಿಗೆ ಅವಿಸ್ಮರಣೀಯ ದಿನ. 1999ರ ಜುಲೈ 26ರಂದು ಭಾರತೀಯ ಯೋಧರು ಕಾರ್ಗಿಲ್‌ ಯುದ್ಧದಲ್ಲಿ, ಆಪರೇಷನ್‌ ವಿಜಯ್‌ ಮೂಲಕ ಪಾಕಿಸ್ತಾನದ ಸೈನಿಕರನ್ನು ಬಗ್ಗುಬಡಿದು ವಿಜಯ ಪತಾಕೆ ಹಾರಿಸಿದ ದಿನ. ಕಾರ್ಗಿಲ್‌ ವಿಜಯೋತ್ಸವ ಆಚರಣೆ ಮತ್ತು ಯುದ್ಧದಲ್ಲಿ ಮಡಿದ ಯೋಧರ ಸ್ಮರಿಸಲು ಪ್ರತಿವರ್ಷ ಈ ದಿನವನ್ನು ಮೀಸಲಾಗಿಡಲಾಗಿದೆ. ಕಾರ್ಗಿಲ್‌ ವಿಜಯ ದಿನದ ಪ್ರಯುಕ್ತ ʻವಿಸ್ತಾರ ನ್ಯೂಸ್‌ʼನಲ್ಲಿ ಪ್ರಕಟವಾದ ವಿಶೇಷ ಬರಹಗಳು ಇಲ್ಲಿವೆ.
ಅ. Kargil Vijay Diwas 2022 | ಕಾರ್ಗಿಲ್‌ ಯುದ್ಧ ಗೆದ್ದ ಹೆಮ್ಮೆಯ ದಿನ; ಯೋಧರ ತ್ಯಾಗ, ಶೌರ್ಯಕ್ಕೆ ಗೌರವ
ಆ. Kargil war | ಕಾರ್ಗಿಲ್‌ ಕದನ ಕಲಿಗಳಿವರು
ಇ. kargil vijay diwas: ಭಾರತದ ಬೆನ್ನಿಗೆ ಇರಿದ ಪಾಕಿಗಳನ್ನು ನಮ್ಮ ಯೋಧರು ಮಟ್ಟ ಹಾಕಿದ್ದು ಹೇಗೆ?
ಈ. Kargil Vijay Divas: ಅಮ್ಮಾ ಗೆದ್ದರೆ, ತಿರಂಗಾ ಅರಳಿಸಿ ಬರುತ್ತೇನೆ, ಸೋತರೆ ಹೊದ್ದು ಬರುತ್ತೇನೆ ಅಂದಿದ್ದ ಆ ಸೈನಿಕ!
. Kargil Vijay Divas | ನಾನು ಶಕುಂತಲಾ ಅಜಿತ್‌ ಭಂಡಾರ್ಕರ್: ಸೈನಿಕನ ಪತ್ನಿ ಮತ್ತು ಸೈನಿಕರ ಅಮ್ಮ!

2. ಕಾಂಗ್ರೆಸ್‌ ಪ್ರತಿಭಟನೆ; ರಾಹುಲ್‌ ಗಾಂಧಿ, ಡಿ ಕೆ ಸುರೇಶ್‌ರನ್ನು ವಶಕ್ಕೆ ಪಡೆದ ದಿಲ್ಲಿ ಪೊಲೀಸ್‌
ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಇ.ಡಿ ವಿಚಾರಣೆಗೆ ಒಳಪಡಿಸುತ್ತಿರುವುದನ್ನು ವಿರೋಧಿಸಿ ದೆಹಲಿಯ ವಿಜಯ ಚೌಕ್‌ನಲ್ಲಿ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಸಂಸತ್ತಿನ ಎದುರಿನ ಗಾಂಧಿ ಪ್ರತಿಮೆಯಿಂದ ಮೆರವಣಿಗೆ ಹೊರಟು ವಿಜಯ್‌ ಚೌಕ್‌ಗೆ ಬಂದಿದ್ದ ಕಾಂಗ್ರೆಸ್‌ ಸಂಸದರು ಇಲ್ಲಿ ರಸ್ತೆಯ ಮೇಲೆ ಕುಳಿತು ಸತ್ಯಾಗ್ರಹ ನಡೆಸಿದರು. ಇವರೊಂದಿಗೆ ಅಪಾರ ಸಂಖ್ಯೆಯ ಕಾರ್ಯಕರ್ತರೂ ಕೂಡಿಕೊಂಡಿದ್ದರು. ಇದೀಗ ಪ್ರತಿಭಟನಾ ನಿರತರಾಗಿದ್ದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಸುರೇಶ್‌ ಸೇರಿ ಹಲವರನ್ನು ದೆಹಲಿ ಪೊಲೀಸರು ಬಂಧಿಸಿ, ಪಾರ್ಲಿಮೆಂಟ್‌ ಸ್ಟ್ರೀಟ್‌ ಠಾಣೆಗೆ ಕರೆದೊಯ್ದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

3. ‌Terror Accused | ಕಾಶ್ಮೀರಕ್ಕೆ ತೆರಳಲು ಪ್ಲ್ಯಾನ್ ಮಾಡಿದ್ದ ಶಂಕಿತ ಉಗ್ರ ಅಖ್ತರ್‌!
ಬೆಂಗಳೂರಿನ ತಿಲಕ್‌ ನಗರದಲ್ಲಿ ಸೆರೆಯಾಗಿರುವ ಶಂಕಿತ ಉಗ್ರ (‌Terror Accused) ಅಖ್ತರ್ ಹುಸೇನ್ ಅಲಿಯಾಸ್ ಅಬ್ದುಲ್ ಹುಸೇನ್ ಲಷ್ಕರ್ ಧರ್ಮಾಂಧತೆ ಬೆಳೆಸಿಕೊಂಡಿದ್ದ. ಧರ್ಮಯುದ್ಧ ಎಂಬಂತೆ ಭಾರತದಲ್ಲಿ ಕುಕೃತ್ಯಕ್ಕೆ ಸಂಚು ರೂಪಿಸಿದ್ದ. ಅಲ್ಲದೆ, ಕೆಲವೇ ದಿನಗಳಲ್ಲಿ ಕಾಶ್ಮೀರಕ್ಕೆ ತೆರಳಲು ಪ್ಲ್ಯಾನ್ ಮಾಡಿದ್ದ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರಲ್ಲಿ ಯುವಕರನ್ನು ಸೆಳೆಯಲು ಯೋಜಿಸಿದ್ದ ಅಖ್ತರ್, ಉಗ್ರ ಸಂಘಟನೆಯನ್ನು ಆ್ಯಕ್ಟಿವ್ ಮಾಡಲು ಟೆಲಿಗ್ರಾಮ್‌ ಮೊರೆ ಹೋಗಿದ್ದ ಎನ್ನಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

4. Mandya Baby Hill | ಬೇಬಿ ಬೆಟ್ಟ ನಮ್ಮದು, ನಮ್ಮ ಪರ್ಮಿಷನ್‌ ಕೇಳಬೇಕಿತ್ತು ಎಂದ ಪ್ರಮೋದಾದೇವಿ
ಬೇಬಿ ಬೆಟ್ಟ ನಮ್ಮದೇ. ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಳಲು ತೋಡಿಕೊಂಡಿದ್ದಾರೆ. ಬೇಬಿ ಬೆಟ್ಟದಲ್ಲಿ (Mandya Baby Hill) ಗಣಿಗಾರಿಕೆ ಬೇಕಾ? ಬೇಡವಾ ಎಂಬ ಹಗ್ಗಜಗ್ಗಾಟದ ಮಧ್ಯೆ ಮೈಸೂರಿನಲ್ಲಿ ಪ್ರಮೋದಾ ದೇವಿ ಸುದ್ದಿಗೋಷ್ಠಿ ನಡೆಸಿದರು. ರಾಜ್ಯ ವಿಲೀನ ಸಂದರ್ಭದಲ್ಲಿ ಭಾರತ ಸರ್ಕಾರ ಮತ್ತು ರಾಜವಂಶದ ನಡುವೆ ಒಪ್ಪಂದ ಏರ್ಪಟ್ಟಿತ್ತು. ರಾಜ ಮನೆತನ ಖಾಸಗಿ ಆಸ್ತಿಗಳನ್ನು ಘೋಷಿಸಿಕೊಂಡು ಇನ್ನುಳಿದ ಎಲ್ಲ ಆಸ್ತಿಗಳನ್ನು ದೇಶದೊಂದಿಗೆ ವಿಲೀನ ಮಾಡಿದರು. ಈ ಸಂಬಂಧ 1950ರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜವಂಶಸ್ಥರ ನಡುವೆ ಒಪ್ಪಂದ ಏರ್ಪಟ್ಟಿದೆ. ಇದರ ಮುಂದುವರಿದ ಭಾಗವಾಗಿ 1951ರಲ್ಲಿ ಖಾಸಗಿ ಆಸ್ತಿಗಳ ಪಟ್ಟಿಯನ್ನು ಸರ್ಕಾರಿ ಆದೇಶದ ಮೂಲಕ ಖಚಿತಪಡಿಸಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

5. 5G auction| 5G ಸ್ಪೆಕ್ಟ್ರಮ್‌ ಹರಾಜು ಇಂದಿನಿಂದ, ಶೀಘ್ರ ಸೇವೆ ಆರಂಭ ನಿರೀಕ್ಷೆ
ಬಹು ನಿರೀಕ್ಷಿತ ೫ಜಿ ಸ್ಪೆಕ್ಟ್ರಮ್‌ ಹರಾಜು ಇಂದಿನಿಂದ ನಡೆಯಲಿದ್ದು, ಶೀಘ್ರದಲ್ಲಿಯೇ ಜನತೆಗೆ ೫ಜಿ ಸೇವೆ ಕೂಡ ಲಭಿಸುವ ನಿರೀಕ್ಷೆ ಉಂಟಾಗಿದೆ. ರಿಲಯನ್ಸ್‌ ಜಿಯೊ, ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಮತ್ತು ಅದಾನಿ ಡೇಟಾ ನೆಟ್‌ವರ್ಕ್ಸ್‌ ಈ ಸ್ಪೆಕ್ಟ್ರಮ್‌ ಅನ್ನು ಖರೀದಿಸಲಿವೆ. ಮುಂದಿನ ೬ರಿಂದ ೧೨ ತಿಂಗಳುಗಳಲ್ಲಿ ಹೈಸ್ಪೀಡ್‌ ೫ಜಿ ಸೇವೆ ವ್ಯಾಪಕವಾಗಿ ಲಭಿಸುವ ನಿರೀಕ್ಷೆ ಉಂಟಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)
ವಿಸ್ತಾರ Explainer | 4G ಸೆಕ್ಟ್ರಮ್‌ಗಿಂತ 10 ಪಟ್ಟು ಹೆಚ್ಚು ಸ್ಪೀಡ್! ಟೆಕ್ನಾಲಜಿಯ ಕ್ರಾಂತಿ 5G

6. ಒಂದರ ಜತೆಗೆ ಮೂರನ್ನೂ ಆಚರಿಸಿ ಎಂದ ಬಿಜೆಪಿ ವರಿಷ್ಠರು: ಸಿದ್ದರಾಮೋತ್ಸವ ರೀತಿ ಆಗದಂತೆ ಎಚ್ಚರ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ʻಜನೋತ್ಸವʼ ಆಚರಣೆಗೆ ಸಿದ್ಧತೆ ನಡೆದಿದೆ. ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮ ಆಡಳಿತದ ಕುರಿತು ಧನಾತ್ಮಕ ಭಾವನೆಯನ್ನು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾದರೂ, ಸಿದ್ದರಾಮೋತ್ಸವ ರೀತಿ ಇದು ಆಗದಿರಲಿ ಎಂಬ ಎಚ್ಚರಿಕೆಯನ್ನು ಬಿಜೆಪಿ ವರಿಷ್ಠರು ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕ್ರಮದ ಸ್ವರೂಪ, ಸಂದೇಶಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

7. ಕಾಂಗ್ರೆಸ್‌ನಲ್ಲಿ ಜಾತಿಗೊಬ್ಬ ಮುಖ್ಯಮಂತ್ರಿ ಅಭ್ಯರ್ಥಿ!
ತಮಗೆ ಸಚಿವ ಸ್ಥಾನ ಬೇಕು, ಸಂಪುಟ ದರ್ಜೆ ಬೇಕು ಎಂದು ನಡೆಯುತ್ತಿದ್ದ ಹಗ್ಗಜಗ್ಗಾಟ ಇದೀಗ ಕಾಂಗ್ರೆಸ್‌ ಮಟ್ಟಿಗೆ ಸಿಎಂ ಸ್ಥಾನಕ್ಕೆ ಚಾಲ್ತಿಯಲ್ಲಿದೆ. ಕಾಂಗ್ರೆಸ್‌ನಲ್ಲಿ ಇಲ್ಲಿವರೆಗೆ ಮಾಜಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೆಸರು ಮಾತ್ರವೇ ಕೇಳಿಬರುತ್ತಿದ್ದ ಮುಖ್ಯಮಂತ್ರಿ ಸ್ಥಾನದ ಮಾತು ಈಗ ಅನೇಕರಿಗೆ ವಿಸ್ತಾರವಾಗಿದೆ. ಫೆನ್ಸ್‌ ಸಿಟ್ಟರ್ಸ್‌ ಮತದಾರರ ಮೇಲೆ ಕಣ್ಣಿಟ್ಟು ಈ ತಂತ್ರ ಹೆಣೆಯಲಾಗಿದೆ ಎನ್ನಲಾಗುತ್ತಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

8. ರಾಜ್ಯಸಭೆಯ 19 ಸಂಸದರು ಅಮಾನತು; ಮುಂಗಾರು ಅಧಿವೇಶನಕ್ಕೆ ಒಂದು ವಾರ ಕಾಲಿಡುವಂತಿಲ್ಲ
ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ನಾಲ್ವರು ಕಾಂಗ್ರೆಸ್‌ ಸಂಸದರನ್ನು ಸ್ಪೀಕರ್‌ ಓಂಬಿರ್ಲಾ ಅಮಾನತು ಜುಲೈ 25ರಂದು ಮಾಡಿದ್ದರು. ಅವರು ಇನ್ನು ಈ ಬಾರಿಯ ಮುಂಗಾರು ಅಧಿವೇಶನಕ್ಕೆ ಹಾಜರಾಗುವಂತಿಲ್ಲ ಎಂದೂ ಆದೇಶಿಸಲಾಗಿದೆ. ಅದರ ಬೆನ್ನಲ್ಲೇ ಇಂದು ರಾಜ್ಯಸಭೆಯಲ್ಲಿ 19 ಸಂಸದರನ್ನು ಅಮಾನತುಗೊಳಿಸಲಾಗಿದೆ. ಟಿಎಂಸಿ, ಡಿಎಂಕೆ, ಸಿಪಿಐ(ಎಂ), ಸಿಪಿಐ, ಟಿಆರ್‌ಎಸ್‌ ಪಕ್ಷಗಳಿಗೆ ಸೇರಿದ ಸಂಸದರನ್ನು ರಾಜ್ಯಸಭೆ ಉಪಾಧ್ಯಕ್ಷ ಅಮಾನತುಗೊಳಿಸಿದ್ದು, ಇನ್ನು ಒಂದು ವಾರಗಳ ಕಾಲ ಅವರು ಕಲಾಪಕ್ಕೆ ಆಗಮಿಸುವಂತಿಲ್ಲ ಎಂದು ಸೂಚಿಸಿದ್ದಾರೆ. ಇವರೆಲ್ಲ ಅಶಿಸ್ತಿನಿಂದ ವರ್ತಿಸಿದ್ದಕ್ಕೆ ಅಮಾನತು ಶಿಕ್ಷೆ ನೀಡಲಾಗಿದೆ ಎನ್ನಲಾಗಿದೆ. ಹಾಗೇ, ಒಂದೇ ದಿನದಲ್ಲಿ ಇಷ್ಟು ಸಂಸದರು ಅಮಾನತುಗೊಂಡಿರಲಿಲ್ಲ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

9. Kasturirangan Report | ಹೊಸ ಸಮಿತಿ ವಿಚಾರ ಹೊಸದೇನಲ್ಲ! ಆದರೆ ರಾಜ್ಯ ಸರ್ಕಾರಕ್ಕೆ ಗೊತ್ತೇ ಇರಲಿಲ್ಲ!!
ಕಸ್ತೂರಿ ರಂಗನ್‌ ವರದಿ ಜಾರಿಯ ವಿಷಯದಲ್ಲಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆವು ಎಂದು ರಾಜ್ಯ ಸರ್ಕಾರ ಬೀಗುತ್ತಿದೆ. ಇನ್ನು ಮುಂದೆ ಈ ವರದಿ ಜಾರಿಯ ಆತಂಕವಿಲ್ಲ. ನಮ್ಮ ಅಭಿಪ್ರಾಯ ಕೇಳಿಯೇ ಕೇಂದ್ರ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಆದರೆ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸುವ ವಿಷಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಮುಂದಿರುವುದರಿಂದ  ಕೋರ್ಟ್‌ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಕಸ್ತೂರಿ ರಂಗನ್‌ ವರದಿಯ ಭವಿಷ್ಯ ನಿಂತಿದೆ. ಆಶ್ಚರ್ಯವೆಂದರೆ, ಆದರೂ ರಾಜ್ಯ ಸರ್ಕಾರಕ್ಕೆ ಕೇಂದ್ರ ಪರಿಸರ ಸಚಿವಾಲಯ ಈ ಹೊಸ ಸಮಿತಿ ರಚಿಸಿರುವ ವಿಷಯ ಗೊತ್ತೇ ಇರಲಿಲ್ಲ! (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

10. ಬೆತ್ತಲೆ ಫೋಟೊಶೂಟ್‌: ರಣವೀರ್‌ ಸಿಂಗ್‌ ವಿರುದ್ಧ ಸಿಡಿದೆದ್ದ ಮಹಿಳೆಯರು, ಎಫ್‌ಐಆರ್‌ ದಾಖಲು
ಮ್ಯಾಗಜಿನ್‌ ಒಂದಕ್ಕಾಗಿ ಬೆತ್ತಲೆ ಫೋಟೊ ಶೂಟ್‌ ಮಾಡಿಸಿಕೊಂಡು ಹುಬ್ಬೇರಿಸಿದ್ದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಈಗ ಕಾನೂನು ಬಲೆಯೊಳಗೆ ಬಿದ್ದಿದ್ದಾರೆ. ಈ ನಗ್ನ ಫೋಟೊ ಶೂಟ್‌ ಮೂಲಕ ರಣವೀರ್‌ ಸಿಂಗ್‌ ಅವರು ಮಹಿಳೆಯರಿಗೆ ಅಗೌರವ ತೋರಿದ್ದಾರೆ, ಅವರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾರೆ ಎಂದು ಆಪಾದಿಸಿ ಮಹಿಳಾ ವಕೀಲರೊಬ್ಬರು ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ಈಗ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version