Site icon Vistara News

Vistara Top 10 News: ಮೋದಿ ಫ್ರಾನ್ಸ್ ಪ್ರವಾಸದಿಂದ, ಟೊಮ್ಯಾಟೊಗೆ Z+ ಸೆಕ್ಯುರಿಟಿವರೆಗಿನ ಪ್ರಮುಖ ಸುದ್ದಿಗಳಿವು

vistara top 10 news Modi to tour france and uae from thursday to high security to tomato and more news

1. BJP Karnataka: ಕರ್ನಾಟಕದಲ್ಲಿ ಜಂಗಲ್‌ ರಾಜ್ಯ ಶುರುವಾಗಿದೆ ಎಂದ ಬೊಮ್ಮಾಯಿ: ರಾಜ್ಯಪಾಲರಿಗೆ ಬಿಜೆಪಿ ದೂರು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಬಿಜೆಪಿ (BJP Karnataka) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಶಾಸಕರು ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Assembly Session: ಸ್ಟಾಂಪ್‌ ಡ್ಯೂಟಿ ಹೆಚ್ಚಿಸಲ್ಲ; ಜನರಿಗೆ ಹೊರೆ ತಪ್ಪೋಲ್ಲ: ‘ಗ್ಯಾರಂಟಿʼ ಕಲೆಕ್ಷನ್‌ಗೆ ಸರ್ಕಾರದ ಮಾಸ್ಟರ್‌ ಪ್ಲ್ಯಾನ್‌!
ಕಾಂಗ್ರೆಸ್‌ ಸರ್ಕಾರ ವಿಧಾನಸಭೆ (Assembly Session) ಚುನಾವಣೆಗೂ ಮುನ್ನ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಅನೇಕ ಇಲಾಖೆಗಳಿಗೆ ಟಾರ್ಗೆಟ್‌ ಹೆಚ್ಚಿಸಿದ್ದು, ಕಂದಾಯ ಇಲಾಖೆಗೂ 6 ಸಾವಿರ ಕೋಟಿ ರೂ. ಗುರಿ ಹೆಚ್ಚಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Gruhajyoti scheme : ಉಚಿತ ವಿದ್ಯುತ್‌ಗೆ ನೀವಿನ್ನೂ ಅರ್ಜಿ ಹಾಕಿಲ್ಲವೇ? ಜುಲೈ 27 ಲಾಸ್ಟ್‌ ಡೇಟ್‌!
ಪ್ರತಿ ಕುಟುಂಬಕ್ಕೆ 200 ಯುನಿಟ್‌ವರೆಗೆ ವಿದ್ಯುತ್‌ ನೀಡುವ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ (Congress Guarantee) ಗೃಹ ಜ್ಯೋತಿ ಯೋಜನೆ (Gruhajyoti scheme) ನೀವಿನ್ನೂ ಅರ್ಜಿ ಹಾಕಿಲ್ಲವೇ? ಹಾಗಿದ್ದರೆ ತ್ವರೆ ಮಾಡಿ. ಯಾಕೆಂದರೆ, ಅರ್ಜಿ ಸಲ್ಲಿಸಲು ಜುಲೈ 27 ಕೊನೆಯ ದಿನ (Last date for application) ಎಂದು ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್‌ (Minister KJ George) ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Tomato price : ದಾವಣಗೆರೆಯಲ್ಲಿ ಟೊಮ್ಯಾಟೊಗೆ Z + ಸೆಕ್ಯುರಿಟಿ; ಶ್ವಾನದಳ ನೇಮಕ!
ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೊರತೆ ಇರುವ ಕಾರಣ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ದರವು 120 ರೂ. ಗಡಿ ದಾಟಿ ಮುನ್ನುಗ್ಗುತ್ತಿದೆ. ಹಾಗಾಗಿ ರೈತರಿಗೆ ಇದರಿಂದ ಲಾಭವಾಗುತ್ತಿದ್ದರೂ ಟೊಮ್ಯಾಟೋವನ್ನು ಕಾಯುವುದೇ ದೊಡ್ಡ ಸವಾಲಾಗುತ್ತಿದೆ. ಹಲವರು ಈಗ ಇದರ ಕಳ್ಳತನಕ್ಕೆ ಇಳಿದಿದ್ದರಿಂದ ಕಳ್ಳರಿಂದ ಟೊಮ್ಯಾಟೋ ರಕ್ಷಣೆಗೆ ರೈತರು “Z ಪ್ಲಸ್” ಸೆಕ್ಯುರಿಟಿಯನ್ನು (Z+ security for tomato) ಮಾಡಿಕೊಂಡಿದ್ದಾರೆ. ಅಂದಹಾಗೆ, “ಶ್ವಾನ”ಗಳೇ ಈ “Z ಪ್ಲಸ್” ಕಾವಲುಪಡೆ (Dog squads) ಆಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. PM Modi France Visit: ಗುರುವಾರದಿಂದ ಮೋದಿ ಫ್ರಾನ್ಸ್‌, ಯುಎಇ ಪ್ರವಾಸ; ಭೇಟಿಯ ವೇಳಾಪಟ್ಟಿ ಇಲ್ಲಿದೆ
ಕೆಲ ದಿನಗಳ ಹಿಂದಷ್ಟೇ ಅಮೆರಿಕ ಸೇರಿ ಹಲವು ರಾಷ್ಟ್ರಗಳ ಪ್ರವಾಸ ಮುಗಿಸಿಕೊಂಡು ಬಂದ ಪ್ರಧಾನಿ ನರೇಂದ್ರ ಮೋದಿ ಅವರೀಗ ಫ್ರಾನ್ಸ್‌ ಹಾಗೂ ಯುಎಇ ಪ್ರವಾಸ (PM Modi France Visit) ಕೈಗೊಳ್ಳಲು ಅಣಿಯಾಗಿದ್ದಾರೆ. ಜುಲೈ 13ರಿಂದ ಜುಲೈ 15ರವರೆಗೆ ನರೇಂದ್ರ ಮೋದಿ ಅವರು ಅವರು ಮೂರು ದಿನ ಎರಡು ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ವೇಳೆ ಮೋದಿ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Asia Cup 2023: ಏಷ್ಯಾಕಪ್‌ ವೇಳಾಪಟ್ಟಿ ಫೈನಲ್; ಪಾಕ್‌ಗೆ ಹೋಗಲ್ಲ ಭಾರತ, ಬದ್ಧ ವೈರಿಗೆ ಮುಖಭಂಗ
ತೀವ್ರ ಕುತೂಹಲ ಕೆರಳಿಸಿರುವ, ಪಾಕಿಸ್ತಾನದ ತಗಾದೆಯಿಂದ ವಿಳಂಬವಾಗುತ್ತಿದ್ದ ಏಷ್ಯಾ ಕಪ್‌ ಟೂರ್ನಿಯ ವೇಳಾಪಟ್ಟಿ (Asia Cup 2023) ಕೊನೆಗೂ ಅಂತಿಮವಾಗಿದೆ. ಹಾಗೆಯೇ, ಭಾರತವು ಏಷ್ಯಾಕಪ್‌ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯಗಳಿಗಾಗಿ ಪಾಕಿಸ್ತಾನಕ್ಕೆ ತೆರಳದಿರಲು ತೀರ್ಮಾನಿಸಿದೆ. ಇದರಿಂದಾಗಿ ಹೇಗಾದರೂ ಮಾಡಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳಬೇಕು ಎಂಬ ನೆರೆರಾಷ್ಟ್ರಕ್ಕೆ ಮುಖಭಂಗವಾದಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Kidnap Case : 9ರ ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಧೂರ್ತ ಪೊಲೀಸ್‌ ಬಲೆಗೆ; 12 ಗಂಟೆಯೊಳಗೆ ಅರೆಸ್ಟ್‌
ಕುಂದಾ ನಗರಿಯನ್ನೇ ಬೆಚ್ಚಿ ಬೀಳಿಸಿದ್ದ 9 ವರ್ಷದ ಬಾಲಕಿಯ (9 year old girl) ಅಪಹರಣ ಪ್ರಕರಣದಲ್ಲಿ (Kidnap Case) ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇಸು ದಾಖಲಾದ ಕೇವಲ 12 ಗಂಟೆಯೊಳಗೆ ಆರೋಪಿಯನ್ನು (kidnapper arrested) ಬಂಧಿಸಿದ್ದಾರೆ. ಬೆಳಗಾವಿಯ (Belagavi news) ಮಾರುತಿ ನಗರದ ಗಜಾನನ ಪಾಟೀಲ (40) ಎಂಬಾತನೇ ಟ್ಯೂಷನ್‌ಗೆ ಹೋಗುತ್ತಿದ್ದ ಬಾಲಕಿಯನ್ನು ಎತ್ತಿಕೊಂಡು ಹೋಗಿ ಅಪಹರಿಸಲು ಯತ್ನಿಸಿದ ಧೂರ್ತ. ಈಗ ಆತನನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ಶಾಲೆಗೆ ಬಿಂದಿ ಇಟ್ಟು ಹೋದ ಹಿಂದು ವಿದ್ಯಾರ್ಥಿನಿಗೆ ಥಳಿಸಿದ ಕ್ರಿಶ್ಚಿಯನ್​​​ ಶಾಲೆ ಶಿಕ್ಷಕಿ; ಬಾಲಕಿ ಆತ್ಮಹತ್ಯೆ
ಕ್ರಿಶ್ಚಿಯನ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಹಿಂದು ಹುಡುಗಿ ಆತ್ಮಹತ್ಯೆ (Student Suicide) ಮಾಡಿಕೊಂಡಿದ್ದು ದೊಡ್ಡಮಟ್ಟದ ವಿವಾದ-ಪ್ರತಿಭಟನೆಗೆ ಕಾರಣವಾಗಿದೆ. ಜಾರ್ಖಂಡ್​ನ ಧನ್​ಬಾದ್​​ನ ಟೆತುಲ್ಮರಿ ಎಂಬಲ್ಲಿರುವ ಸೇಂಟ್​ ಕ್ಸೇವಿಯರ್​ ಶಾಲೆಯಲ್ಲಿ ಬಾಲಕಿ ಉಷಾಕುಮಾರಿ (16) ವಿದ್ಯಾಭ್ಯಾಸ ಮಾಡುತ್ತಿದ್ದಳು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Agniveer Recruitment 2023: ಭಾರತೀಯ ವಾಯುಪಡೆಗೆ ಅಗ್ನಿವೀರರ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
ಸೇನಾ ನೇಮಕಾತಿ ಯೋಜನೆ ʼಅಗ್ನಿಪಥ್‌ʼ (Agnipath) ಅಡಿಯಲ್ಲಿ ಭಾರತೀಯ ವಾಯುಪಡೆಯು (Indian Air Force) ʼಅಗ್ನಿವೀರʼ ರನ್ನು (Agniveervayu) ನೇಮಿಸಿಕೊಳ್ಳುತ್ತಿದ್ದು (Agniveer Recruitment 2023), ಅವಿವಾಹಿತ ಪರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Google Doodle: ಭಾರತದ ಪಾನಿಪುರಿಗೆ ಗೂಗಲ್‌ ಡೂಡಲ್‌ ವಿಶೇಷ ಗೌರವ; ನೀವೂ ಈ ಗೇಮ್‌ ಆಡಿ
ಭಾರತದ ಯಾವುದೇ ಊರಿಗೆ ಹೋಗಿ, ಒಳ್ಳೆಯದೊಂದು ಬೀದಿ ಸಿಗದಿದ್ದರೂ, ಬೀದಿ ಬದಿಯ ಖ್ಯಾತ ತಿಂಡಿಯಾದ ಪಾನಿ ಪುರಿ ಸಿಗುತ್ತದೆ. ದೇಶದಲ್ಲಿ ಪಾನಿ ಪುರಿ ತಿನ್ನದೆ ಇರುವವರೇ ಇಲ್ಲ ಎನ್ನುವಷ್ಟರಮಟ್ಟಿಗೆ ಇದು ಎಲ್ಲರ ಫೇವರಿಟ್‌ ತಿನಿಸಾಗಿದೆ. ಅದರಲ್ಲೂ, ದೇಶಾದ್ಯಂತ ವಿವಿಧ ರುಚಿಯ ಪಾನಿ ಪುರಿ ಸಿಗುತ್ತದೆ. ಇದೇ ಕಾರಣಕ್ಕೆ ಜುಲೈ 12ರಂದು ಪಾನಿ ಪುರಿಯ ದಿನವಾದ ಹಿನ್ನೆಲೆಯಲ್ಲಿ ಪಾನಿ ಪುರಿಗೆ ಡೂಡಲ್‌ (Google Doodle) ಮೂಲಕ ಗೂಗಲ್‌ ವಿಶೇಷ ಗೌರವ ಸಲ್ಲಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version