ನವದೆಹಲಿ:ವಿಟಮಿನ್ ಡಿ(Vitamin D) ಕೊರತೆ ಎಂಬುದು ಪ್ರಪಂಚಾದ್ಯಂತ ಹೆಚ್ಚಿನ ಜನರಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಪೌಷ್ಟಿಕಾಂಶ ಕೊರತೆ(Nutrient shortages)ಯಾಗಿದೆ. ಇದು ಸಾಮಾನ್ಯವಾಗಿ 65 ವರ್ಷ ಮೇಲ್ಪಟ್ಟ ಜನರಲ್ಲಿ ಕಂಡು ಬರುವ ಪೌಷ್ಠಿಕಾಂಶ ಕೊರತೆ. ಪ್ರಪಂಚದ ಶೇ.13ರಷ್ಟು ಜನರಲ್ಲಿ ವಿಟಮಿನ್ ಡಿ ಕೊರತೆ ಕಂಡು ಬರುತ್ತದೆ. ವಿಟಮಿನ್ ಡಿ ಕೊರತೆಯಿಂದ ಎಲುಬು, ಗಂಟು ನೋವು, ಸಂಧು ನೋವು, ಮೂಡ್ ಚೇಂಜ್ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದರೆ ಇದೀಗ ವಿಟಮಿನ್ ಡಿ ಕೊರತೆ ಕ್ಯಾನ್ಸರ್(Cancer)ಗೆ ಕಾರಣವಾಗಲಿದೆ ಎಂಬ ಶಾಕಿಂಗ್ ವರದಿಯೊಂದು ಹೊರ ಬಿದ್ದಿದೆ. ವಿವಿಧ ಅಧ್ಯಯನಗಳ ವರದಿ ಪ್ರಕಾರ ವಿಟಮಿನ್ ಡಿ ಕೊರತೆಯಿಂದ ಓವರಿಯನ್, ಸ್ತನ ಸೇರಿದಂತೆ ವಿವಿಧ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ.
ವಿಟಮಿನ್ ಡಿ ಕೊರತೆ ಹೇಗೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ?
ವಿಟಮಿನ್ ಡಿ 3 ಮತ್ತು ಕ್ಯಾಲ್ಸಿಯಂ ಮಾತ್ರೆ ಸೇವನೆಯಿಂದ ಕ್ಯಾನ್ಸರ್ ತಡೆಯಲು ಸಾಧ್ಯವಿಲ್ಲ ಎಂದು ಅಧ್ಯಯನ ವರದಿ ಹೇಳಿದೆ. ವಿಟಮಿನ್ ಡಿ ಕ್ಯಾನ್ಸರ್ ಸೆಲ್‌ಗಳ ವಿಡಿಜನ್ ಮತ್ತು ಅವುಗಳ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ . ಅದರ ಕೊರತೆ ಆದಲ್ಲಿ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್‌ಗೆ ತುತ್ತಾಗು ಸಾಧ್ಯತೆ ಹೆಚ್ಚಿರುತ್ತದೆ. ವೈದ್ಯರ ಹೇಳುವ ಪ್ರಕಾರ ವಿಟಮಿನ್ ಡಿ ಮನುಷ್ಯನ ಎಲುಬುಗಳ ಆರೋಗ್ಯ ಕಾಪಾಡುವುದು ಮಾತ್ರವಲ್ಲದೇ ದೇಹದಲ್ಲಿರುವ ದೋಷಯುಕ್ತ ಜೀನ್‌ಗಳನ್ನು ಸರಿಪಡಿಸುವ ಪ್ರಕ್ರಿಯೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರಕ್ರಿಯೆಗೆ MMR ಎಂದು ಕರೆಯಲಾಗಿದ್ದು, ಇದಕ್ಕೆ ವಿಟಮಿನ್ ಡಿ ಅಗತ್ಯ ಹೆಚ್ಚಾಗಿದೆ. ಇನ್ನು ವಿಟಮಿನ್ ಡಿ ಕೊರತೆ ಕ್ಯಾನ್ಸರ್ ಗೆ ಕಾರಣವಾಗುತ್ತದೇಯೇ ಎಂಬ ವಿಷಯದ ಬಗ್ಗೆ ಮತ್ತಷ್ಟು ಅಧ್ಯಯನ ಮುಂದುವರೆದಿದೆ.
ವಿಟಮಿನ್ ಡಿ ಕೊರತೆ ಉಂಟಾಗದಿರಲು ಏನು ಮಾಡಬೇಕು?
1. ವಿಟಮಿನ್ ಡಿ ಕೊರತೆಗೆ ಪ್ರಮುಖ ಮದ್ದು ಎಂದರೆ ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲುವುದು. ತ್ವಚೆಯ ಮೇಲೆ ಯುವಿ-ಬಿ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್ ವಿಟಮಿನ್ ಡಿ ಆಗಿ ಪರಿವರ್ತನೆ ಆಗುವುದು. ನಿಮ್ಮ ತ್ವಚೆಯ ಬಣ್ಣದ ಮೇಲೆ ನೀವು ಬಿಸಿಲಿನಲ್ಲಿ ನಿಲ್ಲುವ ಸಮಯಲ್ಲಿ ವ್ಯತ್ಯಾಸವಿರುತ್ತದೆ. ಕಪ್ಪು ಬಣ್ಣದ ತ್ವಚೆಯವರು ಬಿಳಿ ಬಣ್ಣದ ತ್ವಚೆಯವರಿಗಿಂತ ಹೆಚ್ಚು ಹೊತ್ತು ಬಿಸಿಲಿನಲ್ಲಿ ನಿಲ್ಲಬೇಕು. ಇನ್ನು ವಯಸ್ಸು ಹೆಚ್ಚಾದಂತೆ ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಂತರೆ ಒಳ್ಳೆಯದು.
ಇದನ್ನೂ ಓದಿ:IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?
2. ಮೀನು ಹಾಗೂ ಸಮುದ್ರ ಆಹಾರಗಳಲ್ಲಿ ವಿಟಮಿನ್ ಡಿ ಇರುತ್ತದೆ. ಬೂತಾಯಿ, ಮೃದ್ವಂಗಿಗಳು, ಸಿಗಡಿ, ಬಂಗುಡೆ ಈ ಮೀನುಗಳಲ್ಲಿ ವಿಟಮಿನ್ ಡಿ ಅಂಶವಿರುತ್ತದೆ.
3. ಬೆಳಸುವ ಅಣಬೆಗಳಿಗಿಂತ ನೈಸರ್ಗಿಕವಾಗಿ ಸಿಗುವ ಅಣಬೆಗಳಲ್ಲಿ ವಿಟಮಿನ್ ಡಿ ಅಧಿಕವಿರುತ್ತದೆ.
4. ಮೀನು ತಿನ್ನದವರು ಮೊಟ್ಟೆಯನ್ನು ತಿಂದರೆ ಅದರಲ್ಲಿ ಸ್ವಲ್ಪ ಪ್ರಮಾಣದ ವಿಟಮಿನ್ ಡಿ ದೊರೆಯುವುದು. ಮೊಟ್ಟೆಯ ಬಿಳಿ ಜತೆಗೆ ಅರಿಶಿಣ ಕೂಡ ತಿನ್ನಿ.
5. ಇನ್ನು ದನದ ಹಾಲು ಕುಡಿಯುವುದು, ಸೋಯಾ ಹಾಲು, ಕಿತ್ತಳೆ ಜ್ಯೂಸ್ ಇವುಗಳನ್ನು ಕೂಡ ಡಯಟ್‌ನಲ್ಲಿ ಸೇರಿಸಿ.
ಓಟ್‌ಮೀಲ್ ಹಾಗೂ ಧಾನ್ಯಗಳಲ್ಲಿ ಕೂಡ ಸ್ವಲ್ಪ ಪ್ರಮಾಣದಲ್ಲಿ ವಿಟಮಿನ್ ಡಿ ಇರುತ್ತದೆ.