Site icon Vistara News

Vladimir Putin: ಪುಟಿನ್ ಆರೋಗ್ಯವಾಗಿದ್ದಾರೆ, ಹಾರ್ಟ್ ಅಟ್ಯಾಕ್ ಸುದ್ದಿ ಅಲ್ಲಗಳೆದ ರಷ್ಯಾ ಸರ್ಕಾರ

Vladimir Putin

Vladimir Putin wins Russian presidential elections, Warns Of World War 3

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಅವರಿಗೆ ಹೃದಯಾಘಾತ ಸಂಭವಿಸಿದೆ. ಭಾನುವಾರ ಸಂಜೆಯೇ (ಅಕ್ಟೋಬರ್‌ 22) ಅವರಿಗೆ ಹೃದಯ ಸ್ತಂಭನ (Cardiac Arrest) ಉಂಟಾಗಿದ್ದು, ಅವರು ಅಸಹಾಯಕರಾಗಿ ನೆಲದ ಮೇಲೆ ಮಲಗಿದ್ದರು ಎಂಬುದಾಗಿ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಈ ವರದಿಗಳನ್ನು ರಷ್ಯಾ ಸರ್ಕಾರವು ತಳ್ಳಿ ಹಾಕಿದೆ. ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಆರೋಗವಾಗಿದ್ದು, ಫಿಟ್ ಆಗಿದ್ದಾರೆಂದು ರಷ್ಯಾ ಸರ್ಕಾರದ ವಕ್ತಾರ ದಿಮಿತ್ರಿ ಪೆಸ್ಕೋವ್ ಅವರು ತಿಳಿಸಿದ್ದಾರೆ. ಅಲ್ಲದೇ ಪುಟಿನ್ ಅವರು ತಮ್ಮ ಡುಪ್ಲಿಕೇಟ್(Body Doubles) ಬಳಸುತ್ತಿದ್ದಾರೆ ಎಂಬ ಸುದ್ದಿಯನ್ನು ಅಲ್ಲಗಳೆದಿರುವ ವಕ್ತಾರರು, ಇದೊಂದು ಅಸಂಬಂಧ ಸುಳ್ಳು (absurd hoax) ಸುದ್ದಿ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಹೃದಯಾಘಾತ ಸಂಭವಿಸಿದೆ. ಅವರು ಅಸಹಾಯಕರಾಗಿ ನೆಲದ ಮೇಲೆ ಮಲಗಿದ್ದರು ಎಂಬುದಾಗಿ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಕ್ರೆಮ್ಲಿನ್‌ನ ಮಾಜಿ ಅಧಿಕಾರಿಯೊಬ್ಬರು ಟೆಲಿಗ್ರಾಂನಲ್ಲಿ ಜನರಲ್‌ ಎಸ್‌ವಿಆರ್‌ ಎಂಬ ಚಾನೆಲ್‌ನಿಂದ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಭಾನುವಾರ ರಾತ್ರಿ 9 ಗಂಟೆಗೆ ವ್ಲಾದಿಮಿರ್‌ ಪುಟಿನ್‌ ಅವರಿಗೆ ಮನೆಯಲ್ಲಿಯೇ ಹೃದಯ ಸ್ತಂಭನ ಉಂಟಾಗಿದೆ. ಅವರು ಅಸಹಾಯಕರಾಗಿ ನೆಲದ ಮೇಲೆ ಬಿದ್ದಿದ್ದನ್ನು ನೋಡಿದ ಅಧಿಕಾರಿಗಳು ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಟೆಲಿಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.

ವ್ಲಾದಿಮಿರ್‌ ಪುಟಿನ್‌ ಅವರಿಗೆ ಹೃದಯ ಸ್ತಂಭನವಾಗುತ್ತಲೇ ಅವರು ನೆಲದ ಮೇಲೆ ಬಿದ್ದಿದ್ದಾರೆ. ಅವರು ಟೇಬಲ್‌ ಮೇಲೆ ಬಿದ್ದ ಕಾರಣ ಊಟದ ತಟ್ಟೆ ಹಾಗೂ ಪಾನೀಯದ ಗ್ಲಾಸ್‌ಗಳು ಕೆಳಗೆ ಬಿದ್ದಿದ್ದು, ಜೋರಾಗಿ ಶಬ್ದ ಕೇಳಿಸಿದೆ. ಕೂಡಲೇ ಭದ್ರತಾ ಸಿಬ್ಬಂದಿಯು ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಈಗ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯ ಹೇಗಿದೆ? ಅವರು ಎಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು 2022ರ ಫೆಬ್ರವರಿ 24ರಂದು ಉಕ್ರೇನ್‌ ಮೇಲೆ ಆಕ್ರಮಣ ಮಾಡಲು ಸೇನೆಗೆ ಆದೇಶಿಸಿದ್ದು ಜಾಗತಿಕ ವಿರೋಧಕ್ಕೆ ಕಾರಣವಾಗಿದೆ. ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳು ರಷ್ಯಾ ವಿರುದ್ಧ ನಿರ್ಬಂಧದ ಅಸ್ತ್ರ ಪ್ರಯೋಗಿಸಿವೆ. ಜಾಗತಿಕ ವೇದಿಕೆಗಳಲ್ಲಿ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, “ಯುದ್ಧಕ್ಕೆ ಇದು ಕಾಲವಲ್ಲ” ಎಂದು ಕೂಡ ಹೇಳಿದ್ದರು. ಇಷ್ಟಾದರೂ ಪುಟಿನ್‌ ಅವರು ಆಕ್ರಮಣ ನಿಲ್ಲಿಸಿಲ್ಲ.

ಈ ಸುದ್ದಿಯನ್ನೂ ಓದಿ: Vladimir Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಹೃದಯಾಘಾತ; ಸ್ಥಿತಿ ಗಂಭೀರ?

ಕಳೆದ ವರ್ಷ ಗಂಭೀರ ಅನಾರೋಗ್ಯ ಕುರಿತು ವರದಿ

ಕಳೆದ ವರ್ಷವೂ ವ್ಲಾದಿಮಿರ್‌ ಪುಟಿನ್‌ ಅನಾರೋಗ್ಯದ ಕುರಿತು ವರದಿಗಳು ಪ್ರಕಟವಾಗಿದ್ದವು. ಪುಟಿನ್‌ ಪಾರ್ಕಿನ್‌ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಒಂದು ವರದಿ ಹೇಳಿದ್ದರೆ, ಇನ್ನೊಂದು ಮೂಲಗಳು, ಪುಟಿನ್‌ಗೆ ಹೊಟ್ಟೆಯ ಕ್ಯಾನ್ಸರ್‌ ಆಗಿದೆ. ಶೀಘ್ರವೇ ಸರ್ಜರಿಗೆ ಒಳಗಾಗಲಿದ್ದಾರೆ ಎಂದು ಹೇಳಿದ್ದವು. ಇದೆಲ್ಲದರ ಮಧ್ಯೆ ಅವರು ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆಂಬ ವದಂತಿಯೂ ಹರಡಿತ್ತು. ಆದರೆ ರಷ್ಯಾ ಸರ್ಕಾರ ಪದೇಪದೇ ಇವೆಲ್ಲವನ್ನೂ ನಿರಾಕರಿಸುತ್ತಲೇ ಬಂದಿತ್ತು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version