Site icon Vistara News

Vodafone Idea: ಜಿಯೋ, ಏರ್‌ಟೆಲ್‌ ಬೆನ್ನಲ್ಲೇ ವೋಡಾಫೋನ್‌ ಐಡಿಯಾ ಪ್ಲಾನ್‌ ಬೆಲೆ ಏರಿಕೆ; ಹೀಗಿದೆ ವಿವರ

Vodafone Idea

Vodafone Idea joins Jio and Airtel to collectively hike tariffs: Check new prices

ನವದೆಹಲಿ: ದೇಶದ ಟೆಲಿಕಾಂ ಕಂಪನಿಗಳು ಕಳೆದ ಕೆಲ ದಿನಗಳಿಂದ ಗ್ರಾಹಕರಿಗೆ ಬೆಲೆಯೇರಿಕೆಯ ಬಿಸಿ ಮುಟ್ಟಿಸುತ್ತಿವೆ. ರಿಲಯನ್ಸ್‌ ಜಿಯೋ (Reliance Jio) ಹಾಗೂ ಏರ್‌ಟೆಲ್‌ (Airtel) ಕಂಪನಿಗಳು ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ ಪೇಯ್ಡ್‌ ಬೆಲೆಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ ವೋಡಾಫೋನ್‌ ಐಡಿಯಾ (Vodafone Idea) ಸಂಸ್ಥೆಯೂ ಬೆಲೆಯೇರಿಕೆಗೆ ಮುಂದಾಗಿದೆ. ಇದು ಕೂಡ ಕೋಟ್ಯಂತರ ಗ್ರಾಹಕರಿಗೆ ಮೊಬೈಲ್‌ ರಿಚಾರ್ಜ್‌ ಮಾಡಿಸಿಕೊಳ್ಳುವಲ್ಲಿ ಹೊರೆ ಎನಿಸಲಿದೆ.

ಹೌದು, ಜುಲೈ 4ರಿಂದ ವೋಡಾಫೋನ್‌ ಐಡಿಯಾ ಶುಲ್ಕಗಳನ್ನು ಶೇ. 10ರಷ್ಟು ಹಾಗೂ ಶೇ.23ರಷ್ಟು ಏರಿಕೆ ಮಾಡಲು ತೀರ್ಮಾನಿಸಿದೆ. 28 ದಿನಗಳ ಪ್ಲಾನ್‌ಗೆ 179 ರೂ. ಬದಲಾಗಿ 199 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, 84 ದಿನಗಳವರೆಗೆ 1.5 ಜಿಬಿ ಪ್ಲಾನ್‌ಗೆ 719ರ ಬದಲಾಗಿ 859 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, ವಾರ್ಷಿಕ ಯೋಜನೆಯ ಮೊತ್ತವನ್ನು 2,899 ರೂ.ನಿಂದ 3,499 ರೂ.ಗೆ ಏರಿಕೆ ಮಾಡಿದೆ. ಆದರೆ, 365 ದಿನಗಳವರೆಗೆ ಅನ್‌ಲಿಮಿಟೆಡ್‌ ಕರೆಗಳು ಹಾಗೂ 24 ಜಿಬಿ (ಪ್ರತಿದಿನ ಅಲ್ಲ) ಇಂಟರ್‌ನೆಟ್‌ ಪ್ಲಾನ್‌ ಬೆಲೆಯೇರಿಕೆ ಮಾಡಿಲ್ಲ. ಅದು ಮೊದಲಿನಂತೆ ಶೇ.1,799 ರೂ. ಇರಲಿದೆ.

ಜಿಯೋ ಪ್ಲಾನ್‌ ಬೆಲೆಯೇರಿಕೆ ಎಷ್ಟು?

28 ದಿನಗಳವರೆಗೆ 2 ಜಿಬಿ ಡೇಟಾ (ಪ್ರತಿದಿನ ಅಲ್ಲ), ಅನ್‌ಲಿಮಿಟೆಡ್‌ ಕರೆಗಳು ಇರುವ 155 ಪ್ಲಾನ್‌ಗೆ ಇನ್ನು 189 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, ಪ್ರತಿದಿನ 1 ಜಿಬಿ ಇಂಟರ್‌ನೆಟ್‌ ಪ್ಲಾನ್‌ಗೆ 28 ದಿನಗಳಿಗೆ 209 ರೂ. ಬದಲು 249 ರೂ., ನಿತ್ಯ 1.5 ಜಿಬಿ ಪ್ಲಾನ್‌ಗೆ 239 ರೂ. ಬದಲು 299 ರೂ., 2 ಜಿಬಿ ಪ್ಲಾನ್‌ಗೆ 299 ರೂ. ಬದಲು 349 ರೂ., 2.5 ಜಿಬಿಗೆ 349 ರೂ. ಬದಲು 399 ರೂ., 3 ಜಿಬಿಗೆ 399 ರೂ. ಬದಲು 449 ರೂ. ಪಾವತಿಸಬೇಕಾಗುತ್ತದೆ.

2 ಹಾಗೂ 3 ತಿಂಗಳ ಪ್ಲಾನ್‌

ಎರಡು ಹಾಗೂ ಮೂರು ತಿಂಗಳ ಪ್ಲಾನ್‌ಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಪ್ರತಿ ದಿನ 1.5 ಜಿಬಿ ಇಂಟರ್‌ನೆಟ್‌, ಅನ್‌ಲಿಮಿಟೆಡ್‌ ಕರೆಗಳಿಗೆ ಇನ್ನು 479 ರೂ. ಬದಲು 579 ರೂ., 2 ಜಿಬಿಗೆ 533 ರೂ. ಬದಲು 629, 3 ತಿಂಗಳು ಅನ್‌ಲಿಮಿಟೆಡ್‌ ಕರೆ, 6 ಜಿಬಿ ಇಂಟರ್‌ನೆಟ್‌ (ಪ್ರತಿದಿನ ಅಲ್ಲ) ಪ್ಲಾನ್‌ಗೆ 395 ರೂ. ಬದಲಾಗಿ 479 ರೂ. ಪಾವತಿಸಬೇಕಾಗುತ್ತದೆ. ಮೂರು ತಿಂಗಳು ಪ್ರತಿ ದಿನ 1.5 ಜಿಬಿ ಅಂತರ್ಜಾಲ, ಅನ್‌ಲಿಮಿಟೆಡ್‌ ಕಾಲ್ಸ್‌ ಪ್ಲಾನ್‌ಗೆ 666 ರೂ. ಬದಲಾಗಿ 799 ರೂ. 2 ಜಿಬಿಗೆ 719 ರೂ. ಬದಲು 859 ರೂ., 3 ಜಿಬಿಗೆ 999 ರೂ. ಬದಲಾಗಿ 1,199 ರೂ. ತೆರಬೇಕಾಗಿದೆ.

ವಾರ್ಷಿಕ ಹಾಗೂ ಡೇಟಾ ಆ್ಯಡ್‌ ಆನ್‌ಗೆ ಎಷ್ಟು ಏರಿಕೆ

336 ದಿನಗಳವರೆಗೆ ಅನ್‌ಲಿಮಿಟೆಡ್‌ ಕರೆಗಳು, 24 ಜಿಬಿ ಡೇಟಾ (ಪ್ರತಿದಿನ ಅಲ್ಲ) ಪ್ಲಾನ್‌ಗೆ 1,559 ರೂ. ಬದಲು 1,899 ರೂ., ಒಂದು ವರ್ಷಕ್ಕೆ ನಿತ್ಯ 2.5 ಜಿಬಿ ಪ್ಲಾನ್‌ಗೆ 2,999 ರೂ. ಬದಲು 3,599 ರೂ. ಪಾವತಿಸಬೇಕಾಗುತ್ತದೆ. ಡೇಟಾ ಆ್ಯಡ್‌ ಆನ್‌ ಪ್ಲಾನ್‌ಗಳನ್ನೂ ಬಿಟ್ಟಿಲ್ಲ. 1 ಜಿಬಿ ಡೇಟಾಗೆ 15 ರೂ.ನಿಂದ 19 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು 2 ಜಿಬಿ ಡೇಟಾಗೆ 25 ರೂ.ನಿಂದ 29 ರೂ., 6 ಜಿಬಿ ಡೇಟಾಗೆ 61 ರೂ.ನಿಂದ 69 ರೂ.ಗೆ ಹೆಚ್ಚಳ ಮಾಡಲಾಗಿದೆ. ಭಾರತದಲ್ಲಿ ಸುಮಾರು 45 ಕೋಟಿಗೂ ಅಧಿಕ ಜನ ರಿಲಯನ್ಸ್‌ ಜಿಯೋ ಬಳಸುತ್ತಾರೆ. ಹಾಗಾಗಿ, ಇದು ದೇಶದಲ್ಲೇ ಬೃಹತ್‌ ಟೆಲಿಕಾಮ್‌ ಕಂಪನಿ ಎನಿಸಿದೆ.

ಇದನ್ನೂ ಓದಿ: 5G Spectrum: 11,300 ಕೋಟಿ ರೂ. ಮೌಲ್ಯದ 5ಜಿ ತರಂಗ ಹರಾಜು; ಭಾರ್ತಿ ಏರ್‌ಟೆಲ್‌ ಮುಂಚೂಣಿ

Exit mobile version