ನವದೆಹಲಿ: ಟೆಲಿಕಾಂ ಸೇವೆ ಪೂರೈಕೆ ಪ್ರಮುಖ ಕಂಪನಿಗಳ ಪೈಕಿ ಒಂದಾಗಿರುವ ವೋಡಾಫೋನ್ (Vodafone) ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಮುಂದಿನ ಐದು ವರ್ಷಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಪ್ಲ್ಯಾನ್ ಸಿದ್ಧ ಮಾಡಿಕೊಂಡಿದೆ. ವಿಶೇಷವಾಗಿ ಲಂಡನ್‌ನಲ್ಲಿರುವ ಕೇಂದ್ರ ಕಚೇರಿಯ ಸಾಕಷ್ಟು ಉದ್ಯೋಗಗಳು ನಷ್ಟವಾಗಲಿವೆ.
2026ರ ಹೊತ್ತಿಗೆ ಒಂದು ಶತಕೋಟಿ ಡಾಲರ್ ವೆಚ್ಚವನ್ನು ಕಡಿಮೆ ಮಾಡುವುದಾಗಿ ಕಂಪನಿಯು ಕಳೆದ ನವೆಂಬರ್ ತಿಂಗಳಲ್ಲಿ ಘೋಷಿಸಿತ್ತು. ವರ್ಷದಿಂದ ವರ್ಷಕ್ಕೆ ಕಂಪನಿಯ ಲಾಭಾಂಶದಲ್ಲಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು ವೆಚ್ಚವನ್ನು ಕಡಿಮೆ ಮಾಡಲು ಮುಂದಾಗಿದೆ. ಜಾಗತಿಕವಾಗಿ ಕಂಪನಿಯು 104,000 ನೌಕರರನ್ನು ಹೊಂದಿದೆ. ಈ ಪೈಕಿ ಲಂಡನ್‌ನಲ್ಲಿ 9,400 ಜನರಿದ್ದಾರೆ.
ಭಾರತದಲ್ಲೂ ವೋಡಾಫೋನ್ ವ್ಯವಹಾರ ಲಾಭದಲ್ಲಿ ಇಲ್ಲ. ಸರ್ಕಾರವು ಕಂಪನಿಯ ಸಾಕಷ್ಟು ಸಾಲವನ್ನು ಇಕ್ವಿಟಿಯಾಗಿ ಪರಿವರ್ತಿಸಿದ ಬಳಿಕವೂ ಭಾರತದ ವೋಡಾಫೋನ್ ವ್ಯವಹಾರವು ಲಾಭದಾಯಕವಾಗಿಲ್ಲ. ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಟೆಲಿಕಾಮ್ ಕಂಪನಿಗಳಿಂದ ವೋಡಾಫೋನ್-ಐಡಿಯಾ ಕಂಪನಿ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ.
ಇದನ್ನೂ ಓದಿ | Infosys | 3ನೇ ತ್ರೈಮಾಸಿಕದಲ್ಲಿ 6000 ಫ್ರೆಶರ್ಸ್ ನೇಮಕ ಮಾಡಿಕೊಂಡ ಇನ್ಫೋಸಿಸ್!