ನೋಯ್ಡಾ: ಸಾಮಾಜಿಕ ಮಾಧ್ಯಮ ವೀಡಿಯೊಗಳು ವೈರಲ್ (Viral News) ಆದ ನಂತರ ಸಾರ್ವಜನಿಕ ಸ್ಥಳದಲ್ಲಿ ತೊಂದರೆ ಮತ್ತು ಅಶ್ಲೀಲತೆಯನ್ನು ಸೃಷ್ಟಿಸಿದ ಆರೋಪದ ಮೇಲೆ ನೋಯ್ಡಾ ಪೊಲೀಸರು ಗುರುವಾರ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಹೆಲ್ಮೆಟ್ ಇಲ್ಲದೆ ನಗರದ ರಸ್ತೆಯಲ್ಲಿ “ನಿರ್ಲಕ್ಷ್ಯದಿಂದ” ಸ್ಕೂಟರ್ ಸವಾರಿ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದ್ದವು. ಅದೇ ರೀತಿ ಡೆಲ್ಲಿ ಮೆಟ್ರೋದಲ್ಲಿ ರಂಗಿನ ಓಕುಳಿ ಆಡಿದವರೂ ಜೈಲು ಕಂಬಿ ಎಣಿಸುವಂತಾಗಿದೆ.
ಈ ಎರಡೂ ವಿಡಿಯೊಗಳನ್ನು ನೋಡಿರುವ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು “ಅಶ್ಲೀಲ” ಎಂದು ಟೀಕಿಸಿದರೆ, ನೋಯ್ಡಾ ಸಂಚಾರ ಪೊಲೀಸರು ರಸ್ತೆ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸ್ಕೂಟರ್ ಮಾಲೀಕರಿಗೆ ಒಟ್ಟು 80,500 ರೂ.ಗಳ ದಂಡವನ್ನು ವಿಧಿಸಿದ್ದರು.
#GreaterNoida होली के नाम पर अश्लीलता फैलाने वाली सुशील कन्याएं, दिल्ली मेट्रो का असर ग्रेटर नोएडा तक पहुंच गया, ट्रैफिक पुलिस की संज्ञान में वीडियो आते ही ट्रैफिक पुलिस ने 33000 रूपए का चालान किया। स्कूटी नंबर (UP16CX-0866)@noidapolice @Uppolice #viralvideo @noidatraffic pic.twitter.com/XpMQjWkuKn
— Awareness News (@AwarenessNews1) March 25, 2024
ಐಪಿಸಿ ಸೆಕ್ಷನ್ 279 (ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ಅತಿವೇಗದ / ನಿರ್ಲಕ್ಷ್ಯದ ಚಾಲನೆ), 290 (ಸಾರ್ವಜನಿಕ ಉಪದ್ರವ), 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ), 336 ಮತ್ತು 337 (ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವ ಅಥವಾ ಅದರಿಂದ ನೋವನ್ನುಂಟುಮಾಡುವ ಕೃತ್ಯಕ್ಕೆ ಸಂಬಂಧಿಸಿದ) ಅಡಿಯಲ್ಲಿ ಸೆಕ್ಟರ್ 113 ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಏನಿದು ಪ್ರಕರಣ?
ನೋಯ್ಡಾದಲ್ಲಿ ಕಳೆದ ಸೋಮವಾರ (ಮಾರ್ಚ್ 25) ಯುವಕನು ಸ್ಕೂಟರ್ ಚಾಲನೆ ಮಾಡುತ್ತಿದ್ದರೆ, ಹುಡುಗಿಯರು ಚಲಿಸುತ್ತಿರುವ ಸ್ಕೂಟರ್ನಲ್ಲಿ ಪರಸ್ಪರ ಎದುರು ಬದುರಾಗಿ ಕುಳಿತು ಅಶ್ಲೀಲ ನೃತ್ಯ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ ವಿಡಿಯೊವನ್ನು ಚಿತ್ರೀಕರಿಸಿದ್ದಾನೆ, ಆದಾಗ್ಯೂ, ವಿಡಿಯೊ ಚಿತ್ರೀಕರಿಸಿದ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ : Women Slapped : ಪಿಟಿಐ ಪತ್ರಕರ್ತೆಯ ಕಪಾಳಕ್ಕೆ ಬಾರಿಸಿದ ಎಎನ್ಐ ವರದಿಗಾರ; ಇಲ್ಲಿದೆ ಆತಂಕಕಾರಿ ವಿಡಿಯೊ
ವೈರಲ್ ಆಗಿರುವ ವೀಡಿಯೊದಲ್ಲಿ, ಇಬ್ಬರು ಹುಡುಗಿಯರು ಸ್ಕೂಟರ್ನ ಹಿಂಭಾಗ ಕುಳಿತು ಬಾಲಿವುಡ್ ಹಾಡು “ಮೊಹೆ ರಂಗ್ ಲಗಾಡೆ” ಗೆ ನೃತ್ಯ ಮಾಡಿದ್ದಾರೆ. ಹುಡುಗಿಯರು ನೃತ್ಯ ಮಾಡುತ್ತಿದ್ದಾರೆಯೇ, ಅಶ್ಲೀಲ ಕೆಲಸದಲ್ಲಿ ತೊಡಗಿದ್ದಾರೆಯೇ ಅಥವಾ ಪ್ರಣಯದಲ್ಲಿ ತೊಡಗಿದ್ದಾರೆಯೇ ಎಂದು ವಿವರಿಸುವುದು ಅಸಾಧ್ಯ. ವಿಡಿಯೊ ನೋಡಿಯೇ ನಿರ್ಧಾರ ಮಾಡಬೇಕಾಗುತ್ತದೆ. ಆದರೆ, ಯಾರು ಕೂಡ ಈ ಯುವತಿಯರ ವರ್ತನೆಯನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ.
ದೆಹಲಿ ಮೆಟ್ರೋದಲ್ಲೂ ಯುವತಿಯರ ಹುಚ್ಚಾಟ
ದೆಹಲಿಯ ಮೆಟ್ರೋದಲ್ಲಿಯೂ ಇಬ್ಬರು ಯುವತಿಯರು ಹೋಳಿ ಆಚರಣೆ ಮಾಡುವ ನೆಪದಲ್ಲಿ ರೊಮ್ಯಾನ್ಸ್ ಮಾಡಿದ ವಿಡಿಯೊ ವೈರಲ್ ಆಗಿದೆ. ಚಲಿಸುವ ಮೆಟ್ರೋದಲ್ಲಿಯೇ ಪರಸ್ಪರ ಬಣ್ಣ ಹಚ್ಚುವ ಯುವತಿಯರು, ತಬ್ಬಿ ಮುದ್ದಾಡಿದ ವಿಡಿಯೊ ವೈರಲ್ ಆಗುತ್ತಲೇ ಜನ ಆಕ್ರೋಶ ವ್ಯಕ್ತಪಡಿಸಿದ್ದರು.
🚨 Penalties at Delhi Metro
— Ravisutanjani (@Ravisutanjani) March 23, 2024
• Spitting- ₹200
• Travelling on Roof- ₹50
• Unlawful Entry- ₹200
• Misusing Alarm- ₹500
• Making Such Reels- ₹0
Not Giving Moral Lectures
But This Is Simply Inappropriate For Otherspic.twitter.com/1k0YHw5yFO
ಇಬ್ಬರು ಯುವತಿಯರು ದೆಹಲಿ ಮೆಟ್ರೋ ಹತ್ತಿದ್ದಾರೆ. ರೈಲು ಚಲಿಸುತ್ತಲೇ ಕೆಳಗೆ ಕುಳಿತ ಅವರು ಪರಸ್ಪರ ಬಣ್ಣ ಹಚ್ಚಿಕೊಂಡಿದ್ದಾರೆ. ಆಕೆಯ ಕೆನ್ನೆಗೆ ಈಕೆ, ಈಕೆಯ ಕೆನ್ನೆಗೆ ಆಕೆ ಬಣ್ಣ ಹಚ್ಚುವುದು, ಇಬ್ಬರೂ ಮಲಗಿ ರೊಮ್ಯಾನ್ಸ್ ಮಾಡುವುದು, ಮುದ್ದಾಡುವುದು, ಮುತ್ತು ಕೊಡುವುದು ಸೇರಿ ಬಹಿರಂಗವಾಗಿಯೇ ಅಸಭ್ಯವಾಗಿ ವರ್ತಿಸಿದ್ದಾರೆ. ಇವರ ಹುಚ್ಚಾಟವನ್ನು ಕಂಡ ಪ್ರಯಾಣಿಕರು, ಮನಸ್ಸಲ್ಲೇ ಹಿಡಿ ಶಾಪ ಹಾಕಿದ್ದಾರೆ. ಆದರೆ, ಪ್ರಯಾಣಿಕರು ಏನೆಂದುಕೊಳ್ಳುತ್ತಾರೋ, ಅವರಿಗೆ ತೊಂದರೆಯಾಗುತ್ತದೆಯೋ ಎಂಬುದರ ಪರಿವೇ ಇಲ್ಲದೆ ಇಬ್ಬರು ಯುವತಿಯರು ಹುಚ್ಚಾಟ ಮಾಡಿದ್ದಾರೆ.