Site icon Vistara News

Walt Disney: ಭಾರತದ ‘ಡಿಸ್ನಿ’ ಯಾರ ಪಾಲಾಗಲಿದೆ? ಅದಾನಿಗೋ, ಕಲಾನಿಧಿಗೋ…?

Walt Disney talk with Adani Group and Sun TV to sell its indian assets

ನವದೆಹಲಿ: ವಾಲ್ಟ್ ಡಿಸ್ನಿ ಕಂಪನಿಯು (Walt Disney) ತನ್ನ ಭಾರತದ ಸ್ಟ್ರೀಮಿಂಗ್ (Streaming) ಮತ್ತು ಟೆಲಿವಿಷನ್ ವ್ಯವಹಾರ (Television business) ಮಾರಾಟಕ್ಕೆ ಸಂಬಂಧಿಸಿದಂತೆ ಗೌತಮ್ ಅದಾನಿ (Gautam Adani) ಮತ್ತು ಕಲಾನಿಧಿ ಮಾರನ್ (Kalanithi Maran) ಸೇರಿದಂತೆ ಸಂಭಾವ್ಯ ಖರೀದಿದಾರರೊಂದಿಗೆ ಪ್ರಾಥಮಿಕ ಚರ್ಚೆಗಳನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಡಿಸ್ನಿ ಹಾಟ್ ಸ್ಟಾರ್ ಸ್ಟ್ರೀಮಿಂಗ್ ವೇದಿಕೆ ಭಾರತದಲ್ಲಿ ಜನಪ್ರಿಯವಾಗಿದೆ.

ಅಮೆರಿಕದ ಮನರಂಜನಾ ದೈತ್ಯ ಕಂಪನಿಯ ಹಿರಿಯ ಅಧಿಕಾರಿಗಳು, ಕಂಪನಿಯು ಹಲವಾರು ಆಯ್ಕೆಗಳನ್ನು ಅನ್ವೇಷಿಸುತ್ತಿದೆ. ಕಂಪನಿಯ ಭಾರತೀಯ ಕಾರ್ಯಾಚರಣೆಗಳ ಭಾಗವನ್ನು ಮಾರಾಟ ಮಾಡುವುದು ಅಥವಾ ಕ್ರೀಡಾ ಹಕ್ಕುಗಳು ಮತ್ತು ಪ್ರಾದೇಶಿಕ ಸ್ಟ್ರೀಮಿಂಗ್ ಸೇವೆ ಡಿಸ್ನಿ ಹಾಟ್‌ಸ್ಟಾರ್ ಸೇರಿದಂತೆ ಘಟಕದ ಆಸ್ತಿಗಳನ್ನೂ ಮಾರಾಟ ಮಾಡುವ ಬಗ್ಗೆ ಯೋಜಿಸುತ್ತಿದೆ ಎಂದು ಈ ಎಲ್ಲ ಬೆಳವಣಿಗೆಗಳ ಬಗ್ಗೆ ಗೊತ್ತಿರುವವರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಲಾಗಿದೆ.

ಬ್ಲೂಮ್‌ಬರ್ಗ್ ನ್ಯೂಸ್ ಪ್ರಕಾರ, ವಾಲ್ಟ್ ಡಿಸ್ನಿಯ ಭಾರತೀಯ ಕಾರ್ಯಾಚರಣೆಯನ್ನು, ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ನಿಯಂತ್ರಣದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಗೆ ಮಾರಾಟ ಮಾಡಲು ಮಾತುಕತೆ ನಡೆದಿದೆ. ಆದರ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ಸುದ್ದಿಯನ್ನೂ ಓದಿ: SpiceJet : ಕಲಾನಿಧಿ ಮಾರನ್‌ಗೆ 380 ಕೋಟಿ ರೂ. ನೀಡಲು ಸ್ಪೈಸ್‌ಜೆಟ್‌ಗೆ ಕೋರ್ಟ್‌ ಆದೇಶ, ಏನಿದು ಕೇಸ್?

ಡಿಸ್ನಿ ಕಂಪನಿಯು ಭಾರತದಲ್ಲಿ ತನ್ನ ವ್ಯವಹಾರಕ್ಕಾಗಿ ಸಂಪೂರ್ಣ ಮಾರಾಟ ಅಥವಾ ಜಂಟಿ ಉದ್ಯಮವನ್ನು ಸ್ಥಾಪಿಸುವುದು ಸೇರಿದಂತೆ ಕಾರ್ಯತಂತ್ರದ ಇತರ ಆಯ್ಕೆಗಳನ್ನು ಶೋಧಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಜುಲೈನಲ್ಲಿ ವರದಿ ಮಾಡಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಾರದ ಸ್ಟ್ರೀಮಿಂಗ್ ಹಕ್ಕುಗಳನ್ನು ವಾಯಕಾಮ್ 18 ಮೀಡಿಯಾ ಪ್ರೈವೇಟ್ ಲಿ ವಿರುದ್ಧ ಕಳೆದುಕೊಂಡ ಬಳಿಕ, ಕಂಪನಿಯು ಭಾರತೀಯ ಕಾರ್ಯಾಚರಣೆಯನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಹೇಳಲಾಗಿತ್ತು. ವಾಯಕಾಮ್ 18 ಮೀಡಿಯಾ ಕಂಪನಿಯು, ರಿಲಯನ್ಸ್ ಮತ್ತು ಪಾರಾಮೌಂಟ್ ಗ್ಲೋಬಲ್ ಹಾಗೂ ಉದಯ್ ಶಂಕರ್ ಅವರ ಬೋಧಿ ಟ್ರೀ ಸಿಸ್ಟಮ್ ನಡುವಿನ ಜಂಟಿ ಹೂಡಿಕೆಯಾಗಿದೆ.

ವಾಲ್ಟ್ ಡಿಸ್ನಿ ಭಾರತೀಯ ಕಾರ್ಯಾಚರಣೆಯನ್ನು ಕಲಾಧಿನಿಧಿ ಮಾರನ್ ನೇತೃತ್ವದ ಸನ್ ನೆಟ್ವರ್ಕ್ ಖರೀದಿಸುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಅದಾನಿ ಗ್ರೂಪ್ ಈ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡರೆ, ಹೊಸದಾಗಿ ಖರೀದಿಸಿರವ ನ್ಯೂ ಡೆಲ್ಲಿ ಟೆಲಿವಿಷನ್ ವಿಸ್ತರಣೆಗೆ ನೆರವು ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಹೀಗಿದ್ದಾಗ್ಯೂ, ಈ ಕುರಿತು ಬಿಸಿನೆಸ್ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ತಿಳಿದು ಬಂದಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version