Site icon Vistara News

Water Metro: ಕೊಚ್ಚಿಯಲ್ಲಿ ದೇಶದ ಮೊದಲ ವಾಟರ್ ಮೆಟ್ರೋಗೆ ಚಾಲನೆ, ಟಿಕೆಟ್‌ ದರ ಎಷ್ಟು?

Water Metro will be launched by PM on April 25

ತಿರುವನಂತಪುರಂ, ಕೇರಳ: ದೇಶದ ಮೊದಲ ವಾಟರ್ ಮೆಟ್ರೋಗೆ (Water Metro) ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ಡ್ರೀಮ್‌ ಪ್ರಾಜೆಕ್ಟ್‌ ಎಂದು ಕರೆದಿದ್ದಾರೆ. (Kochi Water Metro) ಭಾರತದ ಸಾರಿಗೆ ವಲಯದದಲ್ಲಿ ಈ ಜಲ ಸಾರಿಗೆ ಕ್ರಾಂತಿ ಉಂಟು ಮಾಡುವ ನಿರೀಕ್ಷೆ ಇದೆ. ಹಾಗಾದರೆ ಏನಿದು? ಇದರ ವಿಶೇಷತೆ ಏನು? ಪ್ರಯಾಣಿಕರಿಗೆ ಕನಿಷ್ಠ-ಗರಿಷ್ಠ ಟಿಕೆಟ್‌ ದರ ಎಷ್ಟು? ಇಲ್ಲಿದೆ ವಿವರ.

ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ವಾಟರ್ ಮೆಟ್ರೋ.

ವಾಟರ್ ಮೆಟ್ರೋ ನಗರ ಸಮುದಾಯದ ವಿಶಿಷ್ಟ ಜಲ ಸಾರಿಗೆ ಸಂಪರ್ಕ ವ್ಯವಸ್ಥೆಯಾಗಿದೆ. ಸಾಂಪ್ರದಾಯಿಕ ಮೆಟ್ರೋ ಸಿಸ್ಟಮ್‌ನಲ್ಲಿ ಪ್ರಯಾಣಿಕರಿಗೆ ದೊರೆಯುವ ಅನುಭವವೇ ಈ ವಾಟರ್ ಮೆಟ್ರೋದಲ್ಲೂ ಸಿಗುತ್ತದೆ. ವಿಶೇಷವಾಗಿ ಕೊಚ್ಚಿಯಂಥ ನಗರಗಳಿಗೆ ಈ ವಾಟರ್ ಮೆಟ್ರೋ ಹೆಚ್ಚು ಸೂಕ್ತವಾಗಿದೆ. ಕೊಚ್ಚಿ ನಗರದ ವ್ಯಾಪ್ತಿಯಲ್ಲಿರುವ 10 ದ್ವೀಪಗಳಿಗೆ ಈ ವಾಟರ್‌ ಮೆಟ್ರೊ ಸಾರಿಗೆ ಸಂಪರ್ಕ ಕಲ್ಪಿಸಲಿದೆ. ಮೆಟ್ರೊದ ಒಳಗೆ ಇರುವಂಥ ಸೌಕರ್ಯವನ್ನು ಈ ಮೆಟ್ರೊದ ಹಲವಾರು ದೋಣಿಗಳು ನೀಡಲಿವೆ. ಸದ್ಯಕ್ಕೆ 34,000 ಪ್ರಯಾಣಿಕರಿಗೆ ವಾಟರ್‌ ಮೆಟ್ರೊ ಸೇವೆ ನೀಡಲಿದೆ. ಈ ಸಂಖ್ಯೆ 1.5 ಲಕ್ಷಕ್ಕೆ ಏರುವ ಸಾಧ್ಯತೆ ಇದೆ. ಗ್ರೇಟರ್‌ ಕೊಚ್ಚಿಯ 16 ಜಲ ಮಾರ್ಗಗಳಲ್ಲಿ ಇವುಗಳು ಸಂಚರಿಸಲಿವೆ.

ಏಪ್ರಿಲ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ವಾಟರ್ ಮೆಟ್ರೋಗೆ ಚಾಲನೆ ನೀಡಲಿದ್ದಾರೆ.

ಬಂದರು ನಗರವಾಗಿರುವ ಕೊಚ್ಚಿಯಲ್ಲಿ ವಾಟರ್ ಮೆಟ್ರೋ ಸ್ಥಾಪನೆಗೆ ಸುಮಾರು 1136 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೂಲಸೌಕರ್ಯ ಮತ್ತು ಸಂಪರ್ಕವನ್ನು ಒದಗಿಸುವಲ್ಲಿ ಒಂದೇ ರೀತಿಯ ವಿಧಾನವನ್ನು ತಪ್ಪಿಸಲು ಮೋದಿ ಸರ್ಕಾರವು ಪ್ರಜ್ಞಾಪೂರ್ವಕವಾಗಿ ವಾಟರ್ ಮೆಟ್ರೋ ಆಯ್ಕೆಯನ್ನು ಮಾಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕೇರಳ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜಂಟಿ ಸಹಭಾಗಿತ್ವದ ಸಾರ್ವಜನಿಕ ಕಂಪನಿಯಾದ ಕೊಚ್ಚಿ ಮೆಟ್ರೊ ರೈಲ್‌ ಲಿಮಿಟೆಡ್‌ (Kochi Metro Limited) ಈ ಯೋಜನೆಯನ್ನು ನಡೆಸುತ್ತಿದೆ. ಒಟ್ಟು 38 ನಿಲ್ದಾಣಗಳನ್ನು ವಾಟರ್‌ ಮೆಟ್ರೊ ಹೊಂದಿದೆ. ಈ ಮೆಟ್ರೊ ಬ್ಯಾಟರಿ ಚಾಲಿತವಾಗಿದೆ. ಪ್ರತಿ ಬೋಟ್‌ 50ರಿಂದ 100 ಪ್ರಯಾಣಿಕರನ್ನು ಕರೆದೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ 15 ನಿಮಿಷಕ್ಕೊಮ್ಮೆ ಬೋಟ್‌ ಸಂಚರಿಸಲಿದೆ.

ಟಿಕೆಟ್‌ ದರ ಎಷ್ಟು?

ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಆಧುನಿಕ ಜಲ ಸಾರಿಗೆಯನ್ನು ವಾಟರ್‌ ಮೆಟ್ರೊ ನೀಡಲಿದೆ. ಟಿಕೆಟ್‌ ದರ ಕನಿಷ್ಠ 20 ರೂ. ಹಾಗೂ ಗರಿಷ್ಠ 40 ರೂ.ಗಳಾಗಿದೆ. ಪ್ರಯಾಣಿಕರಿಗೆ ವಾರ, ತಿಂಗಳು, ತ್ರೈಮಾಸಿಕ ಪಾಸ್‌ಗಳು ಅನುಕ್ರಮವಾಗಿ 180 ರೂ, 600 ರೂ, 1500 ರೂ.ಗೆ ದೊರೆಯುತ್ತದೆ.

1136 ಕೋಟಿ ರೂ. ವೆಚ್ಚದಲ್ಲಿ ಕೊಚ್ಚಿ ವಾಟರ್ ಮೆಟ್ರೋ ರೂಪಿಸಲಾಗಿದೆ.

ವಾಟರ್ ಮೆಟ್ರೋ, ಹವಾನಿಯಂತ್ರಿತ ದೋಣಿಗಳಲ್ಲಿ ವೆಚ್ಚ-ಪರಿಣಾಮಕಾರಿ ಮತ್ತು ಸುರಕ್ಷಿತ ಪ್ರಯಾಣವು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳದೆ ಜನರು ತಮ್ಮ ಸ್ಥಳಗಳನ್ನು ತಲುಪಲು ಸಹಾಯ ಮಾಡುತ್ತದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಶನಿವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕೊಚ್ಚಿಯ ಈ ವಾಟರ್ ಮೆಟ್ರೋ ಯೋಜನೆಯ ಮೊದಲನೇ ಹಂತವು ಹೈಕೋರ್ಟ್-ವ್ಯಾಪಿನ್ ಟರ್ಮಿನಲ್‌ನಿಂದ ವ್ಯಟ್ಟಿಲ-ಕಕ್ಕನಾಡವರೆಗೂ ಇರಲಿದೆ.

ಇದನ್ನೂ ಓದಿ: Viral Video: ದೆಹಲಿ ಮೆಟ್ರೋ ರೈಲಲ್ಲಿ ಅಪ್ಪಿಕೊಂಡು ನಿಂತ ಜೋಡಿ; ತುಟಿಗೆ ತುಟಿಯಿಟ್ಟು ಚುಂಬನ, ಪ್ರಯಾಣಿಕರಿಗೆ ಮುಜುಗರ

ಕೊಚ್ಚಿ 1 ಕಾರ್ಡ್ ಬಳಸಿಕೊಂಡು ಪ್ರಯಾಣಿಕರು ಕೊಚ್ಚಿ ಮೆಟ್ರೋ ಮತ್ತು ವಾಟರ್ ಮೆಟ್ರೋ ಎರಡರಲ್ಲೂ ಪ್ರಯಾಣಿಸಬಹುದಾಗಿದೆ. ಡಿಜಿಟಲ್ ಆಗಿ ಟಿಕೆಟ್ ಕೂಡ ಬಕ್ ಮಾಡಬಹುದು.

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ವಾಟರ್ ಮೆಟ್ರೋ ಫೋಟೋ ಷೇರ್ ಮಾಡಿಕೊಂಡಿದ್ದಾರೆ.

Water Metro: ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ವಾಟರ್ ಮೆಟ್ರೋ ಫೋಟೋ ಷೇರ್ ಮಾಡಿದ್ದಾರೆ

Exit mobile version