Site icon Vistara News

Baba Ramdev: ಯೋಗ ಗುರು ಬಾಬಾ ರಾಮದೇವ್ ಮೇಣದ ಪ್ರತಿಮೆ ಅನಾವರಣ

Wax Statue of yoga guru Baba Ramdev at New York Madame Tussauds Museum

ನವದೆಹಲಿ: ನ್ಯೂಯಾರ್ಕ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ (New York Madame Tussauds Museum) ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರ ಮೇಣದ ಪ್ರತಿಮೆಯನ್ನು (Wax Statue) ಮಂಗಳವಾರ ಅನಾವರಣಗೊಳಿಸಲಾಯಿತು. ವೃಕ್ಷಾಸನ ಭಂಗಿಯಲ್ಲಿರುವ ರಾಮದೇವ್ ಮೇಣದ ಬತ್ತಿ ಅತ್ಯಾಕರ್ಷಕವಾಗಿದೆ. ಮಂಗಳವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬಾ ರಾಮದೇವ್ ಅವರ ಸಮ್ಮುಖದಲ್ಲಿ ಯೋಗ ಗುರುಗಳ ಮೇಣದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಯಿತು.

ಬಾಬಾ ರಾಮ್‌ದೇವ್ ಅವರ ಮೇಣದ ಆಕೃತಿಯನ್ನು ವೃಕ್ಷಾಸನದ ಭಂಗಿಯಲ್ಲಿ ಕೆತ್ತಲಾಗಿದೆ, ಇದರಲ್ಲಿ ಅವರು ಒಂದು ಕಾಲಿನ ಮೇಲೆ ನಿಂತಿರುವುದು ಮತ್ತು ಇನ್ನೊಂದು ಕಾಲು ಬಾಗಿದ ಮತ್ತು ಪಾದದ ಅಡಿಭಾಗವು ನಿಂತಿರುವ ಕಾಲಿನ ಒಳ ತೊಡೆಯ ಮೇಲಿರುವುದನ್ನು ಕಾಣಬಹುದು.

ಈ ಸಂದರ್ಭದಲ್ಲಿ ಮಾತನಾಡಿದ ಬಾಬಾ ರಾಮ್‌ದೇವ್, ನ್ಯೂಯಾರ್ಕ್‌ನ ಮೇಡಮ್ ಟುಸ್ಸಾಡ್ಸ್‌ನಲ್ಲಿ ನನ್ನ ಮೇಣದ ಪ್ರತಿಮೆಯನ್ನು ಸ್ಥಾಪಿಸುತ್ತಿರುವುದು ನನಗೆ ಗೌರವವಾಗಿದೆ, ಇದು ಕೇವಲ ನನಗೆ ದೊರೆತ ಮನ್ನಣೆ ಮಾತ್ರವಲ್ಲ, ಯೋಗ ಮತ್ತು ಆಯುರ್ವೇದ ಮತ್ತು ಭಾರತದ ಸನಾತನ ಸಂಸ್ಕೃತಿಗೆ ದೊರೆತ ಮನ್ನಣೆಯಾಗಿದೆ. ಬಾಲಿವುಡ್, ಹಾಲಿವುಡ್ ಮತ್ತು ರಾಜಕೀಯದ ಪ್ರಪಂಚದ ಐಕಾನ್‌ಗಳನ್ನು ಗುರುತಿಸಲಾಗುತ್ತದೆ. ಆದರೆ, ಸಂತರಿಗೂ ಅದೇ ರೀತಿ ಮನ್ನಣೆ ದೊರೆಯುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಬಾಬಾ ರಾಮ್‌ದೇವ್ ತಮ್ಮ ಮೇಣದ ಪ್ರತಿಮೆ ಅನಾವರಣ ಮಾಡುವಾಗ ಹಣೆಯ ಮೇಲೆ ತಿಲಕವನ್ನು ಇಟ್ಟರು. ಬಾಬಾ ರಾಮ್‌ದೇವ್ ಅವರು ಈಗ ನ್ಯೂಯಾರ್ಕ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆಗಳನ್ನು ಸ್ಥಾಪಿಸಿದ ಇತರ ಪ್ರಮುಖ ಭಾರತೀಯ ವ್ಯಕ್ತಿಗಳ ಸಾಲಿಗೆ ಸೇರಿದ್ದಾರೆ.

ಈ ಸುದ್ದಿಯನ್ನೂ ಓದಿ: Virat Kohli : ಸಿಂಗಾಪುರದಲ್ಲಿ ವಿರಾಟ್​ ಕೊಹ್ಲಿಯ ಮೇಣದ ಪ್ರತಿಮೆ; ಎಲ್ಲಿ, ಏನು ಎಂಬ ವಿವರ ಇಲ್ಲಿದೆ

Exit mobile version