Site icon Vistara News

India China Clash | ಅರುಣಾಚಲ ಗಡಿಯಲ್ಲಿ ಸಂಘರ್ಷ, ಭಾರತಕ್ಕೆ ನಮ್ಮ ಬೆಂಬಲ ಎಂದ ಅಮೆರಿಕ

US On India China Clash

ವಾಷಿಂಗ್ಟನ್‌: ಅರುಣಾಚಲ ಪ್ರದೇಶದ ಗಡಿಯಲ್ಲಿ ಡಿಸೆಂಬರ್‌ 9ರಂದು ಕೆಣಕಲು ಬಂದ ಚೀನಾ ಸೈನಿಕರಿಗೆ ಭಾರತದ ಯೋಧರು (India China Clash) ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಭಾರತದ ಯೋಧರು ಚೀನಾ ಸೈನಿಕರಿಗೆ ಪೆಟ್ಟು ನೀಡಿದ ವಿಡಿಯೊ ಕೂಡ ಲಭ್ಯವಾಗಿದೆ. ಇದೇ ಕಾರಣಕ್ಕಾಗಿ ಗಡಿಯಲ್ಲಿ ಚೀನಾ ತೆಪ್ಪಗಾಗಿದೆ. ಇದರ ಬೆನ್ನಲ್ಲೇ, “ಗಡಿ ನಿಯಂತ್ರಣ ವಿಚಾರದಲ್ಲಿ ನಾವು ಭಾರತದ ಪರ” ಎಂದು ಅಮೆರಿಕ ಹೇಳಿದೆ.

“ನಮ್ಮ ಸಹಭಾಗಿತ್ವ ದೇಶಗಳ ಭದ್ರತೆಗೆ ನಾವು ದೃಢವಾದ ಬದ್ಧತೆ ಹೊಂದಿದ್ದೇವೆ. ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ವಿಷಯದಲ್ಲಿ ನಾವು ಭಾರತಕ್ಕೆ ಬೆಂಬಲ ನೀಡುತ್ತೇವೆ. ಹಾಗೆಯೇ, ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಚೀನಾದ ಮಿಲಿಟರಿ ಮೂಲ ಸೌಕರ್ಯ ಅಭಿವೃದ್ಧಿ ಮೇಲೆ ನಾವು ಕಣ್ಣಿಟ್ಟಿದ್ದೇವೆ” ಎಂದು ಅಮೆರಿಕ ರಕ್ಷಣಾ ಇಲಾಖೆ ಕೇಂದ್ರ ಕಚೇರಿ ‘ಪೆಂಟಗನ್‌’ ಮಾಧ್ಯಮ ಕಾರ್ಯದರ್ಶಿ ಪ್ಯಾಟ್ರಿಕ್‌ ರೈಡರ್‌ ಹೇಳಿದ್ದಾರೆ.

ಬಿಕ್ಕಟ್ಟು ಶಮನಕ್ಕೆ ವಿಶ್ವಸಂಸ್ಥೆ ಕರೆ
ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನಲ್ಲಿ ನಡೆದ ಸಂಘರ್ಷದ ಕುರಿತು ವಿಶ್ವಸಂಸ್ಥೆ ಕೂಡ ಪ್ರತಿಕ್ರಿಯಿಸಿದ್ದು, “ಉಭಯ ರಾಷ್ಟ್ರಗಳು ಕೂಡಲೇ ಬಿಕ್ಕಟ್ಟು ಶಮನಗೊಳಿಸಬೇಕು” ಎಂದು ಕರೆ ನೀಡಿದೆ. “ಶಾಂತಿ ಮಾತುಕತೆ ಮೂಲಕ ಭಾರತ ಹಾಗೂ ಚೀನಾ ಬಿಕ್ಕಟ್ಟು ಬಗೆಹರಿಸಿಕೊಳ್ಳಬೇಕು. ಗಡಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು” ಎಂದಿದೆ.

ಇದನ್ನೂ ಓದಿ | India China Clash | ಅರುಣಾಚಲ ಗಡಿಯಲ್ಲಿ ಚೀನಾ ಯೋಧರಿಗೆ ಭಾರತದ ಯೋಧರು ಹೇಗೆ ಬಡಿದರು? ಇಲ್ಲಿದೆ ವಿಡಿಯೊ

Exit mobile version