Site icon Vistara News

Narendra Modi : 2019ರಲ್ಲಿ ಬಿಹಾರದ ಒಂದು ಕ್ಷೇತ್ರದಲ್ಲಿ ಸೋತಿದ್ದೆವು; ಈ ಬಾರಿ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದ ಮೋದಿ

Narendra modi

ಬೆಂಗಳೂರು: ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ 2019ರ ಲೋಕ ಸಭಾ ಚುನಾವಣೆಯಲ್ಲಿ (Lok Sabha Election) ಬಿಹಾರದಲ್ಲಿ ಒಂದು ಸ್ಥಾನ ಕಳೆದುಕೊಂಡಿತ್ತು. ಈ ಬಾರಿ ಈ ಬಾರಿ ನಾವು ಒಂದನ್ನೂ ಕಳೆದುಕೊಳ್ಳುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi ) ಹೇಳಿದ್ದಾರೆ. ಎನ್​ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಎಲ್ಲ ಸೀಟ್​ಗಳನ್ನು ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಮಿತ್ರಪಕ್ಷ ಜೆಡಿಯು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಪಾಟ್ನಾದಲ್ಲಿ ರೋಡ್ ಶೋ (Modi Patna Road Show) ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಆಡಳಿತಾರೂಢ ಮೈತ್ರಿಕೂಟವು 2019 ರ ಲೋಕಸಭಾ ಚುನಾವಣೆಗಿಂತ ರಾಜ್ಯದಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಳೆದ ಬಾರಿ ಕಳೆದುಕೊಂಡ ಏಕೈಕ ಕ್ಷೇತ್ರವನ್ನು ಸಹ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಭಾನುವಾರ ರೋಡ್ ಶೋ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ, ಬಿಹಾರದಲ್ಲಿ ಮೈತ್ರಿಕೂಟವು ಕ್ಲೀನ್ ಸ್ವೀಪ್ ಸಾಧನೆ ಮಾಡುವುದು ನಿಶ್ಚಿತ ಎಂದು ಭವಿಷ್ಯ ನುಡಿದರು. ನಾನು ಬಿಹಾರದ ನಮ್ಮ ಮಿತ್ರಪಕ್ಷಗಳೊಂದಿಗೆ ಮಾತನಾಡಿದ್ದೇನೆ. ನಾವು (2019 ರಲ್ಲಿ) ಒಂದು ಸ್ಥಾನವನ್ನು ಕಳೆದುಕೊಂಡಿದ್ದೇವೆ ಮತ್ತು ಈ ಬಾರಿ ನಾವು ಒಂದು ಸ್ಥಾನವನ್ನು ಸಹ ಕಳೆದುಕೊಳ್ಳುವುದಿಲ್ಲ ಎಂದು ಅವರೆಲ್ಲರೂ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಮೋದಿ ಹೇಳಿಕೊಂಡರು.

ರಾಜ್ಯ ಮತ್ತು ಅದರ ಜನರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇನೆ. ನಾನು ಹಲವಾರು ಕೆಲಸಕ್ಕಾಗಿ ಆಗಾಗ್ಗೆ ಇಲ್ಲಿಗೆ ಬಂದಿದ್ದೇನೆ. ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದೇನೆ. ನನಗೆ ಇಲ್ಲಿ ಬಹಳ ಹಳೆಯ ಸಂಪರ್ಕಗಳಿವೆ ಎಂಬುದಾಗಿ ಅವರು ಹೇಳಿಕೊಂಡರು.

ಮುಂದುವರಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಪೂರ್ವ ಭಾರತದಲ್ಲಿ ಬಿಜೆಪಿ ತನ್ನ ಹೆಜ್ಜೆಗುರುತನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಲಿದೆ. ಇದು ಎನ್​ಡಿಎಯ 400 ಸ್ಥಾನಗಳ ಗಡಿ ಸುಲಭವಾಗಿ ತಲುಪಲು ನೆರವಾಗುತ್ತದೆ ಎಂದು ಹೇಳಿದರು. ಪೂರ್ವ ಭಾರತದಲ್ಲಿ ಬಿಜೆಪಿಯ ಏಳಿಗೆಯ ಬಗ್ಗೆ ಕೇಳಿದಾಗ, ವಲಯವನ್ನು ಬೆಳವಣಿಗೆಯ ಎಂಜಿನ್ ಆಗಿ ಅಭಿವೃದ್ಧಿಪಡಿಸಲು ವಿಶೇಷ ಗಮನ ಹರಿಸುವ ಬಗ್ಗೆ ಪ್ರಧಾನಿ ಮಾತನಾಡಿದರು.

ಇದನ್ನೂ ಓದಿ: Prajwal Revanna Case: ದಿಕ್ಕು ತಪ್ಪಿದೆ ಪ್ರಜ್ವಲ್ ರೇವಣ್ಣ ಕೇಸ್‌; ಡಿಕೆಶಿ ವಿಚಾರಣೆಯೂ ಆಗಲಿ ಎಂದ ಬಸವರಾಜ ಬೊಮ್ಮಾಯಿ

ನೀವು ನನ್ನ 2013 ರ ಭಾಷಣವನ್ನು ಆಲಿಸಿದ್ದರೆ ನೆನಪಿರಬಹುದು. ನಾನು ಪ್ರಧಾನಿ ಆಗಿದ್ದ ವೇಳೆ ಭಾರತವನ್ನು ಅಭಿವೃದ್ಧಿಪಡಿಸಲು ಬಯಸಿದ ವೇಳೆ ಪೂರ್ವ ಭಾರತವನ್ನು ಬೆಳವಣಿಗೆಯ ಎಂಜಿನ್ ಆಗಿ ಪರಿವರ್ತಿಸಿದ್ದೆನೆ ಎಂದು ನಾನು ಹೇಳಿದ್ದೆ” ಎಂದು ಅವರು ಪಾಟ್ನಾದಲ್ಲಿ ರೋಡ್ ಶೋ ನಡೆಸುವಾಗ ಹೇಳಿದರು.

ನಾವು ಮೂಲಸೌಕರ್ಯ, ಆರೋಗ್ಯ ಇತ್ಯಾದಿಗಳ ಮೇಲೆ ಗಮನ ಹರಿಸಿದ್ದೇವೆ. ಈ ಸಮೀಕ್ಷೆಯನ್ನು ಪರಿಗಣಿಸಿದರೆ, ಪೂರ್ವ ಭಾರತದ ಚುನಾವಣಾ ಫಲಿತಾಂಶಗಳು ಅದನ್ನು ಪ್ರತಿಬಿಂಬಿಸಲಿವೆ. ಜನರು ಆಶ್ಚರ್ಯಚಕಿತರಾಗಲಿದ್ದಾರೆ. ತೆಲಂಗಾಣ, ಒಡಿಶಾ, ಬಂಗಾಳ, ಬಿಹಾರ, ಜಾರ್ಖಂಡ್, ಅಸ್ಸಾಂನಲ್ಲಿ ಬಿಜೆಪಿ ಹೊಸ ಹುಟ್ಟುಪಡೆಯಲಿಎ ಎಂದು ಹೇಳಿದರು.

Exit mobile version