Site icon Vistara News

ಶಾರ್ಟ್ ಸ್ಕರ್ಟ್ ಧರಿಸಿ ಡ್ಯಾನ್ಸ್‌ ಮಾಡುವುದು ಅಶ್ಲೀಲವಲ್ಲ ಎಂದ ಬಾಂಬೆ ಹೈಕೋರ್ಟ್

Wearing Short Skirt and Dancing is not obscene acts Says Bombay High Court

ಮುಂಬೈ: ಮಹಿಳೆಯರು ಶಾರ್ಟ್‌ ಸ್ಕರ್ಟ್ (Short Skirts) ಧರಿಸಿ ಡ್ಯಾನ್ಸ್ ಮಾಡುವುದು (Provocatively Dance) ಅಥಾವ ಸನ್ನೆಗಳನ್ನು ಮಾಡುವುದು ಅಶ್ಲೀಲ ಕೃತ್ಯವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ (Bombay High Court) ಅಭಿಪ್ರಾಯಪಟ್ಟಿದೆ. ಶಾರ್ಟ್ ಸ್ಕರ್ಟ್ ಧರಿಸಿದ ಮಹಿಳೆಯ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದ ಮತ್ತು ನೃತ್ಯ ಮಾಡುವಾಗ ಅವರ ಮೇಲೆ ನಕಲಿ ನೋಟುಗಳ ಸುರಿಮಳೆಗೈದ ಐದು ವ್ಯಕ್ತಿಗಳ ವಿರುದ್ಧದ ಎಫ್ಐಆರ್ (FIR) ರದ್ದುಗೊಳಿಸುವ ಪ್ರಕರಣದ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು (Nagpur Bench) ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಶಾರ್ಟ್ ಸ್ಕರ್ಟ್ ಧರಿಸಿ ಪ್ರಚೋದನಕಾರಿಯಾಗಿ ಡ್ಯಾನ್ಸ್ ಮಾಡುವುದನ್ನು ಐಪಿಸಿ 294ರ ಅಡಿ ಅಶ್ಲೀಲ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

ಈ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಸಾ ಮೆನೆಜಸ್ ಅವರ ವಿಭಾಗೀಯ ಪೀಠವು ಪ್ರಸ್ತುತ ಭಾರತೀಯ ಸಮಾಜದಲ್ಲಿ ಚಾಲ್ತಿಯಲ್ಲಿರುವ ನೈತಿಕತೆಯ ಸಾಮಾನ್ಯ ಮಾನದಂಡಗಳ ಬಗ್ಗೆ ಗಮನಹರಿಸುತ್ತದೆ. ಆದರೆ, ಮಹಿಳೆಯರು ಈಜು ವೇಷಭೂಷಣಗಳನ್ನು ಅಥವಾ ಬಹಿರಂಗ ಉಡುಪುಗಳನ್ನು ಧರಿಸಿವುದು ಸ್ವೀಕಾರ್ಹವಾಗಿದೆ ಎಂದು ಹೇಳಿದೆ.

ಈ ಸುದ್ದಿಯನ್ನೂ ಓದಿ: Bombay High Court: ಕೋರ್ಟ್ ಕಲಾಪ ಮಧ್ಯೆ ರಾಜೀನಾಮೆ ಪ್ರಕಟಿಸಿದ ಬಾಂಬೆ ಹೈಕೋರ್ಟ್ ಜಡ್ಜ್, ಏನು ಕಾರಣ?

ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಶಾರ್ಟ್ ಸ್ಕರ್ಟ್ ಧರಿಸಿ, ಪ್ರಚೋದನಕಾರಿಯಾಗಿ ನೃತ್ಯ ಮಾಡುವುದು ಅಥವಾ ಪೋಲೀಸ್ ಅಧಿಕಾರಿಗಳು ಅಶ್ಲೀಲವೆಂದು ಪರಿಗಣಿಸುವ ಸನ್ನೆಗಳನ್ನುಕೋರ್ಟ್ ಅಶ್ಲೀಲ ಕೃತ್ಯಗಳೆಂದು ಪರಿಗಣಿಸುವುದಿಲ್ಲ. ಇದು ಯಾವುದೇ ಸದಸ್ಯರಿಗೆ ಕಿರಿಕಿರಿಯನ್ನು ಉಂಟು ಮಾಡುವುದಿಲ್ಲ ಎಂಬುದನ್ನು ಕೋರ್ಟ್ ಗಮನಿಸಿದೆ ಎಂದು ಪೀಠ ಹೇಳಿತು.

ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯು ವೈಯಕ್ತಿಕ ಇಂಥ ಕೃತ್ಯವನ್ನು ಅಶ್ಲೀಲ ಎಂದು ಪರಿಗಣಿಸಿರಬಹುದು. ಆದರೆ, ನ್ಯಾಯಾಲಯವು ಈ ವಿಷಯದಲ್ಲಿ ಸಂಕುಚಿತ ದೃಷಿಕೋನವನ್ನು ಬೆಂಬಲಿಸುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ನಾವು ಪ್ರಗತಿಪರ ದೃಷ್ಟಿಕೋನವನ್ನು ಬೆಂಬಲಿಸುತ್ತೇವೆ. ಅಲ್ಲದೇ, ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಪೊಲೀಸ್ ಅಧಿಕಾರಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version