Site icon Vistara News

Union budget 2023 : ದೇಶವನ್ನು ಮುನ್ನಡೆಸಲಿರುವ ಸಪ್ತರ್ಷಿಗಳು: ನಿರ್ಮಲಾ ಸೀತಾರಾಮನ್‌ ಹೇಳಿದ ಋಷಿಗಳ ಕಥೆ ಏನು?

ಸಪ್ತರ್ಷಿ ಯೋಜನೆ

#image_title

ನವ ದೆಹಲಿ: ದೇಶದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸಪ್ತರ್ಷಿಗಳು ನಮ್ಮನ್ನು ಮಾರ್ಗದರ್ಶಕರಾಗಿ ಮುನ್ನಡೆಸಲಿದ್ದಾರೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು. ಜೈಮಿನಿಯ ಬ್ರಾಹ್ಮಣದ ಪ್ರಕಾರ ಅಗಸ್ತ್ಯ, ಅತ್ರಿ, ಭಾರದ್ವಾಜ, ಗೌತಮ, ಜಮದಗ್ನಿ, ವಸಿಷ್ಠ, ವಿಶ್ವಾಮಿತ್ರರು ಸಪ್ತರ್ಷಿಗಳಾಗಿದ್ದು, ಅವರ ಮಾರ್ಗದರ್ಶನದ ಆಧಾರದಲ್ಲಿ ದೇಶದ ಆರ್ಥಿಕ ಬೆಳವಣಿಗೆ ನಡೆಯಲಿದೆ ಎಂದು ಸಚಿವೆ ತಿಳಿಸಿದರು. ೨೦೨೩-೨೪ನೇ ಸಾಲಿನ ಕೇಂದ್ರ ಬಜೆಟ್‌ನ್ನು (Union budget 2023) ಏಳು ಅಂಶಗಳನ್ನು ಆಧರಿಸಿ ತಯಾರಿಸಲಾಗಿದೆ ಎನ್ನುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಸಪ್ತರ್ಷಿಯ ವಿವರಣೆ.

ಇವೇ ಆ ಏಳು ಆದ್ಯತಾ ವಿಷಯಗಳು: ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಯುವ ಸಬಲೀಕರಣ, ಆರ್ಥಿಕ ಸುಧಾರಣೆ, ಅಭಿವೃದ್ಧಿ, ಎಲ್ಲರಿಗೂ ಸಮಾನ ಸವಲತ್ತು, ಪರಿಸರ ಸ್ನೇಹಿ ಅಭಿವೃದ್ಧಿಗೆ ಕೇಂದ್ರದ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

ಇನ್ನೇನು ಪ್ರಮುಖ ವಿಷಯಗಳು?
-2023ನೇ ವರ್ಷದ ಹಣಕಾಸು ವರ್ಷದಲ್ಲಿ ಅಭಿವೃದ್ಧಿ ಶೇಕಡಾ ೭ರ ದರದಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.
– ಉನ್ನತ ಮೌಲ್ಯದ ತೋಟಗಾರಿಕಾ ಅಭಿವೃದ್ಧಿಗೆ ಒಟ್ಟು ೨,೨೦೦ ಕೋಟಿ ರೂ. ಮೀಸಲು ಇಡಲಾಗಿದೆ.
– ಕೃಷಿ ಸಾಲ ಗುರಿಯನ್ನು ೨೦ ಲಕ್ಷ ಕೋಟಿ ರೂ.ಗೆ ಏರಿಸಲಾಗಿದೆ.
-ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಯೋಜನಾ ಗಾತ್ರವನ್ನು ೭೯,೦೦೦ ಕೋಟಿ ರೂ.ಗೆ ಏರಿಸಲಾಗಿದೆ.

Exit mobile version