Site icon Vistara News

2000 Notes Withdrawn: 2 ಸಾವಿರ ರೂ. ನೋಟು ಹಿಂಪಡೆದ ಬೆನ್ನಲ್ಲೇ ಆರ್‌ಬಿಐ ಮಾರ್ಗಸೂಚಿ ಪ್ರಕಟ; ಇದರಲ್ಲೇನಿದೆ?

RBI

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) 2 ಸಾವಿರ ರೂ. ನೋಟುಗಳನ್ನು (2000 Notes Withdrawn) ಹಿಂಪಡೆದಿದೆ. ಮೇ 23ರಿಂದ ಸೆಪ್ಟೆಂಬರ್‌ 30ರ ಅವಧಿಯಲ್ಲಿ ಜನರು ಎರಡು ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದಾಗಿದೆ. ಇದರ ಬೆನ್ಲಲೇ, ಆರ್‌ಬಿಐ ಬ್ಯಾಂಕ್‌ಗಳು ಏಕರೂಪವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಎರಡು ಸಾವಿರ ರೂಪಾಯಿ ನೋಟುಗಳ ಮಾನ್ಯತೆ ಬಗ್ಗೆ ಜಾಗೃತಿ ಮೂಡಿಸುವುದು, ನೋಟುಗಳ ವಿನಿಮಯ ಸೇರಿ ಎಲ್ಲ ಪ್ರಕ್ರಿಯೆಗಳನ್ನು ಏಕರೂಪವಾಗಿ ಪಾಲಿಸುವುದು ಸೇರಿ ಎಲ್ಲ ಬ್ಯಾಂಕ್‌ಗಳಿಗೆ ಆರ್‌ಬಿಐ ಮಾರ್ಗಸೂಚಿ ಹೊರಡಿಸಿದೆ. ಕ್ಲೀನ್‌ ನೋಟ್‌ ಪಾಲಿಸಿ ಅಡಿಯಲ್ಲಿ ಎರಡು ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಹಿಂಪಡೆಯಲಾಗಿದ್ದು, ಈಗ ನೋಟುಗಳ ವಿನಿಮಯವು ಸುಗಮವಾಗಿ ಆಗಲಿ ಎಂಬ ದೃಷ್ಟಿಯಿಂದ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು

  1. ಗ್ರಾಹಕರಿಗೆ ಎರಡು ಸಾವಿರ ರೂಪಾಯಿ ಮೌಲ್ಯದ ನೋಟುಗಳ ವಿತರಣೆಯನ್ನು ಕೂಡಲೇ ಬ್ಯಾಂಕ್‌ಗಳು ನಿಲ್ಲಿಸಬೇಕು
  2. ಎಟಿಎಂಗಳಲ್ಲೂ ಎರಡು ಸಾವಿರ ರೂಪಾಯಿ ಲಭ್ಯವಾಗದಂತೆ ನೋಡಿಕೊಳ್ಳಬೇಕು
  3. ಮೇ 23ರಿಂದ ಸೆಪ್ಟೆಂಬರ್‌ 30ರವರೆಗೆ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಎಕ್ಸ್‌ಚೇಂಜ್‌ ಮಾಡಿ ಕೊಡುವುದು
  4. ಕೆವೈಸಿ ಹಾಗೂ ರೆಗ್ಯುಲೇಟರಿ ನಿಯಮಗಳ ಅನ್ವಯ ಡೆಪಾಸಿಟ್‌ಗೆ ಯಾವುದೇ ಆಕ್ಷೇಪ ಮಾಡಕೂಡದು
  5. ದಾಖಲೆಯಿಲ್ಲದ ಅಪಾರ ಪ್ರಮಾಣದ ಠೇವಣಿ ಕುರಿತು ಬ್ಯಾಂಕ್‌ಗಳು ನಿಗಾ ವಹಿಸಬೇಕು
  6. ನೋಟುಗಳ ವಿನಿಮಯದ ವೇಳೆ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ ಯಾವುದೇ ತೊಂದರೆಯಾಗದಂತೆ ಬ್ಯಾಂಕ್‌ಗಳು ಸೌಲಭ್ಯ ಒದಗಿಸಬೇಕು

ಇದನ್ನೂ ಓದಿ: 2000 Notes Withdrawn: 2 ಸಾವಿರ ರೂ. ನೋಟು ವಾಪಸ್‌ ನಂತರ ಮುಂದೇನು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Exit mobile version