2000 Notes Withdrawn: 2 ಸಾವಿರ ರೂ. ನೋಟು ಹಿಂಪಡೆದ ಬೆನ್ನಲ್ಲೇ ಆರ್‌ಬಿಐ ಮಾರ್ಗಸೂಚಿ ಪ್ರಕಟ; ಇದರಲ್ಲೇನಿದೆ? Vistara News
Connect with us

ದೇಶ

2000 Notes Withdrawn: 2 ಸಾವಿರ ರೂ. ನೋಟು ಹಿಂಪಡೆದ ಬೆನ್ನಲ್ಲೇ ಆರ್‌ಬಿಐ ಮಾರ್ಗಸೂಚಿ ಪ್ರಕಟ; ಇದರಲ್ಲೇನಿದೆ?

2000 Notes Withdrawn: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಹಿಂಪಡೆದ ಬೆನ್ನಲ್ಲೇ ಎಲ್ಲ ಬ್ಯಾಂಕ್‌ಗಳು ಪಾಲಿಸಬೇಕಾದ ಏಕರೂಪದ ಮಾರ್ಗಸೂಚಿಗಳನ್ನು ಹೊರಡಿಸಿದೆ.

VISTARANEWS.COM


on

RBI
Koo

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) 2 ಸಾವಿರ ರೂ. ನೋಟುಗಳನ್ನು (2000 Notes Withdrawn) ಹಿಂಪಡೆದಿದೆ. ಮೇ 23ರಿಂದ ಸೆಪ್ಟೆಂಬರ್‌ 30ರ ಅವಧಿಯಲ್ಲಿ ಜನರು ಎರಡು ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದಾಗಿದೆ. ಇದರ ಬೆನ್ಲಲೇ, ಆರ್‌ಬಿಐ ಬ್ಯಾಂಕ್‌ಗಳು ಏಕರೂಪವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಎರಡು ಸಾವಿರ ರೂಪಾಯಿ ನೋಟುಗಳ ಮಾನ್ಯತೆ ಬಗ್ಗೆ ಜಾಗೃತಿ ಮೂಡಿಸುವುದು, ನೋಟುಗಳ ವಿನಿಮಯ ಸೇರಿ ಎಲ್ಲ ಪ್ರಕ್ರಿಯೆಗಳನ್ನು ಏಕರೂಪವಾಗಿ ಪಾಲಿಸುವುದು ಸೇರಿ ಎಲ್ಲ ಬ್ಯಾಂಕ್‌ಗಳಿಗೆ ಆರ್‌ಬಿಐ ಮಾರ್ಗಸೂಚಿ ಹೊರಡಿಸಿದೆ. ಕ್ಲೀನ್‌ ನೋಟ್‌ ಪಾಲಿಸಿ ಅಡಿಯಲ್ಲಿ ಎರಡು ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಹಿಂಪಡೆಯಲಾಗಿದ್ದು, ಈಗ ನೋಟುಗಳ ವಿನಿಮಯವು ಸುಗಮವಾಗಿ ಆಗಲಿ ಎಂಬ ದೃಷ್ಟಿಯಿಂದ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು

  1. ಗ್ರಾಹಕರಿಗೆ ಎರಡು ಸಾವಿರ ರೂಪಾಯಿ ಮೌಲ್ಯದ ನೋಟುಗಳ ವಿತರಣೆಯನ್ನು ಕೂಡಲೇ ಬ್ಯಾಂಕ್‌ಗಳು ನಿಲ್ಲಿಸಬೇಕು
  2. ಎಟಿಎಂಗಳಲ್ಲೂ ಎರಡು ಸಾವಿರ ರೂಪಾಯಿ ಲಭ್ಯವಾಗದಂತೆ ನೋಡಿಕೊಳ್ಳಬೇಕು
  3. ಮೇ 23ರಿಂದ ಸೆಪ್ಟೆಂಬರ್‌ 30ರವರೆಗೆ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಎಕ್ಸ್‌ಚೇಂಜ್‌ ಮಾಡಿ ಕೊಡುವುದು
  4. ಕೆವೈಸಿ ಹಾಗೂ ರೆಗ್ಯುಲೇಟರಿ ನಿಯಮಗಳ ಅನ್ವಯ ಡೆಪಾಸಿಟ್‌ಗೆ ಯಾವುದೇ ಆಕ್ಷೇಪ ಮಾಡಕೂಡದು
  5. ದಾಖಲೆಯಿಲ್ಲದ ಅಪಾರ ಪ್ರಮಾಣದ ಠೇವಣಿ ಕುರಿತು ಬ್ಯಾಂಕ್‌ಗಳು ನಿಗಾ ವಹಿಸಬೇಕು
  6. ನೋಟುಗಳ ವಿನಿಮಯದ ವೇಳೆ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ ಯಾವುದೇ ತೊಂದರೆಯಾಗದಂತೆ ಬ್ಯಾಂಕ್‌ಗಳು ಸೌಲಭ್ಯ ಒದಗಿಸಬೇಕು

ಇದನ್ನೂ ಓದಿ: 2000 Notes Withdrawn: 2 ಸಾವಿರ ರೂ. ನೋಟು ವಾಪಸ್‌ ನಂತರ ಮುಂದೇನು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ತಂತ್ರಜ್ಞಾನ

Aadhaar Services: ಆನ್‌ಲೈನ್ ಮೂಲಕ ಆಧಾರ್ ‘ಲಾಕ್’ ಮತ್ತು ‘ಅನ್‌ಲಾಕ್’ ಮಾಡುವುದು ಹೇಗೆ?

Aadhaar Services: ಸರ್ಕಾರಿ ಸೇವೆಗಳನ್ನು ಪಡೆಯಲು, ವಿಳಾಸ ಮತ್ತು ಗುರುತು ದೃಢೀಕರಣಕ್ಕೆ ಆಧಾರ್ ಅತ್ಯಗತ್ಯ ಸರ್ಕಾರಿ ಗುರುತಿನ ಪತ್ರವಾಗಿದೆ.

VISTARANEWS.COM


on

Edited by

Lock and unlock of aadhar services through online
Koo

ಬೆಂಗಳೂರು: ಕರ್ನಾಟಕದಲ್ಲಿ ಈಗ ಗ್ಯಾರಂಟಿಗಳ ಭರಾಟೆ. ಈ ಗ್ಯಾರಂಟಿ ಸೇವೆಗಳನ್ನು ಪಡೆಯಲು ಇತರ ಅಧಿಕೃತ ದಾಖಲೆಗಳ ಜತೆಗೆ ಆಧಾರ್ ಕೂಡ ಕಡ್ಡಾಯವಾಗಿಬೇಕು. ಹಾಗಾಗಿ, ಆಧಾರ್ ಮಾಡಿಸಿಕೊಳ್ಳಲು ಜನರು ಮುಗಿ ಬೀಳುತ್ತಿರುವ ವರದಿಗಳಾಗುತ್ತಿವೆ. ಗ್ಯಾರಂಟಿ ಮಾತ್ರವಲ್ಲದೇ ಕೇಂದ್ರವಾಗಲೀ, ರಾಜ್ಯ ಸರ್ಕಾರದ ಸೇವೆಗಳನ್ನು ಪಡೆಯಲು, ನಿಮ್ಮ ಅಧಿಕೃತ ವಿಳಾಸವನ್ನು ದೃಢೀಕರಿಸಲು ಈ ಆಧಾರ್ (Aadhaar Services) ಬೇಕೇ ಬೇಕು. ಆದರೆ, ಆಧಾರ್ ಮಾಹಿತಿ ಕಳುವಾದರೆ ಎಂಬ ಆತಂಕ ಇದ್ದೇ ಇರುತ್ತದೆ. ಬಳಕೆದಾರರಿಗೆ ಅಂಥದೊಂದು ಅನುಮಾನ ಮೂಡಿದರೆ, ನಿಮ್ಮ ಆಧಾರ್ ಸೇವೆಯನ್ನು ಲಾಕ್ (Lock) ಮಾಡಬಹುದು, ಅಗತ್ಯ ಎನಿಸಿದಾಗಿ ಮತ್ತೆ ಅನ್‌ಲಾಕ್ (Unlock) ಮಾಡಬಹುದು. ಅಂಥದೊಂದು ಅವಕಾಶವನ್ನು ಯುಐಡಿಎಐ ನೀಡಿದೆ.

ಬಳಕೆದಾರರ ಆಧಾರ್ ಸಂಖ್ಯೆಯ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ನಿವಾಸಿಗಳಿಗೆ ನಿಯಂತ್ರಣವನ್ನು ಒದಗಿಸಲು ಆಧಾರ್ ಸಂಖ್ಯೆಗಳನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಯುಐಡಿಎಐ ವ್ಯವಸ್ಥೆಯನ್ನು ಒದಗಿಸಿದೆ. ಬಳಕೆದಾರರು ಯುಐಡಿಎಐ ಜಾಲತಾಣ (www.myaadhaar.uidai.gov.in) ಅಥವಾ ಎಂಆಧಾರ್ (mAadhaar) ಆ್ಯಪ್ ಮೂಲಕ ಆಧಾರ್ ಲಾಕ್ ಮಾಡಬಹುದಾಗಿದೆ.

ಆಧಾರ್ ಹೇಗೆ ಲಾಕ್ ಮಾಡುವುದು?

ಎಸ್ಸೆಮ್ಮೆಸ್ ಮೂಲಕ: GVID ಟೈಪ್ ಮಾಡಿ ನಿಮ್ಮ ನಾಲ್ಕು ಅಥಾ ಎಂಟು ಅಂಕಿಗಳ ಯುಐಡಿ ನಂಬರ್ ಟೈಪ್ ಮಾಡಿ ಮತ್ತು ಅದನ್ನು 1947ಕೆ ಸೆಂಡ್ ಮಾಡಿದೆ. ಉದಾಹರಣೆ: GVID 7893 SMS to 1947

ವೆಬ್‌ಸೈಟ್ ಮೂಲಕ: ಯುಐಡಿಎಐ ವೆಬ್‌ಸೈಟ್ (https://resident.uidai.gov.in/aadhaar-lockunlock)ಗೆ ಭೇಟಿ ನೀಡಿ. ಹೋಮ್‌ಪುಟದಲ್ಲಿರುವ ಮೈ ಆಧಾರ್ ಸೆಕ್ಷನ್‌ನಲ್ಲಿರುವ ಲಾಕ್ ಆಧಾರ್ (Lock Aadhaar) ಮೇಲೆ ಕ್ಲಿಕ್ ಮಾಡಿ. ಬಳಿಕ ಯುಐಡಿ ಲಾಕ್ ಆಪ್ಷನ್ ಸೆಲೆಕ್ಟ್ ಮಾಡಿ. ಯುಐಡಿ ನಂಬರ್, ಹೆಸರು ಇತ್ಯಾದಿ ಮಾಹಿತಿಯನ್ನು ನಮೂದಿಸಿ. ಸೆಂಡ್ ಸೆಕ್ಯೂರಿಟಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್‌ಗೆ ಬರುವ ಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಆಗ ನಿಮ್ಮ ಆಧಾರ್ ಯಶಸ್ವಿಯಾಗಿ ಲಾಕ್ ಆಗುತ್ತದೆ.

ಆಧಾರ್ ಅನ್‌ಲಾಕ್ ಮಾಡುವುದು ಹೇಗೆ?

ಎಸ್ಸೆಮ್ಮೆಸ್ ಮೂಲಕ: RVID ಅಂತಾ ಟೈಪ್ ಮಾಡಿ ಸ್ಪೇಸ್ ಬಿಟ್ಟು ನಾಲ್ಕು ಅಥವಾ 8 ಅಂಕಿಗಳ ಯುಐಡಿ ನಂಬರ್ ಟೈಪ್ ಮಾಡಿ, 1947 ನಂಬರ್‌ಗೆ ಸೆಂಡ್ ಮಾಡಿ.

ಇದನ್ನೂ ಓದಿ: Aadhaar card : ಆಧಾರ್‌ ಜತೆ ನಿಮ್ಮ ಇ-ಮೇಲ್‌, ಮೊಬೈಲ್‌ ಲಿಂಕ್‌ ಆಗಿದೆಯೇ ? ಹೀಗೆ ಖಾತರಿಪಡಿಸಿಕೊಳ್ಳಿ

ವೆಬ್‌ಸೈಟ್ ಮೂಲಕ ಹೀಗೆ ಮಾಡಿ: ಇಲ್ಲಿ ಕೂಡ ಸೇನ್ ಲಾಕ್ ಮಾಡುವ ಪ್ರಕ್ರಿಯೇ ಫಾಲೋ ಮಾಡಬೇಕು. ಮೊದಲಿಗೆ ಯುಐಡಿಎಐಗೆ ಹೋಗಿ. ಬಳಿಕ ಅನ್‌ಲಾಕ್ ಆಯ್ಕೆಯ ಸೆಲೆಕ್ಟ ಮಾಡಿ. ಹೊಸ ವಿಐಡಿ ಮತ್ತುಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಸೆಂಡ್ ಒಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ. ಆಗ ನಿಮ್ಮ ಆಧಾರ್ ನಂಬರ್ ಯಶಸ್ವಿಯಾಗಿ ಅನ್‌ಲಾಕ್ ಆಗುತ್ತದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ದೇಶ

17 ವರ್ಷದ ಹೆಣ್ಣುಮಕ್ಕಳು ಮಗು ಹೆರುವ ಕಾಲವಿತ್ತು; ರೇಪ್‌ ಸಂತ್ರಸ್ತೆಯ ಗರ್ಭಪಾತ ಬೇಡವೆಂದ ಹೈಕೋರ್ಟ್

Viral News: ಅತ್ಯಾಚಾರಕ್ಕೀಡಾದ ಬಾಲಕಿಯು ಈಗ ಗರ್ಭ ಧರಿಸಿದ್ದು, ಆಕೆಯ ವಯಸ್ಸನ್ನು ಪರಿಗಣಿಸಿ ನ್ಯಾಯಾಲಯವು ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ. ಆದರೆ, ಇದಕ್ಕೆ ಗುಜರಾತ್‌ ಹೈಕೋರ್ಟ್‌ ನಿರಾಕರಿಸಿದೆ.

VISTARANEWS.COM


on

Edited by

Gujarat High Court On Termination Of Pregnancy
Koo

ಗಾಂಧಿನಗರ: 17 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೋಡಲು ಗುಜರಾತ್‌ ಹೈಕೋರ್ಟ್‌ ನಿರಾಕರಿಸಿದೆ. ಅತ್ಯಾಚಾರ ಸಂತ್ರಸ್ತೆ ಗರ್ಭ ಧರಿಸಿ ಈಗ ತಿಂಗಳಾಗಿದೆ. ಆಕೆಯ ಗರ್ಭಪಾತಕ್ಕೆ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್‌ ತಳ್ಳಿಹಾಕಿದೆ. ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು, “ಮೊದಲೆಲ್ಲ 17 ವರ್ಷದ ಹೆಣ್ಣುಮಕ್ಕಳು ಮಕ್ಕಳನ್ನು ಹೆರುತ್ತಿದ್ದರು, 14-15 ವರ್ಷಕ್ಕೆ ಮದುವೆಯಾಗುತ್ತಿದ್ದರು. ಇದೆಲ್ಲ ತಿಳಿಯಲು (Viral News) ಮನುಸ್ಮೃತಿ ಓದಿ” ಎಂದು ಕೂಡ ಹೇಳಿದೆ.

ಅತ್ಯಾಚಾರ ಸಂತ್ರಸ್ತೆಯ ವಯಸ್ಸನ್ನು ಪರಿಗಣಿಸಿ, ಆಕೆಗೆ ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಸಂತ್ರಸ್ತ ಬಾಲಕಿಯ ತಂದೆಯು ಅರ್ಜಿ ಸಲ್ಲಿಸಿದ್ದರು. “ಹಿಂದಿನ ಕಾಲದಲ್ಲಿ 18 ವರ್ಷ ತುಂಬುವ ಮೊದಲೇ ಹೆಣ್ಣುಮಕ್ಕಳು ಮದುವೆಯಾಗಿ, ಮಕ್ಕಳನ್ನು ಹೆರುತ್ತಿದ್ದರು ಎಂಬುದು ಗೊತ್ತಿರಲಿ. ಇದನ್ನು ನೀವು ಓದಿಲ್ಲವೆಂದರೆ, ಮನುಸ್ಮೃತಿ ಓದಿ ತಿಳಿದುಕೊಳ್ಳಿ” ಎಂದು ನ್ಯಾಯಮೂರ್ತಿ ಸಮೀರ್‌ ಜೆ ದಾವೆ ಹೇಳಿದರು.

ಸಂತ್ರಸ್ತೆಯ ತಂದೆ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿಕಂದರ್‌ ಸೈಯದ್‌, “ಆಗಸ್ಟ್‌ 18ರಂದು ಬಾಲಕಿಯು ಮಗು ಹೆರುವ ಸಾಧ್ಯತೆ ಇದೆ. ವೈದ್ಯರು ಡೇಟ್‌ ಕೊಟ್ಟಿದ್ದಾರೆ. ಆಕೆಯ ವಯಸ್ಸನ್ನು ಪರಿಗಣಿಸಿ ಗರ್ಭಪಾತಕ್ಕೆ ಅನುಮತಿ ನೀಡಬೇಕು” ಎಂದು ವಾದ ಮಂಡಿಸಿದರು. ಆದರೆ, ನ್ಯಾಯಾಲಯವು, “ಬಾಲಕಿ ಹಾಗೂ ಮಗು ಆರೋಗ್ಯವಾಗಿದ್ದರೆ ಗರ್ಭಪಾತಕ್ಕೆ ಅನುಮತಿ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿತು. ಹಾಗೆಯೇ, ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿತು.

ಇದನ್ನೂ ಓದಿ: Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

ರಾಜಕೋಟ್‌ನಲ್ಲಿರುವ ಸಿವಿಲ್‌ ಆಸ್ಪತ್ರೆಯ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಅವರು ಬಾಲಕಿ ಹಾಗೂ ಆಕೆಯ ಹೊಟ್ಟೆಯಲ್ಲಿರುವ ಮಗುವಿನ ವೈದ್ಯಕೀಯ ತಪಾಸಣೆಯನ್ನು ತುರ್ತಾಗಿ ಮಾಡಬೇಕು ಎಂದು ಗುಜರಾತ್‌ ಹೈಕೋರ್ಟ್‌ ನಿರ್ದೇಶನ ನೀಡಿದೆ. ವೈದ್ಯಕೀಯ ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ ನ್ಯಾಯಾಲಯವು, ಜೂನ್‌ 15ಕ್ಕೆ ವಿಚಾರಣೆ ಮುಂದೂಡಿದೆ.

ಸಹೋದರನಿಂದಲೇ ಗರ್ಭ ಧರಿಸಿದ 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಕೆಲ ದಿನಗಳ ಹಿಂದೆ ಕೇರಳ ಹೈಕೋರ್ಟ್‌ ಅನುಮತಿ ನೀಡಿತ್ತು. ಗರ್ಭಪಾತ ಮಾಡಿಸಲು ಅನುಮತಿ ಕೋರಿ ಬಾಲಕಿಯ ತಂದೆ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ್ದ ಏಕ ಸದಸ್ಯ ಪೀಠದ ನ್ಯಾ. ಜಿಯಾದ್‌ ರೆಹಮಾನ್‌ ಅವರು ಗರ್ಭಪಾತ ಮಾಡಿಸಲು ಅನುಮತಿ ನೀಡಿದ್ದರು.

“ಗರ್ಭಪಾತಕ್ಕೆ ಅನುಮತಿ ನೀಡದೆ ಹೋದರೆ ಸಾಮಾಜಿಕ ವ್ಯವಸ್ಥೆ ಹಾಗೂ ಬಾಲಕಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿತು. ವೈದ್ಯಕೀಯ ಮಂಡಳಿಯು ಗರ್ಭಪಾತದ ಕುರಿತು ವರದಿ ಸಲ್ಲಿಸಿತ್ತು. 15 ವರ್ಷದ ಬಾಲಕಿಗೆ ಗರ್ಭಪಾತಕ್ಕೆ ಅನುಮತಿ ನೀಡದಿದ್ದರೆ ಸಾಮಾಜಿಕ ವ್ಯವಸ್ಥೆ ಹಾಗೂ ಆಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಹಾಗಾಗಿ, ಗರ್ಭಪಾತಕ್ಕೆ ಅನುಮತಿ ಸಿಕ್ಕಿತ್ತು.

Continue Reading

ಕರ್ನಾಟಕ

Nirmala Sitharaman: ಬೆಂಗ್ಳೂರಲ್ಲಿ ಸದ್ದಿಲ್ಲದೆ ನಡೆಯಿತು ವಿತ್ತ ಸಚಿವೆ ನಿರ್ಮಲಾ ಪುತ್ರಿಯ ಮದ್ವೆ! ಆಶೀರ್ವದಿಸಿದ ಅದಮಾರು ಶ್ರೀಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರ ಪುತ್ರಿ ಪರಕಾಲ ಅವರು ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳವಾಗಿ ವಿವಾಹ ಕಾರ್ಯಕ್ರಮ ನಡೆಸಲಾಗಿದೆ.

VISTARANEWS.COM


on

Edited by

Nirmala Sitharaman daughter wedding
Koo

ಬೆಂಗಳೂರು: ಈಗೆಲ್ಲ ಮದುವೆ ಎನ್ನುವುದೇ ಆಡಂಬರ. ಅದರಲ್ಲೂ ಸಮಾಜದಲ್ಲಿ ಒಂದು ಉನ್ನತ ಸ್ಥಾನದಲ್ಲಿ ಇದ್ದುಬಿಟ್ಟರಂತೂ ಕೇಳುವುದೇ ಬೇಡ. ಕೋಟಿ ಕೋಟಿ ಹಣ ಸುರಿದು ಅದ್ಧೂರಿ ಮದುವೆ ಮಾಡಿಬಿಡುತ್ತಾರೆ. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಾತ್ರ ಈ ಐಷಾರಾಮಿ ರೂಢಿಯನ್ನು ಮುರಿದು, ತಮ್ಮ ಮಗಳಿಗೆ ಮದುವೆ (Marriage) ಮಾಡಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರ ಮಗಳು ಪರಕಾಲ ವಂಗಮಾಯಿ ಅವರು ಪ್ರತೀಕ್‌ ಅವರ ಜತೆ ಗುರುವಾರ ವಿವಾಹವಾಗಿದ್ದಾರೆ. ಬೆಂಗಳೂರಿನಲ್ಲಿರುವ ಖಾಸಗಿ ಹೋಟೆಲ್‌ ಒಂದರಲ್ಲಿ ವಿವಾಹ ಕಾರ್ಯಕ್ರಮ ಜರುಗಿದೆ. ಈ ವೇಳೆ ಹಾಜರಿದ್ದ ಉಡುಪಿಯ ಅದಮಾರು ಮಠದ ಶ್ರೀಗಳು ಹಾಜರಿದ್ದು, ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ಯಾವುದೇ ರಾಜಕಾರಣಿಯನ್ನು ಮದುವೆಗೆ ಆಮಂತ್ರಿಸದೆ ಕೆಲವೇ ಕೆಲವು ಬಂಧುಗಳು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಗಿದೆ ಎಂದು ವರದಿಯಿದೆ.

ಇದನ್ನೂ ಓದಿ: Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು
ಬ್ರಾಹ್ಮಣ ಕುಟುಂಬದವರಾಗಿರುವ ನಿರ್ಮಲಾ ಅವರು ಬ್ರಾಹ್ಮಣ ಸಂಪ್ರದಾಯದಂತೆಯೇ ಮಗಳ ಮದುವೆ ನೆರವೇರಿಸಿದ್ದಾರೆ. ಉಡುಪಿಯ ಅದಮಾರು ಮಠದ ಆಶೀರ್ವಾದ ಮತ್ತು ಸೂಚನೆಗಳಂತೆ ಮದುವೆ ನಡೆಸಲಾಗಿದೆ.

ಪರಕಾಲ ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಸ್ನಾತಕೋತ್ತರ ಪದವಿ ಮತ್ತು ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂನಿಂದ ಪತ್ರಿಕೋದ್ಯಮದಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಸದ್ಯ ಮಿಂಟ್ ಲೌಂಜ್‌ನಲ್ಲಿ ವಿಶಿಷ್ಟ ಬರಹಗಾರರಾಗಿದ್ದಾರೆ. ಸಿಂಗಾಪುರ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನಿಂದ ಪದವಿ ಪಡೆದಿರುವ ನಿರ್ಮಲಾ ಅವರ ಅಳಿಯ ಪ್ರತೀಕ್‌ ದೋಷಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿದ್ದಾರೆ.

Continue Reading

ದೇಶ

ಬಾಲಕಿಯನ್ನು ರೇಪ್ ಮಾಡಿ, ಇನ್‌ಸ್ಟಾದಲ್ಲಿ ಫೋಟೋ ಷೇರ್ ಮಾಡಿದ ಕಾಮುಕ ಗಾಯಕ ಈಗ ಅಂದರ್!

Bhojpuri Singer Arrested: ಭೋಜಪುರಿ ಗಾಯಕನೊಬ್ಬ 13 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದ.

VISTARANEWS.COM


on

Edited by

Man arrested
ಸಾಂದರ್ಭಿಕ ಚಿತ್ರ.
Koo

ಗುರುಗ್ರಾಮ: ಬಾಲಕಿಯನ್ನು (13 Year Old girl) ಅತ್ಯಾಚಾರ (Rape) ಮಾಡಿ, ಆಕೆಯ ಆಕ್ಷೇಪಾರ್ಹ ಭಾವಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ ಆರೋಪದ ಮೇರೆಗೆ ಭೋಜಪುರಿ ಗಾಯಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ(Bhojpuri Singer Arrested). ಬಂಧಿತನನ್ನು 21 ವರ್ಷದ ಅಭಿಷೇಕ್ (Abhishek) ಎಂದು ಗುರುತಿಸಲಾಗಿದೆ. ಬಿಹಾರದ (Bihar) ಮೂಲದ ಈ ಯುವಕನನ್ನು ಭೋಜಪುರಿ ಸಿಂಗರ್ ಬಬುಲ್ ಬಿಹಾರಿ ಎಂದೂಕರೆಯಲಾಗುತ್ತದೆ. ಯುಟ್ಯೂಬ್ ಚಾನೆಲ್‌ನಲ್ಲಿ ಇವರಿಗೆ 27 ಸಾವಿರಕ್ಕೂ ಅಧಿಕ ಜನರು ಫಾಲೋವರ್ಸ್ ಇದ್ದಾರೆ.

ಆರೋಪಿ ಗಾಯಕ ದಿಲ್ಲಿಯ ರಾಜೀವ್ ನಗರದಲ್ಲಿ ಎರಡು ವರ್ಷಗಳ ಹಿಂದೆ ವಾಸವಾಗಿದ್ದರು. ಆಗ 13 ವರ್ಷದ ಬಾಲಕಿಯ ಸ್ನೇಹ ಸಂಪಾದಿಸಿದ ಆರೋಪಿ, ಆಕೆಯನ್ನು ಹೊಟೇಲ್ ರೂಮ್‌ಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕ್ಷೇಪಾರ್ಹ ಚಿತ್ರಗಳನ್ನು ಸೆರೆ ಹಿಡಿದಿದ್ದಾನೆ. ಈ ಘಟನೆಯ ಬಳಿಕ ಬಾಲಕಿ ಆತನಿಂದ ದೂರವಾಗಿದ್ದಾಳೆ. ಅಲ್ಲದೇ, ಈ ಘಟನೆಯ ಬಗ್ಗೆ ಯಾರೊಂದಿಗೆ ಆಕೆ ಮಾಹಿತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಕೆಲವು ದಿನಗಳ ಹಿಂದೆ ಆರೋಪಿ, ಸಂತ್ರಸ್ತೆಯ ಆಕ್ಷೇಪಾರ್ಹ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಫೋಟೋಗಳನ್ನು ನೋಡಿದ ಬಳಿಕ, ಸಂತ್ರಸ್ತೆಯ ಕುಟುಂಬಸ್ಥರು ಆಕೆಯನ್ನು ಪ್ರಶ್ನಿಸಿದ್ದಾರೆ. ಆಗ, ಆಕೆ ಎಲ್ಲ ಮಾಹಿತಿಯನ್ನು ಅವರೆದುರಿಗೆ ಹೇಳಿದ್ದಾಳೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Crime : ಬಾಡಿಗೆ ಸರಿಯಾಗಿ ಕೊಡಲಿಲ್ಲವೆಂದು ಕುಡುಕನನ್ನೇ ರೇಪ್​ ಮಾಡಿದ ಆಟೋ ಚಾಲಕ!

ಸಂತ್ರಸ್ತೆಗೆ ಕೌನ್ಸೆಲಿಂಗ್ ಮಾಡಿದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಗಾಯಕನ ಪೋಕ್ಸೋ ಹಾಗೂ ಐಟಿ ಕಾಯ್ದೆ ಉಲ್ಲಂಘನೆಯ ಆರೋಪಗಳನ್ನು ಹೊರಿಸಿದ್ದಾರೆ. ಪ್ರಕರಣ ದಾಖಲಾದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಆತನನ್ನು ಸಿಟಿ ಕೋರ್ಟ್‌ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ವಕ್ತಾರ ಸುಭಾಶ್ ಬೋಕನ್ ಅವರು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
Actress Nayanthara
South Cinema10 mins ago

Actress Nayanthara: ಅವಳಿ ಮಕ್ಕಳ ಜತೆ ಕ್ಯೂಟ್‌ ಆಗಿ ಫೋಟೊಶೂಟ್‌ ಮಾಡಿಸಿಕೊಂಡ ನಯನತಾರಾ!

rajeev sen and Charu Asopa divorce
ಕಿರುತೆರೆ12 mins ago

Celebrity Divorce: ಸಂಸಾರದಲ್ಲಿ ಬಿರುಕು, ಪತಿಯಿಂದ ದೂರವಾದ ಕಿರುತೆರೆ ನಟಿ

World Cup schedule
ಕ್ರಿಕೆಟ್16 mins ago

ICC World Cup 2023: ಏಕದಿನ ವಿಶ್ವಕಪ್‌ ವೇಳಾಪಟ್ಟಿ ಬಿಡುಗಡೆಗೆ ಮುಹೂರ್ತ ನಿಗದಿ

bhola shankar movie set
South Cinema18 mins ago

Chiranjeevi: ಅದ್ಧೂರಿಯಾಗಿದೆ ಭೋಲಾ ಶಂಕರ್‌ ಸೆಟ್‌; ಮತ್ತೊಮ್ಮೆ ಕ್ಯಾಬ್‌ ಡ್ರೈವರ್ ಪಾತ್ರದಲ್ಲಿ ಚಿರು

Darbar Movie Review
South Cinema22 mins ago

Darbar Movie Review: ಇದು ರಾಜಕಾರಣದ ʻದರ್ಬಾರ್‌ʼ, ಮತದಾರರ ಕಾರುಬಾರು!

western ghats in rain
ಪ್ರಮುಖ ಸುದ್ದಿ35 mins ago

Monsoon Travel: ಮಲೆನಾಡಿನ ಮಳೆಹಾಡಿನ ಹೊಸತನ! ರಾಜ್ಯದ ಈ ಟಾಪ್‌ 5 ತಾಣಗಳಿಗೆ ಮಳೆಯಲ್ಲೊಮ್ಮೆ ಭೇಟಿ ಕೊಡಿ

Monsoon Fashion 2023
ಫ್ಯಾಷನ್1 hour ago

Monsoon Fashion 2023: ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟ ಮಾನ್ಸೂನ್‌ ಸೀಸನ್‌ ವೈಬ್ರೆಂಟ್‌ ಔಟ್‌ಫಿಟ್ಸ್!

Chamarajanagar oxygen tragedy and Dinesh Gundu Rao
ಆರೋಗ್ಯ1 hour ago

Dinesh Gundu Rao: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಮರು ತನಿಖೆ; ರೆಡಿ ಆಗ್ತಿದೆ ಡಿಪಿಆರ್!

Manja Thread dead person
ಕರ್ನಾಟಕ1 hour ago

Manja Thread: ಯಾರೋ ಹಾರಿಸಿದ ಗಾಳಿಪಟದ ಮಾಂಜಾ ದಾರ ತೆಗೆಯಿತು ಅಮಾಯಕನ ಪ್ರಾಣ!

Lock and unlock of aadhar services through online
ತಂತ್ರಜ್ಞಾನ1 hour ago

Aadhaar Services: ಆನ್‌ಲೈನ್ ಮೂಲಕ ಆಧಾರ್ ‘ಲಾಕ್’ ಮತ್ತು ‘ಅನ್‌ಲಾಕ್’ ಮಾಡುವುದು ಹೇಗೆ?

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ13 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Cancellation of tenders for 108 ambulances and Dinesh Gundu rao
ಆರೋಗ್ಯ5 hours ago

Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

Meghalaya Villagers Chase Bangladesh soldiers
ದೇಶ5 hours ago

Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು

snake mate in chamarajnagar 2
ಕರ್ನಾಟಕ6 hours ago

Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

Rain in mangalore
ಉಡುಪಿ7 hours ago

Rain News: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌; ಮಂಗಳೂರಲ್ಲಿ ಚಿಟಪಟ ಮಳೆ

Rain in koppal
ಉಡುಪಿ22 hours ago

Weather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ

youths rescued in Kaveri river
ಕರ್ನಾಟಕ23 hours ago

Video Viral: ತಲಕಾಡಿನ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ!

Elephant attack in muttunga wildlife sanctuary
ಕರ್ನಾಟಕ1 day ago

Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್‌ ಹಿಡಿದು ಓಡೋಡಿ ಬಂದ!

abhishek ambareesh wedding Reception
ಕರ್ನಾಟಕ2 days ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

N Chaluvarayaswamy about Congress guarantee
ಕರ್ನಾಟಕ2 days ago

Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!

horoscope today love and horoscope
ಪ್ರಮುಖ ಸುದ್ದಿ3 days ago

Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!

ಟ್ರೆಂಡಿಂಗ್‌

error: Content is protected !!