Site icon Vistara News

Swiggy App | ಅತಿ ಹೆಚ್ಚು ಆರ್ಡರ್ ಮಾಡಿದ ಫುಡ್ ಯಾವುದು? ಬೆಂಗಳೂರಿಗ 16 ಲಕ್ಷ ಕೊಟ್ಟು ಖರೀದಿಸಿದ್ದೇನು?

Zomato Bizarre Order

ನವದೆಹಲಿ: 2022ರಲ್ಲಿ ಸ್ವಿಗ್ಗಿ ಆ್ಯಪ್‌ನಲ್ಲಿ (Swiggy App) ಅತಿ ಹೆಚ್ಚು ಆರ್ಡರ್ ಮಾಡಿದ ಫುಡ್ ಯಾವುದು? ಈ ಪ್ರಶ್ನೆಗೆ ಸ್ವಿಗ್ಗಿ ಆ್ಯಪ್ ಉತ್ತರವನ್ನು ನೀಡಿದ್ದು, ಬಿರಿಯಾನಿ ಅತಿ ಹೆಚ್ಚು ಆರ್ಡರ್‌ ಮಾಡಲಾದ ಫುಡ್ ಆಗಿದೆ. ಇನ್‌ಫ್ಯಾಕ್ಟ್‌ , ಕಳೆದ ವರ್ಷದಲ್ಲಿ ಮಾತ್ರವಲ್ಲದೇ ಏಳು ವರ್ಷಗಳಲ್ಲಿ ಬಿರಿಯಾನಿಯು ಅತಿ ಹೆಚ್ಚ ಆರ್ಡರ್ ಮಾಡಲಾದ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಇನ್ನೂ ಆಶ್ಚರ್ಯ ಎಂದರೆ, ಬೆಂಗಳೂರಿನ ವ್ಯಕ್ತಿಯೊಬ್ಬರು 16 ಲಕ್ಷ ರೂ.ಮೌಲ್ಯದ ದಿನಸಿ ವಸ್ತುಗಳನ್ನು ಸ್ವಿಗ್ಗಿ ಇನ್ಸ್‌ಟಾಮಾರ್ಟ್ ಮೂಲಕ ಖರೀದಿಸಿದ್ದಾರೆ.

ಸ್ವಿಗ್ಗಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸಾಕಷ್ಟು ಆಶ್ಚರ್ಯಕರ ಸಂಗತಿಗಳಿವೆ. ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬ 75,378 ರೂ. ಆಹಾರವನ್ನು ಸಿಂಗಲ್ ಆರ್ಡರ್ ಮೂಲಕವೇ ಖರೀದಿಸಿದ್ದಾನೆ. ಪುಣೆ ಮೂಲದ ವ್ಯಕ್ತಿಯೊಬ್ಬರು ತಮ್ಮ ಟೀಮ್‌ಗಾಗಿ 71,299 ರೂ. ಕೊಟ್ಟು ಬರ್ಗರ್ಸ್ ಮತ್ತು ಫ್ರೈಸ್ ಖರೀದಿಸಿದ್ದಾರೆ. ಆದರೆ, ಇಲ್ಲಕ್ಕಿಂತ ಹೆಚ್ಚು ಕುತೂಹಲ ಹುಟ್ಟಿಸುವುದು ಬೆಂಗಳೂರಿನ ವ್ಯಕ್ತಿಯೊಬ್ಬ 16 ಲಕ್ಷ ರೂ. ದಿನಸಿ ವಸ್ತುಗಳ ಆರ್ಡರ್!

ಈ ವರ್ಷ ಭಾರತದಲ್ಲಿ ಹೆಚ್ಚು ಆರ್ಡರ್ ಮಾಡಿದ ಆಹಾರ ಪದಾರ್ಥಗಳ ಸಂಪೂರ್ಣ ಪಟ್ಟಿಯನ್ನು ಸ್ವಿಗ್ಗಿ ಹಂಚಿಕೊಂಡಿದೆ. ಈ ಪಟ್ಟಿಯನ್ನು ಗಮನಿಸಿದರೆ, ಭಾರತೀಯರು ಭಾರತೀಯರು ಚಿಕನ್, ಬಿರಿಯಾನಿಯನ್ನು ಎಷ್ಟು ಇಷ್ಟಪಡುತ್ತಾರೆಂಬುದು ಗೊತ್ತಾಗುತ್ತದೆ. ಚಿಕನ್, ಬಿರಿಯಾನಿ ನಂತರದ ಸ್ಥಾನದಲ್ಲಿ ಮಸಾಲಾ ದೋಸೆ, ಚಿಕನ್ ಫ್ರೈಡ್ ರೈಸ್, ಪನೀರ್ ಬಟರ್ ಮಸಾಲಾ, ಬಟರ್ ನಾನ್, ವೆಜ್ ಫ್ರೈಡ್ ರೈಸ್, ವೆಜ್ ಬಿರಿಯಾನಿ ಮತ್ತು ತಂದೂರಿ ಚಿಕನ್‌ಗಳು ಬಿರಿಯಾನಿಗಳಿವೆ.

ಇದನ್ನೂ ಓದಿ | Swiggy new offer| ಸ್ವಿಗ್ಗಿ ಸಂಸ್ಥೆಯ ಸಿಬ್ಬಂದಿಗೆ ಎರಡನೇ ಉದ್ಯೋಗ ಮಾಡಲು ಅವಕಾಶ

Exit mobile version