Site icon Vistara News

Google Search In India 2022 | ಪನೀರ್‌ ಪಸಂದಾ To ಐಪಿಎಲ್‌, 2022ರಲ್ಲಿ ಜನ ಹೆಚ್ಚು ಗೂಗಲ್‌ ಸರ್ಚ್‌ ಮಾಡಿದ್ದೇನು?

Google Search In India 2022

ನವದೆಹಲಿ: ಗೂಗಲ್‌ ಈಗ ಎಲ್ಲರ ಗುರುವಾಗಿದೆ. ಇಂಟರ್‌ನೆಟ್‌ ಎಲ್ಲರ ಅವಿಭಾಜ್ಯ ಅಂಗವೇ ಆಗಿದೆ. ಸ್ಮಾರ್ಟ್‌ಫೋನ್‌ಗಳು ಮನೆ, ಮನ ತಲುಪಿದ ಕಾರಣ ಗೂಗಲ್‌ನಲ್ಲಿ ಸರ್ಚ್‌ ಮಾಡುವುದು ನಮ್ಮ ರೂಢಿಯೂ ಆಗಿದೆ. ಅದರಲ್ಲೂ, ಭಾರತೀಯರು ಆದ್ಯತೆಯ ಮೇರೆಗೆ ಗೂಗಲ್‌ನಲ್ಲಿ ಚಿತ್ರ-ವಿಚಿತ್ರ ಅಂಶಗಳನ್ನು ಸರ್ಚ್‌ (Google Search In India 2022) ಮಾಡುವುದೂ ಇದೆ. ೨೦೨೨ಕ್ಕೆ ವಿದಾಯ ಹೇಳಲು ಕೆಲವೇ ದಿನಗಳು ಬಾಕಿ ಇರುವ ಕಾರಣ ೨೦೨೨ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಏನೇನು ಸರ್ಚ್‌ ಮಾಡಿದರು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಟಾಪ್‌ ೩ ಸರ್ಚ್‌
ದೇಶೀಯ ಕ್ರಿಕೆಟ್‌ ಟೂರ್ನಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಾಪ್‌ ಟ್ರೆಂಡಿಂಗ್‌ನಲ್ಲಿದ್ದರೆ, ಕೊರೊನಾ ನಿರೋಧಕ ಲಸಿಕೆಯ ನೋಂದಣಿ ಪೋರ್ಟಲ್‌ ಕೋವಿನ್‌ ದ್ವಿತೀಯ ಹಾಗೂ ಫಿಫಾ ವರ್ಲ್ಡ್‌ ಕಪ್‌ ತೃತೀಯ ಟ್ರೆಂಡಿಂಗ್‌ನಲ್ಲಿದೆ. ನಂತರದ ಸ್ಥಾನದಲ್ಲಿ ನ್ಯಾಟೊ, ಪಿಎಫ್‌ಐ, ಅಗ್ನಿಪಥ ಯೋಜನೆ, ಆರ್ಟಿಕಲ್‌ ೩೭೦ ಇವೆ.

ಸಿನಿಮಾ ವಿಭಾಗದಲ್ಲಿ ಕೆಜಿಎಫ್‌-೨ ದಾಖಲೆ
ಯಶ್‌ ಅಭಿನಯದ, ವಿಶ್ವಾದ್ಯಂತ ಛಾಪು ಮೂಡಿಸಿದ, ಕನ್ನಡ ಸಿನಿಮಾರಂಗವನ್ನು ಜಗತ್ತಿಗೆ ಪರಿಚಯಿಸಿದ ಕೆಜಿಎಫ್‌ ಚಾಪ್ಟರ್‌-೨ ಸಿನಿಮಾ ವಿಭಾಗದಲ್ಲಿ ಅತಿ ಹೆಚ್ಚು ಜನ ಗೂಗಲ್‌ ಮಾಡಿದ್ದಾರೆ. ಹಿಂದಿಯ ಬ್ರಹ್ಮಾಸ್ತ್ರ ಹಾಗೂ ಕೆಜಿಎಫ್‌-೨ ಅಗ್ರ ಸ್ಥಾನ ಪಡೆದಿವೆ. ದಿ ಕಾಶ್ಮೀರ್‌ ಫೈಲ್ಸ್‌, ದೃಶ್ಯಂ ೨, ಆರ್‌ಆರ್‌ಆರ್‌, ಪುಷ್ಪ: ದಿ ರೈಸ್‌, ಕಾಂತಾರ ಸಿನಿಮಾಗಳನ್ನು ಹೆಚ್ಚಿನ ಜನ ಸರ್ಚ್‌ ಮಾಡಿದ್ದಾರೆ.

ತಿನಿಸು, ರೆಸಿಪಿಯಲ್ಲಿ ಏನು ಸರ್ಚ್?
ಭಾರತವು ವಿಭಿನ್ನ ತಿನಿಸುಗಳ ಆಗರವಾಗಿರುವ ಕಾರಣ ರೆಸಿಪಿ ವಿಭಾಗದಲ್ಲಿ ಚಿತ್ರಿವಿಚಿತ್ರ ಹೆಸರುಗಳುಳ್ಳ ತಿನಿಸುಗಳನ್ನು ಗೂಗಲ್‌ ಸರ್ಚ್‌ ಮಾಡಲಾಗಿದೆ. ಪನೀರ್‌ ಪಸಂದಾ, ಮಲಾಯಿ ಕೊಫ್ತ, ಪನೀರ್‌ ಬುರ್ಜಿ, ಮೋಡಕ್‌, ಚಿಕನ್‌ ಸೂಪ್‌, ಪೋರ್ನ್‌ಸ್ಟಾರ್‌ ಮಾರ್ಟಿನಿ, ಪ್ಯಾನ್‌ ಕೇಕ್‌, ಸೆಕ್ಸ್‌ ಆನ್‌ ದಿ ಬೀಚ್‌ (ಪಾನೀಯ)ಗಳನ್ನು ಹೆಚ್ಚು ಜನ ಸರ್ಚ್‌ ಮಾಡಿದ್ದಾರೆ.

ಇದನ್ನೂ ಓದಿ | Birthday party | ಮುಸ್ಲಿಂ ಯುವಕರ ಜತೆ ಹಿಂದು ಯುವತಿಯರ ಬರ್ತ್‌ ಡೇ ಪಾರ್ಟಿ: ವಿಡಿಯೊ ವೈರಲ್‌, ಆಕ್ರೋಶ

Exit mobile version