Site icon Vistara News

Opinion polls: ಮಹಾರಾಷ್ಟ್ರದಲ್ಲಿ ಇಂದೇ ಎಲೆಕ್ಷನ್ ನಡೆದ್ರೆ, ಯಾರಿಗೆ ಗೆಲುವು? ಸಮೀಕ್ಷೆ ಏನು ಹೇಳುತ್ತದೆ?

Maharashtra Assembly

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ (Maharashtra Assembly Election) ಒಂದು ವರ್ಷವಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಜೀ ನ್ಯೂಸ್ -ಮ್ಯಾಟ್ರಿಜ್ (Zee News-Matrize Opinion polls) ಸಮೀಕ್ಷೆಯಲ್ಲಿ ಕುತೂಹಲಕರ ಸಂಗತಿಗಳು ವ್ಯಕ್ತವಾಗಿವೆ. ಸದ್ಯ ಬಿಜೆಪಿ- ಶಿಂಧೆ ನೇತೃತ್ವದ ಶಿವಸೇನೆ ಸರ್ಕಾರವಿದೆ(BJP- Shinde Shiv Sena). 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಸದ್ಯ ಚುನಾವಣೆ ನಡೆದರೆ ಬಿಜೆಪಿ-ಶಿಂಧೆ ಶಿವಸೇನೆ ಕೂಟವು ಮತ್ತೆ ಅಧಿಕಾರಕ್ಕೇರುವ ಸಾಧ್ಯತೆಗಳಿವೆ. ಪ್ರತಿಪಕ್ಷ ಕೂಟವಾಗಿರುವ ಎಂವಿಎ (ಮಹಾ ವಿಕಾಸ್ ಅಘಾಡಿ) ಅಧಿಕಾರ ಕನಸಿನ ಮಾತಾಗಲಿದೆ.

ಕಳೆದ ಚುನಾವಣೆ ಫಲಿತಾಂಶ ಬಳಿಕ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮುರಿದ ಬಿದ್ದ ಹಿನ್ನೆಲೆಯಲ್ಲಿ ಶಿವಸೇನೆ-ಎನ್‌ಸಿಪಿ- ಕಾಂಗ್ರೆಸ್ ಪಕ್ಷಗಳು ಮಹಾ ವಿಕಾಸ್ ಅಘಾಡಿ ಹೆಸರಿನಲ್ಲಿ ಕೂಟ ರಚಿಸಿಕೊಂಡು ಸರ್ಕಾರ ರಚಿಸಿದ್ದವು. ಆದರೆ, ಕಳೆದ ವರ್ಷವಷ್ಟೇ ಏಕನಾಥ ಶಿಂಧೆ ನೇತೃತ್ವದಲ್ಲಿ ಶಾಸಕರು ಬಂಡೆದ್ದು, ಪಕ್ಷವನ್ನು ಒಡೆದರು. ಪರಿಣಾಮ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗಿ, ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನೆಯ ಕೂಟವು ಅಧಿಕಾರಕ್ಕೆ ಬಂತು.

ಈಗಿನ ಒಪಿನಿಯನ್ ಪೋಲ್ ಪ್ರಕಾರ, ಇಂದೇ ಚುನಾವಣೆ ನಡೆದರೆ ಬಿಜೆಪಿ- ಶಿಂಧೆ ಶಿವಸೇನೆ ನೇತೃತ್ವದ ಎನ್‌ಡಿಎ ಶೇಕಡಾ 46 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಇದೇ ವೇಳೆ ಎಂವಿಎಯ ಮತ ಹಂಚಿಕೆ ಶೇಕಡಾ 35 ಮತ್ತು ಎಂಎನ್‌ಎಸ್ ಶೇಕಡಾ 3 ರಷ್ಟು ಮತಗಳನ್ನು ಪಡೆಯಬಹುದು. 2019ರಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಉದ್ಧವ್ ಶಿವಸೇನೆಯ ನಿರ್ಧಾರ ಸರಿಯೋ ತಪ್ಪೋ ಎಂಬ ಪ್ರಶ್ನೆಗೆ, ಶೇ.57ರಷ್ಟು ಜನರು ತಪ್ಪು ಎಂದಿದ್ದಾರೆ. ಎನ್‌ಡಿಎ ಮೈತ್ರಿ ಉತ್ತಮವೇ ಅಥವಾ ಎಂವಿಎ ಎಂದು ಕೇಳಿದಾಗ, ಶೇಕಡಾ 48 ರಷ್ಟು ಜನರು ಎನ್‌ಡಿಎ ಪರವಾಗಿ ಮತ ಹಾಕಿದ್ದರೆ, ಶೇಕಡಾ 32 ರಷ್ಟು ಜನರು ಎಂವಿಎಗೆ ಮತ ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ: Maharashtra Politics: ಮಹಾರಾಷ್ಟ್ರ ಮೈತ್ರಿ ಸರ್ಕಾರದಲ್ಲಿ ಬಿರುಕು? ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಶಿಂಧೆ ಪುತ್ರ

ಮಹಾರಾಷ್ಟ್ರದಲ್ಲೇ ಇಂದೇ ಚುನಾವಣೆ ನಡೆದರೆ, ಬಿಜೆಪಿ-ಸೇನೆ 165-185 ಸ್ಥಾನಗಳನ್ನು ಗಳಿಸುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆಯುವ ಸಾಧ್ಯತೆಯಿದೆ. ಮತ್ತೊಂದೆಡೆ, ಕಾಂಗ್ರೆಸ್ ನೇತೃತ್ವದ ಎಂವಿಎ 88-118 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಸುಮಾರು 2-5 ಸ್ಥಾನಗಳನ್ನು ಪಡೆಯಬಹುದು. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಇತರರು 12-22 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ದೇಶದ ಇನ್ನಷ್ಟು ಕೂತಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version