Site icon Vistara News

Wholesale Inflation: ಸತತ 6ನೇ ತಿಂಗಳು ಋಣಾತ್ಮಕ ಹಾದಿಯಲ್ಲಿ ಸಗಟು ಹಣದುಬ್ಬರ!

Wholesale inflation is negative for six month

ನವದೆಹಲಿ: ಸಗಟು ಬೆಲೆ ಸೂಚ್ಯಂಕವನ್ನು (Wholesale Price Index) ಆಧರಿಸಿ ಭಾರತದಲ್ಲಿ ಸಗಟು ಹಣದುಬ್ಬರವು (Wholesale Inflation) ಸೆಪ್ಟೆಂಬರ್‌ನಿಂದ ಸತತ ಆರನೇ ತಿಂಗಳು ಋಣಾತ್ಮಕ ವಲಯದಲ್ಲಿ ಮುಂದುವರಿದಿದೆ ಎಂದು ಅಧಿಕೃತ ಅಂಕಿಅಂಶಗಳು ಸೋಮವಾರ ತಿಳಿಸಿವೆ. ಪ್ರಸಕ್ತ ಸಾಲಿನ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರುವ ಋಣಾತ್ಮಕಕ್ಕೆ ಜಾರಿತು. ಅದೇ ರೀತಿ, ಕೋವಿಡ್ ಆರಂಭದ ದಿನಗಳಲ್ಲಿ ಅಂದರೆ 2020 ಜುಲೈನಲ್ಲಿ ಸಗಟು ಬೆಲೆ ಸೂಚ್ಯಂಕವು ಋಣಾತ್ಮಕವಾಗಿತ್ತು (Negative). ಸೆಪ್ಟೆಂಬರ್ ಸಗಟು ಹಣದುಬ್ಬರವು ಆಗಸ್ಟ್‌ನಲ್ಲಿ (-) 0.52% ವಿರುದ್ಧ (-) 0.26% ರಷ್ಟಿತ್ತು ಮತ್ತು ಹಿಂದಿನ ಜುಲೈ ತಿಂಗಳಿನಲ್ಲಿ (-) 1.23% ರಷ್ಟಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿಯು ತೋರಿಸಿದೆ.

ಹಿಂದಿನ ವರ್ಷದ ತಿಂಗಳಿಗೆ ಹೋಲಿಸಿದರೆ ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳು, ಖನಿಜ ತೈಲಗಳು, ಜವಳಿ, ಮೂಲ ಲೋಹಗಳು ಮತ್ತು ಆಹಾರ ಉತ್ಪನ್ನಗಳ ಬೆಲೆಗಳಲ್ಲಿನ ಕುಸಿತದಿಂದಾಗಿ ಸೆಪ್ಟೆಂಬರ್‌ನಲ್ಲಿ ಹಣದುಬ್ಬರವಿಳಿತ ಆರಂಭವಾಗಿದೆ ಎಂದು ಅಂಕಿ ಸಂಖ್ಯೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 12ರಂದು ಹಣದುಬ್ಬರ ಮೂರು ತಿಂಗಳ ಕನಿಷ್ಠ ಶೇ.5.02ಕ್ಕೆ ಇಳಿಕೆಯಾಗಿದೆ ಎಂದು ಸಾಂಖ್ಯಿಕ ಸಚಿವಾಲಯವು ಮಾಹಿತಿ ನೀಡಿದ ಬೆನ್ನಲ್ಲೇ ಈ ಅಂಕಿ ಅಂಶಗಳು ಹೊರ ಬಿದ್ದಿವೆ.

ಈ ಸುದ್ದಿಯನ್ನೂ ಓದಿ: Inflation : ಸಗಟು ಹಣದುಬ್ಬರ ಕಳೆದ 3 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆ, ಈಗ ಮೈನಸ್‌ 3.48%

ಪ್ರತಿ ತಿಂಗಳ 14ನೇ ದಿನಾಂಕದಂದ ಸರ್ಕಾರವು ಮಾಸಿಕ ಆಧರಿತವಾಗಿ ಸಗಟು ದರ ಸೂಚ್ಯಂಕ ಅಂಶಗಳನ್ನು ಬಿಡುಗಡೆ ಮಾಡುತ್ತದೆ. ಸಾಂಸ್ಥಿಕ ಮೂಲಗಳಿಂದ ಪಡೆದ ಡೇಟಾ ಮತ್ತು ದೇಶಾದ್ಯಂತ ಆಯ್ದ ಉತ್ಪಾದನಾ ಘಟಕಗಳಿಂದ ಪಡೆದ ಮಾಹಿತಿಯನ್ನು ಆಧರಿಸಿ ಡೇಟಾವನ್ನು ಬಿಡುಗಡೆ ಮಾಡಲಾಗುತ್ತದೆ.

2022ರ ಅಕ್ಟೋಬರ್‌ನಲ್ಲಿ ಒಟ್ಟಾರೆ ಸಗಟು ಹಣದುಬ್ಬರವು ಶೇ.8.39ರಷ್ಟಿತ್ತು. ಅಲ್ಲಿಂದ ಕುಸಿತವನ್ನು ದಾಖಲಿಸುತ್ತಾ ಬಂದಿದೆ. ಗಮನಾರ್ಹವಾಗಿ, ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಕಳೆದ ವರ್ಷ ಸೆಪ್ಟೆಂಬರ್‌ವರೆಗೆ ಸತತವಾಗಿ 18 ತಿಂಗಳುಗಳ ಕಾಲ ಎರಡಂಕಿಯಲ್ಲಿತ್ತು. ಏತನ್ಮಧ್ಯೆ, ಭಾರತದಲ್ಲಿನ ಚಿಲ್ಲರೆ ಹಣದುಬ್ಬರವು ಮತ್ತೆ ಸೆಪ್ಟೆಂಬರ್‌ನಲ್ಲಿ ಆರ್‌ಬಿಐ 2-6% ಮಟ್ಟಕ್ಕೆ ಮರಳಿದೆ. ಆದರೆ ಇದು ಸರಾಸರಿ 4%ಕ್ಕಿಂತ ಹೆಚ್ಚಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು 5.02% ರಷ್ಟಿತ್ತು.

ವಾಣಿಜ್ಯ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version