Site icon Vistara News

‘ಯಾಕ್‌ ಹೀಗ್‌ ಮೋಸ ಮಾಡ್ದೆ’ ಎನ್ನುತ್ತಲೇ ಪ್ರೇಯಸಿಯನ್ನು ನಡು ರಸ್ತೆಯಲ್ಲಿ ಬಡಿದು ಕೊಂದ ಪ್ರೇಮಿ; Video ಇದೆ

Mumbai News

Why Did You Do This To Me?; Man Kills Ex With Huge Spanner Near Mumbai

ಮುಂಬೈ: ಬದಲಾದ ಕಾಲಘಟ್ಟದಲ್ಲಿ ಲವ್‌ ಬ್ರೇಕಪ್‌ (Love Breakup) ಎನ್ನುವುದು ತುಂಬ ಸಾಮಾನ್ಯ ಎನಿಸಿದೆ. ಆಕರ್ಷಣೆಗೆ ಒಳಗಾಗಿ ಪ್ರೀತಿಸುವುದು, ಒಂದು ವರ್ಷ ಜತೆಗೆ ತಿರುಗಾಡಿ, ಸಣ್ಣ ಭಿನ್ನಾಭಿಪ್ರಾಯ ಬಂದರೂ ಪ್ರೀತಿಗೆ ತಿಲಾಂಜಲಿ ಇಡುವುದು ಯುವಕ-ಯುವತಿಯರಿಗೆ ರೂಢಿಯಾಗಿದೆ. ಆದರೆ, ಕೆಲವೊಂದು ಪ್ರಕರಣಗಳಲ್ಲಿ ಬ್ರೇಕಪ್‌ಗಳು ಹಿಂಸೆ, ಕೊಲೆಗೂ ಕಾರಣವಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ (Maharashtra) ಮುಂಬೈನಲ್ಲಿ (Mumbai) ವ್ಯಕ್ತಿಯೊಬ್ಬ ಲವ್‌ ಬ್ರೇಕಪ್‌ ಎಂದಿದ್ದಕ್ಕೆ ಪ್ರೇಯಸಿಯನ್ನು ನಡು ರಸ್ತೆಯಲ್ಲಿಯೇ ಸ್ಪ್ಯಾನರ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ ಕೃತ್ಯದ ಭೀಕರ ವಿಡಿಯೊ ಈಗ ವೈರಲ್‌ ಆಗಿದೆ.

ಮುಂಬೈ ಬಳಿಯ ವಸಾಯ್‌ ಪ್ರದೇಶದ ರಸ್ತೆಯೊಂದರಲ್ಲಿ 20 ವರ್ಷದ ಆರತಿ ಯಾದವ್ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ 29 ವರ್ಷದ ರೋಹಿತ್‌ ಯಾದವ್‌ ಎಂಬಾತ ಸ್ಪ್ಯಾನರ್‌ ಹಿಡಿದುಕೊಂಡೇ ಓಡಿ ಬಂದು ಯುವತಿ ಮೇಲೆ ದಾಳಿ ಮಾಡಿದ್ದಾನೆ. ಯುವತಿ ತಲೆಗೆ, ಎದೆಗೆ ಸ್ಪ್ಯಾನರ್‌ನಿಂದ ಹೊಡೆದು, ಆಕೆ ನೆಲಕ್ಕೆ ಬಿದ್ದ ಮೇಲೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ಒಂದಿಬ್ಬರು ವ್ಯಕ್ತಿಯನ್ನು ತಡೆಯಲು ಪ್ರಯತ್ನಿಸಿದರೂ ಅಷ್ಟೊತ್ತಿಗಾಗಲೇ ಗಂಭೀರವಾಗಿ ಗಾಯಗೊಂಡಿದ್ದ ಆರತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಲವ್‌ ಬ್ರೇಕಪ್‌ ಆಗಿದ್ದೇ ಕಾರಣ?

ಆರತಿ ಯಾದವ್‌ ಹಾಗೂ ರೋಹಿತ್‌ ಯಾದವ್‌ ಅವರು ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ನಡುವೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕೆಲ ದಿನಗಳ ಹಿಂದೆ ಆರತಿ ಯಾದವ್‌ ಈತನಿಗೆ ಬ್ರೇಕಪ್‌ ಎಂದಿದ್ದಳು. ಇನ್ಯಾವತ್ತೂ ನನ್ನನ್ನು ನೋಡಲು ಬರಬೇಡ, ಮಾತನಾಡಿಸಬೇಡ, ಕಾಲ್‌ ಮಾಡಿ ತೊಂದರೆ ಕೊಡಬೇಡ ಎಂದಿದ್ದಳು. ಇದರಿಂದ ರೋಹಿತ್‌ ಯಾದವ್‌ ನೊಂದಿದ್ದ. ಅಲ್ಲದೆ, ಆರತಿ ಯಾದವ್‌ ಬೇರೊಬ್ಬನ ಜತೆ ಪ್ರೀತಿಯ ಬಲೆಗೆ ಸಿಲುಕಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿತ್ತು.

ಬೇರೆಯವನನ್ನು ಪ್ರೀತಿಸುತ್ತಿದ್ದಾಳೆ ಎಂದು ಭಾವಿಸಿದ ರೋಹಿತ್‌ ಯಾದವ್‌, ನನಗೆ ಸಿಗದವಳು ಯಾರಿಗೂ ಸಿಗಬಾರದು ಎಂದು ಭಾವಿಸಿದ್ದಾನೆ. ಇದೇ ಕಾರಣಕ್ಕಾಗಿ ತುಂಬಿದ ರಸ್ತೆಯಲ್ಲಿಯೇ ಸ್ಪ್ಯಾನರ್‌ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಬಳಿಕ, “ನನಗೇಕೆ ಹೀಗೆ ಮಾಡಿದೆ” ಎಂದು ಹತಾಶಯ ಧ್ವನಿಯಲ್ಲಿ ಕಿರುಚಿದ್ದಾನೆ. ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Exit mobile version