Site icon Vistara News

Old Parliament Building: ಐತಿಹಾಸಿಕ ಹಳೇ ಸಂಸತ್ ಭವನವನ್ನು ಕೆಡವುತ್ತಾರಾ?

Parliament

ನವದೆಹಲಿ: ಭಾರತದ ಸಂಸದೀಯ ವ್ಯವಸ್ಥೆಯು (Indian Parliamentary System) ಇನ್ನು ಮುಂದೆ ಹೊಸ ಸಂಸತ್ ಭವನದಿಂದ (New Parliament Building) ನಡೆಯಲಿದೆ. ಮಂಗಳವಾರ ವಿಶೇಷ ಸಂಸತ್ ಅಧಿವೇಶನ ಕಲಾಪವು ಹೊಸ ಸಂಸತ್ ಭವನದಲ್ಲಿ ಆರಂಭವಾಗಲಿದ್ದು, ಇದರೊಂದಿಗೆ ಹಳೆಯ ಸಂಸತ್ ಭವನ (Old Parliament Building) ನೇಪಥ್ಯಕ್ಕೆ ಸರಿಯಲಿದೆ. ಹಾಗಿದ್ದರೆ, ಹಳೇ ಸಂಸತ್ ಭವನ ನೆಲ ಸಮ ಮಾಡುತ್ತಾರಾ? ಆ ಕಟ್ಟಡ ಏನಾಗುತ್ತದೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ಸಾಂಪ್ರದಾಯಿಕ ಸಂಸತ್ತಿನ ಕಟ್ಟಡವು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾತ್ರವಲ್ಲ, ಅದರ ನಂತರ ದೇಶದ ಉದಯಕ್ಕೂ ಸಾಕ್ಷಿಯಾಗಿದೆ. ಸ್ವಾಂತ್ರ್ಯೋತ್ತರ 75 ವರ್ಷಗಳ ಇತಿಹಾಸದಲ್ಲಿ ಅನೇಕ ಮಹತ್ವದ ಘಟನೆಗಳನ್ನು, ಬೆಳವಣಿಗೆಗಳನ್ನು ಈ ಕಟ್ಟಡವು ಕಂಡಿದೆ.

ಕೆಲವು ವರದಿಗಳ ಪ್ರಕಾರ, ಈ ಹಳೇ ಸಂಸತ್ ಭವನವನ್ನು ವಸ್ತು ಸಂಗ್ರಾಲಯವಾಗಿ ರೂಪಿಸಲಾಗುತ್ತಿದೆ. ಆದರೆ, ಕಟ್ಟಡವನ್ನು ಕೆಡವಲಾಗುವುದಿಲ್ಲ ಮತ್ತು ಸಂಸತ್ತಿನ ಕಾರ್ಯಕ್ರಮಗಳಿಗೆ ಹೆಚ್ಚು ಕ್ರಿಯಾತ್ಮಕ ಸ್ಥಳಗಳನ್ನು ಒದಗಿಸಲು ಅದನ್ನು ಮರು ಬಳಕೆ ಮಾಡಲಾಗುತ್ತಿದೆ ಎಂದು ಎಂದು ಸರ್ಕಾರಿ ಮೂಲಗಳು ಹೇಳುತ್ತವೆ. ದೇಶದ ಪುರಾತತ್ವ ಆಸ್ತಿಯಾಗಿರುವ ಈ ಐತಿಹಾಸಿಕ ಕಟ್ಟಡವನ್ನು ಸಂರಕ್ಷಿಸಲಾಗುವುದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: New Parliament Building: ಹೊಸ ಸಂಸತ್ ಭವನ ಫಲಕ ಅನಾವರಣ; ಸರ್ವ ಧರ್ಮ ಪ್ರಾರ್ಥನೆ

2021ರಲ್ಲಿ, ಆಗಿನ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರಾಜ್ಯಸಭೆಗೆ ಹಳೆ ಸಂಸತ್ ಭವನದು ಕುರಿತಾಗಿ ಮಾಹಿತಿ ನೀಡಿದ್ದರು. ಅಸ್ತಿತ್ವದಲ್ಲಿರುವ ಕಟ್ಟಡವನ್ನು ರಿಪೇರಿ ಮಾಡಿ, ಪರ್ಯಾಯ ಬಳಕೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದ್ದರು.

ಸೂಕ್ಷ್ಮತೆಯ ಕಾರಣಕ್ಕಾಗಿ ರಾಷ್ಟ್ರೀಯ ದಾಖಲೆಗಳನ್ನು ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು. ಇದರಿಂದಾಗಿ ಹಳೆಯ ಸಂಸತ್ ಕಟ್ಟಡಕ್ಕೆ ಹೆಚ್ಚಿನ ಸ್ಥಳಾವಕಾಶ ಹೊಂದಲಿದೆ. ಹಳೆಯ ಕಟ್ಟಡದ ಒಂದು ಭಾಗವನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಬಹುದು ಎಂದು ಕೆಲವು ವರದಿಗಳು ಹೇಳುತ್ತವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version