Old Parliament Building: ಐತಿಹಾಸಿಕ ಹಳೇ ಸಂಸತ್ ಭವನವನ್ನು ಕೆಡವುತ್ತಾರಾ? Vistara News
Connect with us

ದೇಶ

Old Parliament Building: ಐತಿಹಾಸಿಕ ಹಳೇ ಸಂಸತ್ ಭವನವನ್ನು ಕೆಡವುತ್ತಾರಾ?

Old Parliament Building: 96 ವಸಂತಗಳನ್ನು ಕಂಡಿರುವ ಹಳೆ ಸಂಸತ್ ಭವನ ಇನ್ನು ಭಾರತದ ಪುರಾತತ್ವ ಆಸ್ತಿಯಾಗಿ ಬದಲಾಗಿದೆ. ಈ ಕಟ್ಟಡದ ಪರ್ಯಾಯ ಬಳಕೆಗೆ ಸರ್ಕಾರ ಪ್ಲ್ಯಾನ್ ಮಾಡಿದೆ.

VISTARANEWS.COM


on

Parliament
Koo

ನವದೆಹಲಿ: ಭಾರತದ ಸಂಸದೀಯ ವ್ಯವಸ್ಥೆಯು (Indian Parliamentary System) ಇನ್ನು ಮುಂದೆ ಹೊಸ ಸಂಸತ್ ಭವನದಿಂದ (New Parliament Building) ನಡೆಯಲಿದೆ. ಮಂಗಳವಾರ ವಿಶೇಷ ಸಂಸತ್ ಅಧಿವೇಶನ ಕಲಾಪವು ಹೊಸ ಸಂಸತ್ ಭವನದಲ್ಲಿ ಆರಂಭವಾಗಲಿದ್ದು, ಇದರೊಂದಿಗೆ ಹಳೆಯ ಸಂಸತ್ ಭವನ (Old Parliament Building) ನೇಪಥ್ಯಕ್ಕೆ ಸರಿಯಲಿದೆ. ಹಾಗಿದ್ದರೆ, ಹಳೇ ಸಂಸತ್ ಭವನ ನೆಲ ಸಮ ಮಾಡುತ್ತಾರಾ? ಆ ಕಟ್ಟಡ ಏನಾಗುತ್ತದೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ಸಾಂಪ್ರದಾಯಿಕ ಸಂಸತ್ತಿನ ಕಟ್ಟಡವು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾತ್ರವಲ್ಲ, ಅದರ ನಂತರ ದೇಶದ ಉದಯಕ್ಕೂ ಸಾಕ್ಷಿಯಾಗಿದೆ. ಸ್ವಾಂತ್ರ್ಯೋತ್ತರ 75 ವರ್ಷಗಳ ಇತಿಹಾಸದಲ್ಲಿ ಅನೇಕ ಮಹತ್ವದ ಘಟನೆಗಳನ್ನು, ಬೆಳವಣಿಗೆಗಳನ್ನು ಈ ಕಟ್ಟಡವು ಕಂಡಿದೆ.

ಕೆಲವು ವರದಿಗಳ ಪ್ರಕಾರ, ಈ ಹಳೇ ಸಂಸತ್ ಭವನವನ್ನು ವಸ್ತು ಸಂಗ್ರಾಲಯವಾಗಿ ರೂಪಿಸಲಾಗುತ್ತಿದೆ. ಆದರೆ, ಕಟ್ಟಡವನ್ನು ಕೆಡವಲಾಗುವುದಿಲ್ಲ ಮತ್ತು ಸಂಸತ್ತಿನ ಕಾರ್ಯಕ್ರಮಗಳಿಗೆ ಹೆಚ್ಚು ಕ್ರಿಯಾತ್ಮಕ ಸ್ಥಳಗಳನ್ನು ಒದಗಿಸಲು ಅದನ್ನು ಮರು ಬಳಕೆ ಮಾಡಲಾಗುತ್ತಿದೆ ಎಂದು ಎಂದು ಸರ್ಕಾರಿ ಮೂಲಗಳು ಹೇಳುತ್ತವೆ. ದೇಶದ ಪುರಾತತ್ವ ಆಸ್ತಿಯಾಗಿರುವ ಈ ಐತಿಹಾಸಿಕ ಕಟ್ಟಡವನ್ನು ಸಂರಕ್ಷಿಸಲಾಗುವುದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: New Parliament Building: ಹೊಸ ಸಂಸತ್ ಭವನ ಫಲಕ ಅನಾವರಣ; ಸರ್ವ ಧರ್ಮ ಪ್ರಾರ್ಥನೆ

2021ರಲ್ಲಿ, ಆಗಿನ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರಾಜ್ಯಸಭೆಗೆ ಹಳೆ ಸಂಸತ್ ಭವನದು ಕುರಿತಾಗಿ ಮಾಹಿತಿ ನೀಡಿದ್ದರು. ಅಸ್ತಿತ್ವದಲ್ಲಿರುವ ಕಟ್ಟಡವನ್ನು ರಿಪೇರಿ ಮಾಡಿ, ಪರ್ಯಾಯ ಬಳಕೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದ್ದರು.

ಸೂಕ್ಷ್ಮತೆಯ ಕಾರಣಕ್ಕಾಗಿ ರಾಷ್ಟ್ರೀಯ ದಾಖಲೆಗಳನ್ನು ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು. ಇದರಿಂದಾಗಿ ಹಳೆಯ ಸಂಸತ್ ಕಟ್ಟಡಕ್ಕೆ ಹೆಚ್ಚಿನ ಸ್ಥಳಾವಕಾಶ ಹೊಂದಲಿದೆ. ಹಳೆಯ ಕಟ್ಟಡದ ಒಂದು ಭಾಗವನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಬಹುದು ಎಂದು ಕೆಲವು ವರದಿಗಳು ಹೇಳುತ್ತವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

India Canada Row: ಉಗ್ರ ನಿಜ್ಜರ್‌ ಪರ ನಿಂತ ಜಸ್ಟಿನ್‌ ಟ್ರುಡೋ ವಿರುದ್ಧ ಕೆನಡಾದಲ್ಲೇ ಆಕ್ರೋಶ; ಏನಾಗ್ತಿದೆ ನೋಡಿ

India Canada Row: ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೆನಡಾದ ಹೆಮ್ಮೆಯ ನಾಗರಿಕ ಎಂಬಂತೆ ಬಿಂಬಿಸುತ್ತಿರುವ ಜಸ್ಟಿನ್‌ ಟ್ರುಡೋ ವಿರುದ್ಧವೇ ಕೆನಡಾ ಪತ್ರಕರ್ತರು, ಲೇಖಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

VISTARANEWS.COM


on

Edited by

Justin Trudeau
Koo

ಒಟ್ಟಾವ: ಅಧಿಕಾರ ಉಳಿಸಿಕೊಳ್ಳಲು ಖಲಿಸ್ತಾನಿಗಳ ಪರವಾಗಿ ನಿಂತಿರುವ ಜಸ್ಟಿನ್‌ ಟ್ರುಡೋ ವಿರುದ್ಧವೇ ಕೆನಡಾದಲ್ಲಿ ಆಕ್ರೋಶ (India Canada Row) ವ್ಯಕ್ತವಾಗುತ್ತಿದೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಮಹಾನ್‌ ವ್ಯಕ್ತಿ ಎಂಬಂತೆ ಬಿಂಬಿಸಿದ ಕುರಿತು ಕೆನಡಾ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯನ್ನು ಸಂಭ್ರಮಿಸಿ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಮಾಡಿದ ಹಳೆಯ ವಿಡಿಯೊ ಈಗ ವೈರಲ್‌ ಆಗಿದ್ದು, ಇಂಥ ವ್ಯಕ್ತಿಯನ್ನು ಬೆಂಬಲಿಸಿದ ಕಾರಣಕ್ಕಾಗಿ ಟ್ರುಡೋ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

“ಇಂದಿರಾ ಗಾಂಧಿಯನ್ನು ನಾವು ಹತ್ಯೆ ಮಾಡಿದೆವು. ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ವೈದ್ಯ ದೊಡ್ಡ ಕಮಾಂಡರ್‌ ರೀತಿ ವರ್ತಿಸುತ್ತಿದ್ದರು. ನಮ್ಮ ತಂಟೆಗೆ ಬಂದವರನ್ನೆಲ್ಲ ನಾವು ಆತ್ಮಾಹುತಿ ಬಾಂಬ್‌ ದಾಳಿ ಮೂಲಕವೇ ಕೊನೆಗಾಣಿಸಿದ್ದೇವೆ” ಎಂದು ಹರ್ದೀಪ್‌ ಸಿಂಗ್‌ ನಿಜ್ಜರ್‌ ಹೇಳಿದ ಹಳೇ ವಿಡಿಯೊ ಈಗ ವೈರಲ್‌ ಆಗಿದೆ. ಈ ವಿಡಿಯೊವನ್ನು ಕೆನಡಾದ ಕೀಯನ್‌ ಬೆಕ್ಸ್‌ಟೆ ಎಂಬ ಪತ್ರಕರ್ತರೊಬ್ಬರು ಮೊದಲು ಪೋಸ್ಟ್‌ ಮಾಡಿದ್ದು, ಟ್ರುಡೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್‌ ಆದ ವಿಡಿಯೊ

“ಹತ್ಯೆಗೀಡಾದ ಉಗ್ರನು ದೊಡ್ಡ ಮೋಟಿವೇಶನಲ್‌ ಸ್ಪೀಕರ್‌ (ಪ್ರಖರ ಭಾಷಣಕಾರ) ಆಗಿದ್ದ. ಆತನು ಆತ್ಮಾಹುತಿ ದಾಳಿ ಮಾಡಿರುವುದನ್ನು ಒಪ್ಪಿದ್ದಾನೆ. ಇವನನ್ನು ಭಾರತ ಹತ್ಯೆ ಮಾಡಿದೆಯೋ, ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಈತನಂತೂ ಸಂಭಾವಿತ ಅಥವಾ ಮುಗ್ಧ ಅಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ” ಎಂದು ಕೀಯನ್‌ ಬ್ರೆಕ್ಸ್‌ಟೆ ಹೇಳಿದ್ದಾರೆ. ಇನ್ನು ಕೆನಡಾ ಲೇಖಕರೊಬ್ಬರನ್ನು ಈ ಪೋಸ್ಟ್‌ಅನ್ನು ರಿಪೋಸ್ಟ್‌ ಮಾಡಿದ್ದು, “ಇಂತಹ ವ್ಯಕ್ತಿಗಳಿಂದಲೇ ಕೆನಡಾದಲ್ಲಿ ಇಂದು ಗೋಜಲು ವಾತಾವರಣ ನಿರ್ಮಾಣವಾಗಿದೆ” ಎಂದಿದ್ದಾರೆ. ಹಾಗೆಯೇ ಟ್ರುಡೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: India Canada Row: ಆನೆ ಜತೆ ಇರುವೆ ಜಗಳವಾಡುತ್ತಿದೆ! ಕೆನಡಾಗೆ ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಗೇಲಿ!

ಕೆನಡಾದಲ್ಲಿ ಜೂನ್‌ 18ರಂದು ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್‌ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. “ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಅವರು ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ಹೇಳುತ್ತಲೇ ಇಂತಹ ಆರೋಪ ಮಾಡಿದ್ದಾರೆ. ಮತ್ತೊಂದೆಡೆ, ಜಸ್ಟಿನ್‌ ಟ್ರುಡೋ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ, ತನಿಖೆಗೆ ಭಾರತ ಸಹಕಾರ ನೀಡಬೇಕು ಎಂದಿದೆ. ಆದರೆ, ಸರಿಯಾದ ಸಾಕ್ಷ್ಯಾಧಾರ ಬೇಕು ಎಂದು ಭಾರತ ಸ್ಪಷ್ಟಪಡಿಸಿದೆ.

Continue Reading

ತಂತ್ರಜ್ಞಾನ

Apple Iphone : ಐಫೋನ್ ಬಳಕೆದಾರರೇ ಇಲ್ಲಿ ಕೇಳಿ; ನಿಮಗೊಂದು ಸೆಕ್ಯುರಿಟಿ ಅಲರ್ಟ್​ ಕೊಟ್ಟಿದೆ ಕೇಂದ್ರ ಸರ್ಕಾರ

ಐಫೋನ್ 6ಎಸ್, ಐಫೋನ್ 7 ಸರಣಿ, (Apple Iphone) ಐಫೋನ್ 8 ಸರಣಿ ಮತ್ತು ಐಫೋನ್ ಎಸ್ಇ ಮೊದಲ ತಲೆಮಾರಿನ ಸೇರಿದಂತೆ ಹಳೆಯ ಮಾದರಿಗಳು ಸಹ ದುರ್ಬಲವಾಗಿವೆ ಎಂದು ಸಿಇಆರ್​ಟಿ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ತಿಳಿಸಿದೆ.

VISTARANEWS.COM


on

iphone 7
Koo

ನವದೆಹಲಿ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್​​ಟಿ -ಇನ್) ಭಾರತದಲ್ಲಿ ಐಫೋನ್ (Apple Iphone) ಬಳಕೆದಾರರಿಗೆ ಭದ್ರತಾ ಎಚ್ಚರಿಕೆ ನೀಡಿದೆ. ಐಫೋನ್ 6ಎಸ್, ಐಫೋನ್ 7 ಸರಣಿ, ಐಫೋನ್ 8 ಸರಣಿ ಮತ್ತು ಐಫೋನ್ ಎಸ್ಇ ಮೊದಲ ತಲೆಮಾರಿನ ಸೇರಿದಂತೆ ಹಳೆಯ ಮಾದರಿಗಳು ದುರ್ಬಲವಾಗಿವೆ ಎಂದು ಸಿಇಆರ್ಟಿ -ಇನ್ ತನ್ನ ಅಧಿಕೃತ ವೆಬ್​​ಸೈಟ್​​ನಲ್ಲಿ ಉಲ್ಲೇಖಿಸಿದೆ. ಐಪ್ಯಾಡ್ ಏರ್, ಪ್ರೊ ಮತ್ತು ಮಿನಿ ಸೇರಿದಂತೆ ಐಪ್ಯಾಡ್ ಬಳಕೆದಾರರು ಐಪ್ಯಾಡ್​ ಒಎಸ್​ಗಳನ್ನು ಅಪ್​ಡೇಟ್​ ಮಾಡುವಂತೆ ಸೂಚಿಸಲಾಗಿದೆ.

ನಿಮ್ಮ ಐಫೋನ್ ಅನ್ನು ಅಪ್​ಡೇಡ್​ ಮಾಡಲು ಸೆಟ್ಟಿಂಗ್ಸ್​ > ಜನರಲ್ > ಸಾಫ್ಟ್ ವೇರ್ ಅಪ್​ಡೇಡ್​ ಆಯ್ಕೆ ಮಾಡಿಕೊಳ್ಳಬೇಕು . ಇದೇ ವಿಧಾನವು ಐಪ್ಯಾಡ್ ಬಳಕೆದಾರರಿಗೂ ಅನ್ವಯಿಸುತ್ತದೆ.

ಕೆರ್ನಲ್​ನಲ್ಲಿ ಅಸಮರ್ಪಕ ಇನ್​ಪುಟ್​ ವ್ಯಾಲಿಡೇಷನ್​ ” ಮತ್ತು “ವೆಬೆ್​ಕಿಟ್​ನ ಸಮಸ್ಯೆಗಳಲ್ಲಿ ಅಸಮರ್ಪಕ ಸ್ಟೇಟ್​ ಮ್ಯಾನೇಜ್ಮೆಂಟ್​ ಕಾರಣದಿಂದಾಗಿ ಆಪಲ್ ಐಒಎಸ್ ಮತ್ತು ಐಪ್ಯಾಡ್​ ಒಎಸ್​​ಗಳು ದುರ್ಬಲಗೊಂಡಿವೆ ಎಂದು ಸಿಇಆರ್​ಟಿ -ಇನ್ ಹೇಳಿದೆ. ಕೆರ್ನಲ್ ಯಾವುದೇ ಆಪರೇಟಿಂಗ್ ಸಿಸ್ಟಮ್ಸ್​ ಕೇಂದ್ರವಾಗಿದೆ, ಆದರೆ ವೆಬ್​ಕಿಟ್​ ಆಪಲ್ ಸಫಾರಿ ಬ್ರೌಸರ್​ನ ಹಿಂದಿರುವ ಪ್ರಮುಖ ತಂತ್ರಜ್ಞಾನವಾಗಿದೆ. ಸದ್ಯದ ದೌರ್ಬಲ್ಯಗಳನ್ನು ಬಳಸಿಕೊಂಡರೆ, ಸೈಬರ್​ ಅಪರಾಧಿಯು, ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಬಹುದು ಮತ್ತು ಸಂಪೂರ್ಣ ಸಿಸ್ಟಮ್​ ಮೇಲೆ ದಾಳಿ ಮಾಡಬಹುದು. ಅಂದರೆ ಹ್ಯಾಕರ್ ಸಾಧನದ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ಭದ್ರತಾ ಸಂಸ್ಥೆ ಹೇಳಿದೆ. ಸಿಇಆರ್​ಟಿ-ಇನ್ ಈ ಅನುಕೂಲವನ್ನು ಅತ್ಯಂತ ಅಪಾಯಕಾರಿ ಎಂದು ಹೇಳಿದೆ.

ಯಾವುದಕ್ಕೆಲ್ಲ ಅಪ್​ಡೇಟ್​

ಆಪಲ್ ಐಫೋನ್​ಗಳಿಗಾಗಿ ಹೊಸ ಐಒಎಸ್ ಅಪ್​ಡೇಟ್​ಗಳನ್ನನು ಹೊರತರಲು ಪ್ರಾರಂಭಿಸಿದ ಕೆಲವು ದಿನಗಳ ನಂತರ ಸರ್ಕಾರದ ಎಚ್ಚರಿಕೆ ಬಂದಿದೆ. ಆಪಲ್ ಐಫೋನ್ 6ಎಸ್ (ಎಲ್ಲಾ ಮಾದರಿಗಳು), ಐಫೋನ್ 7 (ಎಲ್ಲಾ ಮಾದರಿಗಳು), ಐಫೋನ್ ಎಸ್ಇ (1 ನೇ ಪೀಳಿಗೆ ), ಐಪ್ಯಾಡ್ ಏರ್ 2, ಐಪ್ಯಾಡ್ ಮಿನಿ (4 ನೇ ಪೀಳಿಗೆ) ಮತ್ತು ಐಪಾಡ್ ಟಚ್ ಗಾಗಿ (7ನೇ ಪೀಳಿಗೆ) ಐಒಎಸ್ 15.7.7 ಮತ್ತು ಐಪ್ಯಾಡ್​ ಒಎಸ್​ 15.7.7 ಅಪ್​ಡೇಟ್​ಗಳನ್ನು ಬಿಡುಗಡೆ ಮಾಡಿದೆ. ಐಫೋನ್ 8 ಮತ್ತು ನಂತರದ ಐಒಎಸ್ 16.5.1 ಮತ್ತು ಐಪ್ಯಾಡ್​ ಒಎಸ್ 16.5.1 ಅಪ್​ಡೇಟ್​ಗಳುನ್ನು ನೀಡಿದೆ. ಐಪ್ಯಾಡ್ ಪ್ರೊ (ಎಲ್ಲಾ ಮಾದರಿಗಳು), ಐಪ್ಯಾಡ್ ಏರ್ 3ನೇ ಪೀಳಿಗೆ ಮತ್ತು ಐಪ್ಯಾಡ್ 5ನೇ ಪೀಳಿಗೆ ಮತ್ತು ಐಪ್ಯಾಡ್ ಮಿನಿ 5 ನೇ ಪೀಳಿಗೆ ಮತ್ತು ನಂತರದ ಫೋನ್​​ಗಳಿಗೆ ಅಪ್​ಡೇಟ್​ ನೀಡಲಾಗಿದೆ. ಆಂಟಿ ವೈರಸ್​ ಕ್ಯಾಸ್ಪರ್ಕಿ ಸಂಶೋಧಕರು ಈ ದೌರ್ಬಲ್ಯಗಳನ್ನು ಕಂಡುಹಿಡಿದಿದ್ದಾರೆ ಎಂದು ಆ್ಯಪಲ್​ ಬಿಡುಗಡೆ ಮಾಡಿದೆ.

ಇದನ್ನೂ ಓದಿ : iPhone: ಇನ್ನು 11 ತಿಂಗಳಲ್ಲಿ ಬೆಂಗಳೂರಲ್ಲೇ ಐಫೋನ್‌ ಉತ್ಪಾದನೆ: ವರ್ಷಕ್ಕೆ 2 ಕೋಟಿ ಮೊಬೈಲ್‌ ತಯಾರಿ!

ಐಒಎಸ್ ಅಪ್​ಡೇಟ್​​ಗಳನ್ನು ಬಿಡುಗಡೆ ಮಾಡುವ ಮೂಲಕ ಹ್ಯಾಕಿಂಗ್ ಕಳವಳಗಳನ್ನು ಪರಿಹರಿಸಲು ಆಪಲ್ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ, ಇದು ನಿರ್ದಿಷ್ಟವಾಗಿ ಗುರುತಿಸಲಾದ ದುರ್ಬಲತೆಗಳನ್ನು ಗುರಿಯಾಗಿಸುತ್ತದೆ. ಐಫೋನ್​​ಗಳಲ್ಲಿನ ಭದ್ರತಾ ನ್ಯೂನತೆಗಳನ್ನು ಮೊದಲು ರಷ್ಯಾದ ಭದ್ರತಾ ಸಾಫ್ಟ್​ವೇರ್​ ತಯಾರಕ ಕ್ಯಾಸ್ಪರ್ಕ್ಸಿ ಲ್ಯಾಬ್ ಎತ್ತಿ ತೋರಿಸಿದೆ ಎಂದು ಆಪಲ್ ಒಪ್ಪಿಕೊಂಡಿದೆ.

Continue Reading

ದೇಶ

India Canada Row: ಉಗ್ರನಿಗೆ ಕೆನಡಾ ಬೆಂಬಲದ ಬೆನ್ನಲ್ಲೇ ಖಲಿಸ್ತಾನಿ ಪನ್ನುನ್ ಆಸ್ತಿ ಜಪ್ತಿ ಮಾಡಿದ ಎನ್‌ಐಎ

India Canada Row:‌ ಭಾರತ ವಿರೋಧಿ ಹೇಳಿಕೆಗಳ ಮೂಲಕವೇ ಕುಖ್ಯಾತಿ ಗಳಿಸಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಆಸ್ತಿಯನ್ನು ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

VISTARANEWS.COM


on

Edited by

Gurpatwant Singh Pannun
Koo

ಚಂಡೀಗಢ: ನಿಷೇಧಿತ ಸಿಖ್ಸ್‌ ಫಾರ್‌ ಜಸ್ಟಿಸ್‌ (Sikhs For Justice) ಸಂಘಟನೆಯ ಉಗ್ರ, ಕೆನಡಾದಲ್ಲಿ ಕುಳಿತು ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಗುರುಪತ್ವಂತ್‌ ಸಿಂಗ್‌ ಪನ್ನುನ್‌ (Gurpatwant Singh Pannun) ಆಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜಪ್ತಿ ಮಾಡಿದೆ. ಇದರೊಂದಿಗೆ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆ ವಿಚಾರದಲ್ಲಿ ಭಾರತದ ವಿರುದ್ಧ ಆರೋಪ ಮಾಡಿದ ಕೆನಡಾಗೆ ಪರೋಕ್ಷವಾಗಿ ತಿರುಗೇಟು ನೀಡಿದಂತಾಗಿದೆ.

ಚಂಡಿಗಢದಲ್ಲಿರುವ ಒಂದು ನಿವಾಸ, ಅಮೃತಸರದ ಖಾನ್‌ಕೋಟ್‌ನಲ್ಲಿರುವ ಕೃಷಿ ಜಮೀನು ಹಾಗೂ ಪನ್ನು ಗ್ರಾಮದಲ್ಲಿರುವ ಕೃಷಿ ಜಮೀನನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಾರ್ವಜನಿಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ನಿವಾಸಕ್ಕೆ ಎನ್‌ಐಎ ನೋಟಿಸ್‌ ಅಂಟಿಸಿದೆ. ಜಮೀನಿನಲ್ಲೂ ಜಪ್ತಿ ಕುರಿತು ನೋಟಿಸ್‌ ಅಂಟಿಸಲಾಗಿದೆ.

ಕೆನಡಾ, ಬ್ರಿಟನ್‌, ಅಮೆರಿಕದಲ್ಲಿ ಪ್ರತ್ಯೇಕವಾದದ ವಿಷ ಬೀಜ ಬಿತ್ತುತ್ತಿರುವ ಸಿಖ್ಸ್‌ ಫಾರ್‌ ಜಸ್ಟಿಸ್‌ ಉಗ್ರ ಸಂಘಟನೆಯ ಸಂಸ್ಥಾಪಕರಲ್ಲಿ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಕೂಡ ಒಬ್ಬನಾಗಿದ್ದಾನೆ. ಭಾರತದಲ್ಲಿ ಕೂಡ ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಕಾರಣ 2019ರಲ್ಲಿ ಕೇಂದ್ರ ಸರ್ಕಾರವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಇದನ್ನು ನಿಷೇಧಿಸಲಾಗಿದೆ. ಈಗ ಅದರ ಸಂಘಟನೆಯ ಉಗ್ರನ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕೆನಡಾದಲ್ಲಿ ಕಳೆದ ಜೂನ್‌ 18ರಂದು ಹತ್ಯೆಗೀಡಾದ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಜಸ್ಟಿನ್‌ ಟ್ರುಡೋ ಮಹಾನ್‌ ವ್ಯಕ್ತಿಯಂತೆ ಬಿಂಬಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಹತ್ಯೆ ಕುರಿತು ಯಾವುದೇ ಸಾಕ್ಷ್ಯ ಕೊಡದೆ ಆರೋಪದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಭಾರತವು ಮತ್ತೊಬ್ಬ ಖಲಿಸ್ತಾನಿಯ ಆಸ್ತಿ ಜಪ್ತಿ ಮಾಡುವ ಮೂಲಕ ಪರೋಕ್ಷವಾಗಿ ಕೆನಡಾಗೆ ಟಾಂಗ್‌ ಕೊಟ್ಟಿದೆ.

ಇದನ್ನೂ ಓದಿ: India Canada Row: ಭಾರತದಿಂದಲೇ G20 ಶೃಂಗಸಭೆ ಯಶಸ್ವಿ ಎಂದ ಬ್ರೆಜಿಲ್;‌ ಕೆನಡಾ ಪಿಎಂ ಆರೋಪಕ್ಕೆ ಏನೆಂದಿತು?

ಜಿ20 ಶೃಂಗಸಭೆಗೆ ಬೆದರಿಕೆ ಹಾಕಿದ್ದ ಪನ್ನುನ್‌

ವಿದೇಶದಲ್ಲಿ ಕುಳಿತೇ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಭಾರತದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾನೆ. ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೆ ಅಡ್ಡಿಪಡಿಸಬೇಕು ಎಂದು ಭಾರತದ ಮುಸ್ಲಿಮರಿಗೆ ಈತ ಕರೆ ನೀಡಿದ್ದ. “ಕಾಶ್ಮೀರದ ಮುಸ್ಲಿಮರು ದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಗೆ ಅಡ್ಡಿಪಡಿಸಬೇಕು. ಶುಕ್ರವಾರದ ಪ್ರಾರ್ಥನೆ ಬಳಿಕ ದೆಹಲಿಯಲ್ಲಿರುವ ಪ್ರಗತಿ ಮೈದಾನಕ್ಕೆ (ಶೃಂಗಸಭೆ ನಡೆಯುವ ಸ್ಥಳ) ಪರೇಡ್‌ ನಡೆಸಬೇಕು. ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನ ಧ್ವಜ ಹಾರಿಸಲಾಗುತ್ತದೆ” ಎಂದು ಗುರ್‌ಪತ್ವಂತ್‌ ಸಿಂಗ್‌ ಪನ್ನುನ್‌ ಎಚ್ಚರಿಕೆ ನೀಡಿದ್ದ.

Continue Reading

ದೇಶ

Jairam Ramesh: ನೂತನ ಸಂಸತ್ತನ್ನು ‘ಮೋದಿ ಮಲ್ಟಿಪ್ಲೆಕ್ಸ್’‌ ಎಂದ ಕಾಂಗ್ರೆಸ್‌ ನಾಯಕ; ಭುಗಿಲೆದ್ದ ವಿವಾದ

Jairam Ramesh: ಕೆಲವು ದಿನಗಳ ಹಿಂದಷ್ಟೇ ಮೊದಲ ಅಧಿವೇಶನಕ್ಕೆ ಸಾಕ್ಷಿಯಾಗಿರುವ ನೂತನ ಸಂಸತ್‌ ಭವನವನ್ನು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ‘ಮೋದಿ ಮಲ್ಟಿಪ್ಲೆಕ್ಸ್’‌ ಎಂದು ಕರೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

VISTARANEWS.COM


on

Edited by

Jairam Ramesh On Narendra Modi Over Parliament Building
Koo

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ನೂತನ ಸಂಸತ್‌ ಭವನದಲ್ಲಿ (New Parliament Building) ಮೊದಲ ಅಧಿವೇಶನ ನಡೆದಿದೆ. ನೂತನ ಸಂಸತ್‌ ಭವನವನ್ನು ಕೂಡ ಪ್ರಜಾಪ್ರಭುತ್ವದ ದೇಗುಲ ಎಂದೇ ಹೇಳಲಾಗುತ್ತಿದೆ. ಅತ್ಯಾಧುನಿಕವಾಗಿ ನಿರ್ಮಿಸಿರುವ ಸಂಸತ್‌ ಭವನವು ಸಕಲ ಸೌಲಭ್ಯಗಳನ್ನೂ ಹೊಂದಿರುವುದರಿಂದ ಗಮನ ಸೆಳೆದಿದೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ (Congress Leader) ಜೈರಾಮ್‌ ರಮೇಶ್‌ (Jairam Ramesh) ಅವರು ನೂತನ ಸಂಸತ್‌ ಭವನವನ್ನು “ಮೋದಿ ಮಲ್ಟಿಪ್ಲೆಕ್ಸ್”‌ (Modi Multiplex) ಎಂದು ಕರೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

“ನೂತನ ಸಂಸತ್‌ ಭವನಕ್ಕೆ ತುಂಬ ಜನಪ್ರಿಯತೆ ಕೊಟ್ಟು, ಹೊಗಳಿ, ವೈಭವೀಕರಿಸಿದ ಬಳಿಕ ಚಾಲನೆ ನೀಡಲಾಗಿದೆ. ಆದರೆ, ನಾಲ್ಕು ದಿನಗಳಿಂದ ನಾನು ಸಂಸತ್‌ ಕಲಾಪಗಳಲ್ಲಿ ಪಾಲ್ಗೊಂಡ ಬಳಿಕ ನನ್ನ ಅಭಿಪ್ರಾಯ ಬದಲಾಗಿದೆ. ಏಕೆಂದರೆ, ಹೊಸ ಸಂಸತ್‌ ಭವನವು ದೊಡ್ಡದಾಗಿದೆ. ಸಂಸತ್‌ ವೀಕ್ಷಣೆಗೆ ಭೂತಕನ್ನಡಿಯೇ ಬೇಕಾಗಿದೆ. ಸಂಸತ್‌ ಸದಸ್ಯರ ನಡುವೆ ಸರಿಯಾಗಿ ಸಂಭಾಷಣೆ, ಮಾತುಕತೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರಜಾಪ್ರಭುತ್ವದ ಆಶಯಗಳು ಈಡೇರುತ್ತಿಲ್ಲ. ನರೇಂದ್ರ ಮೋದಿ ಅವರ ಆಶಯದಂತೆಯೇ ಇದನ್ನು ನಿರ್ಮಿಸಿದ ಕಾರಣ ನೂತನ ಸಂಸತ್‌ ಭವನವನ್ನು ಮೋದಿ ಮಲ್ಟಿಪ್ಲೆಕ್ಸ್ ಎಂಬುದಾಗಿ ಕರೆಯುವುದೇ ಸೂಕ್ತ” ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

“ನಾನು ಸಂಸತ್ತಿನ ಎರಡೂ ಸದನಗಳಲ್ಲಿ ಓಡಾಡಿದ್ದೇನೆ. ಹಳೆಯ ಸಂಸತ್‌ ಭವನದಲ್ಲಿ ಕಲಾಪಗಳ ಮಧ್ಯೆ ತಿರುಗಾಡಬಹುದಿತ್ತು. ಒಬ್ಬರಿಗೊಬ್ಬರು ಚರ್ಚೆ, ಸಂವಾದದಲ್ಲಿ ನಿರತರಾಗಬಹುದಿತ್ತು. ಎರಡೂ ಕಲಾಪಗಳಿಗೆ ಓಡಾಡಲು, ಕಾರಿಡಾರ್‌ನಲ್ಲಿ ತಿರುಗಾಡುವುದು ಸುಲಭವಾಗಿತ್ತು. ಆದರೆ, ಹೊಸ ಸಂಸತ್‌ ಭವನದಲ್ಲಿ ಇದೆಲ್ಲದಕ್ಕೂ ಅವಕಾಶವಿಲ್ಲ. ಸಂಸತ್‌ ಭವನದ ವಿನ್ಯಾಸವು ಪ್ರಜಾಪ್ರಭುತ್ವವನ್ನೇ ಕೊಲ್ಲುವಂತಿದೆ. ನರೇಂದ್ರ ಮೋದಿ ಅವರು ಸಂವಿಧಾನವನ್ನು ಬದಲಾಯಿಸದೆಯೇ ಪ್ರಜಾಪ್ರಭುತ್ವವನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: New Parliament Building: ನೂತನ ಸಂಸತ್ ಭವನದ ರಚನೆ, ವಿನ್ಯಾಸ ಅದ್ಭುತ! ವಿಡಿಯೊ ನೋಡಿ

ಜೆ.ಪಿ.ನಡ್ಡಾ ತಿರುಗೇಟು

ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಟೀಕೆಗಳಿಗೆ ಬಿಜೆಪಿ ತಿರುಗೇಟು ನೀಡಿದೆ. “ಕಾಂಗ್ರೆಸ್‌ ಮಾತ್ರ ಇಂತಹ ಕನಿಷ್ಠ ಮನಸ್ಥಿತಿಯನ್ನು ಪ್ರದರ್ಶಿಸಲು ಸಾಧ್ಯ. ಹೀನ ಮನಸ್ಥಿತಿಯ ಭಾಗವಾಗಿಯೇ ಕಾಂಗ್ರೆಸ್‌ ಸಂಸತ್‌ ವಿರುದ್ಧ ಮಾತನಾಡುತ್ತಿದೆ. ಆ ಮೂಲಕ ದೇಶದ 140 ಕೋಟಿ ಜನರ ಆಶಯಗಳಿಗೆ ವಿರುದ್ಧವಾದ, ಅವರಿಗೆ ಅವಮಾನ ತೋರುವ ವರ್ತನೆ ಪ್ರದರ್ಶಿಸುತ್ತಿದೆ” ಎಂದಿದ್ದಾರೆ.

“ಸಂಸತ್‌ ವಿರೋಧಿ ಮನಸ್ಥಿತಿಯನ್ನು ಕಾಂಗ್ರೆಸ್‌ ಇದೇ ಮೊದಲ ಬಾರಿಗೆ ಪ್ರದರ್ಶಿಸುತ್ತಿಲ್ಲ. 1975ರಲ್ಲೂ ಇಂತಹ ಮನಸ್ಥಿತಿ ತೋರಿತು. ಆದರೆ, ಆ ಪ್ರಯತ್ನದಲ್ಲಿ ಕಾಂಗ್ರೆಸ್‌ ವಿಫಲವಾಯಿತು” ಎಂದು ಜೆ.ಪಿ.ನಡ್ಡಾ ಎಕ್ಸ್‌ ಸಾಮಾಜಿಕ ಜಾಲತಾಣ ಪೋಸ್ಟ್‌ ಮೂಲಕ ತಿರುಗೇಟು ನೀಡಿದ್ದಾರೆ.

Continue Reading
Advertisement
Kahlistani
ಕ್ರಿಕೆಟ್7 mins ago

India Canada Row : ಕೆನಡಾದಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದ ಖಲಿಸ್ತಾನಿ ಉಗ್ರನಿಗೆ ಎನ್​ಐಎ ಟಕ್ಕರ್​

Chaitra and gang
ಉಡುಪಿ11 mins ago

Chaitra Kundapura : ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಪರಪ್ಪನ ಅಗ್ರಹಾರಕ್ಕೆ; 14 ದಿನ ನ್ಯಾಯಾಂಗ ಬಂಧನ

Justin Trudeau
ದೇಶ22 mins ago

India Canada Row: ಉಗ್ರ ನಿಜ್ಜರ್‌ ಪರ ನಿಂತ ಜಸ್ಟಿನ್‌ ಟ್ರುಡೋ ವಿರುದ್ಧ ಕೆನಡಾದಲ್ಲೇ ಆಕ್ರೋಶ; ಏನಾಗ್ತಿದೆ ನೋಡಿ

Silk Smitha
South Cinema22 mins ago

Silk Smitha: ಸಿಲ್ಕ್​ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!

Holkar Cricket Stadium
ಕ್ರಿಕೆಟ್28 mins ago

IND vs AUS 2nd ODI: ಭಾರತ-ಆಸೀಸ್​ ದ್ವಿತೀಯ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ

electick shock boy dead
ಕರ್ನಾಟಕ33 mins ago

Electric shock : ಸಕ್ಕರೆ ಕಾರ್ಖಾನೆಯಲ್ಲಿ ವಿದ್ಯುತ್‌ ಸ್ಪರ್ಶಿಸಿ ಸುಟ್ಟು ಕರಕಲಾದ ಕಾರ್ಮಿಕ

iphone 7
ತಂತ್ರಜ್ಞಾನ52 mins ago

Apple Iphone : ಐಫೋನ್ ಬಳಕೆದಾರರೇ ಇಲ್ಲಿ ಕೇಳಿ; ನಿಮಗೊಂದು ಸೆಕ್ಯುರಿಟಿ ಅಲರ್ಟ್​ ಕೊಟ್ಟಿದೆ ಕೇಂದ್ರ ಸರ್ಕಾರ

Pradeep Easwar performs pada puja
ಕರ್ನಾಟಕ59 mins ago

Pradeep Eshwar: ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್‌ ಈಶ್ವರ್‌

Sachin Tendulkar Presented Indian cricket team jersey - written "Nammo" in back to PM Narendra Modi.
ಕ್ರಿಕೆಟ್1 hour ago

Varanasi Stadium: ಮೋದಿಗೆ ಟೀಮ್​ ಇಂಡಿಯಾ ಜೆರ್ಸಿ ನೀಡಿ ಗೌರವಿಸಿದ ಸಚಿನ್ ತೆಂಡೂಲ್ಕರ್

Srilalitha reddy
ಕರ್ನಾಟಕ1 hour ago

Murder Case : ನೀರಿನ ತೊಟ್ಟಿಯಲ್ಲಿ ತೇಲುತ್ತಿತ್ತು ಮಗುವಿನ ಶವ; ಮೊಮ್ಮಗಳನ್ನೇ ಕೊಂದು ಬಿಟ್ಟನಾ!

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina bhavishya
ಪ್ರಮುಖ ಸುದ್ದಿ12 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ6 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ7 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ7 days ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ1 week ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

ಟ್ರೆಂಡಿಂಗ್‌