Site icon Vistara News

Physical Abuse: ಕಪಿಲ್‌ ಶರ್ಮಾ ಶೋನಲ್ಲಿ ಪಾತ್ರ ಕೊಡುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ

The Kapil Sharma Show

Woman Reped By Man Who Promised Her Role In The Kapil Sharma Show In Mumbai

ಮುಂಬೈ: ಸಿನಿಮಾಗಳಲ್ಲಿ ನಟಿಸಲು ಚಾನ್ಸ್‌ ಕೊಡಿಸುತ್ತೇನೆ, ನನಗೆ ಆ ಹೀರೊ ಪರಿಚಯ ಇದ್ದಾನೆ, ಸೀರಿಯಲ್‌, ಕಾಮಿಡಿ ಶೋಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ಯುವತಿಯರಿಗೆ ಮೋಸ ಮಾಡುವ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಮುಂಬೈನಲ್ಲಿ (Mumbai) ಖ್ಯಾತ ದಿ ಕಪಿಲ್‌ ಶರ್ಮಾ ಶೋನಲ್ಲಿ (The Kapil Sharma Show) ಚಾನ್ಸ್‌ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಹಿಳೆಯು ದೂರು ದಾಖಲಿಸಿದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮುಂಬೈನ ನಲಾಸೊಪರದಲ್ಲಿ ಕಾಸ್ಟಿಂಗ್‌ ಏಜೆಂಟ್‌ ಆಗಿರುವ ಆನಂದ್‌ ಸಿಂಗ್‌ ಎಂಬುವನು ಮೇ 20ರಂದು ಮಹಿಳೆಯನ್ನು ಆಡಿಷನ್‌ಗೆ ಮನೆಗೆ ಕರೆದಿದ್ದಾನೆ. ದೇಶಾದ್ಯಂತ ಖ್ಯಾತಿ ಗಳಿಸಿರುವ ದಿ ಕಪಿಲ್‌ ಶೋನಲ್ಲಿ ಚಾನ್ಸ್‌ ಸಿಗುತ್ತದೆ ಎಂಬ ಆಸೆಯಿಂದ ಮಹಿಳೆಯು ವ್ಯಕ್ತಿ ಹೇಳಿದ ಜಾಗಕ್ಕೆ ತೆರಳಿದ್ದಾರೆ. ಅಲ್ಲಿ, ಆನಂದ್‌ ಸಿಂಗ್‌ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬುದಾಗಿ ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯು ತಾನು ಹೇಳಿದ ಜಾಗಕ್ಕೆ ಬರುತ್ತಲೇ ಆನಂದ್‌ ಸಿಂಗ್‌ ಆಡಿಷನ್‌ ತೆಗೆದುಕೊಳ್ಳುವ ನಾಟಕವಾಡಿದ್ದಾನೆ. ಮಹಿಳೆಯು ಆಡಿಷನ್‌ ನೀಡುವಾಗಲೇ ಅವರ ಮೈ ಮುಟ್ಟಿದ್ದಾನೆ. ಇನ್ನೂ ಹತ್ತಿರ ಬನ್ನಿ ಎಂಬುದಾಗಿ ಹೇಳಿದ್ದಾನೆ. ಈತನ ಕುತಂತ್ರ ಅರಿತ ಮಹಿಳೆಯು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ, ಆನಂದ್‌ ಸಿಂಗ್‌ ಇನ್ನಷ್ಟು ಕುಪಿತನಾಗಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಕುರಿತು ಬೇರೆ ಯಾರಿಗಾದರೂ ಹೇಳಿದರೆ, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

“ಕಪಿಲ್‌ ಶರ್ಮಾ ಜತೆಗೆ ನಂಟಿದೆ, ಆತನ ಪರಿಚಯವಿದೆ. ದಿ ಕಪಿಲ್‌ ಶರ್ಮಾ ಶೋನಲ್ಲಿ ಚಾನ್ಸ್‌ ಕೊಡಿಸುತ್ತೇನೆ ಎಂಬುದಾಗಿ ನಂಬಿಸಿದ. ಮನೆಗೆ ಹೋದ ಬಳಿಕ ಚೆನ್ನಾಗಿಯೇ ಮಾತನಾಡಿಸಿದ ಆತ, ಬಳಿಕ ನನ್ನ ಹತ್ತಿರ ಬಂದು ಮುಟ್ಟಲು ಶುರುಮಾಡಿದ. ಆಗ ನಾನು ಪ್ರತಿರೋಧ ಒಡ್ಡಿದೆ. ಅಷ್ಟಾದರೂ ಕೇಳದೆ ಆತ ಅತ್ಯಾಚಾರ ಎಸಗಿದ” ಎಂಬುದಾಗಿ ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಪಿಲ್‌ ಶರ್ಮಾ ಅವರು ನಡೆಸಿಕೊಡುತ್ತಿದ್ದ ದಿ ಕಪಿಲ್‌ ಶರ್ಮಾ ಶೋ ದೇಶಾದ್ಯಂತ ಖ್ಯಾತಿಯಾಗಿದೆ. ಇತ್ತೀಚೆಗೆ, ನೆಟ್‌ಫ್ಲಿಕ್ಸ್‌ನಲ್ಲಿ ಶೋ ಪ್ರಸಾರವಾಗಿತ್ತು.

ಇದನ್ನೂ ಓದಿ: Physical Abuse: ಹಿಂದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಮುಸ್ಲಿಂ ಯುವಕರಿಗೆ ಜೀವಾವಧಿ ಶಿಕ್ಷೆ

Exit mobile version