Site icon Vistara News

ಓಯೊಗೆ ಕರೆದುಕೊಂಡು ಹೋಗಿ ಪ್ರೇಯಸಿಯನ್ನೇ ಕೊಂದು ಹಾಕಿದ ಬಾಯ್‌ಫ್ರೆಂಡ್

Techie Shot Dead

Woman techie shot dead by boyfriend in Pune hotel room

ಪುಣೆ: ಪ್ರೀತಿಸಿದವಳನ್ನೇ ಕೊಲ್ಲುವುದು, ಲಿವ್-ಇನ್‌ ರಿಲೇಷನ್‌ಶಿಪ್‌ನಲ್ಲಿರುವ ಯುವತಿಯನ್ನು ಕ್ರೂರವಾಗಿ ಹತ್ಯೆ ಮಾಡುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ (Maharashtra) ಪುಣೆಯಲ್ಲಿರುವ (Pune) ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಟೆಕಿಯಾಗಿರುವ (Techie) ವಂದನಾ ದ್ವಿವೇದಿ (Vandana Dwivedi) ಎಂಬ ಯುವತಿಯು ಹತ್ಯೆಗೀಡಾಗಿದ್ದಾಳೆ.

ಉತ್ತರ ಪ್ರದೇಶದ ಲಖನೌ ಮೂಲದವರಾದ ವಂದನಾ ದ್ವಿವೇದಿ ಹಾಗೂ ರಿಷಭ್‌ ನಿಗಮ್‌ ಎಂಬುವರು ಪ್ರೀತಿಸುತ್ತಿದ್ದರು. ಇಬ್ಬರೂ ಭೇಟಿಯಾಗಲು ತೀರ್ಮಾನಿಸಿದ್ದು, ಜನವರಿ 25ರಂದು ಪುಣೆಯ ಹಿಂಜಾವಾಡಿಯಲ್ಲಿರುವ ಓಯೊ ಟೌನ್‌ ಹೌಸ್‌ ಹೋಟೆಲ್‌ನಲ್ಲಿ ತಂಗಿದ್ದರು. ಜನವರಿ 27ರಂದು ಇಬ್ಬರ ಮಧ್ಯೆ ಜಗಳವಾಗಿದೆ. ಇಬ್ಬರೂ ಪರಸ್ಪರ ವಾಗ್ವಾದಕ್ಕಿಳಿದಿದ್ದಾರೆ. ವಂದನಾ ದ್ವಿವೇದಿಯ ವ್ಯಕ್ತಿತ್ವ, ನಡತೆ ಬಗ್ಗೆ ರಿಷಭ್‌ ನಿಗಮ್‌ ಅನುಮಾನ ವ್ಯಕ್ತಪಡಿಸಿದ್ದಕ್ಕಾಗಿ ಜಗಳವಾಗಿದೆ ಎಂದು ತಿಳಿದುಬಂದಿದೆ.

High poliCe alert

ಇಬ್ಬರ ನಡುವಿನ ಜಗಳವು ತಾರಕಕ್ಕೇರಿದ್ದು, ಇದೇ ವೇಳೆ ರಿಷಭ್‌ ನಿಗಮ್‌ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಜನವರಿ 27ರಂದು ರಾತ್ರಿ 10 ಗಂಟೆಗೆ ಆತ ಹೋಟೆಲ್‌ನಿಂದ ಹೊರಗೆ ಹೋಗಿದ್ದು ಗೊತ್ತಾಗಿದೆ. ಇದಾದ ಬಳಿಕ ಪೊಲೀಸರು ಮುಂಬೈನಲ್ಲಿ ರಿಷಭ್‌ ನಿಗಮ್‌ನನ್ನು ಬಂಧಿಸಿದ್ದಾರೆ. ಈ ಕುರಿತು ಭಾನುವಾರ (ಜನವರಿ 28) ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Murder Case : ಬೆಂಗಳೂರಿನಲ್ಲಿ ರೌಡಿ ಶೀಟರ್‌ ಕೊಲೆ; ಮನೆ ಹೊರಗಡೆ ಮಲಗಿದಲ್ಲೇ ಮರ್ಡರ್‌

ಕೆಲ ದಿನಗಳ ಹಿಂದಷ್ಟೇ ಮುಂಬೈನಲ್ಲಿ ಇನ್‌ಸ್ಟಾಗ್ರಾಂ ಮೂಲಕ ಸಿಕ್ಕ ಗೆಳೆಯನೊಬ್ಬನನ್ನು ನಂಬಿದ 21 ವರ್ಷದ ಯುವತಿಯು ಅತ್ಯಾಚಾರಕ್ಕೀಡಾಗಿದ್ದಳು. ದಕ್ಷಿಣ ಮುಂಬೈನ ವೊರ್ಲಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜನವರಿ 13ರಂದು ಯುವತಿ ಅತ್ಯಾಚಾರಕ್ಕೀಡಾಗಿದ್ದು, ಈ ಕುರಿತು ಆಕೆಯೇ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾಳೆ.

“ನಾನು ಅನುಭವಿಸಿದ ಕೆಟ್ಟ ಅನುಭವದ ಬಗ್ಗೆ ಹೇಳಬೇಕು. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯ ಜತೆ ನಾನು ರಾತ್ರಿ ಸುತ್ತಾಡಲು ಹೋಗಿದ್ದೆ. ಇಬ್ಬರೂ ಒಂದು ಕಡೆ ಪಾರ್ಟಿ ಮುಗಿಸಿ, ಬೇರೊಂದು ರೆಸ್ಟೋರೆಂಟ್‌ಗೆ ಹೋದೆವು. ಆಗ ಆತನು ನನಗೆ ಹೆಚ್ಚಿನ ಮದ್ಯ ಸೇವಿಸುವಂತೆ ಒತ್ತಾಯಿಸಿದ. ಅನಿವಾರ್ಯವಾಗಿ ನಾನು ಮದ್ಯ ಸೇವಿಸಿದೆ. ನನಗೆ ಮತ್ತು ಬರುವ ಔಷಧಿ ನೀಡಿದ್ದ ಎಂಬುದು ಆಮೇಲೆ ಗೊತ್ತಾಯಿತು. ಅಷ್ಟೊತ್ತಿಗಾಗಲೇ ಆತನು ನನ್ನ ಮೇಲೆ ಅತ್ಯಾಚಾರ ಎಸಗಲು ಶುರು ಮಾಡಿದ್ದ. ನಾನು ತಡೆದಾಗ ನನ್ನ ಮೇಲೆ ಹಲ್ಲೆ ನಡೆಸಿದ. ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಯುವತಿಯು ಪೋಸ್ಟ್‌ ಮಾಡಿದ್ದಾಳೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version