Site icon Vistara News

ಮಹಿಳೆಯರಿಗೆ ಬಂಪರ್‌; ಮಾಸಿಕ 1,500 ರೂ. ಜಮೆ, 3 ಅಡುಗೆ ಅನಿಲ ಸಿಲಿಂಡರ್‌ ಫ್ರೀ ಘೋಷಣೆ

Maharashtra Budget

Women To Get Rs 1,500 A Month, 3 Free Cylinders; Check Key Announcements By FM Ajit Pawar In Maharashtra Budget 2024

ಮುಂಬೈ: ಮಹಾರಾಷ್ಟ್ರದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ (Maharashtra Assembly Election 2024) ನಡೆಯಲಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಬಂಪರ್‌ ಘೋಷಣೆ ಮಾಡಿದೆ. ಉಪ ಮುಖ್ಯಮಂತ್ರಿಯೂ ಆಗಿರುವ ಹಣಕಾಸು ಸಚಿವ ಅಜಿತ್‌ ಪವಾರ್‌ (Ajit Pawar) ಅವರು ಶುಕ್ರವಾರ (ಜೂನ್‌ 28) ಬಜೆಟ್‌ ಮಂಡಿಸಿದ್ದು (Maharashtra Budget), ಮಹಿಳೆಯರಿಗೆ ಬಂಪರ್‌ ಉಡುಗೊರೆ ಸೇರಿ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಅದರಲ್ಲೂ, ಬಡ ಹೆಣ್ಣುಮಕ್ಕಳಿಗೆ ಮಾಸಿಕ 1,500 ರೂ. ಸಹಾಯಧನ ಹಾಗೂ ವರ್ಷಕ್ಕೆ 3 ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂಬುದಾಗಿ ಅವರು ಘೋಷಣೆ ಮಾಡಿದ್ದಾರೆ.

“ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ ಅಡಿಯಲ್ಲಿ ವರ್ಷಕ್ಕೆ ಮೂರು ಸಿಲಿಂಡರ್‌ಗಳನ್ನು ಬಡವರಿಗೆ ಉಚಿತವಾಗಿ ನೀಡಲಾಗುತ್ತದೆ. ಇನ್ನು, ಬಡ ಹೆಣ್ಣುಮಕ್ಕಳಿಗೆ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್‌ ಯೋಜನೆ ಅನ್ವಯ 1,500 ರೂ. ಸಹಾಯಧನ ನೀಡಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ 46 ಸಾವಿರ ಕೋಟಿ ರೂ. ಮೀಸಲಿರಿಸಿದೆ. 21-60 ವರ್ಷದೊಳಗಿನ ಮಹಿಳೆಯರು ಮಾಸಿಕ 1,500 ರೂ. ಪಡೆಯಲಿದ್ದಾರೆ” ಎಂಬುದಾಗಿ ಅಜಿತ್‌ ಪವಾರ್‌ ತಿಳಿಸಿದರು.

ಮಹಿಳೆಯರಿಗೆ ರಾಜ್ಯ ಸರ್ಕಾರವು ಮತ್ತೊಂದು ಯೋಜನೆ ಘೋಷಣೆ ಮಾಡಿದೆ. ರಾಜ್ಯಾದ್ಯಂತ ಹೆಣ್ಣುಮಕ್ಕಳು 10 ಸಾವಿರ ಆಟೋಗಳನ್ನು ಖರೀದಿಸಲು ಅವರಿಗೆ 10 ಸಾವಿರ ರೂ. ಧನಸಹಾಯ ಮಾಡಲಾಗುವುದು. ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವವರಿಗೆ ಕ್ಷಿಪ್ರವಾಗಿ ಶಿಕ್ಷೆ ನೀಡಲು 100 ಕೋರ್ಟ್‌ಗಳ ನಿರ್ಮಾಣ ಮಾಡಲಾಗುವುದು. ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಪರೀಕ್ಷಾ ಶುಲ್ಕವನ್ನು ಮನ್ನಾ ಮಾಡಲಾಗುವುದು. ಜುಲೈನಿಂದಲೇ ಎಲ್ಲ ಯೋಜನೆಗಳು ಜಾರಿಗೆ ಬರಲಿವೆ ಎಂಬುದಾಗಿ ಅವರು ಮಾಹಿತಿ ನೀಡಿದರು.

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ

ಮುಂಬೈ ಪ್ರದೇಶದಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 24 ರಿಂದ 21 ಕ್ಕೆ ಇಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇಕಡಾ 26 ರಿಂದ 25 ಕ್ಕೆ ಇಳಿಸಲಾಗುವುದು ಎಂದಿದೆ. ಇದು ಮುಂಬೈ, ನವೀ ಮುಂಬೈ ಮತ್ತು ಥಾಣೆ ಸೇರಿದಂತೆ ಮುಂಬೈ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ 65 ಪೈಸೆ ಇಳಿಕೆಯಾಗಿದೆ ಹಾಗೂ ಡೀಸೆಲ್​ ಬೆಲೆ 2 ರೂಪಾಯಿ ಕಡಿಮೆಯಾಗಿದೆ. ಜೂನ್ 28 ರಂದು ಮುಂಬೈನಲ್ಲಿ ಪೆಟ್ರೋಲ್ 104.21 ರೂ.ಗೆ ತಲುಪಿದ್ದರೆ, ಡೀಸೆಲ್ ಬೆಲೆ ಲೀಟರ್​ಗೆ 92.15 ರೂಪಾಯಿ ಇದೆ. ಕರ್ನಾಟಕದಲ್ಲಿ 102. 86 ರೂಪಾಯಿ ಆದರೆ ಬೆಂಗಳೂರು 88. 94 ರೂಪಾಯಿ ನಡೆದಿದೆ.

ಇದನ್ನೂ ಓದಿ: ಹಾಲು, ಪೆಟ್ರೋಲ್‌ ಬೆಲೆ ಏರಿಸಿ, ಎಸಿ ಬಸ್‌ನಲ್ಲಿ ಪ್ರತಿಭಟನೆಗೆ ಹೊರಟ ಕಾಂಗ್ರೆಸ್‌ ಹಣದ ಮೂಲ ಏನು? ಬಿಜೆಪಿ ಪ್ರಶ್ನೆ

Exit mobile version