Site icon Vistara News

world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್‌ ತಿಳಿಯಿರಿ

world environment day image

#image_title

ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್‌ 5ರಂದು ಆಚರಿಸಲಾಗುತ್ತದೆ. (world environment day) ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ವಿಶೇಷ ದಿನ ಇದಾಗಿದೆ. ಪರಿಸರ ರಕ್ಷಣೆಗೆ ಜನರನ್ನು ಪ್ರೇರೇಪಣೆಗೊಳಿಸಲಾಗುತ್ತದೆ. ಪರಿಸರ ಸಂರಕ್ಷಣೆ ಮತ್ತು ಜನ ಜಾಗೃತಿಗೆ ಹಲವಾರು ವಿಧಾನಗಳು ಮತ್ತು ಥೀಮ್‌ಗಳು ಇವೆ.

ಈ ವರ್ಷ ಪರಿಸರ ದಿನಾಚರಣೆಯ 50ನೇ ವಾರ್ಷಿಕೋತ್ಸವವೂ ಹೌದು. ಈ ವರ್ಷ ಪ್ಲಾಸ್ಟಿಕ್‌ನಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ಮತ್ತು ಅದನ್ನು ತಪ್ಪಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಥೀಮ್‌ ಅನ್ನು ಅಳವಡಿಸಲಾಗಿದೆ. ಕಾರಣವೇನು? ಮನುಷ್ಯರು ಪ್ರತಿ ವರ್ಷ 43 ಕೋಟಿ ಟನ್‌ಗೂ ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಉತ್ಪಾದಿಸುತ್ತಿದ್ದಾರೆ ಎನ್ನುತ್ತದೆ ವಿಶ್ವಸಂಸ್ಥೆಯ ಪರಿಸರ ಸಂರಕ್ಷಣೆ ಕಾರ್ಯಕ್ರಮದ ವರದಿ. 46% ಪ್ಲಾಸ್ಟಿಕ್‌ ತ್ಯಾಜ್ಯವನ್ನು ಭೂಮಿಯಲ್ಲಿ ಹೂತು ಹಾಕಲಾಗುತ್ತದೆ. 22% ಅನ್ನು ಸರಿಯಾನಿ ನಿರ್ವಹಿಸದೆ ಬಿಡಲಾಗುತ್ತಿದೆ.

ಪ್ಲಾಸ್ಟಿಕ್‌ನ ಸಮಸ್ಯೆ ಏನೆಂದರೆ ಅದು ಭೂಮಿಯಲ್ಲಿ ಮಣ್ಣಿನ ಜತೆಗೆ ಕರಗುವುದಿಲ್ಲ. ಇದರ ಪರಿಣಾಮವಾಗಿ ಸಮುದ್ರದಲ್ಲಿನ ಜೀವಿಗಳಿಗೆ ಬದುಕಲು ಕಷ್ಟವಾಗುತ್ತದೆ. ಮಣ್ಣಿನ ರಚನೆಗಳಿಗೆ ಹಾನಿಯಾಗುತ್ತದೆ. ಅಂತರ್ಜಲ ಕಲುಷಿತವಾಗುತ್ತದೆ. ಹಾಗೂ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ವಿಶ್ವಪರಿಸರ ದಿನಾಚರಣೆ 2023 ಥೀಮ್‌

ಈ ವರ್ಷ ವಿಶ್ವ ಪರಿಸರ ದಿನಾಚರಣೆ ದಿನವನ್ನು #BeatPlasticPollution ಎಂಬ ಥೀಮ್‌ ಅಡಿಯಲ್ಲಿ ಆಚರಿಸಲಾಗುತ್ತಿದೆ. ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಯಲು ಕೈಗೊಳ್ಳಬೇಕಿರುವ ನಾನಾ ಕ್ರಮಗಳ ಬಗ್ಗೆ ಚರ್ಚೆ, ಒತ್ತಾಯ, ಸಂಶೋಧನೆಗೆ ಇಲ್ಲಿ ಅವಕಾಶ ಇದೆ. ಇದರಲ್ಲಿ ಜನರ ಪಾಲ್ಗೊಳ್ಳುವಿಕೆ ಎಲ್ಲಕ್ಕಿಂತ ಮುಖ್ಯ. ವಿಶ್ವ ಪರಿಸರ ದಿನಾಚರಣೆ ಅತ್ಯಂತ ಪ್ರಮುಖ ಜಾಗತಿಕ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ವಿಶ್ವಾದ್ಯಂಕ ಕೋಟ್ಯಂತರ ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ( United Nations Environment Programme – UNEP) 1973ರಿಂದ ನಡೆಯುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಜಾನುವಾರುಗಳು ಮತ್ತು ಇತರ ಪ್ರಾಣಿಗಳು ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಆದ್ದರಿಂದ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಿಸಾಡುವ ಪ್ರವೃತ್ತಿಯನ್ನು ಕೈ ಬಿಡಬೇಕಾಗಿದೆ.

ವಿಶ್ವ ಪರಿಸರ ದಿನಾಚರಣೆ ದಿನ: ಇತಿಹಾಸ ಮತ್ತು ಮಹತ್ವ

ವಿಶ್ಸಂಸ್ಥೆಯ ಸಾಮಾನ್ಯ ಸಭೆ 1972ರಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಘೋಷಿಸಿತು. 1974ರಲ್ಲಿ ಮೊದಲ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಯಿತು. ಅಲ್ಲಿಂದ ಪ್ರತಿ ವರ್ಚ ಮಹತ್ವದ ಆಚರಣೆಯಾಗಿ ನಡೆದುಕೊಂಡು ಬರುತ್ತಿದೆ. ಪರಿಸರ ಸಂರಕ್ಷಣೆ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯಕ್ರಮವಾಗಿದೆ. ವೈಯಕ್ತಿಕ, ಸಾಮುದಾಯಿಕ, ಸಾಮಾಜಿಕ ನೆಲೆಗಟ್ಟಿನಲ್ಲಿ ಪರಿಸರ ಸಂರಕ್ಷಣೆ ಇವತ್ತಿನ ತುರ್ತು ಅನಿವಾರ್ಯತೆಯಾಗಿದೆ. ಭವಿಷ್ಯದ ಪೀಳಿಗೆಯ ಹಿತಾಸಕ್ತಿಯಿಂದಲೂ ಇದು ಮುಖ್ಯ. ಮಾಲಿನ್ಯ, ಜೀವ ವೈವಿಧ್ಯತೆಯ ನಾಶ, ಸುಸ್ಥಿರ ಅಭಿವೃದ್ಧಿ ಇತ್ಯಾದಿ ವಿಚಾರಗಳ ಬಗ್ಗೆ ಈ ದಿನ ಬೆಳಕು ಬೀರಲಾಗುತ್ತದೆ. ಸರ್ಕಾರಗಳು, ಸಂಘಟನೆಗಳು ಮತ್ತು ವ್ಯಕ್ತಿಗತ ನೆಲೆಯಲ್ಲಿ ಪರಿಸರ ದಿನಾಚರಣೆಗೆ ಆದ್ಯತೆ ನೀಡಲಾಗುತ್ತದೆ. ಜನತೆ, ಎನ್‌ಜಿಒಗಳು, ಸಾಮಾಜಿಕ ಸಂಘಟನೆಗಳು ಈ ದಿನ ಪರಿಸರ ರಕ್ಷಣೆಗೆ ತಮ್ಮ ಕೊಡುಗೆ ನೀಡುತ್ತಾರೆ. ಜಾಥಾ ನಡೆಸುತ್ತಾರೆ. ಸಭೆ ಸಮಾರಂಭಗಳನ್ನು ಆಯೋಜಿಸುತ್ತಾರೆ. ಗಿಡಗಳನ್ನು ನೆಡುತ್ತಾರೆ. ತ್ಯಾಜ್ಯ ವಿಲೇವಾರಿ ಮಾಡುತ್ತಾರೆ.

ಇದನ್ನೂ ಓದಿ: ಲಾಲ್ ಬಾಗ್‌ನಲ್ಲಿ ʼದೇಶದ ಹೆಸರಿನಲ್ಲಿ ಒಂದು ಗಿಡʼ ಮಹಾ ಅಭಿಯಾನಕ್ಕೆ ಚಾಲನೆ

Exit mobile version