World Environment Day Today is World Environment Day 2023 Know the importance history theme of this dayworld environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್‌ ತಿಳಿಯಿರಿ
Connect with us

ದೇಶ

world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್‌ ತಿಳಿಯಿರಿ

world environment day ಇಂದು ಜೂನ್‌ 5, 2023. ಪರಿಸರ ದಿನಾಚರಣೆಯ ದಿನವೂ ಹೌದು. ಹಾಗಾದರೆ ಈ ದಿನದ ವಿಶೇಷ ಮತ್ತು ಮಹತ್ವ ಏನು? ಇಲ್ಲಿದೆ ವಿವರ.

VISTARANEWS.COM


on

world environment day image
Koo

ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್‌ 5ರಂದು ಆಚರಿಸಲಾಗುತ್ತದೆ. (world environment day) ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ವಿಶೇಷ ದಿನ ಇದಾಗಿದೆ. ಪರಿಸರ ರಕ್ಷಣೆಗೆ ಜನರನ್ನು ಪ್ರೇರೇಪಣೆಗೊಳಿಸಲಾಗುತ್ತದೆ. ಪರಿಸರ ಸಂರಕ್ಷಣೆ ಮತ್ತು ಜನ ಜಾಗೃತಿಗೆ ಹಲವಾರು ವಿಧಾನಗಳು ಮತ್ತು ಥೀಮ್‌ಗಳು ಇವೆ.

ಈ ವರ್ಷ ಪರಿಸರ ದಿನಾಚರಣೆಯ 50ನೇ ವಾರ್ಷಿಕೋತ್ಸವವೂ ಹೌದು. ಈ ವರ್ಷ ಪ್ಲಾಸ್ಟಿಕ್‌ನಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ಮತ್ತು ಅದನ್ನು ತಪ್ಪಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಥೀಮ್‌ ಅನ್ನು ಅಳವಡಿಸಲಾಗಿದೆ. ಕಾರಣವೇನು? ಮನುಷ್ಯರು ಪ್ರತಿ ವರ್ಷ 43 ಕೋಟಿ ಟನ್‌ಗೂ ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಉತ್ಪಾದಿಸುತ್ತಿದ್ದಾರೆ ಎನ್ನುತ್ತದೆ ವಿಶ್ವಸಂಸ್ಥೆಯ ಪರಿಸರ ಸಂರಕ್ಷಣೆ ಕಾರ್ಯಕ್ರಮದ ವರದಿ. 46% ಪ್ಲಾಸ್ಟಿಕ್‌ ತ್ಯಾಜ್ಯವನ್ನು ಭೂಮಿಯಲ್ಲಿ ಹೂತು ಹಾಕಲಾಗುತ್ತದೆ. 22% ಅನ್ನು ಸರಿಯಾನಿ ನಿರ್ವಹಿಸದೆ ಬಿಡಲಾಗುತ್ತಿದೆ.

ಪ್ಲಾಸ್ಟಿಕ್‌ನ ಸಮಸ್ಯೆ ಏನೆಂದರೆ ಅದು ಭೂಮಿಯಲ್ಲಿ ಮಣ್ಣಿನ ಜತೆಗೆ ಕರಗುವುದಿಲ್ಲ. ಇದರ ಪರಿಣಾಮವಾಗಿ ಸಮುದ್ರದಲ್ಲಿನ ಜೀವಿಗಳಿಗೆ ಬದುಕಲು ಕಷ್ಟವಾಗುತ್ತದೆ. ಮಣ್ಣಿನ ರಚನೆಗಳಿಗೆ ಹಾನಿಯಾಗುತ್ತದೆ. ಅಂತರ್ಜಲ ಕಲುಷಿತವಾಗುತ್ತದೆ. ಹಾಗೂ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ವಿಶ್ವಪರಿಸರ ದಿನಾಚರಣೆ 2023 ಥೀಮ್‌

ಈ ವರ್ಷ ವಿಶ್ವ ಪರಿಸರ ದಿನಾಚರಣೆ ದಿನವನ್ನು #BeatPlasticPollution ಎಂಬ ಥೀಮ್‌ ಅಡಿಯಲ್ಲಿ ಆಚರಿಸಲಾಗುತ್ತಿದೆ. ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಯಲು ಕೈಗೊಳ್ಳಬೇಕಿರುವ ನಾನಾ ಕ್ರಮಗಳ ಬಗ್ಗೆ ಚರ್ಚೆ, ಒತ್ತಾಯ, ಸಂಶೋಧನೆಗೆ ಇಲ್ಲಿ ಅವಕಾಶ ಇದೆ. ಇದರಲ್ಲಿ ಜನರ ಪಾಲ್ಗೊಳ್ಳುವಿಕೆ ಎಲ್ಲಕ್ಕಿಂತ ಮುಖ್ಯ. ವಿಶ್ವ ಪರಿಸರ ದಿನಾಚರಣೆ ಅತ್ಯಂತ ಪ್ರಮುಖ ಜಾಗತಿಕ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ವಿಶ್ವಾದ್ಯಂಕ ಕೋಟ್ಯಂತರ ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ( United Nations Environment Programme – UNEP) 1973ರಿಂದ ನಡೆಯುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಜಾನುವಾರುಗಳು ಮತ್ತು ಇತರ ಪ್ರಾಣಿಗಳು ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಆದ್ದರಿಂದ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಿಸಾಡುವ ಪ್ರವೃತ್ತಿಯನ್ನು ಕೈ ಬಿಡಬೇಕಾಗಿದೆ.

ವಿಶ್ವ ಪರಿಸರ ದಿನಾಚರಣೆ ದಿನ: ಇತಿಹಾಸ ಮತ್ತು ಮಹತ್ವ

ವಿಶ್ಸಂಸ್ಥೆಯ ಸಾಮಾನ್ಯ ಸಭೆ 1972ರಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಘೋಷಿಸಿತು. 1974ರಲ್ಲಿ ಮೊದಲ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಯಿತು. ಅಲ್ಲಿಂದ ಪ್ರತಿ ವರ್ಚ ಮಹತ್ವದ ಆಚರಣೆಯಾಗಿ ನಡೆದುಕೊಂಡು ಬರುತ್ತಿದೆ. ಪರಿಸರ ಸಂರಕ್ಷಣೆ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯಕ್ರಮವಾಗಿದೆ. ವೈಯಕ್ತಿಕ, ಸಾಮುದಾಯಿಕ, ಸಾಮಾಜಿಕ ನೆಲೆಗಟ್ಟಿನಲ್ಲಿ ಪರಿಸರ ಸಂರಕ್ಷಣೆ ಇವತ್ತಿನ ತುರ್ತು ಅನಿವಾರ್ಯತೆಯಾಗಿದೆ. ಭವಿಷ್ಯದ ಪೀಳಿಗೆಯ ಹಿತಾಸಕ್ತಿಯಿಂದಲೂ ಇದು ಮುಖ್ಯ. ಮಾಲಿನ್ಯ, ಜೀವ ವೈವಿಧ್ಯತೆಯ ನಾಶ, ಸುಸ್ಥಿರ ಅಭಿವೃದ್ಧಿ ಇತ್ಯಾದಿ ವಿಚಾರಗಳ ಬಗ್ಗೆ ಈ ದಿನ ಬೆಳಕು ಬೀರಲಾಗುತ್ತದೆ. ಸರ್ಕಾರಗಳು, ಸಂಘಟನೆಗಳು ಮತ್ತು ವ್ಯಕ್ತಿಗತ ನೆಲೆಯಲ್ಲಿ ಪರಿಸರ ದಿನಾಚರಣೆಗೆ ಆದ್ಯತೆ ನೀಡಲಾಗುತ್ತದೆ. ಜನತೆ, ಎನ್‌ಜಿಒಗಳು, ಸಾಮಾಜಿಕ ಸಂಘಟನೆಗಳು ಈ ದಿನ ಪರಿಸರ ರಕ್ಷಣೆಗೆ ತಮ್ಮ ಕೊಡುಗೆ ನೀಡುತ್ತಾರೆ. ಜಾಥಾ ನಡೆಸುತ್ತಾರೆ. ಸಭೆ ಸಮಾರಂಭಗಳನ್ನು ಆಯೋಜಿಸುತ್ತಾರೆ. ಗಿಡಗಳನ್ನು ನೆಡುತ್ತಾರೆ. ತ್ಯಾಜ್ಯ ವಿಲೇವಾರಿ ಮಾಡುತ್ತಾರೆ.

ಇದನ್ನೂ ಓದಿ: ಲಾಲ್ ಬಾಗ್‌ನಲ್ಲಿ ʼದೇಶದ ಹೆಸರಿನಲ್ಲಿ ಒಂದು ಗಿಡʼ ಮಹಾ ಅಭಿಯಾನಕ್ಕೆ ಚಾಲನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

Punjab Debt: 47,107 ಕೋಟಿ ರೂ. ಸಾಲದ ಪೈಕಿ ಅರ್ಧದಷ್ಟು ಬಡ್ಡಿ ಪಾವತಿಗೆ ಬಳಕೆ ಎಂದ ಪಂಜಾಬ್ ಸಿಎಂ

Punjab Debt: ಆಪ್ ಸರ್ಕಾರವು ಮಿತಿಮೀರಿ ಸಾಲ ಮಾಡುತ್ತಿದ್ದು, ಹಣದ ಬಳಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

VISTARANEWS.COM


on

Edited by

Bhagwant Mann
Koo

ನವದೆಹಲಿ: ಪಂಜಾಬ್‌ನಲ್ಲಿ (Punjab) ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ (Aam Aadmi Party Government) ಸರ್ಕಾರವು, ಕಳೆದ ಒಂದೂವರೆ ವರ್ಷದಲ್ಲಿ ಮಾಡಿದ ಸಾಲದ ಪೈಕಿ ಅರ್ಧದಷ್ಟು ಹಣವನ್ನು ಬಡ್ಡಿಯನ್ನು ನೀಡಲು ಬಳಸುತ್ತಿರುವುದಾಗಿ ಹೇಳಿದೆ(Interest Payment). ಪಂಜಾಬ್‌ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ (Punjab Governor) ಅವರು ಸಾಲದ ಮಾಹಿತಿಯನ್ನು ನೀಡುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕೋರಿದ್ದರು(CM Bhagwant Mann). ಇದಾದ ಮಾರನೇ ದಿನವಾಗಿ ಮೂರು ಪುಟಗಳ ಮಾಹಿತಿಯನ್ನು ನೀಡಿರುವ ಸಿಎಂ ಭಗವಂತ್ ಮಾನ್ ಅವರು, ಕಳೆದ ಒಂದೂವರೆ ವರ್ಷದಲ್ಲಿ ಪಂಜಾಬ್ ಸರ್ಕಾರವು 47,107.6 ಕೋಟಿ ರೂ. ಸಾಲ ಮಾಡಿದೆ. ಈ ಪೈಕಿ ಅರ್ಧದಷ್ಟು ಹಣವನ್ನು ಬಡ್ಡಿ ಪಾವತಿಸಲು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

2022 ಏಪ್ರಿಲ್ 1ರಿಂದ 2023ರ ಆಗಸ್ಟ್ 31ರ ವರೆಗೆ ಪಂಜಾಬ್ ಸರ್ಕಾರವು 47,107 ಕೋಟಿ ರೂಪಾಯಿಯನ್ನು ಸಾಲ ಮಾಡಿದೆ. ಈ ಮೊತ್ತವು, ಮಾರುಕಟ್ಟೆ ಸಾಲ ಮಾತ್ರವಲ್ಲದೇ, ಭಾರತ ಸರ್ಕಾರದಿಂದ ಅನುಮತಿಸಲಾದ ಬಾಹ್ಯ ನೆರವಿನ ಯೋಜನೆಯ ಸಾಲಗಳು ಮತ್ತು ಬಂಡವಾಳ ಸ್ವತ್ತುಗಳ ಸೃಷ್ಟಿಗೆ ವಿಶೇಷ ನೆರವಿನ ಅಡಿಯಲ್ಲಿ ನಬಾರ್ಡ್‌ನಿಂದ ದೀರ್ಘಾವಧಿಯ ಸಾಲ ಕೂಡ ಸೇರಿದೆ. ಒಟ್ಟು ಸಾಲದ ಪೈಕಿ 32,447 ಕೋಟಿ ರೂಪಾಯಿ 2022-23ರ ಹಣಕಾಸು ವರ್ಷದಲ್ಲಿ ಸಾಲವನ್ನು ತೆಗೆದುಕೊಂಡಿದ್ದರೆ, 14,660 ಕೋಟಿ ರೂಪಾಯಿಯನ್ನು ಪ್ರಸಕ್ತ ಸಾಲಿನ ಏಪ್ರಿಲ್ 1 ಮತ್ತು ಆಗಸ್ಟ್ 31ರ ನಡುವೆ ಸಾಲ ಪಡೆಯಲಾಗಿದೆ. ಒಟ್ಟು ಸಾಲದ ಪೈಕಿ 27016 ಕೋಟಿ ರೂಪಾಯಿಯನ್ನು ಸರಕಾರಿ ಸಾಲದ ಬಡ್ಡಿ ಪಾವತಿಗಾಗಿ ಬಳಸಲಾಗುತ್ತಿದೆ ಎಂದು ರಾಜ್ಯಪಾಲರಿಗ ಬರೆದ ಪತ್ರದಲ್ಲಿ ಸಿಎಂ ಭಗವಂತ್ ಮಾನ್ ಅವರು ತಿಳಿಸಿದ್ದಾರೆ.

ಪಂಜಾಬ್ ರಾಜ್ಯಪಾಲ ಪುರೋಹಿತ್ ಅವರು ಸೆಪ್ಟೆಂಬರ್ 21ರಂದು ಪತ್ರ ಬರೆದು, ತನ್ನ ಅವಧಿಯಲ್ಲಿ ಆಪ್ ಮಾಡಿರುವ 50 ಸಾವಿರ ಕೋಟಿ ರೂ. ಸಾಲದ ಬಳಕೆಯ ಮಾಹಿತಿ ನೀಡುವಂತೆ ಕೋರಿದ್ದರು. ನಿಮ್ಮ ಆಡಳಿತದಲ್ಲಿ ಪಂಜಾಬ್ ಸಾಲದ ಮೊತ್ತವು 50 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಈ ಬೃಹತ್ ಮೊತ್ತ ಸಾಲದ ಬಳಕೆಯ ವಿವರಗಳನ್ನು ನನಗೆ ಒದಗಿಸಬಹುದು. ಇದರಿಂದ ಹಣವನ್ನು ಸರಿಯಾಗಿ ಬಳಸಲಾಗಿದೆ ಎಂದು ನಾನು ಪ್ರಧಾನಿಗೆ ಮನವರಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Punjab CM | ದಿನಗೂಲಿ ಹೆಚ್ಚಳಕ್ಕೆ ಆಗ್ರಹಿಸಿ ಪಂಜಾಬ್ ಸಿಎಂ ಭಗವಂತ್ ಮಾನ್‌ ಮನೆಗೆ ದಲಿತ ಕೃಷಿ ಕಾರ್ಮಿಕರ ಮುತ್ತಿಗೆ

ಆಪ್ ಸರ್ಕಾರವು ಬೃಹತ್ ಮೊತ್ತದ ಹಣ ಬಳಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ ಮತ್ತು ಬೇಜವಾಬ್ದಾರಿಯಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ವಿಶೇಷವಾಗಿ ಕಾಂಗ್ರೆಸ್ ಪಕ್ಷವು ಆಪ್ ವಿರುದ್ಧ ಟೀಕೆ ಮಾಡಿತ್ತು. 2021-22ರ ಮುಕ್ತಾಯದ ಹೊತ್ತಿಗೆ ಪಂಜಾಬ್ ಸರ್ಕಾರವು 2.82 ಕೋಟಿ ರೂ. ಸಾಲ ಮಾಡಿತ್ತು. ಆ ಸಾಲದ ಮೊತ್ತವು 2022-23ರ ಹೊತ್ತಿಗೆ 3.12 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ದೇಶದ ಅತಿ ಹೆಚ್ಚು ಸಾಲ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಪಂಜಾಬ್ ಕೂಡ ಒಂದಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ದೇಶ

PM Narendra Modi: ಜಾತಿ ಗಣತಿಯಿಂದ ಹಿಂದೂಗಳಲ್ಲಿ ಒಡಕು ಮೂಡಿಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ

PM Narendra Modi: ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆಯನ್ನು ಎದುರಿಸಲಿರುವ ಛತ್ತೀಸ್‌ಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

VISTARANEWS.COM


on

Edited by

Congress is trying divided hindus Says PM narendra modi
Koo

ಜಗದಲ್‌ಪುರ, ಛತ್ತೀಸ್‌ಗಢ: ಜಾತಿ ಗಣತಿಯ (caste census) ಮೂಲಕ ಕಾಂಗ್ರೆಸ್ ಪಕ್ಷವು (Congress Party) ಹಿಂದೂಗಳಲ್ಲಿ ಒಡಕು ಮೂಡಿಸುತ್ತಿದೆ (Dividing Hindus) ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ(Chhattisgarh Assembly Election) ನಡೆಯಲಿರುವ ಛತ್ತೀಸ್‌ಗಢ ಜಗದಲ್‌ಪುರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಸಂಪನ್ಮೂಲಗಳ ಮೇಲಿನ ಹಕ್ಕನ್ನು ಬಡವರು ಹೊಂದಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ನಿನ್ನೆ ರಾಜಸ್ಥಾನದಲ್ಲಿ ಮಾತನಾಡಿದ್ದ ಪ್ರಧಾನಿ ಅವರು, ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಜಾತಿ ಗಣತಿಯ ಮೂಲಕ ಪ್ರತಿಪಕ್ಷಗಳು ದೇಶವನ್ನು ಒಡೆಯುವ ಸಂಚು ರೂಪಿಸಿವೆ ಎಂದು ಹೇಳಿದ್ದರು.

ಜನಸಂಖ್ಯೆ ಎಷ್ಟಿದೆಯೋ ಅಷ್ಟೇ ಹಕ್ಕು ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಛತ್ತೀಸ್‌ಗಢದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವ ಇತಿಹಾಸವು ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ಹೇಳಿದರು. ದೇಶದ ಅತಿದೊಡ್ಡ ಜನಸಂಖ್ಯೆ ಎಂದರೆ ಬಡವರು ಮಾತ್ರ. ಅವರಿಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಈ ಹಿಂದೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರದ್ದು ಎಂದು ಹೇಳಿದ್ದರು. ಈಗ ಕಾಂಗ್ರೆಸ್ ಪಕ್ಷವು ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಸಮುದಾಯಕ್ಕೆ ಮೊದಲ ಹಕ್ಕು ಎಂದು ಹೇಳುತ್ತಿದೆ. ಹಾಗಾದರೆ, ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ಹಕ್ಕನ್ನು ಕಸಿದುಕೊಳ್ಳಲು ಹುನ್ನಾರ ನಡೆಸುತ್ತಿದೆಯೇ ಎಂದು ವ್ಯಂಗ್ಯವಾಗಿ ಕಾಂಗ್ರೆಸ್‌ ಪಕ್ಷಕ್ಕೆ ತಿವಿದರು.

ಈ ಸುದ್ದಿಯನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಗಿಫ್ಟ್ ನಿಮಗೂ ಬೇಕಾ? ಹಾಗಾದ್ರೆ, ಆನ್‌ಲೈನ್‌ ಹರಾಜಿನಲ್ಲಿ ಭಾಗವಹಿಸಿ

ಕಾಂಗ್ರೆಸ್ ಪಕ್ಷವು ದೇಶವನ್ನು ನಾಶ ಮಾಡುವ ಪಣ ತೊಟ್ಟಂತೆ ಕಾಣುತ್ತಿದೆ. ಹಿಂದೂಗಳನ್ನು ವಿಭಜಿಸಿ, ಸಮಾಜದಲ್ಲಿ ತಾರತಮ್ಯವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡುತ್ತಿದೆ. 70 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು, ಬಡತನವನ್ನು ಬಿಟ್ಟು ದೇಶಕ್ಕೆ ಬೇರೇನೂ ಕೊಟ್ಟಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ಈಗ ದೇಶವಿರೋಧಿಗಳ ಜತೆ ಸೇರಿಕೊಂಡಿದೆ. ದೇಶವನ್ನು ನಾಶ ಮಾಡಲು ಹೊರಟಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ಮೂಲ ಕಾಂಗ್ರೆಸ್ ಜನರು ನಡೆಸುತ್ತಿಲ್ಲ. ಇದನ್ನೆಲ್ಲ ನೋಡಿದ ಕಾಂಗ್ರೆಸ್‌ನ ಹಿರಿಯ ನಾಯಕರು ಕೇಳಲೂ ಇಲ್ಲ, ಮಾತನಾಡುವ ಧೈರ್ಯವೂ ಇಲ್ಲ ಎಂದು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಈಗ ಕಾಂಗ್ರೆಸ್ ಅನ್ನು ಹೊರಗುತ್ತಿಗೆ ನೀಡಲಾಗಿದೆ ಎಂದು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ದೇಶ

Delhi Earthquake: ದೆಹಲಿಯ ಸುತ್ತಮುತ್ತ ಪ್ರಬಲ ಭೂಕಂಪ; ಮನೆಯಿಂದ ಓಡಿ ಬಂದ ಜನ!

Delhi Earthquake: ದೆಹಲಿ ಹಾಗೂ ರಾಷ್ಟ್ರ ರಾಜಧಾನಿಯ ಹಲವೆಡೆ ಮಂಗಳವಾರ ಮಧ್ಯಾಹ್ನ ಭೂಮಿ ಕಂಪಿಸಿದೆ. ಭೂಕಂಪನದ ಅನುಭವವಾಗುತ್ತಲೇ ಜನ ಆತಂಕದಲ್ಲಿ ಮನೆಯಿಂದ ಹೊರಗೆ ಬಂದು ನಿಂತ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡಿವೆ.

VISTARANEWS.COM


on

Edited by

Earthquake in Delhi
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ (NCR) ಹಲವೆಡೆ ಮಂಗಳವಾರ (ಅಕ್ಟೋಬರ್‌ 3) ಭೂಕಂಪ (Delhi Earthquake) ಸಂಭವಿಸಿದೆ. ರಿಕ್ಟರ್‌ ಮಾಪನದಲ್ಲಿ 4.6ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ (National Centre for Seismology) ಮಾಹಿತಿ ನೀಡಿದೆ.

ಮಧ್ಯಾಹ್ನ 2.20ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನೇಪಾಳದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮವು ದೇಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಉಂಟಾಗಿದೆ ಎಂದು ತಿಳಿಸಿದೆ. ಭೂಮಿಯ ಮೇಲ್ಮೈನ 5 ಕಿಲೋಮೀಟರ್‌ ಕೆಳಗೆ ಭೂಮಿ ನಲುಗಿದೆ ಎಂದು ಮಾಹಿತಿ ನೀಡಿದೆ.

ಉತ್ತರಾಖಂಡದ ಡೆಹ್ರಾಡೂನ್‌, ಉತ್ತರ ಪ್ರದೇಶದ ನೊಯ್ಡಾ, ಹರಿಯಾಣ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗುತ್ತಲೇ ಜನ ಮನೆಯಿಂದ ಹೊರಗೆ ಬಂದಿದ್ದಾರೆ. ಅಪಾರ್ಟ್‌ಮೆಂಟ್‌ಗಳು, ಮನೆಗಳು ಸೇರಿ ಹಲವೆಡೆ ಜನ ಕಟ್ಟಡದ ಹೊರಗೆ ಬಂದು ನಿಂತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ತೀವ್ರ ಪ್ರಮಾಣದಲ್ಲಿಯೇ ಭೂಕಂಪ ಸಂಭವಿಸಿದರೂ ಯಾವುದೇ ಸಾವು-ನೋವು ಸಂಭವಿಸಿಲ್ಲ. ಹಾಗೆಯೇ, ದೊಡ್ಡ ದೊಡ್ಡ ಕಟ್ಟಡಗಳಿಗೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಭೂಕಂಪದ ಕುರಿತು ಸಾರ್ವಜನಿಕರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೆಲವರು ವಿಡಿಯೊಗಳನ್ನೇ ಶೇರ್‌ ಮಾಡಿದ್ದಾರೆ. ಮನೆಯಲ್ಲಿ ಫ್ಯಾನ್‌ಗಳು ಅಲುಗಾಡಿದ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Google: ಭಾರತೀಯ ಬಳಕೆದಾರರಿಗೆ ಭೂಕಂಪ ಎಚ್ಚರಿಕೆ ಸಿಸ್ಟಮ್ ಫೀಚರ್ ಆರಂಭಿಸಿದ ಗೂಗಲ್

ಭೂಕಂಪ ಸಂಭವಿಸುತ್ತಲೇ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಎಚ್ಚರಿಸಿದರು. ಭೂಮಿಯ ಅನುಭವವಾಗುತ್ತಲೇ ಜನ ಮನೆಯಿಂದ ಹೊರಗೆ ಬರಬೇಕು. ಯಾರು ಕೂಡ ಎಲೆವೇಟರ್‌ಗಳನ್ನು ಬಳಸಬಾರದು. ಯಾವುದೇ ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ ಎಂದು ಪೋಸ್ಟ್‌ ಮಾಡಿದ್ದಾರೆ.

Continue Reading

ದೇಶ

India’s GDP: ಈ ವರ್ಷ ಭಾರತದ ಜಿಡಿಪಿ ಬೆಳವಣಿಗೆ 6.3%: ವಿಶ್ವ ಬ್ಯಾಂಕ್‌ ಅಂದಾಜು

ಜಾಗತಿಕ ಸನ್ನಿವೇಶಗಳ ಸವಾಲಿನ ನಡುವೆ ಭಾರತ ಹಣಕಾಸಿನ ಸ್ಥಿತಿಸ್ಥಾಪಕತ್ವ ಕಾಪಾಡಿಕೊಂಡಿದೆ ಎಂದಿರುವ ಬ್ಯಾಂಕ್‌, 2023-24ರ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಹಿಂದಿನ ಶೇಕಡಾ 6.6ರಿಂದ ತನ್ನ ಏಪ್ರಿಲ್ ವರದಿಯಲ್ಲಿ ಶೇಕಡಾ 6.3ಕ್ಕೆ ಕಡಿತಗೊಳಿಸಿದೆ.

VISTARANEWS.COM


on

Edited by

gdp
Koo

ಹೊಸದಿಲ್ಲಿ: 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ (India’s GDP growth) ದರವನ್ನು ವಿಶ್ವ ಬ್ಯಾಂಕ್ (World bank) ಶೇಕಡಾ 6.3ರಲ್ಲಿ ಉಳಿಸಿಕೊಂಡಿದೆ.

ಜಾಗತಿಕ ಸನ್ನಿವೇಶಗಳ ಸವಾಲಿನ ನಡುವೆ ಭಾರತ ಹಣಕಾಸಿನ ಸ್ಥಿತಿಸ್ಥಾಪಕತ್ವ ಕಾಪಾಡಿಕೊಂಡಿದೆ ಎಂದಿರುವ ಬ್ಯಾಂಕ್‌, 2023-24ರ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಹಿಂದಿನ ಶೇಕಡಾ 6.6ರಿಂದ ತನ್ನ ಏಪ್ರಿಲ್ ವರದಿಯಲ್ಲಿ ಶೇಕಡಾ 6.3ಕ್ಕೆ ಕಡಿತಗೊಳಿಸಿದೆ.

ಮಂಗಳವಾರ ಬಿಡುಗಡೆಯಾದ ವಿಶ್ವಬ್ಯಾಂಕ್‌ನ ಇತ್ತೀಚಿನ ಇಂಡಿಯಾ ಡೆವಲಪ್‌ಮೆಂಟ್ ಅಪ್‌ಡೇಟ್ (ಐಡಿಯು) ಪ್ರಕಾರ, ಗಮನಾರ್ಹ ಜಾಗತಿಕ ಸವಾಲುಗಳ ಹೊರತಾಗಿಯೂ, ಭಾರತವು 2022-23ರಲ್ಲಿ 7.2 ಶೇ. ವೇಗದಲ್ಲಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಭಾರತದ ಬೆಳವಣಿಗೆ ದರವು G20 ದೇಶಗಳಲ್ಲಿ ಎರಡನೇ ಅತಿ ಹೆಚ್ಚು ಮತ್ತು ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಿಗೆ ಸರಾಸರಿ ಎರಡು ಪಟ್ಟು ಹೆಚ್ಚಾಗಿದೆ. ಈ ಸ್ಥಿತಿಸ್ಥಾಪಕತ್ವವು ದೃಢವಾದ ಆಂತರಿಕ ಬೇಡಿಕೆ, ಬಲವಾದ ಸಾರ್ವಜನಿಕ ಮೂಲಸೌಕರ್ಯ ಹೂಡಿಕೆ ಮತ್ತು ದೃಢ ಆರ್ಥಿಕ ವಲಯದ ಆಧಾರ ಹೊಂದಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಭಾರತದಲ್ಲಿ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ ಸಾಲ ಶೇಕಡಾ 15.8ರಷ್ಟು ಬೆಳೆದಿದೆ. ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದು ಶೇಕಡಾ 13.3 ಇತ್ತು. ಭಾರತದ ಸೇವಾ ವಲಯದ ಚಟುವಟಿಕೆಯು 7.4 ಶೇಕಡಾ ಬೆಳವಣಿಗೆಯೊಂದಿಗೆ ಪ್ರಬಲವಾಗಿ ಉಳಿಯುವ ನಿರೀಕ್ಷೆಯಿದೆ. ಹೂಡಿಕೆಯ ಬೆಳವಣಿಗೆಯು 8.9 ಶೇಕಡಾದಲ್ಲಿ ದೃಢವಾಗಿ ಉಳಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೆಚ್ಚಿನ ಜಾಗತಿಕ ಬಡ್ಡಿದರಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ನಿಧಾನವಾದ ಜಾಗತಿಕ ಬೇಡಿಕೆಯಿಂದಾಗಿ ಜಾಗತಿಕ ಆರ್ಥಿಕ ಬೆಳವಣಿಗೆಯು ಮಧ್ಯಮ ಅವಧಿಯಲ್ಲಿ ನಿಧಾನಗೊಳ್ಳಲಿದೆ ಎಂದಿದೆ. ಇತ್ತೀಚಿನ ತಿಂಗಳುಗಳಲ್ಲಿ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾದ ಭಾರತದಲ್ಲಿನ ಪ್ರತಿಕೂಲ ಹವಾಮಾನದ ಬಗ್ಗೆ ವಿಶ್ವ ಬ್ಯಾಂಕ್ ವರದಿ ಉಲ್ಲೇಖಿಸಿದ್ದು, ಆಹಾರದ ಬೆಲೆಗಳು ಕಡಿಮೆಯಾಗುವುದರಿಂದ ಮತ್ತು ಸರ್ಕಾರದ ಕ್ರಮಗಳು ಪ್ರಮುಖ ಸರಕುಗಳ ಪೂರೈಕೆಯನ್ನು ಹೆಚ್ಚಿಸುವುದರಿಂದ ಬೆಲೆ ಏರಿಕೆ ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದಿದೆ.

ಗೋಧಿ ಮತ್ತು ಅಕ್ಕಿಯಂತಹ ಆಹಾರ ಪದಾರ್ಥಗಳ ಬೆಲೆಗಳ ಏರಿಕೆಯಿಂದಾಗಿ ಜುಲೈನಲ್ಲಿ ಭಾರತದಲ್ಲಿ ​​ಹಣದುಬ್ಬರ 7.8 ಶೇಕಡಾಕ್ಕೆ ಏರಿತು. ಆಗಸ್ಟ್‌ನಲ್ಲಿ 6.8 ಶೇಕಡಾಕ್ಕೆ ಇಳಿಯಿತು. ವಿಶ್ವಬ್ಯಾಂಕ್ 2023-24ರಲ್ಲಿ ವಿತ್ತೀಯ ಬಲವರ್ಧನೆ ಮುಂದುವರಿಯುತ್ತದೆ ಎಂದು ನಿರೀಕ್ಷಿಸಿದೆ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಜಿಡಿಪಿಯ 6.4 ಶೇಕಡಾದಿಂದ 5.9 ಶೇಕಡಾಕ್ಕೆ ಇಳಿಕೆಯಾಗಲಿದೆ ಎಂದಿದೆ. ಸಾರ್ವಜನಿಕ ಸಾಲವು ಜಿಡಿಪಿಯ ಶೇಕಡಾ 83ರಷ್ಟು ಸ್ಥಿರಗೊಳ್ಳುವ ನಿರೀಕ್ಷೆಯಿದೆ. ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇಕಡಾ 1.4ಕ್ಕೆ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: India’s GDP : ಭಾರತದ ಜಿಡಿಪಿ ಈಗ 3.75 ಲಕ್ಷ ಕೋಟಿ ಡಾಲರ್‌ಗೆ ಏರಿಕೆ, 2014ರಲ್ಲಿ ಎಷ್ಟಿತ್ತು?

Continue Reading
Advertisement
Annu Rani
ಕ್ರೀಡೆ7 mins ago

Asian Games : ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಅನ್ನುರಾಣಿ

Old Pension Scheme Madhu Bangarappa
ಕರ್ನಾಟಕ25 mins ago

Old Pension Scheme : ಸರ್ಕಾರಿ ನೌಕರರಿಗೆ Good News; ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಎಂದ ಮಧು ಬಂಗಾರಪ್ಪ

No Rain Girl waiting For rain and holding Umbrella
ಉಡುಪಿ53 mins ago

karnataka weather forecast : ಮುಕ್ಕಾಲು ಜಿಲ್ಲೆಗೆ ಕೈಕೊಟ್ಟ ಮಳೆರಾಯ; ಮತ್ತೆ ಮುಂಗಾರು ದುರ್ಬಲ

Paris facing bed bugs and France government is trying to tackle crisis
ಪ್ರಮುಖ ಸುದ್ದಿ54 mins ago

Bed Bugs: ಪ್ಯಾರಿಸ್‌ನಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ! ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಂಟ್ರಿ ಕೊಟ್ಟ ಫ್ರಾನ್ಸ್ ಸರ್ಕಾರ

Parul won gold medal in asian Games
ಕ್ರೀಡೆ55 mins ago

Asian Games : ಭಾರತಕ್ಕೆ ಮತ್ತೊಂದು ಚಿನ್ನದ ಪದಕ, 5000 ಮೀಟರ್​ ಓಟದಲ್ಲಿ ಮೊದಲ ಸ್ಥಾನ ಪಡೆದ ಪಾರುಲ್​

Siddaramaiah felicitated at Shepherds India International Conference
ಕರ್ನಾಟಕ1 hour ago

Kuruba Conference: ಬೆಳಗಾವಿಯಲ್ಲಿ ಬೃಹತ್‌ ಕುರುಬ ಸಮಾವೇಶದ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನ

Shivamogga encounter Fake News
ಕರ್ನಾಟಕ1 hour ago

Shivamogga Violence : ಎನ್‌ಕೌಂಟರ್‌ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್‌ ಎಂದ ಎಸ್ಪಿ

boney kapoor
ಬಾಲಿವುಡ್1 hour ago

Boney Kapoor: ನಟಿ ಶ್ರೀದೇವಿ ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್! ಅಂದು ಆಗಿದ್ದೇನು?

indvsned practice match
ಕ್ರಿಕೆಟ್1 hour ago

ICC World Cup 2023 : ಭಾರತ- ನೆದರ್ಲ್ಯಾಂಡ್ಸ್​ ​​​ ಅಭ್ಯಾಸ ಪಂದ್ಯವೂ ರದ್ದು

Bhagwant Mann
ದೇಶ2 hours ago

Punjab Debt: 47,107 ಕೋಟಿ ರೂ. ಸಾಲದ ಪೈಕಿ ಅರ್ಧದಷ್ಟು ಬಡ್ಡಿ ಪಾವತಿಗೆ ಬಳಕೆ ಎಂದ ಪಂಜಾಬ್ ಸಿಎಂ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

The maintenance train finally lifted Metro services as usual
ಕರ್ನಾಟಕ3 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ5 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ14 hours ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ1 day ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ2 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಮನೆಯಲ್ಲೂ ಕಿರಿಕಿರಿ, ಆಫೀಸ್‌ನಲ್ಲೂ ಕಿರಿಕ್‌!

ಟ್ರೆಂಡಿಂಗ್‌