Site icon Vistara News

Odisha Train Accident: ‘ಸಂತ್ರಸ್ತರ ನೆರವಿಗೆ ನಾವಿದ್ದೇವೆ’, ರೈಲು ಅಪಘಾತಕ್ಕೆ ಕಂಬನಿ ಮಿಡಿದ ವಿಶ್ವ ನಾಯಕರು

Vladimir Putin, Fumio Kishida Express Condolences

World Leaders Extend Condolences TO Odisha Train Accident Victims

ನವದೆಹಲಿ: ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತದಲ್ಲಿ (Odisha Train Accident) ಮೃತಪಟ್ಟವರ ಸಂಖ್ಯೆ 300 ಸಮೀಪಿಸಿದೆ. 900ಕ್ಕೂ ಅಧಿಕ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಅಪಘಾತದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸೇರಿ ಜಗತ್ತಿನ ಹಲವು ನಾಯಕರು ರೈಲು ಅಪಘಾತದ ಕುರಿತು ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತರ ನೆರವಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ.

“ಒಡಿಶಾದಲ್ಲಿ ನಡೆದ ರೈಲು ದುರಂತದ ಸುದ್ದಿ ತಿಳಿದು ಅತೀವ ಬೇಸರವಾಗಿದೆ. ಗಾಯಾಳುಗಳು ಕ್ಷಿಪ್ರವಾಗಿ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. ಜಪಾನ್‌ ಪ್ರಧಾನಿ ಫುಮಿಯೋ ಕಿಶಿದ ಅವರು ಕೂಡ ಸಂತಾಪ ಸೂಚಿಸಿದ್ದಾರೆ. “ರೈಲು ಅಪಘಾತದಲ್ಲಿ ನೂರಾರು ಜನ ಮೃತಪಟ್ಟಿದ್ದು ಬೇಸರ ತಂದಿದೆ. ಮೃತರ ಕುಟುಂಬಸ್ಥರ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ” ಎಂದು ಟ್ವೀಟ್‌ ಮಾಡಿದ್ದಾರೆ.

ಜಪಾನ್‌ ಪ್ರಧಾನಿ ಟ್ವೀಟ್

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು ಟ್ವೀಟ್‌ ಮಾಡಿದ್ದು, “ಕೆನಡಾದ ನಾಗರಿಕರು ಭಾರತೀಯರೊಂದಿಗೆ ಇದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ತಕ್ಷಣವೇ ಗುಣಮುಖರಾಗಲಿ. ಮೃತರ ಕುಟುಂಬಸ್ಥರ ದುಃಖದಲ್ಲಿ ನಮ್ಮದೂ ಪಾಲು ಇದೆ” ಎಂದು ಟ್ವೀಟ್‌ ಮೂಲಕ ಸಂತಾಪ ತಿಳಿಸಿದ್ದಾರೆ.

ಜಸ್ಟಿನ್‌ ಟ್ರುಡೊ ಸಂತಾಪ

ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ವೊನ್‌ ಡೆರ್‌ ಲೆಯೆನ್‌ ಅವರು ಕೂಡ ಸಂತಾಪ ಸಂದೇಶ ಕಳುಹಿಸಿದಾರೆ. “ಭಾರತೀಯರ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಇಡೀ ಯುರೋಪ್‌ ನಾಗರಿಕರು ಭಾರತೀಯರ ದುಃಖಕ್ಕೆ ಮರಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Odisha Train Accident: ಗ್ರೀನ್‌ ಸಿಗ್ನಲ್‌ ಸಿಕ್ಕರೂ ನಡೆಯಿತು ರೈಲು ಅಪಘಾತ, ತನಿಖಾ ವರದಿ ಮಾಹಿತಿಯೇ ಭೀಕರ

ಹಾಗೆಯೇ, ನೇಪಾಳ ಪ್ರಧಾನಿ ಪ್ರಚಂಡ, ಭೂತಾನ್‌ ಪ್ರಧಾನಿ ಲೊಟೆ ತ್ಸೆರಿಂಗ್‌, ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷ ಕ್ಸಾಬಾ ಕೊರೊಸಿ, ಮಾಲ್ಡೀವ್ಸ್‌ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್‌ ಸೇರಿ ಹಲವು ವಿದೇಶಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶನಿವಾರ ಅಪಘಾತದ ಸ್ಥಳಕ್ಕೆ ತೆರಳಿದ ಪ್ರಧಾನಿ, ರಕ್ಷಣಾ ಕಾರ್ಯಾಚರಣೆ ಸೇರಿ ಹಲವು ರೀತಿಯ ಪರಿಶೀಲನೆ ನಡೆಸಿದರು. ಹಾಗೆಯೇ, ಆಸ್ಪತ್ರೆಗೆ ತೆರಳಿ ಗಾಯಾಳುಗಳಿಗೆ ಸಾಂತ್ವನ ಹೇಳುವ ಜತೆಗೆ ಚಿಕಿತ್ಸೆ, ಮೂಲ ಸೌಕರ್ಯದ ಪರಿಶೀಲನೆ ಮಾಡಿದರು.

Exit mobile version