ನವದೆಹಲಿ: ದೇಶದಲ್ಲೇ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ (Popular CM) ಯಾರು ಎಂದು ಕೇಳಿದರೆ, ತುಂಬ ಜನ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಎಂದು ಹೇಳುತ್ತಾರೆ. ಆದರೆ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ದೇಶದಲ್ಲೇ ಜನಪ್ರಿಯ ಸಿಎಂ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ, ದೇಶದ ಜನಪ್ರಿಯ ಸಿಎಂಗಳಲ್ಲಿ ನವೀನ್ ಪಟ್ನಾಯಕ್ (Naveen Patnaik) ಮೊದಲನೇ ಸ್ಥಾನದಲ್ಲಿದ್ದರೆ, ಯೋಗಿ ಆದಿತ್ಯನಾಥ್ ಅವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಜನಪ್ರಿಯತೆ ಹಾಗೂ ಜನಮೆಚ್ಚುಗೆ ಎಷ್ಟಿದೆ ಎಂಬುದರ ಕುರಿತು ನಡೆದ ಸಮೀಕ್ಷೆಯಲ್ಲಿ ನವೀನ್ ಪಟ್ನಾಯಕ್ ಅವರಿಗೆ ಶೇ.52.7ರಷ್ಟು ರೇಟಿಂಗ್ ಲಭಿಸಿದೆ. ಇನ್ನು ಯೋಗಿ ಆದಿತ್ಯನಾಥ್ ಅವರಿಗೆ ಶೇ.51.3ರಷ್ಟು ಅಂಕ ಸಿಕ್ಕಿವೆ. ಇನ್ನು, ಖಡಕ್ ತೀರ್ಮಾನ, ನೇರ ಮಾತುಗಳಿಂದಲೇ ಖ್ಯಾತಿ ಗಳಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶೇ.48.6ರಷ್ಟು ರೇಟಿಂಗ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಶೇ.42.6ರಷ್ಟು ಅಂಕ ಪಡೆದ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.
Naveen Patnaik is the most popular CM of India, followed by Yogi Adityanath!
— Open Letter (@openletteryt) February 18, 2024
Truly deserving. The way Odisha has been transformed, it deserves more attention and discussion.
ತ್ರಿಪುರ ಮುಖ್ಯಮಂತ್ರಿ ಡಾ.ಮಾಣಿಕ್ ಸಾಹ ಅವರು ಶೇ.41.4ರಷ್ಟು ಅಂಕ ಪಡೆದು ಐದನೇ ಸ್ಥಾನ ಪಡೆದಿದ್ದಾರೆ. ಮಾಣಿಕ್ ಸಾಹ ಅವರ ಸರಳತೆ, ಸಮರ್ಪಣಾ ಮನೋಭಾವ, ಪ್ರಾಮಾಣಿಕತೆ ಹಾಗೂ ಅಭಿವೃದ್ಧಿಯನ್ನು ಗಮನಿಸಿದ ಜನ ಕ್ಷಿಪ್ರವಾಗಿ ಅವರನ್ನು ಸ್ವೀಕರಿಸಿದ್ದಾರೆ. ಹಾಗಾಗಿ, ಮಾಣಿಕ್ ಸಾಹ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎರಡೇ ವರ್ಷದಲ್ಲಿ ದೇಶದಲ್ಲೇ ಐದನೇ ಜನಪ್ರಿಯ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Ram Mandir : ಯೋಗಿ ನೇತೃತ್ವದಲ್ಲಿ ಆಯೋಧ್ಯೆಗೆ ಭೇಟಿ ನೀಡಿದ ಉತ್ತರ ಪ್ರದೇಶ ಶಾಸಕರು
ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರಂತೆ ಮಾಣಿಕ್ ಸಾಹ ಕೂಡ ಕಾಂಗ್ರೆಸ್ ತೊರೆದು, 2016ರಲ್ಲಿ ಬಿಜೆಪಿ ಸೇರ್ಪಡೆಯಾಗಿ, ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯರಾಗಿರುವ ಮಾಣಿಕ್ ಸಾಹ ಅವರು 2020ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. ನಂತರ ಇವರನ್ನು ಬಿಜೆಪಿ ಹೈಕಮಾಂಡ್ 2022ರಲ್ಲಿ ತ್ರಿಪುರ ಮುಖ್ಯಮಂತ್ರಿಯನ್ನಾಗಿ ನೇಮಿಸಿತು. ದಕ್ಷ ಆಡಳಿತದ ಮೂಲಕ ಸಿಎಂ ಆದ ಎರಡೇ ವರ್ಷದಲ್ಲಿ ಮಾಣಿಕ್ ಸಾಹ ಅವರು ದೇಶಾದ್ಯಂತ ಗಮನ ಸೆಳೆಯುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ