Popular CM: ದೇಶದ ಜನಪ್ರಿಯ ಸಿಎಂಗಳ ಪಟ್ಟಿ ಪ್ರಕಟ; ಯೋಗಿ ನಂ.1 ಅಲ್ಲ, ಮತ್ಯಾರು? - Vistara News

ದೇಶ

Popular CM: ದೇಶದ ಜನಪ್ರಿಯ ಸಿಎಂಗಳ ಪಟ್ಟಿ ಪ್ರಕಟ; ಯೋಗಿ ನಂ.1 ಅಲ್ಲ, ಮತ್ಯಾರು?

Popular CM: ಖಡಕ್‌ ಮಾತುಗಳಿಂದಲೇ ದೇಶದ ಗಮನ ಸೆಳೆದಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮೂರನೇ ಜನಪ್ರಿಯ ಸಿಎಂ ಎನಿಸಿದ್ದಾರೆ. ಪಟ್ಟಿ ಇಲ್ಲಿದೆ.

VISTARANEWS.COM


on

Yogi Adityanath
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಶದಲ್ಲೇ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ (Popular CM) ಯಾರು ಎಂದು ಕೇಳಿದರೆ, ತುಂಬ ಜನ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಎಂದು ಹೇಳುತ್ತಾರೆ. ಆದರೆ, ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ದೇಶದಲ್ಲೇ ಜನಪ್ರಿಯ ಸಿಎಂ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ, ದೇಶದ ಜನಪ್ರಿಯ ಸಿಎಂಗಳಲ್ಲಿ ನವೀನ್‌ ಪಟ್ನಾಯಕ್‌ (Naveen Patnaik) ಮೊದಲನೇ ಸ್ಥಾನದಲ್ಲಿದ್ದರೆ, ಯೋಗಿ ಆದಿತ್ಯನಾಥ್‌ ಅವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

Naveen Patnaik


ಜನಪ್ರಿಯತೆ ಹಾಗೂ ಜನಮೆಚ್ಚುಗೆ ಎಷ್ಟಿದೆ ಎಂಬುದರ ಕುರಿತು ನಡೆದ ಸಮೀಕ್ಷೆಯಲ್ಲಿ ನವೀನ್‌ ಪಟ್ನಾಯಕ್‌ ಅವರಿಗೆ ಶೇ.52.7ರಷ್ಟು ರೇಟಿಂಗ್‌ ಲಭಿಸಿದೆ. ಇನ್ನು ಯೋಗಿ ಆದಿತ್ಯನಾಥ್‌ ಅವರಿಗೆ ಶೇ.51.3ರಷ್ಟು ಅಂಕ ಸಿಕ್ಕಿವೆ. ಇನ್ನು, ಖಡಕ್‌ ತೀರ್ಮಾನ, ನೇರ ಮಾತುಗಳಿಂದಲೇ ಖ್ಯಾತಿ ಗಳಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶೇ.48.6ರಷ್ಟು ರೇಟಿಂಗ್‌ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಶೇ.42.6ರಷ್ಟು ಅಂಕ ಪಡೆದ ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.

ತ್ರಿಪುರ ಮುಖ್ಯಮಂತ್ರಿ ಡಾ.ಮಾಣಿಕ್‌ ಸಾಹ ಅವರು ಶೇ.41.4ರಷ್ಟು ಅಂಕ ಪಡೆದು ಐದನೇ ಸ್ಥಾನ ಪಡೆದಿದ್ದಾರೆ. ಮಾಣಿಕ್‌ ಸಾಹ ಅವರ ಸರಳತೆ, ಸಮರ್ಪಣಾ ಮನೋಭಾವ, ಪ್ರಾಮಾಣಿಕತೆ ಹಾಗೂ ಅಭಿವೃದ್ಧಿಯನ್ನು ಗಮನಿಸಿದ ಜನ ಕ್ಷಿಪ್ರವಾಗಿ ಅವರನ್ನು ಸ್ವೀಕರಿಸಿದ್ದಾರೆ. ಹಾಗಾಗಿ, ಮಾಣಿಕ್‌ ಸಾಹ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎರಡೇ ವರ್ಷದಲ್ಲಿ ದೇಶದಲ್ಲೇ ಐದನೇ ಜನಪ್ರಿಯ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Ram Mandir : ಯೋಗಿ ನೇತೃತ್ವದಲ್ಲಿ ಆಯೋಧ್ಯೆಗೆ ಭೇಟಿ ನೀಡಿದ ಉತ್ತರ ಪ್ರದೇಶ ಶಾಸಕರು

ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರಂತೆ ಮಾಣಿಕ್‌ ಸಾಹ ಕೂಡ ಕಾಂಗ್ರೆಸ್‌ ತೊರೆದು, 2016ರಲ್ಲಿ ಬಿಜೆಪಿ ಸೇರ್ಪಡೆಯಾಗಿ, ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯರಾಗಿರುವ ಮಾಣಿಕ್‌ ಸಾಹ ಅವರು 2020ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. ನಂತರ ಇವರನ್ನು ಬಿಜೆಪಿ ಹೈಕಮಾಂಡ್‌ 2022ರಲ್ಲಿ ತ್ರಿಪುರ ಮುಖ್ಯಮಂತ್ರಿಯನ್ನಾಗಿ ನೇಮಿಸಿತು. ದಕ್ಷ ಆಡಳಿತದ ಮೂಲಕ ಸಿಎಂ ಆದ ಎರಡೇ ವರ್ಷದಲ್ಲಿ ಮಾಣಿಕ್‌ ಸಾಹ ಅವರು ದೇಶಾದ್ಯಂತ ಗಮನ ಸೆಳೆಯುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

New Food Rules: ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಪಾಕ್‌ ಹೈರಾಣ-ಹೊಸ ಭಕ್ಷ್ಯ ನೀತಿ ಜಾರಿ

New Food Rules: ಪಾಕಿಸ್ತಾನದಲ್ಲಂತೂ ಹಣದುಬ್ಬರ ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ 1 ಕೆಜಿ ಗೋಧಿ ಹಿಟ್ಟಿನ ಬೆಲೆ 800 PKR ಆಗಿದೆ. ಹೀಗಾಗಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಪಾಕಿಸ್ತಾನದ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ.

VISTARANEWS.COM


on

New Food Rules
Koo

ಪಾಕಿಸ್ತಾನ: ಮದುವೆ ಎಂದ ತಕ್ಷಣ ತಲೆಯಲ್ಲಿ ಒಳ್ಳೆಯ ಊಟದ ಕಲ್ಪನೆ ಬರುವುದು ಸಹಜ. ವಿವಿಧ ರೀತಿಯ ಭಕ್ಷ್ಯ ಭೋಜನಗಳನ್ನು ತಯಾರಿಸುತ್ತಾರೆ. ಆ ವೇಳೆ ಜನರು ತಮಗೆ ಬೇಕಾದಷ್ಟು ಆಹಾರವನ್ನು ಬಡಿಸಿಕೊಂಡು ನಂತರ ಅದನ್ನು ತಿನ್ನದೇ ವ್ಯರ್ಥ ಮಾಡುತ್ತಿರುವುದು ನಾವು ಹಲವು ಮದುವೆ, ಸಮಾರಂಭಗಳಲ್ಲಿ ನೋಡುತ್ತಿರುತ್ತೇವೆ. ಇನ್ನು ಪಾಕಿಸ್ತಾನ(Pakistan)ದಲ್ಲಂತೂ ಹಣದುಬ್ಬರ(Bankruptcy) ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ 1 ಕೆಜಿ ಗೋಧಿ ಹಿಟ್ಟಿನ ಬೆಲೆ 800 PKR ಆಗಿದೆ. ಹೀಗಾಗಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಪಾಕಿಸ್ತಾನದ ಸರ್ಕಾರ ಹೊಸ ನಿಯಮವನ್ನು ಜಾರಿಗೆ(New Food Rules)ತಂದಿದೆ.

ಪಾಕಿಸ್ತಾನ ಭಾರತದ ನೆರೆಯ ರಾಷ್ಟ್ರ. ಆಗಾಗ ಇತರ ದೇಶಗಳ ಮೇಲೆ ದಂಡೆತ್ತಿ ಬರುವ
ಈ ದೇಶ ಈಗ ಆಹಾರದ ಮುಗ್ಗಟ್ಟು ಮತ್ತು ಹಣದುಬ್ಬರ ಸಮಸ್ಯೆಯಿಂದ ಒದ್ದಾಡುತ್ತಿದೆ. ಹಾಗಾಗಿ ತಮ್ಮ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಹುಡುಕುತ್ತಿದೆ. ಅದರಂತೆ ಇದೀಗ ಆಹಾರ ಮುಗ್ಗಟ್ಟನ್ನು ನಿವಾರಿಸಲು ಮದುವೆ ಮತ್ತು ಸಮಾರಂಭಗಳಲ್ಲಿ ನೀಡುವ ಊಟದ ಮೇಲೆ ತನ್ನ ಕಣ್ಣಿಟ್ಟಿದೆ. ಆಹಾರ ವ್ಯರ್ಥವಾಗುವುದನ್ನು ತಡೆಯಲು ಹೊಸ ಮಾರ್ಗವನ್ನು ಕಂಡುಕೊಂಡಿದೆಯಂತೆ.

ಪಂಜಾಬ್ ಪ್ರಾಂತ್ಯದ ಸಿಎಂ ಮರ್ಯಮ್ ನವಾಜ್ ಅವರು ‘ಒಂದು ಭಕ್ಷ್ಯ’ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದ್ದಾರೆ. ಈ ನೀತಿಯ ಪ್ರಕಾರ ಮದುವೆಯ ಪಾರ್ಟಿಗಳಲ್ಲಿ ಒಂದಕ್ಕಿಂತ ಹೆಚ್ಚು ಭಕ್ಷ್ಯಗಳನ್ನು ಅನುಮತಿಸಲಾಗುವುದಿಲ್ಲ. ಅಂದರೆ ಊಟದ ಮೆನುವಿನಲ್ಲಿ ಕೇವಲ ಒಂದು ತರಕಾರಿ, ಅನ್ನ, ರೊಟ್ಟಿ, ದಾಲ್, ಸಲಾಡ್, ತಂಪು ಪಾನೀಯ ಮತ್ತು ಒಂದು ಸಿಹಿತಿಂಡಿ ನೀಡಲು ಅನುಮತಿಸಲಾಗಿದೆ.

ಬಹು ಖಾದ್ಯಗಳನ್ನು ತಯಾರಿಸುವುದರಿಂದ ಅದು ಅನಗತ್ಯ ವೆಚ್ಚಕ್ಕೆ ಕಾರಣವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಅಲ್ಲದೇ ಈ ನೀತಿಯನ್ನು 2016ರಲ್ಲಿ ಮೊದಲು ಜಾರಿಗೆ ತರಲಾಯಿತು. ಆದರೆ ಜನರು ಅದನ್ನು ಅನುಸರಿಸಲಿಲ್ಲ. ಇದೀಗ ಈ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಈ ಕ್ರಮವನ್ನು ಪಾಲಿಸದಿರುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಡಯಬಿಟಿಕ್‌ ಚಟ್ನಿ ನಿಮಗೆ ಗೊತ್ತೆ? ಇದು ಮಧುಮೇಹಿಗಳಿಗೆ ಉಪಯುಕ್ತ

ಪಾಕಿಸ್ತಾನವು ಪ್ರಸ್ತುತ ದಿನಗಳಲ್ಲಿ ಹಣಕಾಸಿನ ಸಮಸ್ಯೆಯನ್ನು ಹೆಚ್ಚಿನ ಮಟ್ಟದಲ್ಲಿ ಅನುಭವಿಸುತ್ತಿದೆ. ಹಾಗಾಗಿ ಇತ್ತೀಚೆಗೆ ಪ್ರಧಾನಿ ಮಂತ್ರಿ ಶೆಹಬಾಜ್ ಷರೀಫ್ ವಿತ್ತೀಯ ಸಹಾಯವನ್ನು ಪಡೆಯಲು ಸೌದಿ ಅರೇಬಿಯಾಕ್ಕೆ ಹೋದರು. ಆದರೆ ಆ ಕಾರ್ಯ ಯಶಸ್ವಿಯಾಗಲಿಲ್ಲ. ಪಾಕಿಸ್ತಾನದಲ್ಲಿ ಹಣದುಬ್ಬರ ಎಷ್ಟಿದೆಯೆಂದರೆ ಸಾಮಾನ್ಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಉದಾಹರಣೆಗೆ ಒಂದು ಕಿಲೋ ಗೋಧಿ ಹಿಟ್ಟಿನ ಬೆಲೆ ಈಗ 800 PKR (ಪಾಕಿಸ್ತಾನ ಕರೆನ್ಸಿ)ಆಗಿದೆ. ಒಂದು ರೊಟ್ಟಿ ಬೆಲೆ 25 PKRಆಗಿದೆ. ಬಾಳೆಹಣ್ಣಿನ ಬೆಲೆ 150-200 PKR ಆಗಿದೆಯಂತೆ.

Continue Reading

ಆರೋಗ್ಯ

Tobacco Use: ತಂಬಾಕು ಸೇವನೆ; ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ

Tobacco Use: ಭಾರತವು ಶೇ. 27ರಷ್ಟು ವಯಸ್ಕ ತಂಬಾಕು ಸೇವನೆ ಮಾಡುವವರನ್ನು ಹೊಂದಿದೆಯಂತೆ. 2019ರ ಅಂಕಿ ಅಂಶದ ಪ್ರಕಾರ ವಿಶ್ವದಲ್ಲೇ 70 ಲಕ್ಷಕ್ಕೂ ಹೆಚ್ಚು ಮಂದಿ ತಂಬಾಕು ಸೇವಿಸಿ ಸಾವನ್ನಪ್ಪಿದ್ದು, ಭಾರತದಲ್ಲಿ 13.5 ಲಕ್ಷ ಮಂದಿ ಮೃತಪಟ್ಟಿದ್ದಾರೆ

VISTARANEWS.COM


on

By

Tobacco use
Koo

ತಂಬಾಕು ಬಳಸುವವರಲ್ಲಿ (Tobacco Use) ವಿಶ್ವದಲ್ಲೇ ಭಾರತ (india) ಎರಡನೇ ಸ್ಥಾನದಲ್ಲಿದ್ದು, ಶೇ. 27ರಷ್ಟು ವಯಸ್ಕ ಭಾರತೀಯರು ತಂಬಾಕು ಸೇವನೆ (Tobacco consumption) ಮಾಡುತ್ತಾರೆ ಎಂದು ಕೆಪಿಎಂಜಿ (KPMG) ಅಶ್ಯೂರೆನ್ಸ್ ಮತ್ತು ಕನ್ಸಲ್ಟಿಂಗ್ ಸರ್ವಿಸಸ್ ಎಲ್ಎಪಿಯ ವರದಿ ಹೇಳಿದೆ. 2019ರಲ್ಲಿ ವಿಶ್ವದಲ್ಲೇ 7 ಮಿಲಿಯನ್‌ಗೂ ಹೆಚ್ಚು ಮಂದಿ ತಂಬಾಕು ಸೇವಿಸಿ ಸಾವನ್ನಪ್ಪಿದ್ದು , ಭಾರತದಲ್ಲಿ 1.35 ಮಿಲಿಯನ್ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇಟಿ ಎಡ್ಜ್ ಸಹಯೋಗದೊಂದಿಗೆ ನಡೆದ ಸಮೀಕ್ಷೆಯಲ್ಲಿ ಭಾರತವು ಶೇ. 27ರಷ್ಟು ವಯಸ್ಕ ತಂಬಾಕು ಸೇವನೆ ಮಾಡುವವರನ್ನು ಹೊಂದಿದ್ದು, ವಿಶ್ವದ ಎರಡನೇ ಅತೀ ದೊಡ್ಡ ತಂಬಾಕು ಬಳಸುವ ಜನಸಂಖ್ಯೆಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ.

ಈ ಅಂಕಿ ಅಂಶವು ತಂಬಾಕು ಪ್ರೇರಿತ ಹಾನಿಯನ್ನು ಕಡಿಮೆ ಮಾಡಲು ತಂಬಾಕು ನಿಯಂತ್ರಣದ ಕಡೆಗೆ ಸಮಗ್ರ ಮಾರ್ಗಸೂಚಿಯನ್ನು ಹೊಂದಲು ಕಡ್ಡಾಯ ಮತ್ತು ನಿರ್ಣಾಯಕವಾಗಿದೆ. 2060ರ ವೇಳೆಗೆ ತಂಬಾಕು ಸಂಬಂಧಿತ ರೋಗಗಳಿಂದ ಜಾಗತಿಕವಾಗಿ ವಾರ್ಷಿಕ ಮರಣಗಳ ಅಂದಾಜು ಶೇ. 50ರಷ್ಟು ಕಡಿಮೆ ಮಾಡುವ ಉದ್ದೇಶವಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Covishield Vaccine: ಭಾರತದಲ್ಲಿ ಕೋವಿಶೀಲ್ಡ್‌ ಅಡ್ಡ ಪರಿಣಾಮದ ಅಪಾಯವಿಲ್ಲ: ಯಾಕೆ ಗೊತ್ತೆ?

ಭಾರತದ ತಂಬಾಕು ಬಳಕೆ

2019ರಲ್ಲಿ ಜಾಗತಿಕವಾಗಿ 7 ಮಿಲಿಯನ್ ತಂಬಾಕು ಸಂಬಂಧಿತ ಸಾವುಗಳಲ್ಲಿ ಭಾರತದಲ್ಲಿ 1.35 ಮಿಲಿಯನ್ ಸಾವು ಸಂಭವಿಸಿವೆ. ಶೇ. 66ರಷ್ಟು ಭಾರತೀಯರು 20- 25 ವರ್ಷ ವಯಸ್ಸಿನ ನಡುವೆ ತಂಬಾಕು ಸೇವಿಸಲು ಪ್ರಾರಂಭಿಸಿದರು. ಪರ್ಯಾಯ ಮಾರ್ಗಗಳ ಕೊರತೆಯಿಂದ ಶೇ.45ರಷ್ಟು ಮಂದಿಗೆ ಧೂಮಪಾನ ಅಥವಾ ತಂಬಾಕು ಜಗಿಯುವುದನ್ನು ಬಿಡಲು ಸಾಧ್ಯವಾಗಲಿಲ್ಲ.

ಜನರು ಬಳಸುವ ತಂಬಾಕಿನಲ್ಲಿ ಶೇ. 8ರಷ್ಟು ಮಾತ್ರ ಕಾನೂನುಬದ್ಧವಾಗಿ ಉತ್ಪಾದಿಸಲಾಗಿದೆ. ಆದರೆ ಉಳಿದ ಶೇ. 92 ರಷ್ಟು ಬಳಕೆ ಬೀಡಿಗಳು, ಜಗಿಯುವ ತಂಬಾಕು, ಖೈನಿ ಮುಂತಾದ ಅಗ್ಗದ ತಂಬಾಕು ಉತ್ಪನ್ನಗಳಾಗಿದೆ. ತಂಬಾಕು ಸೇವನೆಗೆ ಮುಖ್ಯ ಕಾರಣ ಒತ್ತಡ, ಆತಂಕ ಮತ್ತು ಭಾವನಾತ್ಮಕ ಯಾತನೆ ಎಂಬುದನ್ನು ಸಮೀಕ್ಷೆಯು ಬಹಿರಂಗಪಡಿಸಿದೆ.

ಭಾರತದಲ್ಲಿ ತಂಬಾಕು ಸೇವನೆಗೆ ನಿಯಂತ್ರಣ ಹೇರುವುದು ಅತೀ ಅವಶ್ಯಕವಾಗಿದೆ. ಜಾಗತಿಕವಾಗಿ ಸೂಚಿಸಲಾದ ತಂಬಾಕು ನಿಯಂತ್ರಣ ಕ್ರಮಗಳನ್ನು ಭಾರತದಲ್ಲಿ ಜಾರಿಗೊಳಿಸಲು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವುದು ಸವಾಲಾಗಿ ಪರಿಣಮಿಸುತ್ತಿದೆ.


ತಂಬಾಕು ಸೇವನೆ ಮಾಡುವ ಶೇ. 50ರಷ್ಟು ಪುರುಷರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರಲ್ಲಿ ಶೇ. 29 ರಷ್ಟು ಗಂಭೀರ ಪ್ರಕರಣಗಳಾಗಿವೆ. ಅರಿವಿನ ಕೊರತೆ ಮತ್ತು ಪರ್ಯಾಯಗಳ ಅಲಭ್ಯತೆಯಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳಿರುವ ನಗರಗಳಲ್ಲಿ ಶೇ. 81ರಷ್ಟು ಮಂದಿ ಪುರುಷರು ತಂಬಾಕನ್ನು ತ್ಯಜಿಸಲು ಮುಂದಾಗುತ್ತಿಲ್ಲ.
2030ರ ವೇಳೆಗೆ ತಂಬಾಕು ಸಂಬಂಧಿತ ಸಾವುಗಳಲ್ಲಿ ಶೇ.80ಕ್ಕಿಂತ ಹೆಚ್ಚು ಸಾವುಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಂಭವಿಸಬಹುದು ಎಂದು ವರದಿ ಹೇಳಿದೆ.

ಜಿಡಿಪಿ ಮೇಲೆ ಪರಿಣಾಮ

ತಂಬಾಕು ಸೇವನೆಯಿಂದ ಉಂಟಾಗುವ ರೋಗಗಳು ಮತ್ತು ಸಾವುಗಳಿಂದಾಗಿ ಭಾರತವು ಪ್ರತಿ ವರ್ಷ ತನ್ನ ಜಿಡಿಪಿಯ ಶೇ.1ರಷ್ಟನ್ನು ಕಳೆದುಕೊಳ್ಳುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಪರಿಣಾಮಕಾರಿ ತಂಬಾಕು ನಿಯಂತ್ರಣ ನೀತಿಯನ್ನು ಅಳವಡಿಸಿಕೊಳ್ಳಲು ಭಾರತ ಮುಂದಾಗಬೇಕಿದೆ.

ತಂಬಾಕು ನಿಯಂತ್ರಣಕ್ಕೆ ಕ್ರಮ

ಭಾರತವು ಈಗಾಗಲೇ ತಂಬಾಕು ಸೇವನೆಯನ್ನು ನಿಯಂತ್ರಿಸುವ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಗುರಿಯನ್ನು ಹೊಂದಿರುವ ಕಠಿಣ ನಿಯಮಗಳನ್ನು ಸಕ್ರಿಯವಾಗಿ ಜಾರಿಗೊಳಿಸುತ್ತಿದೆ. ತಂಬಾಕು ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಡಬ್ಲ್ಯೂ ಎಚ್‌ಒ ಸೂಚಿಸಿದ ಕಾನೂನುಗಳ ನಿಬಂಧನೆಗಳಿಗೆ ಹೊಂದಿಕೆಯಾಗಲು ದೇಶವು ತಂಬಾಕು ನಿಯಂತ್ರಣ ಕಾನೂನುಗಳನ್ನು ಜಾರಿಗೆ ತಂದಿದೆ. ಧೂಮಪಾನಿಗಳಲ್ಲದವರನ್ನು ಧೂಮಪಾನದಿಂದ ದೂರವಿಡಲು ಇದು ಸಹಾಯ ಮಾಡುತ್ತದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ (NLEM) ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿಯನ್ನು (NRT) ಪರಿಚಯಿಸಿದೆ. ಉದಾಹರಣೆಗೆ ಚೂಯಿಂಗ್ ನಿಕೋಟಿನ್ ಗಮ್ ಅಥವಾ ಇನ್ಹೇಲರ್‌ಗಳನ್ನು ಬಳಸುವುದು ಧೂಮಪಾನ ಅಭ್ಯಾಸವನ್ನು ಮುರಿಯಲು ಮತ್ತು ಸಿಗರೇಟಿನ ಮೇಲೆ ಮಾನಸಿಕ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಜಾಗತಿಕ ನೀತಿಗಳು

ತಂಬಾಕು ಬಳಕೆಯನ್ನು ನಿಯಂತ್ರಿಸಲು ಅನೇಕ ದೇಶಗಳು ಡಬ್ಲ್ಯೂ ಎಚ್ ಒ ಫ್ರೇಮ್‌ವರ್ಕ್ ಕನ್ವೆನ್ಶನ್ ಆನ್ ತಂಬಾಕು ನಿಯಂತ್ರಣವನ್ನು (FCTC) ಅನುಸರಿಸಿದರೆ, ಕೆಲವು ಸೂಕ್ತವಾದ ವಿಧಾನವನ್ನು ಅಳವಡಿಸಿಕೊಂಡಿವೆ.

ಭಾರತ, ಆಸ್ಟ್ರೇಲಿಯಾ ಮತ್ತು ಸಿಂಗಾಪುರಕ್ಕೆ ಹೋಲಿಸಿದರೆ ಜಪಾನ್, ಯುಕೆ, ನ್ಯೂಜಿಲೆಂಡ್ ಮತ್ತು ಸ್ವೀಡನ್‌ನಂತಹ ದೇಶಗಳಲ್ಲಿ ಧೂಮಪಾನದ ಪ್ರಮಾಣವು ಹೆಚ್ಚು ಎಂದು ವರದಿ ಬಹಿರಂಗಪಡಿಸಿದೆ.

ಏನು ಮಾಡಬಹುದು?

ಧೂಮಪಾನವನ್ನು ತೊರೆಯಲು ಇಷ್ಟಪಡದ ವ್ಯಕ್ತಿಗಳು ಕಡಿಮೆ ಅಪಾಯಕಾರಿ ತಂಬಾಕುಗಳನ್ನು ಬಳಸಲು ಪ್ರೋತ್ಸಾಹಿಸಬೇಕು. ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿ (ಎನ್‌ಆರ್‌ಟಿ) ಅನ್ನು ಕೈಗೆಟುಕುವ ಮತ್ತು ಸುಲಭವಾಗಿ ಸಿಗುವಂತೆ ಮಾಡಬೇಕು. ತಂಬಾಕು ಉತ್ಪನ್ನಗಳ ಪಟ್ಟಿ ಮಾಡಲಾದ ಮತ್ತು ಪಟ್ಟಿ ಮಾಡದ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ಸಮಗ್ರ ಡೇಟಾಬೇಸ್ ಅನ್ನು ಅಧಿಕಾರಿಗಳು ಸಂಗ್ರಹಿಸಬೇಕು. ಧೂಮಪಾನಿಗಳಿಗೆ ಶಿಕ್ಷಣ ನೀಡಲು, ತಂಬಾಕು ಬಳಕೆಯ ಬಗ್ಗೆ ಇರುವ ಮಿಥ್ಯೆಗಳನ್ನು ಹೋಗಲಾಡಿಸಲು ರಾಷ್ಟ್ರವ್ಯಾಪಿ ಸಮೂಹ ಮಾಧ್ಯಮ ಪ್ರಚಾರಕ್ಕಾಗಿ ಹೂಡಿಕೆಯನ್ನು ಹೆಚ್ಚಳ ಮಾಡಬೇಕು.

ಆರೋಗ್ಯಕರ ಭವಿಷ್ಯಕ್ಕಾಗಿ ವಾಸ್ತವಿಕ ಮತ್ತು ವೈಜ್ಞಾನಿಕ ತಂಬಾಕು ನಿಯಂತ್ರಣ ನೀತಿಗಳನ್ನು ಸುಗಮಗೊಳಿಸಲು ಗ್ರಾಹಕರು, ಉದ್ಯಮಿಗಳು ಮತ್ತು ಸರ್ಕಾರ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Continue Reading

ದೇಶ

CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

CoWIN Certificates: ಕೊರೋನಾ ಲಸಿಕೆ ಪ್ರಮಾಣಪತ್ರದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೆಗೆದುಹಾಕಿದೆ. ಈ ಹಿಂದೆ ಈ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರದ ಜೊತೆಗೆ ಭಾರತ ಒಟ್ಟಾಗಿ ಕೋವಿಡ್‌-19ನನ್ನು ಸೋಲಿಸಲಿದೆ ಎಂಬ ಘೋಷವಾಕ್ಯ ಕಾಣಬಹುದಾಗಿತ್ತು. ಇದೀಗ ಅವರ ಭಾವಚಿತ್ರವನ್ನು ತೆಗೆದು ಹಾಕುವ ಮೂಲಕ ಆರೋಗ್ಯ ಇಲಾಖೆ ಮಹತ್ವದ ಬದಲಾವಣೆ ಮಾಡಿತ್ತು.

VISTARANEWS.COM


on

CoWin Certificates
Koo

ನವದೆಹಲಿ: ಕೋವಿಡ್‌-19(Covid-19) ಲಸಿಕೆಗೆ ನೀಡಲಾಗಿದ್ದ ಕೋವಿನ್‌ ಪ್ರಮಾಣಪತ್ರ(CoWIN Certificates)ಗಳಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ(Union Health Ministry) ಮಹತ್ವದ ಬದಲಾವಣೆಯೊಂದನ್ನು ಮಾಡಿದ್ದು, ಪ್ರಮಾಣಪತ್ರದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಭಾವಚಿತ್ರವನ್ನು ತೆಗೆದುಹಾಕಿದೆ. ಈ ಹಿಂದೆ ಈ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರದ ಜೊತೆಗೆ ಭಾರತ ಒಟ್ಟಾಗಿ ಕೋವಿಡ್‌-19ನನ್ನು ಸೋಲಿಸಲಿದೆ ಎಂಬ ಘೋಷವಾಕ್ಯ ಕಾಣಬಹುದಾಗಿತ್ತು. ಇದೀಗ ಅವರ ಭಾವಚಿತ್ರವನ್ನು ತೆಗೆದು ಹಾಕುವ ಮೂಲಕ ಆರೋಗ್ಯ ಇಲಾಖೆ ಮಹತ್ವದ ಬದಲಾವಣೆ ಮಾಡಿತ್ತು.

ಈ ಮಹತ್ವದ ಬದಲಾವಣೆ ಬಗ್ಗೆ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆ ಆಗುತ್ತಿದ್ದು, ಕೋವಿನ್‌ ಸರ್ಟಿಫಿಕೇಟ್‌ನಲ್ಲಿ ಪ್ರಧಾನಿ ಮೋದಿಯ ಭಾವಚಿತ್ರ ಮಾಯವಾಗಿದೆ. ಬೇಕಿದ್ದರೆ ಡೌನ್‌ಲೋಡ್‌ ಮಾಡಿ ಚೆಕ್‌ ಮಾಡಿ ಎಂದು ಎಕ್ಸ್‌ ಬಳಕೆದಾರ ಸಂದೀಪ್‌ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾದ ಇರ್ಫಾನ್‌ ಅಲಿ ಟ್ವೀಟ್‌ ಮಾಡಿದ್ದು, ಹೌದು ಪ್ರಧಾನಿ ಮೋದಿ ಫೋಟೋ ಪ್ರಮಾಣ ಪತ್ರದಲ್ಲಿ ಇಲ್ಲ. ಅದರ ಬದಲು ಅಲ್ಲಿ ಕ್ಯೂ ಆರ್‌ ಕೋಡನ್ನು ಕಾಣಬಹುದಾಗಿದೆ. ಇನ್ನು ಈ ಹಿಂದೆಯೇ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್‌, ಮಣಿಪುರ ಮತ್ತು ಗೋವಾದಲ್ಲಿ ಪ್ರಧಾನಿ ಮೋದಿಯ ಭಾವಚಿತ್ರವನ್ನು ಪ್ರಮಾಣಪತ್ರದಿಂದ ತೆಗೆದುಹಾಕಲಾಗಿತ್ತು. ಇನ್ನು ಈ ಬಗ್ಗೆ ಸ್ವತಃ ಆರೋಗ್ಯ ಇಲಾಖೆ ಪ್ರತಿಕ್ರಿಯಿಸಿದ್ದು, ಕೋವಿನ್‌ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ತೆಗೆದು ಹಾಕಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅವರ ಫೋಟೋ ತೆಗೆದುಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಇನ್ನು ಮತ್ತೊಂದೆಡೆ ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಳ್ಳುವ ಮೂಲಕ ಜನರನ್ನು ಆತಂಕಕ್ಕೆ ತಳ್ಳಿತ್ತು. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದರು.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು ಮತ್ತು ದೇಶದಲ್ಲಿ ವ್ಯಾಪಕವಾಗಿ ನೀಡುತ್ತಿದೆ. AstraZeneca ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್ ಪೌಂಡ್‌ಗಳವರೆಗೆ ನಷ್ಟ ಪರಿಹಾರ ಬಯಸಿದ್ದಾರೆ.

ಇದನ್ನೂ ಓದಿ:Parineeti Chopra: ಪರಿಣಿತಿ ಚೋಪ್ರಾ ಪತಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ: ವೈದ್ಯರು ಹೇಳೋದೇನು?

ಇನ್ನು ಜನರನ್ನು ಆತಂಕಕ್ಕೀಡು ಮಾಡಿರುವ ಈ ವಿಚಾರದ ಬಗ್ಗೆ ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಸ್ಪಷ್ಟನೆ ನೀಡಿದ್ದು, ಭಾರತದಲ್ಲಿ ಕೊರೊನಾ ವೈರಸ್‌ಎದುರಿಸಲು ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಿದ್ದಾರೆ. ಮೊದಲ ಡೋಸ್ ಅನ್ನು ಪಡೆದಾಗ ಅಡ್ಡ ಪರಿಣಾಮದ ರಿಸ್ಕ್‌ ಅತ್ಯಧಿಕವಾಗಿರುತ್ತದೆ. ಆದರೆ ಎರಡನೇ ಡೋಸ್‌ನೊಂದಿಗೆ ಕಡಿಮೆಯಾಗುತ್ತದೆ; ಮೂರನೆಯದರೊಂದಿಗೆ ಮತ್ತೂ ಕಡಿಮೆಯಾಗುತ್ತದೆ. ಅಡ್ಡ ಪರಿಣಾಮ ಸಂಭವಿಸುವುದಾದಲ್ಲಿ, ಲಸಿಕೆ ಪಡೆದ ಎರಡು ಮೂರು ತಿಂಗಳೊಳಗೆ ಕಾಣಿಸಿಕೊಳ್ಳುತ್ತದೆ” ಎಂದು ಗಂಗಾಖೇಡ್ಕರ್ ತಿಳಿಸಿದ್ದಾರೆ


Continue Reading

ಪ್ರಮುಖ ಸುದ್ದಿ

Aadhaar Crads For Dog: ದೆಹಲಿಯಲ್ಲಿ ನಾಯಿಗಳಿಗೂ ಬಂತು ಆಧಾರ್ ಕಾರ್ಡ್!

Aadhaar Crads For Dog ಜನರು ತಮ್ಮ ಆಧಾರ್ ಕಾರ್ಡ್ ಗಳನ್ನು ಪಡೆಯಲು ಸೈಬರ್ ಸೆಂಟರ್, ಸರ್ಕಾರಿ ಕಚೇರಿಗಳ ಮುಂದೆ ಕ್ಯೂ ನಿಲ್ಲುತ್ತಾರೆ. ಆದರೆ ಇದೀಗ ನಾಯಿಗಳು ಆಧಾರ್ ಕಾರ್ಡ್ ಹೊಂದಿರಬೇಕು ಎಂಬ ನಿಯಮ ಜಾರಿಗೆ ಬಂದಿದೆ.

VISTARANEWS.COM


on

Aadhaar Crads For Dog
Koo

ದೆಹಲಿ: ಸಾಮಾನ್ಯವಾಗಿ ಜನಸಾಮಾನ್ಯರು ಆಧಾರ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕು ಎಂಬ ನಿಯಮ ದೇಶದಾದ್ಯಂತ ಜಾರಿಯಲ್ಲಿದೆ. ಹಾಗಾಗಿ ಜನರು ತಮ್ಮ ಆಧಾರ್ ಕಾರ್ಡ್ ಗಳನ್ನು ಪಡೆಯಲು ಸೈಬರ್ ಸೆಂಟರ್, ಸರ್ಕಾರಿ ಕಚೇರಿಗಳ ಮುಂದೆ ಕ್ಯೂ ನಿಲ್ಲುತ್ತಾರೆ. ಆದರೆ ಇದೀಗ ನಾಯಿಗಳು ಆಧಾರ್ ಕಾರ್ಡ್ (Aadhaar Crads For Dog) ಹೊಂದಿರಬೇಕು ಎಂಬ ನಿಯಮ ಜಾರಿಗೆ ಬಂದಿದೆ.

Aadhaar Crads For Dog image

ಹೌದು. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಾಯಿಗಳಿಗೂ ಆಧಾರ್ ಕಾರ್ಡ್ ಅನ್ನು ನೀಡಲಾಗಿದೆ. ದಾರಿತಪ್ಪಿದ ನಾಯಿಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಸ್ಥಳಾಂತರ ಮಾಡಲು ಎನ್ ಜಿಓ ಈ ಕ್ರಮಗಳನ್ನು ಜಾರಿಗೆ ತಂದಿದೆ. ಈಗಾಗಲೇ ದೆಹಲಿಯಲ್ಲಿ 100 ನಾಯಿಗಳಿಗೆ ತಮ್ಮದೇ ಆದ ಆಧಾರ್ ಕಾರ್ಡ್ ಅನ್ನು ನೀಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಮಾಧ್ಯಮದ ವರದಿ ಪ್ರಕಾರ ಈ 100 ನಾಯಿಗಳು ದೆಹಲಿಯ ಟರ್ಮಿನಲ್ 1 ವಿಮಾನ ನಿಲ್ದಾಣ, ಇಂಡಿಯಾ ಗೇಟ್ ಮತ್ತು ಪ್ರಾಣಿ ಕಾರ್ಯಕರ್ತೆ ಮಾನವಿ ರೈ ನಡೆಸುತ್ತಿರುವ ದೆಹಲಿಯ ನಾಯಿ ಆಶ್ರಯ ಸೇರಿದಂತೆ ವಿವಿಧ ಸ್ಥಳಗಳಿಗೆ ಸೇರಿವೆ ಎನ್ನಲಾಗಿದೆ.

ಏಪ್ರಿಲ್ 27ರಂದು ನಾಯಿಗಳಿಗೆ ಆಧಾರ್ ಕಾರ್ಡ್ ನೀಡುವ ಕ್ರಮಕ್ಕೆ ಚಾಲನೆ ನೀಡಿದ್ದು, ಇಂದು ಮುಂಜಾನೆಯಿಂದ ಈ ಕೆಲಸ ಪ್ರಾರಂಭವಾಗಿದೆ. ಇದಕ್ಕೆ ಸಂಬಂಧಪಟ್ಟ ನಾಯಿಗಳಿಗೆ ಆಧಾರ್ ಕಾರ್ಡ್ ಟ್ಯಾಗ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಪ್ರಾಣಿ ಕಾರ್ಯಕರ್ತೆ ಮಾನವಿ ರೈ ಅವರು ನಾಯಿಗಳಿಗೆ ಈ ಆಧಾರ್ ಕಾರ್ಡ್ ಜೀವಸೆಲೆ ಎಂದು ತಿಳಿಸಿದ್ದಾರೆ. “ಇಂದು ಈ ಕ್ಯೂಆರ್ ಆಧಾರಿತ ಟ್ಯಾಗ್ ಗಳು ನಮ್ಮ ನಾಯಿಗಳಿಗೆ ವಿಶೇಷವಾಗಿ ಸಂಕಷ್ಟದ ಸಮಯದಲ್ಲಿ ಜೀವಸೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ನಾಯಿಗಳಿಗೆ ನೀಡಿದ ಆಧಾರ್ ಕಾರ್ಡ್ ಕ್ಯೂ ಆರ್ ಆಧಾರಿತವಾಗಿದೆ. ಇದನ್ನು Pawfriend.in ಎಂಬ ಎನ್ ಜಿಒ ಆವಿಷ್ಕಾರ ಮಾಡಿದೆ. ಕಂಪೆನಿಯ ಪ್ರಕಾರ, ಬೀದಿ ನಾಯಿಗಳ ಆರೈಕೆಗೆ ಇದು ಉತ್ತಮ ಪರಿಹಾರವಾಗಿದೆ. ಇದು ಮೈಕ್ರೋಚಿಪ್ ಗಳನ್ನು ಒಳಗೊಂಡಿದ್ದು, ಈ ಟ್ಯಾಗ್ ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಯಾರಾದರೂ ಸ್ಕ್ಯಾನ್ ಮಾಡಿದರೆ ಆ ನಾಯಿಗಳ ಬಗ್ಗೆ ವಿವರಗಳು ಮತ್ತು ತುರ್ತು ಸಂಪರ್ಕಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಇದರಿಂದ ಕಳೆದುಹೋದ ನಾಯಿಗಳನ್ನು ಅವುಗಳ ಯಜಮಾನನೊಂದಿಗೆ ಸೇರಿಸಲು ಸಹಾಯ ಮಾಡುತ್ತದೆಯಂತೆ.

ಇದನ್ನೂ ಓದಿ:Wedding Eye Makeup Tips: ಮದುವೆಯಲ್ಲಿ ಮದುಮಗಳ ಐ ಮೇಕಪ್‌ಗೆ 5 ಸಿಂಪಲ್‌ ಸೂತ್ರ

Pawfriend.inನ ಸ್ಥಾಪಕ ಅಕ್ಷಯ್ ರಿದ್ಲಾನ್ , ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಸಂಸ್ಥೆಯ ಬದ್ಧತೆಯನ್ನು ಎತ್ತಿ ತೋರಿಸಿದರು. ಈ ಬಗ್ಗೆ ಮಾತನಾಡಿದ ಅವರು, “ನಾವು ಭಾರತದಾದ್ಯಂತ ಸರಿಸುಮಾರು 6350 ಟ್ಯಾಗ್ ಗಳನ್ನು ವಿತರಿಸಿದ್ದೇವೆ ಮತ್ತು ವರ್ಷದೊಳಗೆ ಇದನ್ನು ಹತ್ತು ಪಟ್ಟು ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಬೀದಿ ನಾಯಿಗಳ ದಾಳಿ ಮಾತ್ರವಲ್ಲದೇ ಸಾಕು ನಾಯಿಗಳು ದಾಳಿ ಮಾಡುತ್ತಿವೆ. ಅಲ್ಲದೇ ದೆಹಲಿಯಲ್ಲಿ ಕೆಲವರು ಪಿಟ್ ಬುಲ್ಡಾ ಗ್ ಗಳನ್ನು ಸಾಕಿದ್ದು, ಅವುಗಳ ದಾಳಿ ಮಾಡುತ್ತಿರುವ ವಿಡಿಯೋ ನೋಡಿದ ಅಧಿಕಾರಿಗಳು ಇನ್ನು ಮುಂದೆ ಈ ತಳಿಯ ನಾಯಿಗಳನ್ನು ಸಾಕಬಾರದು ಎಂದು ಆದೇಶ ಹೊರಡಿಸಿದ್ದಾರೆ. ಹಾಗೇ ಇನ್ನೂ ಕೆಲವು ತಳಿಗಳ ನಾಯಿಗಳನ್ನು ಸಹ ನಿಷೇಧಿಸಿದ್ದಾರೆ.

Continue Reading
Advertisement
Road Accident in anekal
ಬೆಂಗಳೂರು ಗ್ರಾಮಾಂತರ7 mins ago

Road Accident : ಚಲಿಸುತ್ತಿರುವಾಗಲೇ ಬಸ್‌ನಿಂದ ಕಳಚಿಕೊಂಡ ಚಕ್ರಗಳು; ಗಲಿಬಿಲಿಗೊಂಡ ಪ್ರಯಾಣಿಕರು

Puttakkana Makkalu Serial puttakka daughter Sahana left home
ಕಿರುತೆರೆ32 mins ago

Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

Mosquito controle
ಲೈಫ್‌ಸ್ಟೈಲ್41 mins ago

Mosquito control: ಸೊಳ್ಳೆ ಕಾಟಕ್ಕೆ ಬೇಸತ್ತಿದ್ದೀರಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ!

Health Plan
ಮನಿ-ಗೈಡ್41 mins ago

Money Guide: ಕಾರ್ಪೊರೇಟ್- ವೈಯಕ್ತಿಕ ಆರೋಗ್ಯ ವಿಮೆಯ ನಡುವಿನ ವ್ಯತ್ಯಾಸ ತಿಳಿದಿರಲಿ

New Food Rules
ಪ್ರಮುಖ ಸುದ್ದಿ49 mins ago

New Food Rules: ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಪಾಕ್‌ ಹೈರಾಣ-ಹೊಸ ಭಕ್ಷ್ಯ ನೀತಿ ಜಾರಿ

MS Dhoni
ಕ್ರೀಡೆ54 mins ago

MS Dhoni: ರನ್​ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ

Google Layoff
ವಿದೇಶ56 mins ago

Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Tobacco use
ಆರೋಗ್ಯ57 mins ago

Tobacco Use: ತಂಬಾಕು ಸೇವನೆ; ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ

Jammu Tour
ಪ್ರವಾಸ1 hour ago

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Uma Ramanan dies in Chennai
ಕಾಲಿವುಡ್1 hour ago

Uma Ramanan: ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ಇನ್ನಿಲ್ಲ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌