ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಗೆ (Modi In Ayodhya) ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್ ಸೇರಿ ಹಲವರು ಪ್ರಧಾನಿ ಅವರನ್ನು ಸ್ವಾಗತಿಸಿದ್ದಾರೆ. ಸರಯೂ ನದಿ ತೀರದಲ್ಲಿ ಆರತಿ, ದೀಪೋತ್ಸವ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಸಂಜೆ ಲಕ್ಷಾಂತರ ದೀಪ ಬೆಳಗಲಿದ್ದು, ಲೇಸರ್ ಶೋ ಕೂಡ ಆಯೋಜಿಸಲಾಗಿದೆ. ಇದರಿಂದ ಅಯೋಧ್ಯೆಯ ದೀಪಾವಳಿಗೆ ಹೊಸ ರಂಗು ಬಂದಿದೆ.
ರಾಮಲೀಲಾ ವೀಕ್ಷಣೆ
ಅಯೋಧ್ಯೆಗೆ ಆಗಮಿಸಿರುವ ಮೋದಿ, ಮೊದಲು ರಾಮಲೀಲಾ ವೀಕ್ಷಣೆ ಮಾಡಲಿದ್ದಾರೆ. ನಂತರ ರಾಮಮಂದಿರ ನಿರ್ಮಾಣದ ಕಾಮಗಾರಿಯನ್ನು ವೀಕ್ಷಿಸಲಿದ್ದಾರೆ. ಶ್ರೀರಾಮನ ದರ್ಶನ ಪಡೆದ ಬಳಿಕ ಅವರು ದೀಪೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಮಧ್ಯೆಯೇ ಹಲವು ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ | Ayodhya Deepotsav | 20,000 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಪ್ರವಾಸಿ, ಧಾರ್ಮಿಕ ನಗರವಾಗಲಿದೆ ಅಯೋಧ್ಯೆ!