Site icon Vistara News

Heart Attack | 19 ವರ್ಷದ ಯುವಕನಿಗೆ ಹೃದಯಾಘಾತ, ಸಣ್ಣ ವಯಸ್ಸಿನಲ್ಲೇ ಏಕೆ ಹೀಗೆ?

Heart

ಮುಂಬೈ: ಕೊರೊನಾ ಬಿಕ್ಕಟ್ಟು ಹಾಗೂ ಬಿಕ್ಕಟ್ಟಿನ ನಂತರದಲ್ಲಿ ಬದುಕು ಅನಿಶ್ಚಿತತೆಯಲ್ಲಿಯೇ ಸಾಗುತ್ತಿದೆ. ಮೊದಲೆಲ್ಲ ಹೃದಯಾಘಾತ ಸಂಭವಿಸಿದೆ ಎಂದರೆ, ಅವರು ೬೦ ವರ್ಷ ದಾಟಿದವರೇ ಇರಬೇಕು ಎಂದು ಹೇಳಲಾಗುತ್ತಿತ್ತು ಹಾಗೂ ಅದು ನಿಜವೂ ಆಗಿರುತ್ತಿತ್ತು. ಆದರೆ, ಇತ್ತೀಚೆಗೆ ಚಿಕ್ಕ ವಯಸ್ಸಿನವರಿಗೆ ಹೃದಯಾಘಾತವಾಗುತ್ತಿರುವುದು (Heart Attack), ಹೃದಯಾಘಾತದಿಂದ ಅವರು ಮೃತಪಡುತ್ತಿರುವ ಪ್ರಕರಣಗಳು ಜಾಸ್ತಿಯಾಗಿರುವುದು ಆತಂಕ ಹೆಚ್ಚಿಸಿದೆ.

ಇದಕ್ಕೆ ನಿದರ್ಶನ ಎಂಬಂತೆ ಮಹಾರಾಷ್ಟ್ರದಲ್ಲಿ ೧೯ ವರ್ಷದ ಯುವಕನೊಬ್ಬ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈಜಾಡುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಆಗಸ್ಟ್‌ ೨೮ರಂದು ಜಯೇಶ್‌ ಭಾವಸಾರ್‌ ಎಂಬ ಯುವಕನು ಮಾಲೇಗಾಂವ್‌ನ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈಜಾಡುವಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾನೆ. ವಿಡಿಯೊ ಜಾಲತಾಣದಲ್ಲಿ ವೈರಲ್‌ ಆಗಿದೆ.

ಗೆಳೆಯರ ಜತೆ ಈಜಾಡುವಾಗಲೇ ಹೃದಯಾಘಾತ ಉಂಟಾದ ಕಾರಣ ಆತನಲ್ಲಿ ಚಲನೆ ಇರಲಿಲ್ಲ. ಇದನ್ನು ನೋಡಿದ ಗೆಳೆಯರು ಆತನನ್ನು ನೀರಿನಿಂದ ಹೊರಗೆ ಎಳೆದಿದ್ದಾರೆ. ಅಷ್ಟೊತ್ತಿಗಾಗಲೇ ಯುವಕ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ | ಸಾವಿನಲ್ಲೂ ಒಂದಾದ ತಾಯಿ-ಮಗ: ಪುತ್ರನ ಶಿವಗಣಾರಾಧನೆ ವೇಳೆ ಅಮ್ಮನಿಗೆ ಹೃದಯಾಘಾತ

Exit mobile version