ಮುಂಬೈ: ಸೋನಿ ಕಂಪನಿಯೊಂದಿಗೆ (Sony Corp) ವಿಲೀನ ಒಪ್ಪಂದ ಕುರಿತು ಮರು ಮಾತುಕತೆ ನಡೆಸುತ್ತಿಲ್ಲ ಎಂದು ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (Zee Entertainment Enterprises Ltd) ಮಂಗಳವಾರ ಸ್ಪಷ್ಟಪಡಿಸಿದೆ. ಝೀ ಎಂಟರ್‌ಟೈನ್‌ಮೆಂಟ್ ಸೋನಿಯೊಂದಿಗೆ ವಿಲೀನವಾಗಲಿದ್ದು(Merger Deal), ಒಪ್ಪಂದ ಕುರಿತು ಮಾತುಕತೆಗಳು ನಡೆದಿದ್ವು. ಆದರೆ, ಎರಡು ಕಂಪನಿಗಳು ಮಾತುಕತೆ ಮುರಿದು ಬಿದ್ದಿವೆ ಎಂದು ಹೇಳಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ, ಸೋನಿಯೊಂದಿಗೆ ರದ್ದಾದ ವಿಲೀನ ಒಪ್ಪಂದವನ್ನು ಪುನರುಜ್ಜೀವನಗೊಳಿಸಲು ಹೊಸ ಮಾತುಕತೆಗಳು ನಡೆಯುತ್ತಿರುವುದು ತಪ್ಪಾದ ಮಾಹಿತಿಯಾಗಿದೆ. ಕಂಪನಿಯು “ಯಾವುದೇ ಮಾತುಕತೆಗಳಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಂಗಳವಾರ ಮೊದಲಿಗೆ ಝೀ ಕಂಪನಿಯು 10 ಬಿಲಿಯನ್ ಡಾಲರ್ ಒಪ್ಪಂದ ಕುರಿತು ಸೋನಿ ಕಾರ್ಪ್ ಜತೆಗೆ ಮರುಮಾತುಕತೆ ನಡೆಸುತ್ತಿದೆ ಎಂಬ ಸುದ್ದಿಗಳು ಬಿತ್ತರಗೊಂಡವು. ಆದರೆ, ಸಂಜೆಯ ಹೊತ್ತಿಗೆ ಝೀ ಕಂಪನಿಯು ಅಂಥ ಯಾವುದೇ ಮಾತುಕತೆಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿತು.
ಸೋನಿಯೊಂದಿಗೆ ಕಂಪನಿಯು ಯಾವುದೇ ಮಾತುಕತೆಗಳಲ್ಲಿ ಭಾಗಿಯಾಗಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಹೇಳಿರುವ ಝೀ ಎಂಟರ್‌ಟೈನ್‌ಮೆಂಟ್, ಸೋನಿ ಜೊತೆಗಿನ ಮಾತುಕತೆಗಳ ಪುನರುಜ್ಜೀವನದ ಕುರಿತು ಸುದ್ದಿ ವರದಿಯ ಬಗ್ಗೆಯೂ ಮಾಹಿತಿಯನ್ನು ಷೇರುಪೇಟೆಗೆ ತಿಳಿಸಿದೆ.
ಒಪ್ಪಂದ ಕುರಿತು ಮರು ಮಾತುಕತೆಗಳು ಶುರುವಾಗಿವೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಝೀ ಕಂಪನಿಯ ಷೇರುಗಳು ಏರಿಕೆಯನ್ನು ದಾಖಲಿಸಿದವು. ಷೇರು ಮೌಲ್ಯವು ಶೇ.8ರಷ್ಟು ಏರಿಕೆಯಾಗಿ 193 ರೂ.ನಲ್ಲಿ ಸ್ಥಿರವಾಯಿತು.
ದೇಶದ ಪ್ರಮುಖ ಮನರಂಜನಾ, ಮಾಧ್ಯಮ ಕಂಪನಿಗಳಲ್ಲಿ ಒಂದಾಗಿರುವ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಸೋನಿ ಕಾರ್ಪ್ ಜತೆ ವಿಲೀನವಾಗಲಿದೆ ಎಂದು ಹೇಳಲಾಗಿತ್ತು. ಕೆಲವು ತಿಂಗಳ ಹಿಂದೆ ಝೀ ಈ ಸುದ್ದಿಯನ್ನು ಖಚಿತಪಡಿಸಿತ್ತು. ಸುಮಾರು 10 ಬಿಲಿಯನ್ ಡಾಲರ್ ಒಪ್ಪಂದ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂಬ ವರದಿಗಳಿದ್ದವು. ಆದರೆ, ಕೆಲವು ದಿನಗಳ ಹಿಂದೆ ಮಾತುಕತೆ ಮುರಿದು ಬಿದ್ದಿದೆ ಎಂದು ಝೀ ಕಂಪನಿಯು ಹೇಳಿಕೊಂಡಿತ್ತು.
ಈ ಸುದ್ದಿಯನ್ನೂ ಓದಿ: Mindtree: ಮೈಂಡ್‍ಟ್ರಿ ಜತೆ L&T ಇನ್ಫೊ ಟೆಕ್ ವಿಲೀನ, 5ನೇ ದೊಡ್ಡ ಐಟಿ ಕಂಪನಿ ಸೃಷ್ಟಿ